ಕಲಬುರಗಿ: 18ನೇ ಶತಮಾನದ ಸಂತ, ಸಮಾಜ ಸುಧಾರಕ ಶರಣಬಸವೇಶ್ವರ ದೇವರ 202ನೇ ಪುಣ್ಯತಿಥಿಯ ಅಂಗವಾಗಿ ಶನಿವಾರ ನಡೆದ ಐತಿಹಾಸಿಕ ಶರಣಬಸವೇಶ್ವರ ಜಾತ್ರಾ ಮಹೋತ್ಸವದ ರಥೋತ್ಸವಕ್ಕೆ ದೇಶ, ವಿದೇಶಗಳಿಂದ ಆಗಮಿಸಿದ ಸಾವಿರಾರು ಭಕ್ತರು ಸಾಕ್ಷಿಯಾದರು.
ನಿಗದಿತ ಸಮಯಕ್ಕೆ ಶರಣಬಸವೇಶ್ವರ ಮೂರ್ತಿಯನ್ನು ಹೊತ್ತ ಅಲಂಕೃತ ರಥವನ್ನು ದೇಗುಲದ ಆವರಣದಲ್ಲಿ ಎಳೆಯಲಾಯಿತು. ರಥೋತ್ಸವದ ನಿಮಿತ್ಯ ಸಂತ ಶರಣಬಸವೇಶ್ವರ ದೇವರಿಗೆ ಸಾವಿರಾರು ಭಕ್ತರು ನಮನ ಸಲ್ಲಿಸಿ ಪುನೀತರಾದರು. ಇಂದು ಬೆಳಗಿನ ಜಾವದಿಂದಲೇ ಶರಣಬಸವೇಶ್ವರರ ದೇಗುಲದ ಆವರಣದಲ್ಲಿ ಭಕ್ತರು ತಂಡೋಪತಂಡವಾಗಿ ಸಾಗುತ್ತಿದ್ದರು ಅದರಲ್ಲೂ ವಿಶೇಷವಾಗಿ ಮಹಿಳೆಯರು ತಮ್ಮ ಮನೆಯಿಂದ ಬರಿಗಾಲಿನಲ್ಲಿ “ನೇವೈದ್ಯ” ದೊಂದಿಗೆ ದೇಗುಲಕ್ಕೆ ತೆರಳುವ ಮೂಲಕ ಶರಣಬಸವೇಶ್ವರ ದೇವರಿಗೆ ಅವರ ನಮನ ಮತ್ತು ನೇವೈದ್ಯವನ್ನು ಅರ್ಪಿಸಲು ದೇಗುಲದ ಮುಂದೆ ಸರತಿ ಸಾಲಿನಲ್ಲಿ ನಿಂತಿರುವುದು ಕಂಡುಬಂದಿತು.
ಅಲಂಕರಿಸಿದ ರಥವನ್ನು ಎಳೆಯುವಾಗ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೋಲಿಸರು ಬ್ಯಾರಿಕೇಡ್‍ಗಳನ್ನು ಹಾಕಿದ್ದರು. ಪೆÇಲೀಸರು ಮತ್ತು ಗೃಹರಕ್ಷಕ ದಳದ ಸಿಬ್ಬಂದಿ ಹೆಚ್ಚಿನ ಸಂಖ್ಯೆಯಲ್ಲಿದ್ದುದರಿಂದ ಜನರು ಬ್ಯಾರಿಕೇಡ್‍ಗಳನ್ನು ದಾಟಿ ನಿμÉೀಧಿತ ಪ್ರದೇಶಕ್ಕೆ ಪ್ರವೇಶಿಸದಂತೆ ತಡೆಯಲಾಯಿತು.
ಈ ವರ್ಷ ರಥೋತ್ಸವ ಮತ್ತು ವಾರ್ಷಿಕ ಯಾತ್ರೆಗೆ ಜನಸಂದಣಿ ಅಭೂತಪೂರ್ವವಾಗಿತ್ತು ಮತ್ತು ರಥಯಾತ್ರೆಯ ಬ್ಯಾರಿಕೇಡ್ ಮಾರ್ಗವನ್ನು ಹೊರತುಪಡಿಸಿ, ಒಂದು ಇಂಚು ಸ್ಥಳವೂ ದೇವಾಲಯದ ವಿಸ್ತಾರವಾದ ಸಂಕೀರ್ಣದಲ್ಲಿ ಲಭ್ಯವಿರಲಿಲ್ಲ. ಸುಡುವ ಬಿಸಿಲಿನ ಪ್ರಖರತೆಯನ್ನು ಎದುರಿಸುತ್ತಿರುವ ಜನರು ಸಂಕೀರ್ಣದ ಸುತ್ತಲೂ ರಥವನ್ನು ಎಳೆಯುವುದನ್ನು ವೀಕ್ಷಿಸಲು ಲಭ್ಯವಿರುವ ಪ್ರತಿಯೊಂದು ಜಾಗವನ್ನು ಆಕ್ರಮಿಸಿಕೊಂಡಿದ್ದರು.
ಕಳೆದ ವರ್ಷದಂತೆ ಶರಣ ಸಂಸ್ಥಾನದ 8ನೇ ಮಹಾದಾಸೋಹ ಪೀಠಾಧಿಪತಿಗಳಾದ ಪೂಜ್ಯ ಡಾ. ಶರಣಬಸವಪ್ಪ ಅಪ್ಪಾಜಿ ಹಾಗೂ 9ನೇ ಪೀಠಾಧಿಪತಿಯಾಗಿ ಪಟ್ಟಾಭಿμÉೀಕಗೊಂಡಿರುವ ಅವರ ಪುತ್ರ ಪೂಜ್ಯ ಚಿರಂಜೀವಿ ದೊಡ್ಡಪ್ಪ ಅಪ್ಪಾಜಿ ಅವರು ರಥೋತ್ಸವದ ಮೊದಲು ಹಾಗೂ ನಂತರದ ಎಲ್ಲಾ ಧಾರ್ಮಿಕ ವಿಧಿವಿಧಾನಗಳ ನೇತೃತ್ವ ವಹಿಸಿದ್ದರು.
ಪೂಜ್ಯ ಚಿರಂಜೀವಿ ದೊಡ್ಡಪ್ಪ ಅಪ್ಪಾಜಿಯವರು ಅಲಂಕರಿಸಿದ ರಥಕ್ಕೆ ಪ್ರದಕ್ಷಿಣೆ ಹಾಕಿ ರಥಕ್ಕೆ ಪೂಜೆ ಸಲ್ಲಿಸಿ ವಿಶೇಷವಾದ ನೇವೈದ್ಯ ಸಮರ್ಪಿಸಿ ದೇವಸ್ಥಾನದ ಪಕ್ಕದಲ್ಲಿರುವ ದಾಸೋಹ ಮಹಾಮನೆಯಲ್ಲಿ ವಿಶೇಷವಾಗಿ ನಿರ್ಮಿಸಿದ ಆವರಣದಲ್ಲಿ ತಮ್ಮ ತಂದೆ 8ನೇ ಮಹಾದಾಸೋಹ ಪೀಠಾಧಿಪತಿ ಡಾ.ಅಪ್ಪಾಜಿ ಹಾಗೂ ಅವರ ತಾಯಿ ಮಾತೋಶ್ರೀ ಡಾ. ದಾಕ್ಷಾಯಿಣಿ ಅವ್ವಾಜಿಯವರು ಸೇರಿದಂತೆ ಸಹೋದರಿಯರಾದ ಕುಮಾರಿ ಕೋಮಲಾ ಎಸ್ ಅಪ್ಪ, ಕುಮಾರಿ ಭವಾನಿ ಎಸ್ ಅಪ್ಪ ಹಾಗೂ ಕುಮಾರಿ ಮಹೇಶ್ವರಿ ಎಸ್ ಅಪ್ಪ ಅವರೊಂದಿಗೆ ರಥೋತ್ಸವದ ದರ್ಶನ ಪಡೆದರು. ಉಚ್ಛ ನ್ಯಾಯಾಲಯದ ಮಾಜಿ ನ್ಯಾಯಮೂರ್ತಿ ಡಾ. ಶಿವರಾಜ ಪಾಟೀಲ ಹಾಗೂ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಶ್ರೀ ಬಸವರಾಜ ದೇಶಮುಖ ಅವರೊಂದಿಗೆ ವಿಶೇಷವಾಗಿ ನಿರ್ಮಿಸಿದ ಆವರಣದಲ್ಲಿ ಉಪಸ್ಥಿತರಿದ್ದರು.
ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ದೇಗುಲ ಸಂಕೀರ್ಣ. ಪೂಜ್ಯ ಡಾ.ಅಪ್ಪಾಜಿ ಮತ್ತು ಚಿರಂಜೀವಿ ದೊಡ್ಡಪ್ಪ ಅಪ್ಪ ಶಂಖ ಊದುವ ಮೂಲಕ ಭಕ್ತರಿಗೆ ರಥ ಎಳೆಯುವಂತೆ ಸೂಚಿಸಿದರು. ಸಾಂಪ್ರದಾಯಿಕವಾಗಿ ಪೀತಾರೋಹಣ ಎಂದು ಕರೆಯಲ್ಪಡುವ ಪೀಠದ ಉಸ್ತುವಾರಿಯನ್ನು ಸಮಸ್ಥಾನದ ಪೀಠಾಧಿಪತಿಗಳು ಔಪಚಾರಿಕವಾಗಿ ವಹಿಸಿಕೊಂಡರು. ಅವರು ಜಂಟಿಯಾಗಿ ಪ್ರಸಾದ ಬಟ್ಟಲು (ಸಂತ ಶರಣಬಸವೇಶ್ವರರು ತಮ್ಮ ಆಹಾರವನ್ನು ತೆಗೆದುಕೊಂಡ ಬೆಳ್ಳಿಯ ತಟ್ಟೆ) ಮತ್ತು ಲಿಂಗ ಸಜ್ಜಿಕೆ (ಸಂತರು ಧರಿಸಿದ್ದ ಬೆಳ್ಳಿಯ ಪೆಟ್ಟಿಗೆಯಲ್ಲಿ ಇರಿಸಲಾದ ಪವಿತ್ರಲಿಂಗದ ವಿಗ್ರಹ) ದೇಗುಲದಲ್ಲಿ ನೆರೆದಿದ್ದ ಸಾವಿರಾರು ಭಕ್ತರಿಗೆ ಪ್ರದರ್ಶಿಸಿದರು.
ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಪೂಜ್ಯ ಡಾ. ಅಪ್ಪಾಜಿ ಹಾಗೂ ಚಿರಂಜೀವಿ ದೊಡ್ಡಪ್ಪ ಅಪ್ಪಾಜಿಯವರು ಶಂಖ ಉದುವ ಮೂಲಕ ಭಕ್ತರಿಗೆ ರಥ ಎಳೆಯುವಂತೆ ಸೂಚಿಸಿದರು. ಈ ದಿನದಂದು ಸಂಸ್ಥಾನದ ಪೀಠಾಧಿಪತಿಗಳು ಸಾಂಪ್ರದಾಯಿಕವಾಗಿ ಪೀಠಾರೋಹಣ ಎಂದು ಕರೆಯಲ್ಪಡುವ ಪೀಠದ ಉಸ್ತುವಾರಿಯನ್ನು ಔಪಚಾರಿಕವಾಗಿ ವಹಿಸಿಕೊಳ್ಳುತ್ತಾರೆ.
ಸಂತರ ಪುಣ್ಯತಿಥಿಯನ್ನು ಭಕ್ತರು ದಿನವಿಡೀ ಉಪವಾಸವಿದ್ದು, ಪೂಜೆ ಸಲ್ಲಿಸಿ ರಥೋತ್ಸವದ ನಂತರ ಸಿಹಿತಿಂಡಿ ಸೇರಿದಂತೆ ವಿಶೇಷವಾಗಿ ತಯಾರಿಸಿದ ಖಾದ್ಯಗಳನ್ನು ಸೇವಿಸುವ ಮೂಲಕ ಮಂಗಳಕರ ದಿನವನ್ನಾಗಿ ಆಚರಿಸುತ್ತಾರೆ. (ವಿಶೇಷವಾಗಿ ಲಿಂಗಾಯತರು ಶರಣರು ಲಿಂಗೈಕ್ಯರಾದ ದಿನವನ್ನು ಹಾಗೂ ಧಾರ್ಮಿಕ ಮುಖ್ಯಸ್ಥರ ಪುಣ್ಯಸ್ಮರಣೆಗಳಲ್ಲಿ ಭಾಗವಹಿಸುತ್ತಾರೆ. ಮತ್ತು ಅದನ್ನು ಭಕ್ತರು ಹಬ್ಬವಾಗಿ ಆಚರಿಸುತ್ತಾರೆ).
ಇಡೀ ಕಲಬುರಗಿ ನಗರ ಪುಷ್ಪಗಳಿಂದ ಸಿಂಗರಿಸಿಕೊಂಡು ಹಬ್ಬದಂತೆ ಕಂಗೊಳಿಸುತ್ತಿತ್ತು ಮತ್ತು ಸಂತ ಶರಣಬಸವೇಶ್ವರರ ಬೋಧನೆ ಮತ್ತು ಆಚರಣೆಯ ದಾಸೋಹದ ಸಂಪ್ರದಾಯಗಳಿಗೆ ಅನುಗುಣವಾಗಿ, ಇಡೀ ನಗರವು ದಾಸೋಹ ಮಹಾಮನೆಯಾಗಿ ಮಾರ್ಪಟ್ಟಿತ್ತು. ಶರಣಬಸವೇಶ್ವರ ದೇಗುಲಕ್ಕೆ ಆಗಮಿಸುವ ಭಕ್ತರಿಗೆ ಉಚಿತ ಅನ್ನ-ನೀರು ನೀಡುವುದಕ್ಕಾಗಿ ಜನರು ಎಲ್ಲಾ ರಸ್ತೆಗಳಲ್ಲಿ ಪೆಂಡಾಲ್ ಹಾಕಿದ್ದರು ಮತ್ತು ವಿಶೇಷ ಮಳಿಗೆಗಳು ಕಂಗೊಳಿಸುತ್ತಿದ್ದವು.
ಶರಣಬಸವೇಶ್ವರರು ನಿಸ್ವಾರ್ಥ ಸೇವೆಗೆ ಮಾದರಿಯಾದವರು ಮತ್ತು ತಮ್ಮ ಜೀವಿತಾವಧಿಯಲ್ಲಿ ತಮ್ಮ ಭಕ್ತರಿಗೆ ಭರವಸೆ ಮತ್ತು ಮೋಕ್ಷದ ದಾರಿದೀಪವಾಗಿದ್ದವರು. ರಾಯಚೂರು, ವಿಜಯಪುರ, ಬೀದರ್ ಸೇರಿದಂತೆ ನೆರೆಯ ಜಿಲ್ಲೆಗಳು ಮತ್ತು ಮಹಾರಾಷ್ಟ್ರ ಹಾಗೂ ಆಂಧ್ರಪ್ರದೇಶದ ಗಡಿ ಜಿಲ್ಲೆಗಳು ಸೇರಿದಂತೆ ದೂರದ ತಮ್ಮ ತಮ್ಮ ಗ್ರಾಮಗಳಿಂದ ಮೈಲುಗಟ್ಟಲೆ ನಡೆದುಕೊಂಡು ಬಂದು ತಮ್ಮ ಇμÁ್ಟರ್ಥಗಳನ್ನು ಈಡೇರಿಸಿಕೊಳ್ಳಲು ಶರಣಬಸವೇಶ್ವರರ ಅಪ್ಪಟ ಭಕ್ತರು ದೇವಸ್ಥಾನಕ್ಕೆ ಆಗಮಿಸುತ್ತಾರೆ.
ಹಸುವಿನ ಹಾಲಿನಿಂದ ತಯಾರಿಸಿದ ತಾಜಾ ಮೊಸರು ಮತ್ತು ಹೊಸದಾಗಿ ಕೊಯ್ಲು ಮಾಡಿದ ಜೋಳದಿಂದ ತಯಾರಿಸಿದ ವಿಶೇಷ ಭಕ್ಷ್ಯವಾದ “ಹುಳಿ ಬಾನ” ತಯಾರಿಸಲಾಗುತ್ತದೆ. “ನೇವೈದ್ಯ” ಸೇರಿದಂತೆ ಎಲ್ಲಾ ಧಾರ್ಮಿಕ ಸಂಪ್ರದಾಯಗಳನ್ನು ಅನುಸರಿಸಿ ತಯಾರಿಸಲಾದ ಈ ಖಾದ್ಯವನ್ನು ವಿಶೇಷವಾಗಿ ನೇಮಿಸಿದ ವ್ಯಕ್ತಿಯಿಂದ ತಲೆಯ ಮೇಲಿಟ್ಟುಕೊಂಡು ರಥದ ಕಡೆಗೆ ಒಯ್ಯಲಾಗುತ್ತದೆ. ಹುಳಿ ಬಾನವನ್ನು ತಲೆಯ ಮೇಲೆ ಹೊತ್ತ ಈ ವ್ಯಕ್ತಿಯು ರಥವನ್ನು ಎಳೆಯುವ ಮೊದಲು ಮತ್ತು ರಥವು ಅದರ ಮೂಲ ಸ್ಥಳಕ್ಕೆ ಹಿಂದಿರುಗಿದ ನಂತರ ಐದು ಬಾರಿ ರಥವನ್ನು ಪ್ರದಕ್ಷಿಣೆ ಹಾಕುವುದು ಪ್ರತೀತಿ.
ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಶ್ರೀ ಬಸವರಾಜ ದೇಶಮುಖ ಹಾಗೂ ಪೂಜ್ಯ ಡಾ. ಶರಣಬಸವಪ್ಪ ಅಪ್ಪಾಜಿಯವರ ಎಲ್ಲಾ ಕುಟುಂಬ ಸದಸ್ಯರು, ಕಲಬುರಗಿ ಸಂಸದ ಡಾ. ಉಮೇಶ ಜಾಧವ, ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮ ಪ್ರಭು ಪಾಟೀಲ, ಬಸವಕಲ್ಯಾಣ ಶಾಸಕ ಶರಣು ಸಲಗರ ಹಾಗೂ ಮಾಜಿ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಸೇರಿದಂತೆ ಇತರ ಪ್ರಮುಖರು ಶರಣಬಸವೇಶ್ವರರ 202ನೇ ರಥೋತ್ಸವಕ್ಕೆ ಸಾಕ್ಷಿಯಾದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…