ಕಲಬುರಗಿ: ಖಡ್ಗಗಿಂತ ಲೇಖನಿ ಹರಿತ ಎಂಬ ಮಾತು ಬರವಣಿಗೆಯ ಮಹತ್ವವನ್ನು ಸಾರುತ್ತದೆ. ಕೇವಲ ಕಲ್ಪನೆ ಆಧಾರಿತ, ವಾಸ್ತವಿಕತೆಗೆ ದೂರವಿರುವ, ಪ್ರಸ್ತುತವೆನಿಸದ ಸಾಹಿತ್ಯದಿಂದ ಸಮಾಜಕ್ಕೆ ಪ್ರಯೋಜನೆಯಾಗಲಾರದು. ಬದಲಿಗೆ ಸಮಾಜದಲ್ಲಿ ಕಂಡುಬರುವ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿ, ಅವುಗಳಿಗೆ ಪರಿಹಾರವನ್ನು ಸೂಚಿಸುವ, ಸಮಾಜವನ್ನು ತಿದ್ದಿ, ಸರಿದಾರಿಗೆ ತರುವ ಸಾಹಿತ್ಯ ರಚನೆಯಾದರೆ ಅದಕ್ಕೆ ಹೆಚ್ಚಿನ ಬೆಲೆ ಬರುತ್ತದೆ ಮತ್ತು ಅಂತಹ ಕಾವ್ಯ, ಸಾಹಿತ್ಯ ಸಾರ್ವಕಾಲಿಕವಾಗಲು ಸಾಧ್ಯವಾಗುತ್ತದೆ ಎಂದು ಹಿರಿಯ ಕವಿ ಎಂ.ಬಿ.ನಿಂಗಪ್ಪ ಅಭಿಪ್ರಾಯಪಟ್ಟರು.
ನಗರದ ಆಳಂದ ರಸ್ತೆಯ ಅವಟೆ ಬಿಲ್ಡಿಂಗ್‍ನಲ್ಲಿರುವ ‘ಶ್ರೀ ಬಸವ ಟ್ಯುಟೋರಿಯಲ್ಸ್’ನಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಗುರುವಾರ ಏರ್ಪಡಿಸಲಾಗಿದ್ದ ‘ವಿಶ್ವ ಕಾವ್ಯ ದಿನಾಚರಣೆ’ಯನ್ನು ತಮ್ಮ ಸ್ವರಚಿತ ಕವಿತೆಯನ್ನು ವಾಚಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಉಪನ್ಯಾಸಕ ಹಾಗೂ ಬಳಗದ ಅಧ್ಯಕ್ಷ ಎಚ್.ಬಿ.ಪಾಟೀಲ ಮಾತನಾಡಿ, ಕವಿಯಲ್ಲಿ ಅದ್ಭುತವಾದ ಸಮಾಜಮುಖಿ ಚಿಂತನಾ ಶಕ್ತಿಯಿರಬೇಕು. ಉತ್ತಮ ಕವಿತೆಗಳು ಸಮಾಜದ ಪ್ರತಿಬಿಂಬವಾಗಿವೆ. ಇವುಗಳು ವ್ಯಕ್ತಿಯಲ್ಲಿರುವ ಭಾವನೆ, ಸಾಹಿತ್ಯ, ರಸಸ್ವಾದ, ಕಲ್ಪನಾಶಕ್ತಿ, ಆಶಯಭಾವ, ಹಾಡುಗಾರಿಕೆ ಅಂತಹ ಗುಣಗಳನ್ನು ಹೊರಹೊಮ್ಮಲು ಸಾಧ್ಯವಾಗುತ್ತದೆ. ವಿದ್ಯಾರ್ಥಿ ದೆಸೆಯಿಂದಲೇ ಕವಿತೆಗಳನ್ನು ರಚಿಸುವ ಬಗೆಯನ್ನು ಹೇಳಿಕೊಡಬೇಕು. ಶ್ರೇಷ್ಠ ಕವನಗಳು ವ್ಯಕ್ತಿಗೆ ಆನಂದ, ತೃಪ್ತಿ, ಸೃಜನಶೀಲತೆ, ಉತ್ತಮ ಗಾಯಕರನ್ನಾಗಿಸುತ್ತದೆ. ಆದ್ದರಿಂದ ಕವನಗಳ ರಚನೆಯಲ್ಲಿ ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕ ಅಮರನಾಥ ಶಿವಮೂರ್ತಿ, ಟ್ಯುಟೋರಿಯಲ್ಸ್‍ನ ಮುಖ್ಯಸ್ಥ ಮಲ್ಲಿಕಾರ್ಜುನ ಜಿಡಗೆ, ಶಿಕ್ಷಕರಾದ ಸಿದ್ದಾರೂಡ ನರಿಬೋಳ್, ಚನ್ನವೀರ ಕೆ., ಸುಜಾತಾ ಕಂಟಿ, ತ್ರಿವೇಣಿ ಅಂತರಂಗಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…