ಶಹಾಬಾದ: ಉತ್ತಮ ಸಮಾಜ ನಿರ್ಮಾಣಕ್ಕಾಗಿ ಹಾಗೂ ಹಿಂದುಳಿದವರ, ದೀನದಲಿತರ, ಬಡವರ ಬದುಕನ್ನು ಹಸನುಗೊಳಿಸಲು ಕಾಂಗ್ರೆಸ್ ಪಕ್ಷದ ಹಸ್ತದ ಗುರುತಿಗೆ ಮತ ನೀಡುವ ಮೂಲಕ ಕಲಬುರಗಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಅವರನ್ನು ಬೆಂಬಲಿಸುವಂತೆ ಕಾಂಗ್ರೆಸ್‍ನ ಹಿರಿಯ ಮುಖಂಡ ಅಜೀತ್‍ಕುಮಾರ ಪಾಟೀಲ ಮರತೂರ ಮತದಾರರಲ್ಲಿ ಮನವಿ ಮಾಡಿದರು.
ಅವರು ತಾಲೂಕಿನ ದೇವನತೆಗನೂರ ಗ್ರಾಮದ ಮತದಾರರ ಪ್ರತಿ ಮನೆಮನೆಗೆ ತೆರಳಿ ಕಲಬುರಗಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಅವರ ಪರ ಮತಯಾಚಿಸಿ ಕರಪತ್ರಗಳನ್ನು ಹಂಚಿದರು.
ಈ ಹಿಂದೆ ಡಾ.ಮಲ್ಲಿಕಾರ್ಜುನ ಖರ್ಗೆ ಅವರು ಸಂಸದರಾಗಿ ಸೇವೆ ಸಲ್ಲಿಸಿದ ಅವಧಿಯಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಕ್ರಮಗಳು ಇಂದಿಗೂ ಜನಮಾನಸದಲ್ಲಿ ಉಳಿದಿವೆ. ಆದರೆ ಬಿಜೆಪಿ ಸಂಸದ ಉಮೇಶ ಜಾಧವ ಏನು ಸಾಧನೆ ಮಾಡಿದ್ದಾರೆ ಎಂದು ಕಲಬುರಗಿ ಜನತೆಗೆ ಗೊತ್ತಾಗಿದೆ.ಕಾಂಗ್ರೆಸ್ ಸರಕಾರ ಗೃಹಲಕ್ಷ್ಮಿ ಯೋಜನೆ ಹೆಸರಿನಲ್ಲಿ ಮಹಿಳೆಯರಿಗೆ ಪ್ರತಿ ತಿಂಗಳು 2000, ಗೃಹ ಜ್ಯೋತಿ ಯೋಜನೆಯಡಿಯಲ್ಲಿ 200 ಯೂನಿಟ್ ಉಚಿತ ವಿದ್ಯುತ್, ಬಿಪಿಎಲ್ ಕಾರ್ಡ್‍ದಾರರಿಗೆ 10 ಕೆಜಿ ಅಕ್ಕಿ ಉಚಿತವಾಗಿ ನೀಡುವ ಗ್ಯಾರೆಂಟಿ ಕಾರ್ಡ್ ಅನ್ನು ಮನೆ ಮನೆಗೆ ಭೇಟಿ ನೀಡಿ ಹಂಚಿ, ಈ ವೇಳೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವಂತೆ ಮನವಿ ಮಾಡಿದರು. ರಾಧಾಕೃಷ್ಣ ಅವರ ಗೆಲುವಿಗಾಗಿ ಪ್ರತಿ ಮನೆಗೂ ತೆರಳಿ 5 ಗ್ಯಾರಂಟಿಗಳನ್ನು ಮನವರಿಕೆ ಮಾಡಲು ಕರಪತ್ರ ಹಂಚುತ್ತಿದ್ದೇವೆ. ಈ ನಿಟ್ಟಿನಲ್ಲಿ ಭ್ರಷ್ಟ ಬಿಜೆಪಿ ಸರ್ಕಾರವನ್ನು ತೊಲಗಿಸಿ ಜನರ ಬದುಕಿಗೆ ಆಶ್ರಯ ನೀಡುವ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ಮತದಾರರು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಬೇಕು ಎಂದು ವಿನಂತಿಸಿದರು.
ಮುಖಂಡ ರವಿ ನರೋಣಿ ಮಾತನಾಡಿ,ರಾಜ್ಯಸರ್ಕಾರದ ಜನಪರ ಯೋಜನೆಗಳನ್ನು ಸಹಿಸಿಕೊಳ್ಳದೆ ಬಿಜೆಪಿ ಇಲ್ಲಸಲ್ಲದ ಹೇಳಿಕೆ ನೀಡುತ್ತಿದೆ.ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಹೇಳಿದನ್ನು ಮಾಡಿದ್ದೆವೆ.ನುಡಿದಂತೆ ನಡೆದ ಸರಕಾರ ಕಾಂಗ್ರೆಸ್ ಸರಕಾರ. ಬಡವರ ಸಂಕಷ್ಟ ಮನಗಂಡ ರಾಜ್ಯ ಸರ್ಕಾರ ಹೆಣ್ಣು ಮಕ್ಕಳಿಗೆ ಗೃಹಲಕ್ಷ್ಮಿ ಯೋಜನೆಯಡಿ 2 ಸಾವಿರ ರೂ. ನೀಡುತ್ತಿದೆ. ಶಕ್ತಿ, ಅನ್ನಭಾಗ್ಯ ಯೋಜನೆಯಡಿ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಸರ್ಕಾರ ಮುಂದಾಗಿದೆ ಎಂದರು.
ಶ್ಯಾಮರಾಯಗೌಡ ಮಾಲಿಪಾಟೀಲ, ಅಪ್ಪುಗೌಡ ತರನಳ್ಳಿ, ಶೌಕತ್ ಅಲಿ ಮುಲ್ಲಾ, ಶಾಮ್ ನಾಟೀಕಾರ, ಶಿವಾನಂದ ಹೂಗಾರ, ಸಿದ್ದರಾಮಗೌಡ ಮಾಲಿಪಾಟೀಲ, ಹಣಮಂತರಾಯ ಸೌಕಾರ,ಗುರುನಾಥ ಕಂಬಾ,ಸಂಜು ಗರ್, ಮರೆಪ್ಪ ಹಳ್ಳಿ,ಮಲ್ಲಿಕಾರ್ಜುನ ದೊಡ್ಡಿ,ಮಲ್ಲಿಕಾರ್ಜುನ ಹಾಜಪ್ಪ, ನಾಗಯ್ಯ ಗುತ್ತೆದಾರ ಇತರರು ಇದ್ದರು.
ಬೆಳಗಾವಿ: ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘ (ರಿ ) *ಪ್ರಾಣ ಬಿಟ್ಟೇವು ಪಿಂಚಣಿ…
ಕಲಬುರಗಿ: ಕೃಷಿ ಕ್ಷೇತ್ರಕ್ಕೆ ಉತ್ತೇಜನ ನೀಡಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿ ಐ) ಹೊಸ ಘೋಷಣೆಯನ್ನು ಮಾಡಿದೆ. ಕೃಷಿ…
ಕಲಬುರಗಿ: ಕನ್ನಡ ಸಾಹಿತ್ಯ ಪರಿಷತ್ತಿನ ದಕ್ಷಿಣ ವಲಯದ ಅಧ್ಯಕ್ಷರನ್ನಾಗಿ ತಾಜ್ ಸುಲ್ತಾನಪೂರ ಗ್ರಾಪಂ ಸದಸ್ಯರೂ ಆದ ಕಲ್ಪವೃಕ್ಷ ಶಿಕ್ಷಣ ಸಂಸ್ಥೆಯ…
ಕಲಬುರಗಿ: ಕರ್ನಾಟಕ ವಚನ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ಕಲಬುರಗಿ ಸಮಿತಿಯ ಕಲಬುರಗಿ ತಾಲೂಕಾ ಅಧ್ಯಕ್ಷರನ್ನಾಗಿ ಮದಸೂಧನ್ ಭೀಮಣ್ಣ ಚಿಂತನಪಳ್ಳಿ…
ಕಲಬುರಗಿ: ಭಾರತ ತಂಡ ೨೦೨೪ ರ ಡಿಸೆಂಬರ್ ೬ ರಿಂದ ೧೩ ರವರೆಗೆ ಜಕಾರ್ತಾ ಇಂಡೋನೇಷ್ಯಾದಲ್ಲಿ ನಡೆದ ಗಾಮಾ ವರ್ಲ್ಡ್…
ಕಲಬುರಗಿ: ತಾಲ್ಲೂಕು ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿ ಸದಸ್ಯರ ಚುನಾವಣೆ ಮಂಗಳವಾರ ಸಡೆದಿದ್ದು, ಎಲ್ಲಾ ಸದಸ್ಯರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು…