ಕಲಬುರಗಿ: ಅಖಿಲ ಭಾರತ ವೀರಶೈವ ಮಹಾಸಭಾ ಕಲಬುರಗಿ ಜಿಲ್ಲಾ ಘಟಕದ ಚುನಾವಣೆ ಇದೇ ಸೆ.29ರಂದು ನಡೆಯಲಿದೆ.
ಇದುವರೆಗೆ ಅವಿರೋಧ ಆಯ್ಕೆಯಾಗುತ್ತಿದ್ದ ಈ ಜಿಲ್ಲಾ ಘಟಕಕ್ಕೆ ಇದೇ ಪ್ರಥಮ ಬಾರಿಗೆ ಜಿಲ್ಲಾ ಘಟಕದ ಚುನಾವಣೆ ನಡೆಯುತ್ತಿದ್ದು, ಮತದಾರರಿಗೆ ತೀವ್ರ ಕುತೂಹಲ ಕೆರಳಿಸಿದೆ.
ಈ ಬಾರಿಯೂ ಅವಿರೋಧ ಆಯ್ಕೆ ಮಾಡಬೇಕೆಂದು ಬಯಸಿ ಚುನಾವಣಾ ಸ್ಪರ್ಧಾಳು ಹಾಗೂ ಮುಖಂಡರ ಸಭೆಯನ್ನು ಈಗ್ಗೆ ಕೆಲವು ದಿನಗಳ ಹಿಂದೆ ಕರೆಯಲಾಗಿತ್ತು. ಅಲ್ಲಿ ಯಾವುದೇ ಒಮ್ಮತಕ್ಕೆ ಬರದೆ ಪರಸ್ಪರ ದೋಷಾರೋಪಣೆ ಮತ್ತು ಕೈ ಕೈ ಮಿಲಾಯಿಸುವ ಮಟ್ಟಿಗೆ ಹೋಗಿರುವುದರಿಂದ ಅನಿವಾರ್ಯವಾಗಿ ಚುನಾವಣೆ ನಡೆಸಲು ತೀರ್ಮಾನಿಸಲಾಯಿತು.
ಹೀಗಾಗಿ ಇದೀಗ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಅಖಿಲ ಭಾರತ ವೀರಶೈವ ಮಹಾಸಭೆಯ ಜಿಲ್ಲಾ ಘಟಕದ ಅಧ್ಯಕ್ಷ ಅರುಣಕುಮಾರ ಪಾಟೀಲ ಕಲ್ಲಹಂಗರಗಾ, ಮಾಜಿ ಮೇಯರ್ ಶರಣು ಮೋದಿ, ಹಿರಿಯ ಮುಖಂಡರಾದ ಜಿ.ಡಿ. ಅಣಕಲ್ ಹಾಗೂ ಶಿವಶರಣಪ್ಪ ಸಿರಿ ಮುಂತಾದವರು ಪ್ರತ್ಯೇಕ ಪೆನಲ್ ರಚಿಸಿಕೊಂಡು, ಅಧ್ಯಕ್ಷ ಸ್ಥಾನ ಬಯಸಿ ಸ್ಪರ್ಧೆ ಬಯಸಿದ್ದಾರೆ ಎಂದು ತಿಳಿದು ಬಂದಿದೆ.
ಚುನಾವಣೆಗೆ ಸ್ಪರ್ಧಿಸಿದ, ಸ್ಪರ್ಧೆ ಬಯಸಿದ ಎಲ್ಲ ಹುರಿಯಾಳುಗಳು ಮತದಾರ ಬಾಂದವರಿಗೆ ಫೋನ್ ಮಾಡುವುದು, ವಾಟ್ಸ್ ಪ್, ಫೇಸ್ ಬುಕ್ ನಲ್ಲಿ ಮನವಿ ಮಾಡುವ ಕಾರ್ಯ ಜೋರಾಗಿಯೇ ನಡೆದಿದೆ.
ಕಲಬುರಗಿ ಜಿಲ್ಲೆಯ ಎಲ್ಲ ತಾಲ್ಲೂಕು ಗ್ರಾಮಗಳಲ್ಲದೆ ನಗರದಲ್ಲಿಯೇ ಹೆಚ್ಚು ಮತದಾರರಿರುವುದರಿಂದ ಎಲ್ಲ ಹುರಿಯಾಳುಗಳು ನಗರ ಮತದಾರರಿಗೆ ಹೆಚ್ಷಿನ ಮಹತ್ವ ನೀಡುತ್ತಿದ್ದಾರೆ. ಇನ್ನು ಕೆಲವರು ಚುನಾವಣೆ ಹಿನ್ನೆಲೆಯಲ್ಲಿಯೆ ಹೆಚ್ಚಿನ ಮತದಾರರ ಎನ್ರೂಲ್ ಮೆಂಟ್ ಮಾಡಿಸಿರುವುದು ಬಹಿರಂಗ ಸತ್ಯವಾಗಿದೆ. ಈಗಂತೂ ಚುನಾವಣಾ ಅಖಾಡ ಸಜ್ಜುಗೊಂಡಿದ್ದು, ಕೊನೆಯಲ್ಲಿ ಕಣದಲ್ಲಿ ಯಾರ್ಯಾರ ಮಧ್ಯೆ ಕುಸ್ತಿ ಏರ್ಪಡುತ್ತದೆ ಎಂಬುದನ್ನು ಈಗಲೇ ಹೇಳಲು ಬರುವುದಿಲ್ಲ.
ಅಧ್ಯಕ್ಷರ ಹುದ್ದೆ ಮಾತ್ರ ನೇರ ಆಯ್ಕೆ ಇದ್ದು, ಆಯ್ಕೆಗೊಂಡ ಕಾರ್ಯಕಾರಿ ಸಮಿತಿಯವರು ಕಾರ್ಯದರ್ಶಿ, ಉಪಾಧ್ಯಕ್ಷ ಹಾಗೂ ಖಜಾಂಚಿ ಹುದ್ದೆಗಳನ್ನು ಆಯ್ಕೆ ಮಾಡಬೇಕಿದೆ. ಪ್ರಮುಖರಾದ ಶರಣು ಪಪ್ಪಾ, ಶರಣು ಭೂಸನೂರ, ಡಾ. ಚಿದಂಬರ ಪಾಟೀಲ ಮರಗುತ್ತಿ, ಡಾ. ಎಸ್. ಎಸ್ ಪಾಟೀಲ, ರಾಜಕುಮಾರ ಕೋಟೆ ಮುಂತಾದವರು ಕಾರ್ಯಕಾರಿ ಸಮಿತಿ ಸ್ಥಾನಕ್ಕೆ ಸ್ಪರ್ಧೆ ಬಯಸಿದ್ದಾರೆ ಎನ್ನಲಾಗಿದೆ
ಈ ಎಲ್ಲ ಚಟುವಟಿಕೆಗಳು ಗರಿಗೆದರಿರುವುದರಿಂದ ಒಟ್ಟಾರೆಯಾಗಿ ಇದೀಗ ಚುನಾವಣಾ ಕಣ ರಂಗೇರುತ್ತಿರುವುದಂತೂ ಸತ್ಯ.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…