ಕಲಬುರಗಿ: ಕಾರ್ಯಕರ್ತರು ಒಗ್ಗಟ್ಟಿನಿಂದ ಚುನಾವಣೆಯಲ್ಲಿ ಮುನ್ನುಗ್ಗುವುದನ್ನು ನೋಡಿದ ಕಾಂಗ್ರೆಸ್ ತಬ್ಬಿಬ್ಬಾಗಿದ್ದು ಮೊಕದ್ದಮೆಗಳ ಅತ್ರ ಪ್ರಯೋಗಿಸಿ ಎದೆಗೊಂದುವಂತೆ ಮಾಡಲು ವ್ಯರ್ಥ ಪ್ರಯತ್ನ ಮಾಡುತ್ತಿದೆ ಎಂದು ಬಿಜೆಪಿ ನಗರ ಅಧ್ಯಕ್ಷ ಚಂದು ಪಾಟೀಲ್ ಆರೋಪಿಸಿದ್ದಾರೆ.
ಭೋವಿಗಲ್ಲಿಯಲ್ಲಿ ನಡೆದ ಭೋವಿ ಜನಾಂಗದವರ ಸಭೆಯನ್ನುದೇಶಿಸಿ ಅವರು ಚುನಾವಣಾ ಪ್ರಚಾರ ಭಾಷಣದಲ್ಲಿ ಮಾತನಾಡುತ್ತಾ ಇತ್ತೀಚೆಗೆ ಶರಣನ ಜಾತ್ರೆಯಲ್ಲಿ ಭಕ್ತರಿಗಾಗಿ ಪ್ರತಿ ವರ್ಷದಂತೆ ಅನ್ನದಾಸೋಹ ನಡೆಸುತ್ತಿದ್ದರು ಅದರ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ಹೆಸರಿನಲ್ಲಿ ಮೊಕದ್ದಮೆ ಹೂಡಿ ಶರಣನ ಭಕ್ತರಿಗೆ ಕಾಂಗ್ರೆಸ್ ಅಪಮಾನ ಮಾಡಿದೆ ಎಂದು ಅವರು ಆರೋಪಿಸಿದರು.
ಕಳೆದ ಹಲವಾರು ವರ್ಷಗಳಿಂದ ಅನ್ನದಾಸೋಹವನ್ನು ನಡೆಸುತ್ತಿದ್ದರು. ಮುಖದಮೆ ಹೂಡಿ ಕಾರ್ಯಕರ್ತರ ಎದೆಗುಂದಿಸಲು ಕಾಂಗ್ರೆಸ್ ಪ್ರಯತ್ನಿಸುತ್ತಿದ್ದು ಬಿಜೆಪಿಯ ಕಾರ್ಯಕರ್ತರು ಇಂತಹ ಮುಖದ್ದಮೆಗಳಿಗೆ ಅಥವಾ ಭಯ ಹುಟ್ಟಿಸುವ ವಾತಾವರಣಕ್ಕೆ ಯಾವತ್ತೂ ಮಣಿಯುವುದಿಲ್ಲ ಎಂದು ಹೇಳಿದರು. ಬಿಜೆಪಿ ಗಾಳಿಗೆ ಭಯಭೀತವಾದ ಕಾಂಗ್ರೆಸ್ ಇಂತಹ ವಾಮ ಮಾರ್ಗವನ್ನು ಹಿಡಿದು ಬೆದರಿಸುವ ತಂತ್ರವನ್ನು ಹುಡುತತ್ತಿದೆ ಆದರೆ ಕಲ್ಬುರ್ಗಿ ಸೇರಿದಂತೆ ರಾಜ್ಯದ ಜನತೆ ಬಿಜೆಪಿಗೆ ಮತ ಹಾಕುವ ಮೂಲಕ ಮತ್ತೆ ನರೇಂದ್ರ ಮೋದಿಯವರನ್ನು ಮೂರನೇ ಬಾರಿಗೆ ಪ್ರಧಾನಿಯನ್ನಾಗಿಸಲು ನಿರ್ಧಾರ ಕೈಗೊಂಡಿದ್ದಾರೆ ಕಾಂಗ್ರೆಸ್ಸಿನ ಯಾವುದೇ ಬೆದರಿಕೆ ತಂತ್ರಗಳಿಗೂ ಖಾರವಾಗಿ ಹೇಳಿದರು.
ಭೋವಿ, ಕೋಲಿ, ಈಡಿಗ, ವಿಶ್ವಕರ್ಮ, ಬಲಿಜ ಉಪ್ಪಾರ ಮುಂತಾದ ಸಣ್ಣ ಸಣ್ಣ ಹಿಂದುಳಿದ ಸಮುದಾಯಗಳಿಗೆ ಬಿಜೆಪಿಯು ಆಶಾಕಿರಣ ವಾಗಿದ್ದು ಅವರಿಗಾಗಿ ನಿಗಮಗಳನ್ನು ಘೋಷಣೆ ಮಾಡಿದ ಹೆಗ್ಗಳಿಕೆ ಬಿಜೆಪಿಗೆ ಸಲ್ಲುತ್ತದೆ ಎಂದು ಲೋಕಸಭಾ ಸದಸ್ಯರಾದ ಡಾ. ಉಮೇಶ್ ಜಾದವ್ ಅವರು ಹೇಳಿದರು.
ಸಣ್ಣ ಸಣ್ಣ ಸಮುದಾಯಗಳಿಗೆ ರಾಜಕೀಯ ಪ್ರಾತಿನಿಧ್ಯವನ್ನು ಕೊಟ್ಟು ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಅಭಿವೃದ್ಧಿ ಪಡಿಸುವ ಕೆಲಸವನ್ನು ಮಾಡುತ್ತಿದೆ ಭೋವಿ ಸಮಾಜದವರಿಗೆ ಮಹಾನಗರ ಪಾಲಿಕೆಯ ಸದಸ್ಯರನ್ನಾಗಿ ಮಾಡಿ ಮತ್ತು ಪಕ್ಷದಲ್ಲಿ ಉನ್ನತ ಹುದ್ದೆಗಳನ್ನು ನೀಡಿ ಉತ್ತಮ ಸ್ಥಾನ ಮಾನವನ್ನು ಕಲ್ಪಿಸುತ್ತಿದೆ. ಆದರೆ ಕಾಂಗ್ರೆಸ್ ಜಾತಿಗಗಳನ್ನು ವೋಟ್ ಬ್ಯಾಂಕ್ ಆಗಿ ಬಳಸುವುದಲ್ಲದೆ ಯಾವುದೇ ಅಭಿವೃದ್ಧಿ ಕಾರ್ಯಕ್ರಮಗಳನ್ನು ನೀಡುತ್ತಿಲ್ಲ. ಹಿಂದುಳಿದ ವರ್ಗಗಳಿಗೆ ನಿಗಮ ಘೋಷಣೆ ಆಗಿದ್ದರೂ ಚಿಕ್ಕಾಸು ನೀಡದೆ ವಚನಭ್ರಷ್ಟ ಸರಕಾರವೆಂಬ ತಗ್ಗಳಿಕೆಗೆ ಪಾತ್ರವಾಗಿದೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಶಂಕರ್ ಮಾಮಾಜಿ ರಾಮಚಂದ್ರ ರಾವ್, ಪ್ರಿಯಾಂಕ ಅಂಬಾದಾಸ್ ಭೋವಿ, ಉಪಮೇಯರ್ ಶಿವಾನಂದ ಪಿಸ್ತಿ, ಅವಿನಾಶ್ ಜಾಧವ್, ವರದ ಶಂಕರ ಶೆಟ್ಟಿ, ಶಾಂತಲಿಂಗ ಪಾಟೀಲ್ ಮತ್ತು ತುಕಾರಾಮ ಮತ್ತು ತರರು ಇದ್ದರು. ಭೋವಿ ಜನಾಂಗದ ಬಂಧುಗಳು ಈ ಸಭೆಯಲ್ಲಿ ಭಾಗವಹಿಸಿದ್ದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…