ಡಾ. ಮಲ್ಲಿಕಾರ್ಜುನ್ ಖರ್ಗೆಗೆ ಹುಲಿಗೆ ಹೊಲಿಸಿ ಅಭ್ಯರ್ಥಿಯನ್ನು ತೆಗಳಿದ ಬಿಜೆಪಿ ಮುಖಂಡ

ಹುಲಿ ಸೋಲಿಸಿದವರಿಗೆ ಇಲಿ ಸೋಲಿಸುವುದು ಕಷ್ಟವಲ್ಲ: ಗುತ್ತೇದಾರ್

ಕಲಬುರಗಿ: ಲೋಕಸಭಾ ಚುನಾವಣೆಯಲ್ಲಿ 2019 ರಲ್ಲಿ ಈ ಭಾಗದ ಹುಲಿಯಾಗಿದ್ದ ಮಲ್ಲಿಕಾರ್ಜುನ ಖರ್ಗೆಯವರನ್ನು ಸೋಲಿಸಿದ ಬಿಜೆಪಿಗೆ ಈ ಬಾರಿ ಇಲಿಯಂತಿರುವ ಅಭ್ಯರ್ಥಿಯನ್ನು ಸೋಲಿಸಲು ಯಾವುದೇ ಕಷ್ಟವಿಲ್ಲ ಎಂದು ಬಿಜೆಪಿಯ ಹಿರಿಯ ಮುಖಂಡರಾದ ಮಾಲಿಕಯ್ಯ ವಿ. ಗುತ್ತೇದಾರ್ ಹೇಳಿದರು.

ದಕ್ಷಿಣ ಮತಕ್ಷೇತ್ರದ ಪ್ರಮುಖರ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ ಎ ಐ ಸಿ ಸಿ ಯ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಮಲ್ಲಿಕಾರ್ಜುನ ಖರ್ಗೆಯವರನ್ನು ಬಿಜೆಪಿ ಒಂದು ಲಕ್ಷ ಮತಗಳ ಅಂತರದಿಂದ ಸೋಲಿನ ರುಚಿಯನ್ನು ಉಳಿಸಿದೆ ಈ ಬಾರಿ ಸೋಲಿನ ಭಯದಿಂದ ಚುನಾವಣೆಯಲ್ಲಿ ಸ್ಪರ್ಧಿಸಲು ಹಿಂದೇಟು ಹಾಕಿ ತಮ್ಮ ಅಳಿಯನನ್ನು ಕಣಕ್ಕಿಳಿಸಿದ್ದಾರೆ ಹುಲಿಯನ್ನು ಕೆಡವಿದವರಿಗೆ ಇಲಿಯನ್ನು ಸೋಲಿಸುವುದು ದೊಡ್ಡ ಮಾತಲ್ಲ ಎಂದು ಗುತ್ತೇದಾರ್ ಹೇಳಿದರು.

ಈ ಬಾರಿ 2 ಲಕ್ಷಗಳ ಮುನ್ನಡೆಯೊಂದಿಗೆ ಡಾ. ಉಮೇಶ್ ಜಾಧವ್ ಲೋಕಸಭೆಯಲ್ಲಿ ಜಯಶಾಲಿಯಾಗಲಿದ್ದಾರೆ ಎಂದು ಭವಿಷ್ಯ ನುಡಿದರು.

ಚಂದು ಪಾಟೀಲ್ ಮತ್ತು ದತ್ತಾತ್ರೇಯ ಪಾಟೀಲ್ ಜೋಡಿಯಾಗಿ ಸಹೋದರರಂತೆ ಈ ಚುನಾವಣಾ ಕಣದಲ್ಲಿ ಅಹರ್ನಿಶಿ ದುಡಿಯುತ್ತಿರುವುದರಿಂದ ಕಲ್ಬುರ್ಗಿ ಉತ್ತರ ಮತ್ತು ದಕ್ಷಿಣ ಮತಕ್ಷೇತ್ರದಲ್ಲಿ ಭಾರಿ ಜನಬೆಂಬಲ ಬಿಜೆಪಿಗೆ ವ್ಯಕ್ತವಾಗುತ್ತಿದೆ.

