ಕಲಬುರಗಿ: ಲೋಕಸಭಾ ಚುನಾವಣೆಯಲ್ಲಿ ಚಂದು ಪಾಟೀಲ್ , ದತ್ತಾತ್ರೇಯ ಪಾಟೀಲ್ ಹಾಗೂ ನಾನು ತ್ರಿಮೂರ್ತಿಗಳಾಗಿ ಕಾಂಗ್ರೆಸ್ ನ್ನು ಮಟ್ಟಹಾಕಲು ಸಜ್ಜಾಗಿ ಚುನಾವಣಾ ಕಣದಲ್ಲಿ ಇಳಿದಿದ್ದೇವೆ ಎಂದು ಶಾಸಕ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಸವರಾಜ್ ಮತ್ತಿಮೂಡು ಟೀಕಾ ಪ್ರಹಾರ ಮಾಡಿದರು .
ಕಲಬುರಗಿ ನಗರದ ಪೂಜಾರಿ ಮಠದ ಬಳಿ ಉತ್ತರ ಮಂಡಲದ ಶಕ್ತಿಕೇಂದ್ರ ಗಳಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿ ಮೋದಿಯವರನ್ನು ಮೂರನೇ ಬಾರಿ ಪ್ರಧಾನಿಯನ್ನಾಗಿಸಲು ಹಾಗೂ ಡಾ. ಉಮೇಶ್ ಜಾಧವ್ ಅವರನ್ನು ಎರಡನೇ ಬಾರಿ ಲೋಕಸಭಾ ಸದಸ್ಯರನ್ನಾಗಿಸಲು ನಾವೆಲ್ಲ ಒಟ್ಟಾಗಿದ್ದೇವೆ. ಕಾರ್ಯಕರ್ತರ ಬಲದಿಂದ ಈ ಚುನಾವಣೆಯನ್ನು ಪ್ರಚಂಡ ಬಹುಮತದಿಂದ ಗೆಲ್ಲುವುದು ನಿಶ್ಚಿತ ಎಂದರು.
ಎಂಎಸ್ ಕೆ ಮಿಲ್ ಮುಚ್ಚಿದ್ದೇ ಕಾಂಗ್ರೆಸ್ ಸರಕಾರದ ಸಾಧನೆ:ಜಾಧವ್
ಕಾಂಗ್ರೆಸ್ ಗೆ ಮೋದಿಯವರ ಅಭಿವೃದ್ಧಿ ಕಣ್ಣಿಗೆ ಕಾಣುವುದಿಲ್ಲ. 60 ವರ್ಷದ ಕಾಂಗ್ರೆಸ್ ಸಾಧನೆ ಮತ್ತು ಮೋದಿಯವರ 10ವರ್ಷ ಸಾಧನೆ ತುಲನೆ ಮಾಡಿ ನೋಡಿ.ನಿಮ್ಮ ಕಾಲದಲ್ಲಿ ಎಂ ಎಸ್ ಕೆ ಮಿಲ್ ಮುಚ್ಚಿದ್ದು ನಿಮ್ಮ ಸಾಧನೆ.
ಮೋದಿಯವರು ಕಲಬುರ್ಗಿಗೆ 10 ಸಾವಿರ ಕೋಟಿ ವೆಚ್ಚದಲ್ಲಿ ಮೆಗಾ ಜವಳಿ ಪಾರ್ಕ್ ನೀಡಿ ಕೊಡುಗೆ ಕೊಟ್ಟಿದ್ದಾರೆ.ಒಂದು ಲಕ್ಷ ನೇರ ಮತ್ತು ಎರಡು ಲಕ್ಷ ಪರೋಕ್ಷ ಉದ್ಯೋಗ ಸೃಷ್ಟಿ ಆಗಲಿದೆ.ಕಾಂಗ್ರೆಸ್ ದುಷ್ಟಶಕ್ತಿಗಳ ಜೊತೆ ಕೈ ಜೋಡಿಸಿ ಸನಾತನ ಹಿಂದೂ ಧರ್ಮಕ್ಕೆ ಅಪಮಾನ ಮಾಡುತ್ತಿದೆ. ಇಲ್ಲಿನ ಉಸ್ತುವಾರಿ ಸಚಿವರಾದ ಪ್ರಿಯಾಂಕ ಖರ್ಗೆ ಅದನ್ನು ಬೆಂಬಲಿಸಿ ಪಾಕಿಸ್ತಾನ್ ಘೋಷಣೆ ಕೂಗಿಲ್ಲ ವೆಂದು ಸಮರ್ಥಿಸಿ ಕೊಳ್ಳುತ್ತಿದ್ದಾರೆ. ಕುಡಿಯಲು ನೀರಿಲ್ಲದೆ ಕಲಬುರ್ಗಿ ಯಲ್ಲಿ ಹಾಹಾಕಾರ ವೆದ್ದರೂ ಮಾವನ ಗೆಲುವಿಗೆ ಎಂಟು ದಿನಗಳಿಂದ ಠಿಕಾಣಿ ಹೂಡಿ ಜನರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದರು.
370ನೆ ವಿಧಿ ರದ್ದತಿ,ರಾಮ ಮಂದಿರ ನಿರ್ಮಾಣ,ನಾರಿ ಶಕ್ತಿ ವಂದನ್ ಮಹಿಳಾ ಮೀಸಲಾತಿ ಮಸೂದೆ ಜಾರಿಗೆ ಒಪ್ಪಿಗೆ ,ಹೊಸ ಐ ಪಿ ಸಿ ಬದಲಾಯಿಸಿ ಭಾರತೀಯ ನ್ಯಾಯ ಸಂಹಿತೆ ಜಾರಿ ಮಾಡಿ ಬ್ರಿಟಿಷ್ ದಾಸ್ಯತನದ ಕಾನೂನಿನಿಂದ ಮುಕ್ತಿ ,ಹೊಸ ಶಿಕ್ಷಣ ನೀತಿ ಜಾರಿ ,ಆರ್ಥಿಕ ಸ್ಥಿತಿ ಸುಧಾರಣೆ ಹೀಗೆ ನೂರಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಾರಿ ಮಾಡಿ ಭಾರತೀಯರ ಮನಗೆದ್ದ ಮೋದಿಯವರು ಮೂರನೇ ಬಾರಿ ಪ್ರಧಾನಿ ಆಗುವುದು ನಿಶ್ಚಿತ. ರಾಷ್ಟ್ರ ವಿರೋಧಿ ಕಾಂಗ್ರೆಸ್ ಸರಕಾರದ ವಿರುದ್ಧ ಮತ ಚಲಾಯಿಸಿ.ಅಭಿವೃದ್ಧಿ ಮಾಡದ ಕಾಂಗ್ರೆಸ್ ಸರಕಾರವು 6 ತಿಂಗಳಲ್ಲಿ ತಾನಾಗಿ ಪತನಗೊಳ್ಳಲಿದೆ ಎಂದು ಜಾಧವ್ ಹೇಳಿದರು.
ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ಬಿ. ಜಿ ಪಾಟೀಲ್ ,ಮಾಜಿ ವಿಧಾನ ಪರಿಷತ್ ಸದಸ್ಯ ಅಮರನಾಥ ಪಾಟೀಲ್, ಬಿಜೆಪಿ ಗ್ರಾಮೀಣ ಅಧ್ಯಕ್ಷರಾದ ಶಿವರಾಜ್ ಪಾಟೀಲ್ ರದ್ದೇವಾಡಗಿ, ಮೇಯರ್ ವಿಶಾಲ್ ದರ್ಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಅರುಣಾ ಬಾಯಿ, ಗಂಗಮ್ಮ, ಸುನಿಲ್ ಮಚ್ಚೆಟ್ಟಿ, ಕೃಷ್ಣ ನಾಯಕ್, ಅವಿನಾಶ್ ಕುಲಕರ್ಣಿ, ಶಿವಯೋಗಿ ನಾಗನಹಳ್ಳಿ, ಅಶೋಕ್ ಮಾನಕರ,ಶರಣು ಜಮಾದಾರ, ಡಾ. ಬಾಬುರಾವ್ ಶೇರಿ, ವಿಜು ಪಿ ಟಿ, ಮಂಜು ಚನ್ನಶೆಟ್ಟಿ ಮತ್ತಿತರರು ಇದ್ದರು. ಶಾಂತು ದುಧನಿ ಸ್ವಾಗತಿಸಿದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…