ಬಿಸಿ ಬಿಸಿ ಸುದ್ದಿ

ಸತ್ಕಾರ್ಯಗಳಿಂದ ಶಾಂತಿಯುತ ಸಮಾಜ ನಿರ್ಮಾಣ: ಪ್ರೊ.ಎಚ್.ಬಿ.ಪಾಟೀಲ ಅಭಿಮತ

ಕಲಬುರಗಿ: ’ಶಾಂತಿ’ ಎನ್ನುವುದು ಇಂದು ಇಡೀ ಜಗತ್ತಿಗೆ ಅತ್ಯಂತ ಅವಶ್ಯಕವಾಗಿ ಬೇಕಾಗಿದೆ. ಇದು ಬಾಹ್ಯವಾಗಿ ದೊರೆಯುವುದಿಲ್ಲ. ಬೇವಿನ ಮರ ನೆಟ್ಟು, ಮಾವಿನ ಫಲ ಪಡೆಯಲು ಹೇಗೆ ಸಾಧ್ಯವಿಲ್ಲವೋ, ಹಾಗೆಯೇ, ವ್ಯಕ್ತಿಯಲ್ಲಿ ಕೆಟ್ಟ ವಿಚಾರಗಳು ತುಂಬಿದ್ದರೆ, ಆ ವ್ಯಕ್ತಿ ಮತ್ತು ಸಮಾಜ ಅಶಾಂತವಾಗಿರುತ್ತದೆ. ಆದ್ದರಿಂದ ಪ್ರತಿಯೊಬ್ಬರು ದ್ವೇಷ, ಅಸೂಯೆ, ಸ್ವಾರ್ಥತೆಯಂತಹ ದುರ್ಗುಣಗಳನ್ನು ತ್ಯಜಿಸಿ, ಸಮಾಜಮುಖಿ ಕಾರ್ಯಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಾಗ ವ್ಯಕ್ತಿ ಮತ್ತು ಸಮಾಜ ಶಾಂತವಾಗಿರಲು ಸಾಧ್ಯವಿದೆಯೆಂದು ಉಪನ್ಯಾಸಕ, ಸಾಮಾಜಿಕ ಚಿಂತಕ ಪ್ರೊ.ಎಚ್.ಬಿ.ಪಾಟೀಲ ಅಭಿಮತ ವ್ಯಕ್ತಪಡಿಸಿದರು.

ಅವರು ನಗರದ ಆಳಂದ ಚೆಕ್ ಪೋಸ್ಟ್ ಸಮೀಪದಲ್ಲಿರುವ, ಸಿದ್ದರಾಮೇಶ್ವರ ನಗರದಲ್ಲಿರುವ ’ಎಕ್ಸಲೆಂಟ್ ಗುರು ನವೋದಯ ಪರೀಕ್ಷಾ ತರಬೇತಿ ಕೇಂದ್ರ’ದಲ್ಲಿ, ಇಲ್ಲಿನ ’ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಬುಧವಾರ ಏರ್ಪಡಿಸಿದ್ದ ’ವಿಶ್ವ ಶಾಂತಿ ದಿನಾಚರಣೆ’ಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಮನುಷ್ಯ ಸಂಘಜೀವಿ. ತನ್ನ ಜೀವನದಲ್ಲಿ ಅನೇಕ ವ್ಯಕ್ತಿ ಹಾಗೂ ಸಮಾಜದ ಜೊತೆ ವರ್ತಿಸಬೇಕಾಗುತ್ತದೆ. ತನ್ನ ಜೀವನಕ್ಕೆ ಕೆಲವು ಮೌಲ್ಯಗಳನ್ನು ರೂಢಿಸಿಕೊಂಡಿರಬೇಕಾಗುತ್ತದೆ. ಇಂತಹ ಮೌಲ್ಯಗಳು ವ್ಯಕ್ತಿಯ ಸಮತೋಲನ ಬೆಳವಣಿಗೆಗೆ ಸಹಾಯಕವಾಗುತ್ತದೆ. ಅದರಲ್ಲಿ ಶಾಂತಿ ಒಂದು ಪ್ರಮುಖವಾದ ಮೌಲ್ಯವಾಗಿದ್ದು,ಅದನ್ನು ಅಳವಡಿಸಿಕೊಂಡರೆ ಬದುಕು ಸುಂದರವಾಗುತ್ತದೆಯೆಂದು ನುಡಿದರು.

ಇಂದು ಜಗತ್ತು ಭಯೋತ್ಪಾದನೆ, ಶೋಷಣೆ, ದರೋಡೆ, ಅತ್ಯಾಚಾರ, ಅನೀತಿ, ಮೌಢ್ಯತೆ, ಭ್ರಷ್ಟಾಚಾರದಂತೆ ಮುಂತಾದ ಸಮಸ್ಯೆಗಳಿಂದ ನಲುಗಿ ಶಾಂತಿಯಿಲ್ಲದಂತಾಗಿದೆ. ಇದು ಮಾರುಕಟ್ಟೆಯಲ್ಲಿ ಸಿಗುವ ವಸ್ತುವಲ್ಲ. ಬದಲಿಗೆ ಮನಸ್ಸಿನ ದೃಢನಿರ್ಧಾರ ಮೂಲಕ, ಸಹನೆಯಿಂದ ಸಾಧಿಸಬೇಕಾಗುತ್ತದೆ. ಹೃದಯದಲ್ಲಿ ಸುಂದರ ಭಾವನೆ, ಕೈಯಿಂದ ಉತ್ತಮವಾದ ಕಾರ್ಯ ಮತ್ತು ಜ್ಞಾನವನ್ನು ಸರಿಯಾದ ಕೆಲಸಕ್ಕೆ ಬಳಸಿಕೊಳ್ಳುವದರಿಂದ ಶಾಂತಿಯನ್ನು ಪಡೆಯಬಹುದಾಗಿದಯೆಂದು ಅನೇಕ ದೃಷ್ಟಾಂತಗಳ ಮೂಲಕ ವಿವರಿಸಿದರು. ಸಕಾರಾತ್ಮಕ ಭಾವನೆಗಳು ನಮಗೆ ಸಂತೋಷವನ್ನು ತರುವುದುರ ಜೊತೆಗೆ ನಮ್ಮ ಸುತ್ತಮುತ್ತಲಿನವರಿಗೂ ಅದನ್ನು ಹಂಚುತ್ತವೆ. ನಮ್ಮ ಮನಸ್ಸು ಮತ್ತು ಶಾಂತಸ್ಥಿತಿಯಲ್ಲಿರಬೇಕಾದರೆ, ಮನಸ್ಸಿನ ಹೋಯ್ದಾಟ ನಿಲ್ಲಿಸಬೇಕು. ಆಗ ಶಾಂತಿ ಅನುಭವಕ್ಕೆ ಬರುತ್ತದೆ. ಇದು ಸಾಮಾನ್ಯವಾದುದಲ್ಲ, ಅದಕ್ಕೆ ನಿರಂತರ ಪ್ರಯತ್ನ ಅಗತ್ಯವಾಗಿದೆ. ಯೋಗ, ಧ್ಯಾನ, ಸತ್ಸಂಗ, ಉತ್ತಮ ಗ್ರಂಥಗಳ ಅಧ್ಯಯನದಂತಹ ಮುಂತಾದ ಕ್ರಮಗಳನ್ನು ಕೈಗೊಳ್ಳುವುದರ ಮೂಲಕ ಇದನ್ನು ಸಾಧಿಸುವುದು ಸಾಧ್ಯವಾಗುತ್ತದೆಯೆಂದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ನಿರ್ದೇಶಕ ವೀರೇಶ ನಾವದಗಿ ಮಾತನಾಡಿ, ಇಂದು ಜಗತ್ತಿನಲ್ಲಿ ಅಶಾಂತಿ ತಾಂಡವಾಡುತ್ತಿದೆ. ಶಾಂತಿಗಾಗಿ ಎಲ್ಲಡೆ ಹುಡುಕಾಟ ನಡೆಯುತ್ತಿದೆ. ದೈಹಿಕವಾಗಿ ಮತ್ತು ಮಾನಸಿಕವಾಗಿ ಸಮತೋಲನ ಸ್ಥಿತಿಯನ್ನು ಹೊಂದಿ, ಉನ್ನತ ವಿಚಾರಗಳನ್ನು ಮೈಗೂಡಿಸಿಕೊಂಡು ಪರಸ್ಪರ ಪ್ರೀತಿ, ಸೌಹಾರ್ದತೆಯಿಂದ ಬಾಳಿ ಶಾಂತಿಯುತ ಜೀವನ ನಮ್ಮದಾಗಿಸಿಕೊಳ್ಳಬೇಕೆಂದರು.
ಕಾರ್ಯಕ್ರಮದಲ್ಲಿ ಪ್ರಮಖರಾದ ಪ್ರಕಾಶ ನಾಗರಾಳ, ಬಸವರಾಜ ಕುಲಕರ್ಣಿ, ಬಸವರಾಜ ಪುರಾಣೆ, ನಾಗೇಂದ್ರಪ್ಪ ಕಲಶೆಟ್ಟಿ, ಶ್ರೀಕಾಂರ ಡೊಳ್ಳಿ, ಚನ್ನವೀರ ಡೊಳ್ಳಿ, ಅಣ್ಣಾರಾವ, ವೀರೇಶ,ಅಮರ ಬಂಗರಗಿ ಸೇರಿದಂತೆ ಹಲವರಿದ್ದರು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

4 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

4 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

4 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

20 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

22 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago