ಬಿಸಿ ಬಿಸಿ ಸುದ್ದಿ

ಅದ್ದೂರಿಯಿಂದ ಜರುಗಿದ ಶಹಾಬಾದ ಶರಣಬಸವೇಶ್ವರ ರಥೋತ್ಸವ

ಶಹಾಬಾದ: ನಗರದಲ್ಲಿ ಮಂಗಳವಾರ ಮಹಾದಾಸೋಹಿ ಶರಣಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ರಥೋತ್ಸವ ಅತ್ಯಂತ ವೈಭವ ಮತ್ತು ಶ್ರದ್ಧಾ ಭಕ್ತಿಯಿಂದ ನಡೆಯಿತು.ಈ ಅಮೂಲ್ಯ ಕ್ಷಣಕ್ಕೆ ಶರಣನ ಸಾವಿರಾರು ಭಕ್ತರು ಸಾಕ್ಷಿಯಾದರು.

ಶರಣಬಸವೇಶ್ವರ ದೇವಾಲಯದ ಆವರಣದಲ್ಲಿ ರಥೋತ್ಸವವನ್ನು ನಡೆಸಲು ಬೆಳಿಗ್ಗೆಯಿಂದಲೇ ಭರದ ತಯಾರಿ ಮಾಡಲಾಗಿತ್ತು. ತೇರಿಗೆ ಹೂವು-ತಳಿರು ತೋರಣ, ಬಣ್ಣ ಬಣ್ಣದ ಪರಾರಿಗಳಿಂದ ಅಲಂಕಾರ ಲ ಮಾಡಲಾಗಿತ್ತು.

ಬೆಳಗ್ಗೆ ಶರಣಬಸವೇಶ್ವರ ಮೂರ್ತಿಗೆ ರುದ್ರಾಭಿಷೇಕ, ಪಂಚಾಮೃತಾಭಿಷೇಕ,ಸಹಸ್ರ ಬಿಲ್ವಾರ್ಚನೆ ವಿಶೇಷ ಪೂಜೆ ನೇರವೇರಿದವು. ಮಧ್ಯಾಹ್ನ ಅಡವಿತಾತರ ಗದ್ದುಗೆಯಿಂದ ಶರಣಬಸವೇಶ್ವರ ದೇವಾಲಯದವರೆಗೆ ನಂದಿಕೋಲು ಉತ್ಸವ ಜರುಗಿತು.

ಸಾಯಂಕಾಲ ಅಪಾರ ಭಕ್ತಾಧಿಗಳು ಭಕ್ತಿ ಭಾವದಿಂದ ರಥವನ್ನು ಎಳೆದರು. ರಥ ಮುಂದಕ್ಕೆ ಸಾಗುತ್ತಿದ್ದಂತೆ ಭಕ್ತಾಧಿಗಳು “ಶರಣಬಸವೇಶ್ವರ ಮಹಾರಾಜ ಕಿ ಜೈ” ಎಂದು ಜೈಕಾರ ಕೂಗುತ್ತಾ ತೇರಿಗೆ ಬಾಳೆಹಣ್ಣು, ಉತ್ತತ್ತಿಯನ್ನು ಎಸೆಯುವ ಮೂಲಕ ತಮ್ಮ ಭಕ್ತಿಯನ್ನು ಸಮರ್ಪಿಸಿದರು. ರಾತ್ರಿ ಗೀಗೀ ಪದಗಳು ಜರುಗಿದವು.

ಇದೇ ಸಂದರ್ಭದಲ್ಲಿ ಜಾತ್ರೆಗೆ ಆಗಮಿಸಿದ ಭಕ್ತಾಧಿಗಳಿಗೆ ವೀರಶೈವ ಯುವಕ ಮಂಡಳಿ ದಾಸೋಹ ಸೇವೆ ಸಲ್ಲಿಸಿದರು. ನಗರ ಪೊಲೀಸ್ ಠಾಣೆ ವತಿಯಿಂದ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

emedialine

Recent Posts

ಸಂವಹನದೊಂದಿಗೆ ಗುಣಮಟ್ಟದ ಕೌಶಲ್ಯ ತರಬೇತಿ ಅಗತ್ಯ

ಕಲಬುರಗಿ : ಪದವಿ ಹಂತದ ವಿದ್ಯಾರ್ಥಿಗಳ ವಿಷಯಗಳಲ್ಲಿನ ಆಸಕ್ತಿ ಮತ್ತು ಕಲಿಕಾ ಸಾಮರ್ಥ್ಯವನ್ನು ಗುರುತಿಸಿ ಉತ್ತಮ ಸಂವಹನದೊಂದಿಗೆ ಗುಣಮಟ್ಟದ ಕೌಶಲ್ಯ…

9 mins ago

ಮಹಾತ್ಮರ ಬದುಕು, ಬರಹ ನಮ್ಮದಾಗಬೇಕು: ಸುರೇಶ ಬಡಿಗೇರ

ಕಲಬುರಗಿ: ಬುದ್ಧ, ಬಸವ, ಅಂಬೇಡ್ಕರ್ ಜಯಂತಿಯನ್ನು ಕೇವಲ ಮೆರವಣಿಗೆಗೆ ಸೀಮಿತಗೊಳಿಸದೆ, ಅವರ ಬದುಕು ಬೋಧನೆಯನ್ನು ಅನುಸರಿಸಬೇಕು ಎಂದು ಕನ್ನಡ ಅಭಿವೃದ್ಧಿ…

15 hours ago

ಸಿದ್ದಪ್ಪ ಹೊಸಮನಿಗೆ ಪಿಎಚ್.ಡಿ

ಗುಲ್ಬರ್ಗ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ವಿದ್ಯಾರ್ಥಿ ಸಿದ್ದಪ್ಪ ಹೊಸಮನಿ ಅವರು " ಡಾ. ಕೆ. ಆರ್.…

16 hours ago

ಕಲಬುರಗಿ; ಜಿಲ್ಲಾ ಮಾಸ್ಟರ್ ಟ್ರೇನರ್ಸ್ ಗಳಿಗೆ ತರಬೇತಿ

ಕಲಬುರಗಿ; ಈಶಾನ್ಯ ಕರ್ನಾಟಕ ಪದವೀಧರ ಕ್ಷೇತ್ರ ಚುನಾವಣೆ ಹಿನ್ನೆಲೆಯಲ್ಲಿ ಶನಿವಾರ ಇಲ್ಲಿನ ಪ್ರಾದೇಶಿಕ ಆಯುಕ್ತರ ಕಚೇರಿ ಸಭಾಂಗಣದಲ್ಲಿ ಕ್ಷೇತ್ರದ ವ್ಯಾಪ್ತಿಗೆ…

17 hours ago

ಸುರಪುರ:ವಾಸವಿ ಜಯಂತಿ ಆಚರಣೆ ಅದ್ಧೂರಿ ಮೆರವಣಿಗೆ

ಸುರಪುರ: ನಗರದಲ್ಲಿ ವಾಸವಿ ಜಯಂತಿ ಆಚರಣೆ ಅಂಗವಾಗಿ ಅದ್ಧೂರಿ ಮೆರವಣಿಗೆ ನಡೆಸಲಾಗಿದೆ.ಮೊದಲಿಗೆ ನಗರದ ಹಳೆ ಬಸ್ ನಿಲ್ದಾಣದ ಬಳಿಯಲ್ಲಿನ ಕನ್ನಿಕಾ…

17 hours ago

ಕೃಷಿ ಅಧಿಕಾರಿ ಬೀಜ ಗೊಬ್ಬರ ಮಾರಾಟ ಅಂಗಡಿಗೆ ಭೇಡಿ;ಬಿತ್ತನೆ ಬೀಜ ಪರಿಶೀಲನೆ

ಸುರಪುರ: ತಾಲೂಕಿನಲ್ಲಿ ಮುಂಗಾರು ಆರಂಭಗೊಂಡು ಕೃಷಿ ಚಟುವಟಿಕೆಗಳು ಆರಂಭಗೊಂಡಿದ್ದರಿಂದ ಕೃಷಿ ಬೀಜ ಗೊಬ್ಬರ ಮಾರಾಟ ಅಂಗಡಿಗಳಿಗೆ ತಾಲೂಕು ಸಹಾಯಕ ಕೃಷಿ…

17 hours ago