ಕಲಬುರಗಿ: ಭಾರತೀಯ ಮಹಿಳಾ ಒಕ್ಕೂಟ ಜಿಲ್ಲಾ ಮಂಡಳಿ ನೇತೃತ್ವದಲ್ಲಿ ಅಂತ ರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಮಾರ್ಚ 23 ರಂದು ಶನಿವಾರ ಬೇಳಿಗ್ಗೆ 11 ಕ್ಕೆ ನಗರದ ಕನ್ನಡ ಭವನದಲ್ಲಿ ನಡೆಯಲಿದ್ದು. ಈ ಕಾರ್ಯಕ್ರಮಕ್ಕೆ ಎನ್.ಎಫ್.ಐ.ಡಬ್ಲ್ಯೂ ರಾಜ್ಯ ಕಾರ್ಯದರ್ಶಿ ರೇಣುಕಾ ಕೇಸರಹಳ್ಳಿ ಉದ್ಘಾಟಿಸುವರು. ಎನ್.ಎಫ್.ಐ.ಡಬ್ಲ್ಯೂ ಜಿಲ್ಲಾಧ್ಯಕ್ಷೆ ಪದ್ಮಾವತಿ ಎನ್. ಮಾಲಿಪಾಟೀಲ ಅಧ್ಯಕ್ಷತೆ ವಹಿಸುವರು.
ಕುಟುಂಬ ವೈದ್ಯ ಡಾ. ಸಂಗೀತಾ ಎಮ್. ಶೃಂಗೇರಿ ಅವರು ವಿಶೇಷ ಉಪನ್ಯಾಸ ನೀಡುವರು, ಮುಖ್ಯ ಅತಿಥಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿ ಊಟ ತಯಾರಕರ ಪೇಡರೇಷನ್ ಎ.ಐ.ಟಿ.ಯು.ಸಿ. ಜಿಲ್ಲಾ ಸಮಿತಿಯ ಜಿಲ್ಲಾಧ್ಯಕ್ಷೆ ಕಲ್ಪನಾ ವಿ. ಗುರುಸಿಣಿಗಿ ಆಗಮಿಸುವರು.
ಶ್ರೀದೇವಿ ವೈ. ಕೊಡಲಗಿ, ವಿಜಯಲಕ್ಷ್ಮೀ ಪಿ. ಯಳಸಂಗಿ, ಶಿವಲಿಂಗಮ್ಮ ವಿ. ಲೇಂಗಟಿಕರ್, ಶರಣಮ್ಮ ಎ. ಪೂಜಾರಿ, ಜಯಶ್ರೀ ಕೊಸಾಳೆ, ಯಶೋಧಾ ರಾಠೋಡ, ಅನಿತಾ ಭಕರೆ, ನಾಗಮ್ಮ ಗುಡ್ಡಾ, ಸಿದ್ದಮ್ಮ ಪೂಜಾರಿ, ಸವಿತಾ ಮುಗಟಿ, ಲಕ್ಷ್ಮೀಬಾಯಿ ರಾಜೋಳ, ಚಂದಮ್ಮ ಉದನೂರ ಅತಿಥಿಗಳಾಗಿ ಆಗಮಿಸುವರು. ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಾದ ಪಿಎಸ್‍ಐ ಯಶೋಧಾ ಕಟಕೆ, ಡಾ. ಸಂಗೀತಾ ಎಮ್. ಶೃಂಗೇರಿ, ಪತ್ರಕರ್ತೆ ಆಸ್ಮಾ ಇನಾಮದಾರ ಇವರಿಗೆ ಗೌರವ ಸನ್ಮಾನಿಸಲಾಗುವುದು.
ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಬೇಕೆಂದು ಎನ್.ಎಫ್.ಐ.ಡಬ್ಲ್ಯೂ ಜಿಲ್ಲಾಧ್ಯಕ್ಷೆ ಪದ್ಮಾವತಿ ಎನ್. ಮಾಲಿಪಾಟೀಲ ಹಾಗೂ ನಗರ ಅಧ್ಯಕ್ಷೆ ಶಿವಲಿಂಗಮ್ಮ ವಿ ಲೆಂಗಟಿಕರ ಜಂಟಿಯಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…