ಅಫಜಲಪುರ: ಇಂಡಿಯಾ ಒಕ್ಕೂಟ ರಚನೆ ಮಾಡಿದ ವಿವಿಧ ಪಕ್ಷಗಳು ಒಂದೊಂದಾಗಿ ಒಕ್ಕೂಟದಿಂದ ಹೊರ ಬಂದು ಕಾಂಗ್ರೆಸ್ ಛಿದ್ರ ಗೊಂಡಿದೆ ಎಂದು ಮಾಜಿ ಸಚಿವರು ಹಾಗೂಹಿ ಬಿಜೆಪಿ ಹಿರಿಯ ಮುಖಂಡರಾದ ಮಾಲೀಕಯ್ಯ ವಿ ಗುತ್ತೇದಾರ್ ಹೇಳಿದರು.
ಅಫ್ಜಲ್ ಪುರ ತಾಲೂಕಿನ ಬಡದಾಳ ಮಹಾಶಕ್ತಿ ಕೇಂದ್ರದಲ್ಲಿ ಭಾನುವಾರ ನಡೆದ ಮಹಾಶಕ್ತಿ ಕೇಂದ್ರದ ಬಿಜೆಪಿ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಇಂಡಿಯ ಒಕ್ಕೂಟದಲ್ಲಿ ಪ್ರಧಾನಿ ಯಾಗಲು ಅಭ್ಯರ್ಥಿಗಳಿಲ್ಲದೆ ಒಬ್ಬೊಬ್ಬರಾಗಿ ಹೊರ ಪಡೆದು ಕಾಂಗ್ರೆಸ್ಸಿಗೆ ಈಗ ಮೇಲೆ ಕಳೆದುಕೊಂಡಿದೆ. ಅಫ್ಜಲ್ಪುರ ತಾಲೂಕಿನಲ್ಲಿ ಎಲ್ಲ ಮತದಾರರು ದೇಶದ ಭವಿಷ್ಯಕ್ಕೆ ಮತ್ತು ಮೋದಿ ಅವರನ್ನು ಮೂರನೇ ಬಾರಿಗೆ ಪ್ರಧಾನಿಯನ್ನಾಗಿಸಲು ಕಳೆದಬಾರಿಗಿಂತ ಹೆಚ್ಚು ಅಂತರಗಳಿಂದ ಗೆಲ್ಲಿಸಲು ನಿರ್ಧರಿಸಿದ್ದಾರೆ ಈ ಬಾರಿ 40 ಸಾವಿರ ಮತಗಳ ಮುನ್ನಡೆ ಸಾಧಿಸುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಳೆದ 60 ವರ್ಷಗಳಲ್ಲಿ ಆಡಳಿತ ಮಾಡಿದ ಕಾಂಗ್ರೆಸ್ ಭಾರತವನ್ನು ಬಳ ಹಗುರವಾಗಿ ನೋಡಿ ಅಭಿವೃದ್ಧಿ ಮಾಡದೆ ವಿಶ್ವಮಟ್ಟದಲ್ಲಿ ಭಾರತ ತಲೆತಗ್ಗಿಸುವಂತಾಗಿತ್ತು. ಆದರೆ ಮೋದಿ ಅವರು 10 ವರ್ಷಗಳಲ್ಲಿ ಇಡೀ ವಿಶ್ವವೇ ಭಾರತದ ನೋಡುವ ಹಾಗೆ ಅಭಿವೃದ್ಧಿ ಮತ್ತು ನಾಯಕತ್ವವನ್ನು ನೀಡಿದರು ವಿಶ್ವಶಾಂತಿ ಗಾಗಿ ಮೋದಿಯವರ ಸಲಹೆ ಪಡೆಯುವಷ್ಟು ಭಾರತವು ಇಂದು ಬೆಳೆದು ನಿಂತಿದೆ 543 ಲೋಕಸಭಾ ಸ್ಥಾನಗಳಲ್ಲಿ 55 ಸ್ಥಾನಗಳನ್ನು ಪಡೆಯಲಾಗದೆ ವಿಪಕ್ಷ ಸ್ಥಾನದಿಂದ ಕೂಡ ಕಾಂಗ್ರೆಸ್ ವಂಚಿತವಾಯಿತು.