ಕಳೆದ 65 ವರ್ಷಗಳಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತ ಮಾಡಿದರೂ ಭಾರತದ ಪರಿಸ್ಥಿತಿ ಹೀನಾಯ ಮಟ್ಟದಲ್ಲಿದ್ದು ಆದರೆ 10 ವರ್ಷಗಳ ಮೋದಿ ಆಡಳಿತದಿಂದ ಪ್ರಗತಿಯ ಮಟ್ಟ ಮುಂಚೂಣಿಗೆ ಬಂದು ವಿಶ್ವಮಟ್ಟದಲ್ಲಿ ಭಾರತವನ್ನು ಗುರುತಿಸುವಂತಾಗಿದೆ. ಮೋದಿ ಅಂತವರ ನಾಯಕತ್ವದಲ್ಲಿ ಈಗ ನಾವಿದ್ದೇವೆ. ಕಲ್ಬುರ್ಗಿಯಲ್ಲಿ ಚಂದ್ರಶೇಖರ್ ಪಾಟೀಲ್ ರೇವೂರ್ ನಂತಹ ಧೀಮಂತ ನಾಯಕರು ಪಕ್ಷವನ್ನು ಕಟ್ಟಿ ಬೆಳೆಸಿದವರು ಇಂಥವರ ಗರಡಿಯಲ್ಲಿ ಪಳಗಿದ ದತ್ತಾತ್ರೇಯ ಪಾಟೀಲ್ ನಾಯಕತ್ವ ದೊಂದಿಗೆ 30ಸಾವಿರ ಮುನ್ನಡೆ ಸಾಧ್ಯತೆ ಕಂಡು ಬಂದಿದೆ.

ಕಳೆದ ಬಾರಿ ಅಫ್ಜಲಪುರ ಮತ್ತು ಜೇವರ್ಗಿ ಮೊದಲ ಮತ್ತು ಎರಡನೇ ಸ್ಥಾನದಲ್ಲಿ ಬಿಜೆಪಿಗೆ ಮುನ್ನಡೆ ನೀಡಿದ್ದು ಅದಕ್ಕಾಗಿ ಸಂಸದ ಜಾಧವ್ ಅವರು ಎರಡು ಮತಕ್ಷೇತ್ರಗಳಿಗೆ ಅನುಕೂಲವಾಗುವಂತೆ ಭಾರತ್ ಸಾಗರ್ ಮಾಲಾ ರಸ್ತೆಯನ್ನು ಕೊಡುಗೆ ನೀಡಿದ್ದಾರೆ. ದುಬೈ ಮಾದರಿಯ ನಿರ್ಮಾಣದ ಈ ಯೋಜನೆಯನ್ನು ತಂದ ಹೆಗ್ಗಳಿಕೆ ಅವರದು. ಅತನೂರು ಮತ್ತು ಜೇವರ್ಗಿಯಲ್ಲಿ ಈ ರಸ್ತೆಯನ್ನು ಪ್ರವೇಶಿಸಲು ಅನುಕೂಲವಾಗುವಂತೆ ವ್ಯವಸ್ಥೆ ಮಾಡಲಾಗಿದ್ದು ಬೆಂಗಳೂರು ಮತ್ತು ಸೋಲಾಪುರಕ್ಕೆ ಸಂಚರಿಸಲು ಸಮಯದ ಉಳಿತಾಯವಾಗಲಿದೆ ಎಂದರು. ಕಲ್ಬುರ್ಗಿಯನ್ನು ಸ್ಮಾರ್ಟ್ ಸಿಟಿಯನ್ನಾಗಿ ಮಾಡಲು ಈ ಬಾರಿ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಬೇಕಾಗಿದೆ.

*ಭಾರತದಲ್ಲಿ ಮೋದಿಯವರ ಪರವಾಗಿ ಅಲ್ಪಸಂಖ್ಯಾತರು ಬಿಜೆಪಿಗೆ ಮತ ಚಲಾಯಿಸಲಿದ್ದಾರೆ. 2011 ರಿಂದ ಭಾರತಕ್ಕೆ ಆಗಮಿಸಿದ ಮುಸ್ಲಿಮರಿಗೆ ಭಾರತೀಯ ಪೌರತ್ವದ ಅವಕಾಶ ಕಲ್ಪಿಸಿರುವುದರಿಂದ ಅಲ್ಪಸಂಖ್ಯಾತರಿಗೆ ಆಧಾರ್ ಕಾರ್ಡ್ ಚುನಾವಣಾ ಗುರುತು ಚೀಟಿ ಸೇರಿದಂತೆ ಅನೇಕ ಸೌಲಭ್ಯಗಳನ್ನು ಪಡೆಯಲು ಅನುಕೂಲವಾಗಿದೆ. ಆದರೆ ಸಿಎಎ ಬಗ್ಗೆ ತಪ್ಪು ಮಾಹಿತಿಯನ್ನು ನೀಡಿ ಹಾದಿ ತಪ್ಪಿಸುವುದು ಖಂಡನೀಯ ಎಂದು ಅವರು ಹೇಳಿದರು.

ಇಂದು ಕಾಶ್ಮೀರದಲ್ಲಿ ಶಾಂತ ವಾತಾವರಣವಿದ್ದು ಪ್ರತಿವರ್ಷ ಒಂದು ಕೋಟಿ ಅರವತ್ತು ಲಕ್ಷ ಯಾತ್ರಿಕರು ಮುಕ್ತವಾಗಿ ಪ್ರಕೃತಿ ರಮಣೀಯತೆಯನ್ನು ಸವಿಯಲು ಪ್ರವಾಸಿಗರಾಗಿ ತೆರಳುತ್ತಿದ್ದಾರೆ. ಈ ರೀತಿ ಭಾರತದಲ್ಲಿ ಕ್ರಾಂತಿಕಾರಿ ಬದಲಾವಣೆ ಮಾಡಿದ ಮೋದಿಯವರೇ ನಮ್ಮ ಅಭ್ಯರ್ಥಿಯೆಂದು ತಿಳಿದು ಭಾರತೀಯರು ಮತ ಚಲಾಯಿಸಲು ಸಿದ್ಧರಾಗಿದ್ದಾರೆ. ಕಲಬುರ್ಗಿಯಲ್ಲಿ ಮತ್ತೊಮ್ಮೆ ಜಾಧವ್ ಅವರನ್ನು ಗೆಲ್ಲಿಸಿ ಮೋದಿಯವರನ್ನು ಹ್ಯಾಟ್ರಿಕ್ ಪ್ರಧಾನಮಂತ್ರಿ ಯಾಗಿಸಲು ಪ್ರಬುದ್ಧ ಮತದಾರರು ಕೈಜೋಡಿಸಬೇಕು ಎಂದು ಅವರು ಮನವಿ ಮಾಡಿದರು.

ಕಮಲ ಅರಳುವುದು ಗ್ಯಾರಂಟಿ:ಚಂದು ಪಾಟೀಲ್: ಬಿಜೆಪಿಯ ಹಿರಿಯ ನಾಯಕರಾದ ಅಟಲ್ ಬಿಹಾರಿ ವಾಜಪೇಯಿ ಅವರು “ಕಮಲ್ ಖೀಲೆಗಾ”ಎಂದು ಹೇಳಿದ ಹಾಗೆ ಕಲಬುರ್ಗಿಯಲ್ಲಿ ಈ ಬಾರಿ ಕೂಡ ಕಮಲ ಅರಳುವುದು ನಿಶ್ಚಿತ ಎಂದು ಬಿಜೆಪಿ ನಗರ ಅಧ್ಯಕ್ಷರಾದ ಚಂದು ಪಾಟೀಲ್ ಹೇಳಿದರು.

