ಯಾದಗಿರಿ: ಹೆಸರಾಯಿತು ಕಲ್ಯಾಣ ಕರ್ನಾಟಕ ಆದರೆ ಉಸಿರಾಗಲಿಲ್ಲ ಹೈದ್ರಾಬಾದ ಕರ್ನಾಟಕ; ಬರಿ ಹೆಸರು ಬದಲಾಯಿಸಿದರೆ ಸಾಲದು ಈ ಭಾಗದ ಭಾಗ್ಯ ಬದಲಾಯಿಸಿ ಜನರಿಗೆ ಉದ್ಯೋಗ ನೀಡುವ ನಿಟ್ಟಿನಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಿ ಯುವಕರಿಗೆ ಉದ್ಯೋಗ ನೀಡಿ ಉಸಿರು ಕೊಡಿ ಎಂದು ಕರವೇ ಜಿಲ್ಲಾಧ್ಯಕ್ಷ ಟಿಎನ್. ಭೀಮುನಾಯಕ ಆಗ್ರಹಿಸಿದರು.
ಸೋಮವಾರ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಯುವ ಘಟಕಕ್ಕೆ ಪದಾಧಿಕಾರಿಗಳ ನೇಮಕ ಮಾಡುವ ಸಭೆಯಲ್ಲಿ ಅಧ್ಯಕ್ಷತೆ ಹಿಸಿ ಮಾತನಾಡಿ ಕೇಲವ ಹೆಸರಾಯಿತು ಹೈದ್ರಾಬಾದ ಕರ್ನಾಟಕ ಬದಲು ಆದರೆ ಉದ್ಯೋಗ ಕೈಗಾರಿಕೆಗಳು ಬಾರದೇ ಅದೇ ಹದಗೆಟ್ಟ ಹೈದ್ರಾಬಾದ ಕರ್ನಾಟಕವಾಗಿಯೇ ಉಳಿದರೆ ಹೆಸರು ಬದಲಾಯಿಸಿದ್ದಕ್ಕೆ ಅರ್ಥವಿಲ್ಲ ಉಸಿರು ಬರಿಸುವಂತೆ ಕೆಲಸ ಮಾಡಲಿ ಈ ಸರ್ಕಾರ ಎಂದು ನುಡಿದರು. ಕೇಂದ್ರ ಸರ್ಕಾರ ನೆರೆ ಹಾವಳಿಗೀಡಾದ ಕರ್ನಾಟಕಕ್ಕೆ ಕವಡೆ ಪರಿಹಾರವೂ ನೀಡದೇ ಇರುವುದು ಅಕ್ಷಮ್ಯವಾಗಿದ್ದು ಕಲ್ಯಾಣ ಕರ್ನಾಟಕ ಉತ್ಸವಕ್ಕೆ ಆಗಮಿಸುತ್ತಿರುವ ಮುಖ್ಯಮಂತ್ರಿಗೆ ಈ ಭಾಗದ ಎಲ್ಲ ಶಾಸಕರು ಸಂಸದರು ತೆರಳಿ ಒತ್ತಡ ಹೇರಬೇಕೆಂದು ಆಗ್ರಹಿಸಿದ್ದಾರೆ.
ಧ್ವಜಾರೋಹಣ ಮಾಡಿ ಆದರೆ ಮೊದಲು ಒತ್ತಡ ಹೇರುವುದು ಮಾಡಿ ಎಂದು ಅವರು ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಯುವ ಅಧ್ಯಕ್ಷ ವಿಶ್ವಾರಾಧ್ಯ ದಿಮ್ಮೆ ನೇತೃತ್ವದಲ್ಲಿ ಜರುಗಿದ ಸಭೆಯಲ್ಲಿ ವಿವಿಧ ಪದಾಧಿಕಾರಿಗಳ ನೇಮಕ ಜರುಗಿತು.
ಪದಾಧಿಕಾರಿಗಳಾಗಿ ರಿಯಾಜ್ ಪಟೇಲ್, ನಾಗರಾಜ ಕಣೇಕಲ್ (ಉಪಾಧ್ಯಕ್ಷರು),ಮಲ್ಲು ದೇವಕರ್ ( ಪ್ರ. ಕಾರ್ಯದರ್ಶಿ), ಶ್ರೀನಿವಾಸ ಚಮನಳ್ಳಿ, ಅನಿಲ್ ದಾಸನಕೇರಿ (ಸಹ ಕಾರ್ಯದರ್ಶಿ), ನಾಗರಾಜ್ ತಾಂಡುರಕರ್, ಸಾಬು ಹೋರುಂಚಾ (ಸಂ. ಕಾರ್ಯದರ್ಶಿಗಳು), ಗೋವಿಂದ ರಾಠೋಡ, ಹಣಮಂತ ತೇಕರಾಳ (ಪ್ರ. ಸಂಚಾಲಕರು), ಭೀಮು ಕೋಯಿಲೂರು, ರವಿ ನಾಯಕ ಜಮ್ಮರ್ (ಸಹ ಸಂಚಾಲಕರು), ದೀಪಕ ಒಡೆಯರ್ (ಖಜಾಂಚಿ) ಸುನಿಲ್ ಮ್ಯಾಗೇರಿ (ಛಾಯಾಗ್ರಾಹಕ ಪ್ರತಿನಿದಿ)ವಿಜಯ ಜಾಧವ ( ಯಾದಗಿರಿ ತಾಲ್ಲೂಕು ವಿದ್ಯಾರ್ಥಿ ಘಟಕದ ಅಧ್ಯಕ್ಷರು) ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಲ್ಲು ಮಾಳಿಕೇರಿ, ರಾಜು ಪಗಲಾಪೂರ, ಹಣಮಂತ, ಸಾಬು ನೀಲಹಳ್ಳಿ ಇನ್ನಿತರರು ಇದ್ದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…