ಸೋಲಿಲ್ಲದ ಸರದಾರನೆಂದು ಬೀಗುತ್ತಿದ್ದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಡಾ. ಉಮೇಶ್ ಜಾದವ್ ಅವರು ಸೋಲಿಸಿ ಕಳೆದ ಚುನಾವಣೆಯಲ್ಲಿ ಅದ್ಭುತ ಜಯ ಸಾಧಿಸಿದ್ದರು. ಜಾಧವ್ ಅವರ ಕೊಡುಗೆ ಏನು ಎಂದು ಪ್ರಶ್ನಿಸುವ ಕಾಂಗ್ರೆಸ್ ನವರು ಕರೋನಾ ಸಂದರ್ಭದಲ್ಲಿ ಒಬ್ಬ ವೈದ್ಯನಾಗಿ ಜಾಧವ್ ಮಾನವೀಯತೆಯಿಂದ ಸ್ವತಹ ರೆಮಿಡಿಸಿವಿರ್ ಹುಚ್ಚು ಮಧ್ಯಾಹ್ನ ಸ್ವತಃ ಹೆಗಲ ಮೇಲೆ ಹೊತ್ತು ಜನರ ಪ್ರಾಣ ರಕ್ಷಣೆ ಮಾಡಿದರು ವಿಮಾನ ಇಳಿಯುವ ದರ್ಜೆಯ ಸ ಭಾರತ್ ಮಾಲಾರಸ್ತೆ ಅಫ್ಜಲ್ಪುರ ಮತ್ತು ಜೇವರ್ಗಿ ತಾಲೂಕುಗಳಲ್ಲಿ 1975 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವುದು ಹೆಮ್ಮೆಯ ವಿಚಾರ. ಕಲ್ಬುರ್ಗಿ ವಿಮಾನ ನಿಲ್ದಾಣಕ್ಕೆ ಆರಂಭ ಕಾಂಗ್ರೆಸ್ ಮಾಡಿದರು.
ಹಣಕಾಸಿನ ನೆರವು ನೀಡದೆ ಕುಂಟುತ್ತಾ ಸಾಗುತ್ತಿದ್ದ ಯೋಜನೆಯನ್ನು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಅನುದಾನ ನೀಡಿ ಜಾಶವ್ ಅವರ ನೇತೃತ್ವದಲ್ಲಿ ವಿಮಾನ ಇಳಿಯುವ ಮತ್ತು ರಾತ್ರಿ ವಿಮಾನ ಸೇವೆ ಪ್ರಾರಂಭಿಸುವ ದೊಡ್ಡ ಕೆಲಸವನ್ನು ಮಾಡಲಾಯಿತು.
ಸ್ವಾತಂತ್ರ್ಯ ನಂತರ ಒಂದೇ ಒಂದು ಹೊಸ ರೈಲುಗಾಡಿಯನ್ನು ಕಲಬುರ್ಗಿಯಿಂದ ಬೆಂಗಳೂರಿಗೆ ಆರಂಭಿಸಲು ಸಾಧ್ಯವಾಗದ ಕಾಂಗ್ರೆಸ್ ನಾಚಿಕೆ ಪಡುವಂತೆ ಜಾಧವ್ ಅವರು ವಂದೇ ಭಾರತ್ ಸೇರಿ ಎರಡು ರೈಲುಗಳನ್ನು ಪ್ರಾರಂಭಿಸಿ ಜನತೆಗೆ ನೆರವಾದರು. ಗಡಿಯಲ್ಲಿರುವ ಸೈನಿಕರ ಮೇಲೆ ಪಾರ್ಕ್ ಸೈನಿಕರು ಗುಂಡುಹರಿಸಿದಾಗ ಪ್ರತೀಕಾರ ಮಾಡದಂತೆ ನಮ್ಮ ಸೈನಿಕರ ಕೈ ಕಟ್ಟಿದ ಕಾಂಗ್ರೆಸ್ ಆಡಳಿತ ಅಂತ್ಯಗೊಂಡ ಬಳಿಕ ಮೋದಿಯವರು ಒಂದು ಗುಂಡು ಹೊಡೆದರೆ 10 ಗುಂಡು ಹೊಡೆಯಿರಿ ಎಂದು ಆತ್ಮ ಸ್ಥೈರ್ಯ ತುಂಬಿ ವಿದೇಶಿ ದುಷ್ಟ ಶಕ್ತಿಗಳು ಗಡಿಯಲ್ಲಿ ನಿಷ್ಕ್ರಿಯರಾಗುವಂತೆ ಮಾಡಿದರು.
ಉಕ್ರೇನ್ ಮತ್ತು ರಷ್ಯಾದ ನಡುವೆ ಯುದ್ಧ ಪ್ರಾರಂಭವಾದಾಗ 20 ಸಾವಿರಕ್ಕೂ ಅಧಿಕ ಭಾರತೀಯ ವಿದ್ಯಾರ್ಥಿಗಳ ರಕ್ಷಣೆಗಾಗಿ ನಾಲ್ಕು ದಿನ ಯುದ್ಧವನ್ನೇ ನಿಲ್ಲಿಸಿದ ಹೆಗ್ಗಳಿಕೆ ಮೋದಿ ಅವರದಾಗಿತ್ತು. ಕಣ್ಣಿನ ಸೀಳು ತೆಗೆಯಲು ಬಾರದವರು ಈಗ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಟೀಕೆ ಮಾಡುತ್ತಿರುವುದು ಹಾಸ್ಯಸ್ಪದ ವಿಧವಾಗಿದೆ. ಪಾಕಿಸ್ತಾನಕ್ಕೆ ಜಯಕಾರ ಘೋಷಣೆ ಮಾಡಿದವರನ್ನು ಬೆಂಬಲಿಸಿದವರಿಗೆ ಈ ಬಾರಿ ತಕ್ಕ ಪಾಠ ಕಲಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಮೂರನೇ ಬಾರಿಗೆ ಪ್ರಧಾನಿಯನ್ನಾಗಿ ಮಾಡಲು ಜನತೆ ಬೆಂಬಲಿಸಬೇಕಾಗಿದೆ ಮೋದಿಯವರ ಜನಪ್ರಿಯತೆ ಮತ್ತು ರಾಷ್ಟ್ರ ರಕ್ಷಣೆಯ ಕಾರ್ಯವನ್ನು ನೋಡಿ ಮಹಾನ್ ನಾಯಕ ದೇವೇಗೌಡರು ಕೂಡ ಬೆಂಬಲಿಸಿರುವುದು ಮೋದಿಯವರ ಜನಪ್ರಿಯತೆಗೆ ಸಾಕ್ಷಿಯಾಗಿದೆ. ಬಡದಾಳ ಗ್ರಾಮದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯನ್ನು ಶಾಸಕನಲ್ಲದಿದ್ದರು ಆರಂಭಿಸಲು ಕಾರಣಭೂತನಾಗಿರುವುದು ಸಂತಸ ತಂದಿದೆ ಎಂದು ಮಾಲೀಕಯ್ಯ ಗುತ್ತೇದಾರ್ ಹೇಳಿದರು.
ಹುಲ್ಲು ಇದ್ದರೆ ಕಮಲದ ಹೂವು ಅರಳುತ್ತದೆ. ಕಮಲದ ಹೂವು ಅರಳಿದರೆ ರಾಷ್ಟ್ರ ಅರಳುತ್ತದೆ.- ಬಾಲರಾಜು ಗುತ್ತೇದಾರ್ ಜೆಡಿಎಸ್ ಅಧ್ಯಕ್ಷರು.
ಮಾಲಿಕಯ್ಯ ಗುತ್ತೇದಾರ್ ರನ್ನು ವಿಧಾನಸಭಾ ಚುನಾವಣೆಯಲ್ಲಿ ಸೋಲಿಸಿದ ಸಿಟ್ಟನ್ನು ತೀರಿಸಲು ಎಂಪಿ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ನೀಡುವುದರ ಮೂಲಕ ಸಂದಾಯ ಮಾಡಬೇಕಾಗಿದೆ. – ಅವ್ವಣ್ಣ ಮ್ಯಾಕೇರಿ, ಬಿಜೆಪಿ ಹಿಂದುಳಿದ ವರ್ಗಗಳ ಪ್ರಧಾನ ಕಾರ್ಯದರ್ಶಿ.
ಡಾಕ್ಟರ್ ಉಮೇಶ್ ಜಾದವ್ ಅವರ ಗೆಲುವಿಗೆ ಅಭಿವೃದ್ಧಿ ಕೆಲಸ ಕಾರ್ಯಗಳೇ ಬೆನ್ನೆಲುಬಾಗಲಿದೆ. -ಶಿವರಾಜ್ ರಥೇವಾಡಕಿ ಅಧ್ಯಕ್ಷರು ಬಿಜೆಪಿ ಗ್ರಾಮೀಣ
ಕಾಂಗ್ರೆಸ್ ಚಾಲೀಸ್ ಪಾ ಬಿಜೆಪಿ ಚಾರ್ ಸೌ ಪಾರ್
ಈ ಬಾರಿ ಚುನಾವಣೆಯಲ್ಲಿ ಮತದಾರರು ನಿರ್ಧಾರ ಮಾಡಿದ್ದಾರೆ. -ರಿತೇಶ್ ಗುತ್ತೇದಾರ್, ಬಿಜೆಪಿ ಯುವ ಮುಖಂಡ.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…