ಶಹಾಪುರ: ತಾಲೂಕಿನ ಮುಡಬೂಳ ಗ್ರಾಮದಲ್ಲಿ ಭಾನುವಾರ ಶ್ರೀಮದ್ 1008 ಜಗದ್ಗುರು ಶ್ರೀ ಡಾ.ಚನ್ನಮಲ್ಲಿಕಾರ್ಜುನ ವಿಶ್ವರಾಧ್ಯ ಶಿವಾಚಾರ್ಯ ಭಗವತ್ ಪಾದಂಗಳು ಕಾಶಿ ಪೀಠ ಸನ್ನಿಧಿಯವರ ಅಡ್ಡಪಲ್ಲಕ್ಕಿ ಉತ್ಸವ ಸಾವಿರಾರು ಭಕ್ತರ ಜೈ ಘೋಷಗಳ ಮಧ್ಯೆ ಅದ್ಧೂರಿಯಾಗಿ ಜರುಗಿತು.
ಗ್ರಾಮದ ಪ್ರಮುಖ ಬೀದಿಗಳಲ್ಲಿ ನಡೆದ ಅಡ್ಡ ಪಲ್ಲಕ್ಕಿ ಮೆರವಣಿಗೆಯಲ್ಲಿ ನೂರಾರು ಮಹಿಳೆಯರು, ಯುವತಿಯರು ಕುಂಭ ಹೊತ್ತು ಮೆರುಗು ತಂದರು. ಡೊಳ್ಳು, ಹಲಗೆ ವಾದ್ಯ ಸೇರಿ ನಾನಾ ವಾದ್ಯಗಳು ಹಾಗೂ ಭಜನಾ ತಂಡಗಳ ಹಾಡು ಗಮನ ಸೆಳೆದವು.
ನೂತನ ಪಲ್ಲಕ್ಕಿ- ಮೂರ್ತಿ ಮೆರವಣಿಗೆ: ಇದೇ ಸಂದರ್ಭದಲ್ಲಿ ಶ್ರೀ ಕಡಕೋಳ ಮಡಿವಾಳೇಶ್ವರರ ನೂತನ ಪಲ್ಲಕ್ಕಿ ಹಾಗೂ ನೂತನ ಮೂರ್ತಿಗಳ ಮೆರವಣಿಗೆ ಗ್ರಾಮದ ನಾನಾ ಬಡಾವಣೆಗಳಲ್ಲಿ ಸಂಭ್ರಮ, ಸಡಗರದಿಂದ ನಡೆಯಿತು.
ನಾಡಿನ ಪೂಜ್ಯರಾದ ಶ್ರೀ ಷ.ಬ್ರ.ಸಿದ್ಧರಾಮ ಶಿವಾಚಾರ್ಯರು, ಶ್ರೀ ಷ.ಬ್ರ.ಡಾ.ರುದ್ರಮುನಿ ಶಿವಾಚಾರ್ಯರು, ಶ್ರೀ ಷ.ಬ್ರ.ಚಂದ್ರಗುಂಡ ಶಿವಾಚಾರ್ಯರು, ಅಭಿನವ ಮುರಘೇಂದ್ರ ಶಿವಾಚಾರ್ಯರು, ಶ್ರೀ ಷ.ಬ್ರ.ಸಿದ್ಧೇಶ್ವರ ಶಿವಾಚಾರ್ಯರು, ಯಂಕಂಚಿ ಶ್ರೀಗಳು, ನಾವದಗಿ ಶ್ರೀಗಳು, ಲಕ್ಷ್ಮಪೂರ ಶ್ರೀಗಳು, ರಾಮಲಿಂಗಯ್ಯ ಶ್ರೀಗಳು ಸೇರಿದಂತೆ ನಾನಾ ಮಠಗಳ ಶ್ರೀಗಳು ಹಾಗೂ ಶಂಕರಗೌಡ ಮಾಲಿ ಪಾಟೀಲ, ಸಿದ್ದಣ್ಣ ಗೌಡ ಪೊಲೀಸ್ ಪಾಟೀಲ, ಬಸನಗೌಡ ಪೊಲೀಸ್ ಪಾಟೀಲ, ಶ್ರೀಶೈಲಪ್ಪ ಬುಕಿಷ್ಟಗಾರ್, ಬಸವರಾಜ ಮುದ್ನೂರು, ರಾಶೇಖರ ಗೌಡ ಮಾಲಿ ಪಾಟೀಲ, ಅಂಬ್ರಣ್ಣ ಸಾಹು ಬುಸ್ಸ, ನಿಂಗಣ್ಣ ಬಬಲಾದಿ ರವಿಕುಮಾರ್ ಬಬಲಾದಿ, ಶಿವಶರಣಪ್ಪ ಬುಸ್ಸಾ, ಗುರುಲಿಂಗಯ್ಯ ಹಿರೇಮಠ್, ಬಸವರಾಜ ಹವಲ್ದಾರ, ಹಣಮಂತ ಗುರಿಕಾರ, ಬಸವರಾಜ ಸಿರಿಮನಿ, ಶಾಂತಲಿಂಗಪ್ಪ ಬಬಲಾದಿ, ಪ್ರವೀಣ ದೇಸಾಯಿ, ಶ್ರೀಮಾಳಪ್ಪ ಡ್ಯಾವಗುಂದ, ಶ್ರೀಶೈಲ ಅಗಸರ, ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಗ್ರಾಮಸ್ಥರು ಉಪಸ್ಥಿತರಿದ್ದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…