ಬಿಸಿ ಬಿಸಿ ಸುದ್ದಿ

ಮನುಷ್ಯನು ಸಧೃಡವಾಗಲು ಕ್ರೀಡೆ ಅವಷ್ಯಕವಾಗಿದೆ : ಬಬ್ಲುಗೌಡ

ಸುರಪುರ: ಇಂದಿನ ಯುಗದಲ್ಲಿ ಕ್ರೀಡಾಂಗಣದಲ್ಲಿ ಯುವಕರು ಆಟವಾಡುವುದನ್ನು ಬಿಟ್ಟು ಮೋಬೈಲ್ ಗೇಮನಲ್ಲಿ ಮಗ್ನರಾಗಿದ್ದಾg. ಇದು ಮನುಷ್ಯನ ಮಾನಸಿಕ ಮತ್ತು ದೈಹಿಕವಾಗಿ ಖಿನ್ನತೆಗೊಳಪಡಿಸುತ್ತದೆ. ಅದ್ದರಿಂದ ಯುವಕರು ಮೋಬೈಲನಲ್ಲಿ ಆಡುವುದನ್ನು ಬಿಟ್ಟು ಕ್ರೀಡಾಂಗಣದಲ್ಲಿ ಆಟವಾಡುವುದು ಅವಶ್ಯಕವಾಗಿದೆ,ಇದರಿಂದ ಮಾನಸಿಕವಾಗಿ ಮತ್ತು ದೈಹಿಕವಾಗಿ ಆರೋಗ್ಯದಿಂದರಬಹುದು ಎಂದು ಶಾಸಕರ ಸಹೋದರ ಹಾಗೂ ಯುವ ಮುಖಂಡ ಹಣಮಂತ ನಾಯಕ(ಬಬ್ಲುಗೌಡ) ತಿಳಿಸಿದರು.

ನಗರದ ಹಸನಾಪುರ ಕ್ಯಾಂಪಿನ ಡಾ. ಬಾಬಾ ಸಾಹೇಬ ಅಂಬೇಡ್ಕರ ಅನುದಾನಿತ ಆಂಗ್ಲ ಮಾದ್ಯಮ ಮಸತಿ ಶಾಲೆಯ ಆವರಣದಲ್ಲಿ ನಡೆದ ತಾಲೂಕ ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟಗಳನ್ನು ಉದ್ಘಾಟಿಸಿ ಮಾತನಾಡಿದ ಅವರು,ಹಿಂದೆ ಜನರು ಗರಡಿ ಮನೆಗಳಲ್ಲಿ ಕಸರತ್ತು ನಡೆಸುವ ಜೊತೆಗೆ ಅನೇಕ ರೀತಿಯ ಆಟಗಳ ಮೂಲಕ ದೈಹಿಕ ಮತ್ತು ಮಾನಸಿಕ ನೆಮ್ಮದಿ ಪಡೆಯುತ್ತಿದ್ದರು.ಇದರಿಂದ ಅವರ ಆರೋಗ್ಯ ವೃದ್ಥಿಸಿ ಅನೇಕ ವರ್ಷಗಳ ಕಾಲ ಬದುಕುತ್ತಿದ್ದರು.ಆದರೆ ಇಂದಿನ ಪೀಳಿಗೆ ದೈಹಿಕ ಕಸರತ್ತು ನಡೆಸದೆ,ಆಟಗಳನ್ನು ಆಡದೆ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಾರೆ.ಮೊಬೈಲ್,ಟಿ.ವಿಗಳಿಂದ ದೂರವಿದ್ದು ನಿತ್ಯ ವ್ಯಾಯಾಮ ಮತ್ತು ಆಟಗಳಲ್ಲಿ ತೊಡಗುವ ಮೂಲಕ ಸದೃಢ ಕಾಯ ಮತ್ತು ಮಾನಸಿಕ ನೆಮ್ಮದಿ ಪಡೆಯುವಂತೆ ಕಿವಿ ಮಾತು ಹೇಳಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಡಾ:ಬಿ.ಆರ್.ಅಂಬೇಡ್ಕರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಭಿಮಣ್ಣ ಬಿಲ್ಲವ ಮಾತನಾಡಿ,ಎಲ್ಲಾ ವಿದ್ಯಾರ್ಥಿಗಳು ಆಟದಲ್ಲಿ ಸಣ್ಣ ಪುಟ್ಟ ವ್ಯತ್ಯಾಸಗಳು ಬರಬಹುದು ಅವ್ಯಾವದನ್ನು ಗಂಭೀರವಾಗಿ ತೆಗೆದುಕೊಳ್ಳದೆ ಕ್ರೀಡಾಭಿಮಾನ ಮೆರೆದು ಕ್ರೀಡಾಕೂಟ ಯಶಸ್ಸುಗೊಳಿಸುವಂತೆ ಕರೆ ನೀಡಿದರು.

ಕಾರ್ಯಕ್ರಮದ ಆರಂಭದಲ್ಲಿ ಕ್ರೀಡಾ ಧ್ವಜಾರೋಹಣ ನೆರವೇರಿಸಲಾಯಿತು.ನಂತರ ಕ್ರೀಡಾಪಟುಗಳಿಗೆ ಬಬ್ಲುಗೌಡ ಹಾಗು ಇತರೆ ಎಲ್ಲಾ ಗಣ್ಯರು ಕ್ರೀಡಾ ಜ್ಯೋತಿ ನೀಡುವ ಮೂಲಕ ಚಾಲನೆ ನೀಡಿದರು,ಕಾಲೇಜಿನ ಪ್ರಾಂಶುಪಾಲರಾದ ಗಂಗಾಧರ ರುಮಾಲ ಅಧ್ಯಕ್ಷತೆ ವಹಿಸಿದ್ದರು.ಈ ಸಂದರ್ಭದಲ್ಲಿ ಎಪಿಎಂಸಿ ಅಧ್ಯಕ್ಷ ನಿಂಗಣ್ಣ ಬಾದ್ಯಾಪುರ,ಮುಖಂಡರಾದ ಬಿ.ಎಂ.ಹಳ್ಳಿಕೋಟಿ,ಶಂಕರ ನಾಯಕ,ಶರಣು ನಾಯಕ,ಸರಕಾರಿ ನೌಕರರ ಸಂಘದ ಅಧ್ಯಕ್ಷ ಸಂಜೀವ ದರಬಾರಿ,ಭೀಮಣ್ಣ ಬೋಸಗಿ,ಸುವರ್ಣ ಎಂ.ಅರ್ಜುಣಗಿ,ನಗರಸಭೆ ಸದಸ್ಯೆ ಮುತ್ತಮ್ಮ ಅಕ್ಕಿ ಸೇರಿದಂತೆ ಅನೇಕರಿದ್ದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

10 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

19 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

19 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

20 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago