ಬಿಸಿ ಬಿಸಿ ಸುದ್ದಿ

ತನ್ಮಯಿ (ಸಮಾನತೆಯ) ದಿನದ ಶುಭಾಶಯ

  • ನಂದಿನಿ ಸುರೇಂದ್ರ ಸನಬಾಳ

ಮನೆಯಲ್ಲಿ ಅಜ್ಜಿ ಕಥೆ ಹೇಳುವುದು ಸಹಜ, ಆ ಕಥೆಗಳಲ್ಲಿ ಒಂದು ಕಥೆ ಹೀಗಿತ್ತು 1970 ರಲ್ಲಿ ನಾವು ಚಿಕ್ಕವರು ಇದ್ದಾಗ ಪಶ್ಚಿಮ ಮಧ್ಯ ಭಾರತದಲ್ಲಿ ಭೀಕರ ಬರಗಾಲ, ರೈತರು, ಕೃಷಿಕರು, ಜನರು, ಜಾನುವಾರುಗಳು ಅನ್ನ ನೀರಿಗಾಗಿ ಪರದಾಟ ಪರಿಸ್ಥಿತಿ ಕಂಗೆಟ್ಟಿಹೋಗಿತ್ತು.

ಅಂತಹ ಸಂದರ್ಭದಲ್ಲಿ ಭಾರತದ ಕೇಂದ್ರ ಕೃಷಿ ಮತ್ತು ಆಹಾರ ಸಚಿವರಾದ ಬಾಬು ಜಗಜೀವನ್ ರಾಮ್ ಅವರು ಎಲ್ಲರಿಗೂ ಎಲ್ಲಾ ಕಾಲಕ್ಕೂ ಸಾಕಷ್ಟು ಆಹಾರ ಒದಗಿಸುವ ಒಂದು ದಿಟ್ಟ ಹೆಜ್ಜೆ ಮುಂದೆ ಇಟ್ಟು, ಸರಕಾರಿ ಒಡೆತನದ ಜಮೀನುಗಳನ್ನು ಗೂಮಾಳುಗಳನ್ನು ಕೃಷಿಕಾರ್ಮಿರಿಗೆ ಉಚಿತವಾಗಿ ಹಂಚಿಕೆ ಮಾಡಲು ಶಾಸನ ಹೊರಡಿಸಿ, ಅಧಿಕ ಆಹಾರ ಉತ್ಪಾದನಾ ಯೋಜನೆಯನ್ನು Groom More Food (GMF) act ಜಾರಿಗೆ ತಂದು ಲಕ್ಷ ಲಕ್ಷ ಕೃಷಿಕರು ಭೂ ಒಡೆತನ ಪಡೆದು ಸಾಕಷ್ಟು ಪ್ರಮಾಣದಲ್ಲಿ ಆಹಾರ ಉತ್ಪಾದನೆ ಮಾಡಲು ಪ್ರಾರಂಭಿಸಿದರು.

ಕೃಷಿಕರಿಗೆ ನಾವೀನ್ಯ ಕೃಷಿ ಉಪಕರಣ ಹಾಗೂ ಬ್ಯಾಂಕುಗಳಲ್ಲಿ ರೈತರಿಗೆ ಸಾಲಗಳ ವ್ಯವಸ್ಥೆ ಹೀಗೆ ಅನುಕೂಲ ಕಲ್ಪಿಸಿದ ಮಹಾನ್ ನಾಯಕರು ಹಸಿರು ಕ್ರಾಂತಿಯ ಹರಿಕಾರ ಎಂದೇ ಖ್ಯಾತಿ ಗಳಿಸಿರುವ ಬಾಬೂಜಿ ಅವರಿಗೆ ನನ್ನ ನಮನಗಳು. ನಿಜವಾದ ಪ್ರಜಾಪ್ರಭುತ್ವವಾದಿ,ಸಾಮಾಜಿಕ ನ್ಯಾಯದ ಹೋರಾಟಗಾರ,ವಿಶೇಷ ಕೇಂದ್ರ ಸಚಿವ,ಅರ್ಧ ಶತಮಾನಕಿಂತ್ತ ಹೆಚ್ಚು ಕಾಲ ಬದ್ಧತೆ ಮತ್ತು ಸಮರ್ಪನೆಯಿಂದ ಕೆಲಸ ಮಾಡಿದ ಕಾರ್ಮಿಕ ಖಾತೆಗಳ ಶಿಲ್ಪಿ ಬಾಬು ಜಗಜೀವನ್ ರಾಮ್ ಅವರು ಹುಟ್ಟುಹಬ್ಬ ಇವರು 1905 ಏಪ್ರಿಲ್ 5 ರಂದು ಬಿಹಾರದ ಶಾಬಾದ ಜಿಲ್ಲೆಯ ಚಾಂದವಾ ಗ್ರಾಮದಲ್ಲಿ ಜನಿಸಿದರು.

ತಂದೆ ಶೋಭಿರಾಜ್ ತಾಯಿ ವಾಸಂತಿದೇವಿ ,1935 ರಲ್ಲಿ ಇಂದ್ರಾಣಿ ಯವರಿಗೆ ವಿವಾಹ ಹಾಗೂ ಸುರೇಶ್ ಕುಮಾರ್ ಹಾಗೂ ಮೀರಾ ಕುಮಾರಿ ಇಬ್ಬರು ಮಕ್ಕಳಿದ್ದರು.ತಾಯಿಯ ಆದರ್ಶದಲ್ಲಿ ಬೆಳೆದ ಇವರು ಧಾರ್ಮಿಕ ಮನೋವಾದಿ ಆಗಿದ್ದರು. ಆರಾ ಟೌನ್ ಶಾಲೆಯಲ್ಲಿ 10 ನೆ ತರಗತಿ ಉತ್ತೀರ್ಣರಾದರು, ಬನಾರಸ್ ಹಿಂದೂ ವಿಶ್ವವಿದ್ಯಾಲಯದಿಂದ ಅಂತರ್ ವಿಜ್ಞಾನ ಪರೀಕ್ಷೆ ಹಾಗೂ ಕಲ್ಕತ್ತಾ ವಿಶ್ವವಿದ್ಯಾಲಯದಿಂದ ಪದವಿ ಪಡೆದರು .

1934 ರಲ್ಲಿ ಅಖಿಲಭಾರತಿಯ ರವಿದಾಸ ಸಮ್ಮೇಳನ ಆಯೋಜಿಸಿ ಖಿನ್ನತೆಗೆ ಒಳಗಾದ ಜನರ ಸಮಸ್ಯೆಯ ಪರಿಹಾರಕ್ಕಾಗಿ ಹೋರಾಡಿದರು. ಆಕ್ಟ್ 1935 ಹ್ಯಾಮಂಡ್ ಆಯೋಗದ ಮುಂದೆ ದಲಿತರಿಗೆ ಮತದಾನದ ಹಕ್ಕನ್ನು ಕೋರಿದರು.

ಕಾನೂನೂ ಅಸಹಕಾರ ಚಳವಳಿ ಹಾಗೂ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿ ಅನೇಕ ಬಾರಿ ಬಂಧನಕ್ಕೊಳಗಾದರು.1942 ವಿಧ್ಯಾರ್ಥಿ ಕಾರ್ಯಕರ್ತ ಸ್ವಾತಂತ್ರ ಹೋರಾಟಗಾರ ಹಾಗೂ 1936 ರಲ್ಲು28 ನೆಯ ವಯಸ್ಸಿನಲ್ಲಿ ಬಿಹಾರ ವಿಧಾನ ಪರಿಷತ್ತಿನ ನಾಮ ನಿರ್ದೇಶಿತ ಸದಸ್ಯರಾಗಿ ಶಾಸಕರಾದರು.1936 disemb 10 ರಂದು ಪರ್ವಮಧ್ಯ ಶಾಬಾದನ ಗ್ರಾಮೀಣ ಮತ ಕ್ಷೇತ್ರದಿಂದ ಬಿಹಾರ ವಿಧಾನ ಸಭೆಗೆ ಅವಿರೋಧವಾಗಿ ಆಯ್ಕೆಯಾದರು.

ಇಲ್ಲಿಂದ ಇವರ ರಾಜಕೀಯ ಪಯಣ ಸಾಗಿತ್ತು.1946-1952 ರಲ್ಲಿ ಕೇಂದ್ರ ಕಾರ್ಮಿಕ ಸಚಿವರಾಗಿ ಕಾರ್ಮಿಕರಿಗೆ ಬೇಕಾಗುವ ಎಲ್ಲಾ ಅನುಕೂಲತೆಗಳನ್ನು ಶಾಸನಬದ್ಧವಾಗಿ ಮಾಡಿಕೊಟ್ಟರು, ಕಾರ್ಮಿಕರವರ್ಗದ ಹೋರಾಟಗಾರರಾಗಿ ಸದಾ ಕಾರ್ಮಿಕರಿಗಾಗಿ ಧ್ವನಿ ಎತ್ತಿದರು.

1952-1956 ರಲ್ಲಿ ಕೇಂದ್ರ ಸಂವಹನ ಸಚಿವರಾಗಿ ಅನೇಕ ಬದಲಾವಣೆಗಳನ್ನು ತಂದರು. 1956-1962 ಕೇಂದ್ರ ಸಾರಿಗೆ ಮತ್ತು ರೈಲ್ವೇ ಸಚಿವರಾಗಿ ರೈಲ್ವೆಯಲ್ಲಿ ಕೆಲಸ ಮಾಡುವುದು ನೌಕರರಿಗೆ ಅನೇಕ ಸೌಲಭ್ಯಗಳನ್ನು ಕಲ್ಪಿಸಿ,ದೇಶಾದ್ಯಂತ ರೈಲ್ವೆ ಸಾರಿಗೆಯನ್ನು ಅಭಿವೃದ್ದಿಪಡಿಸಿದರು.1962-1963 ಕೇಂದ್ರ ನಾಗರಿಕ ಮತ್ತು ಸಂಪರ್ಕ ಸಚಿವರಾಗಿ ಮಾಧ್ಯಮಗಳ ಪ್ರಗತ್ತಿಗೆ ಕಾರಣಿಕರ್ತರಾದರು.1966 67ಕಾರ್ಮಿಕ,ಉದ್ಯೋಗ ಪುನರ್ವಸತಿ ಕೇಂದ್ರ ಸಚಿವರಾಗಿ ಅನೇಕ ಸೌಲಭ್ಯಗಳನ್ನು ಕಲ್ಪಿಸಿದರು.

1967-1970 ಕೇಂದ್ರ ಆಹಾರ ಮತ್ತು ಕೃಷಿ ಸಚಿವರಾಗಿ ಭೂಒಡೆತನದ ಹಕ್ಕನ್ನು ಕೃಷಿಕರಿಗೆ ಕೊಟ್ಟವರು.1970-1974,1977-1979 ಕೇಂದ್ರ ರಕ್ಷಣಾ ಸಚಿವರಾಗಿದ್ದರು.1974-1977 ಕೇಂದ್ರ ಕೃಷಿ ಮತ್ತು ನೀರಾವರಿ ಸಚಿವರಾಗಿದ್ದರು.1976-1983 ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಅಧ್ಯಕ್ಷರಾಗಿದ್ದರು.1979 ಜನೇವರಿ 24 ರಂದು ಭಾರತದ ಮೊದಲ ದಲಿತ ಉಪಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದರು.

ಭೋಜಪೂರಿ ,ಹಿಂದಿ,ಇಂಗ್ಲಿಷ್, ಬೆಂಗಾಲಿ, ಸಂಸ್ಕೃತಿ ಭಾಷೆ ಮಾತನಾಡುವ ಚತುರರು ಬುದಿವಂತ್ತರು ಆದ ಇವರು ಸಂವಿಧಾನ ರಚನಾ ಸಮಯ ಸಮಿತಿಯ ಸದಸ್ಯರಾಗಿ ಆಯ್ಕೆ ಆಗಿದ್ದರು. ಇವರ ಇನ್ನೊಂದು ಯಶೋಗಾದೆ

ಮರೆಯುವಂತಿಲ್ಲ ಅದುವೇ ವಿಜಯ್ ದಿವಸ 1980 ರಲ್ಲಿ ರಕ್ಷಣಾ ಮಂತ್ರಿಯಾಗಿದ್ದ ಸಂದರ್ಭದಲ್ಲಿ ಇಂಡೋ-ಪಾಕ್ ಯುದ್ಧ ಸಿಯಾಚಿನ ನಲ್ಲಿ ಯುದ್ಧ ನಡೆಯುವ ಸಂದರ್ಭದಲ್ಲಿ ಖುದ್ದಾಗಿ ಹೋಗಿ ನಮ್ಮ ಸೈನಿಕರಿಗೆ ಬೇಕಾದ ಆಧುನಿಕ ಸುಸಜ್ಜಿತ ಶಶ್ರಾಸ್ತ್ರ ಯುದ್ದ ವಿಮಾನಗಳ ಪೂರೈಕೆ ಮಾಡಿ, ನೈತಿಕ ಬೆಂಬಲ ನೀಡಿ ಸೈನಿಕರಿಗೆ ಬಲ ತುಂಬುವ ಕೆಲಸ ಮಾಡಿದರು.

ಸುಧೀರ್ಘ ಕಾಲ ಕೇಂದ್ರ ಸರ್ಕಾರದಲ್ಲಿ ಇಷ್ಟೊಂದು ಖಾತೆಗಳ ಸಚಿವರಾಗಿ ಕೆಲಸ ಮಾಡಿದ ಮಹಾನ್ ಹೋರಾಟಗಾರರ ತ್ಯಾಗ ಸೇವಾ ಮನೋಭಾವ ಹಾಗೂ ಕಾರ್ಮಿಕರ ಹೋರಾಟಗಾರರು ಇವರಿಗೊಂದು ನನ್ನ ಸಲಾಂ.

emedialine

Recent Posts

ಡೊನೇಷನ್ ಹಾವಳಿಗೆ ಕಡಿವಾಣಕ್ಕೆ ಎಸ್ಎಫ್ಐಯಿಂದ ಶಾಲಾ ಶಿಕ್ಷಣ ಪ್ರಧಾನ ಕಾರ್ಯದರ್ಶಿ, ಆಯುಕ್ತರಿಗೆ ಮನವಿ

ಬೆಂಗಳೂರು: ರಾಜ್ಯದಲ್ಲಿ ಬಹುತೇಕ ಖಾಸಗಿ ಶಾಲೆಗಳು 2024-25ನೇ, ಸಾಲಿನಲ್ಲಿ ಪ್ರವೇಶ ಶುಲ್ಕ, ಬಟ್ಟೆ. ಶೂ-ಸಾಕ್ಸ್. ಟೈ, ಬೆಲ್ಟ್, ಸ್ಮಾರ್ಟ್ ಕ್ಲಾಸ್,…

1 hour ago

ಶ್ರೀ ರಾಚೋಟೇಶ್ವರ ಸಂಸ್ಥಾನ ಮಠದಲ್ಲಿ 41 ದಿನಗಳ ಸಂಸ್ಕಾರ ಶಿಬಿರದ ಸಮರೂಪ 21ಕ್ಕೆ

ಕಲಬುರಗಿ : ತಾಲೂಕಿನ ಹೊನ್ನಕಿರಣಗಿ ಗ್ರಾಮದ ಶ್ರೀ ರಾಚೋಟೇಶ್ವರ ಸಂಸ್ಥಾನ ಮಠದಲ್ಲಿ 41 ದಿನಗಳ ಪರ್ಯಂತರ ಜರುಗಿಬಂದ 17ನೇ ವರ್ಷದ…

4 hours ago

ತುರ್ತಾಗಿ ಬರ ಪರಿಹಾರ ಒದಗಿಸಲು ಅಖಿಲ ಭಾರತ ರೈತ ಕೃಷಿಕಾರ್ಮಿಕರ ಸಂಘಟನೆ ಒತ್ತಾಯ

ಕಲಬುರಗಿ: ರಾಜ್ಯ ರೈತ ಸಮುದಾಯ ಮತ್ತು ಕೃಷಿ ಕಾರ್ಮಿಕರು ತೀವ್ರ ಬರದಲ್ಲಿ ನರಳುತ್ತಿದ್ದಾರೆ. ಆದ್ದರಿಂದ ಸರ್ಕಾರ ಯುದ್ಧೋಪಾದಿಯಲ್ಲಿ ಬರ ಪರಿಹಾರ…

4 hours ago

ಜಂಗಮಶೆಟ್ಟಿ ರಾಜ್ಯ ಮಟ್ಟದ ರಂಗಪ್ರಶಸ್ತಿಗೆ ಆಹ್ವಾನ

ಕಲಬುರಗಿ : ಇಲ್ಲಿನ ರಂಗಸಂಗಮ ಕಲಾವೇದಿಕೆಯು ಕೊಡಮಾಡುವ ಎಸ್.ಬಿ.ಜಂಗಮಶೆಟ್ಟಿ ಮತ್ತು ಸುಭದ್ರಾದೇವಿ ಜಂಗಮಶೆಟ್ಟಿ ರಂಗ ಪ್ರಶಸ್ತಿಗೆ ರಂಗ ಸಾಧಕರಿಂದ ಅರ್ಜಿ…

4 hours ago

ಕಲಬುರಗಿ ಕೇಂದ್ರೀಯ ವಿವಿಯಲ್ಲಿ ಸಂಶೋಧನಾ ವಿದ್ಯಾರ್ಥಿ ಅನುಮಾನಸ್ಪದ ಸಾವು

ಕಲಬುರಗಿ: ಇಲ್ಲಿನ ಕಡಗಂಚಿ ಕೇಂದ್ರಿಯ ವಿಶ್ವ ವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ಅನುಮಾನಸ್ಪದ ಮೃತಪಟ್ಟಿರುವ ಘಟನೆ ಬೆಳಕ್ಕಿಗೆ ಬಂದಿದಿದ್ದು, ಘಟನಾ ಸ್ಥಳಕ್ಕೆ…

4 hours ago

ಹುಬ್ಬಳ್ಳಿಯ ಅಂಜಲಿ ಕೊಲೆ ಆರೋಪಿಗೆ ಗಲ್ಲು ಶಿಕ್ಷೆಗೆ ಆಗ್ರಹ

ಚಿತ್ತಾಪುರ: ಹುಬ್ಬಳ್ಳಿಯಲ್ಲಿ ನಡೆದ ಅಂಜಲಿ ಕೊಲೆ ಆರೋಪಿಗೆ ಗಲ್ಲು ಶಿಕ್ಷೆ ನೀಡಬೇಕೆಂದು ಆಗ್ರಹಿಸಿ ಕೋಲಿ ಸಮಾಜದ ತಾಲೂಕು ಅಧ್ಯಕ್ಷ ರಾಮಲಿಂಗ ಬಾನಾರ್…

5 hours ago