ಬಿಜೆಪಿಯ ನಾಯಕರು ಮತ್ತು ಕಾರ್ಯಕರ್ತರು ಒಗ್ಗಟ್ಟಿನ ಮನೋಭಾವದಿಂದ ಚುನಾವಣಾ ಕಣಕ್ಕೆ ಇಳಿದಿದ್ದಾರೆ. ಡಾ. ಉಮೇಶ್ ಜಾಧವ್ ಅವರನ್ನು ಎರಡನೇ ಬಾರಿಗೆ ಗೆಲ್ಲಿಸಲು ಪ್ರತಿಜ್ಞೆ ಕೈಗೊಂಡಿದ್ದಾರೆ. ಈ ಬಾರಿ ಬಿಜೆಪಿ ಅಭ್ಯರ್ಥಿ ಗೆದ್ದರೆ ಮುಂದೆ ನಾನು ಮತ್ತು ದತ್ತಾತ್ರೇಯ ಪಾಟೀಲ್ ಶಾಸಕರಾಗೋದು ಕೂಡ ಖಚಿತ ಎಂದು ಚಂದು ಪಾಟೀಲ್ ಹೇಳಿದರು.

ಪ್ರಿಯಾಂಕ ಖರ್ಗೆಯವರು ಜಾಧವು ಅವರನ್ನು ಟೀಕಿಸುವುದರಲ್ಲಿ ಕಾಲಹರಣ ಮಾಡುತ್ತಿದ್ದು ಜಾಧವ್ ಅವರ ಐದು ಕೊಡುಗೆಗಳನ್ನು ಹೇಳಲಿ ಎಂದು ಸವಾಲೆಸೆ ದಿದ್ದಾರೆ. ಕಲ್ಬುರ್ಗಿಯಲ್ಲಿ ಐದಲ್ಲ 50 ಕೆಲಸಗಳನ್ನು ಮಾಡಿರುವುದಾಗಿ ಹೇಳಿ ಬಹಿರಂಗ ಚರ್ಚೆಗೂ ಸಿದ್ದ ಎಂದು ಆಹ್ವಾನ ನೀಡಿದ್ದಾರೆ.

ಭಾರತದಲ್ಲಿ ಏಳು ಜವಳಿ ಪಾರ್ಕ್ ಮಂಜೂ ರಾಗಿದ್ದು ಅದರಲ್ಲಿ ಒಂದನ್ನು ಕಲ್ಬುರ್ಗಿಗು ತರಿಸಿಕೊಟ್ಟ ಕೀರ್ತಿ ಜಾಧವ್ ಅವರಿಗೆ ಸಲ್ಲುತ್ತದೆ ವಂದೇ ಭಾರತ್ ರೈಲು, ಜಲ್ ಜೀವನ್ ಮಿಷನ್ ಜಾರಿ, 370ನೇ ವಿಧಿ ರದ್ದತಿ, ರಾಮಮಂದಿರ ನಿರ್ಮಾಣ ಹೀಗೆ ನೂರಾರು ಕೆಲಸಗಳನ್ನು ಮಾಡಿದ ಮೋದಿ ಅವರು ಕೈಗೊಳ್ಳುವ ಮುಂದಿನ ಕೆಲಸಗಳಿಗಾಗಿ ಈ ಬಾರಿಯೂ ಬಿಜೆಪಿಗೆ ಮತ ಹಾಕಿ ಪ್ರಚಂಡ ಬಹುಮತದಿಂದ ಗೆಲ್ಲಿಸಬೇಕಾಗಿದೆ ಎಂದು ಹೇಳಿದರು.

emedialine

Recent Posts

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

10 hours ago

ಕಲಬುರಗಿ; ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…

12 hours ago

ಕೈಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಉದ್ಯಮಿಗಳ ಅಹವಾಲು ಆಲಿಸಿದ ಬಿ.ಫೌಜಿಯಾ ತರನ್ನುಮ್

ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…

13 hours ago

ಸಿಎಂ ರಾಜೀನಾಮೆ ಕೇಳುತ್ತಿರುವ ಬಿಜೆಪಿ -ಜೆಡಿಎಸ್‍ಗೆ ಯಾವುದೇ ನೈತಿಕತೆಯಿಲ್ಲ

ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…

13 hours ago

ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ

ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…

13 hours ago

ಅ.13, 14 ರಂದು ಧಮ್ಮ ಕ್ರಾಂತಿ ಉತ್ಸವ : ಪೂರ್ವಭಾವಿ ಸಭೆ

ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…

13 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420