ಬಿಸಿ ಬಿಸಿ ಸುದ್ದಿ

ರಾಮಮಂದಿರ ನಿರ್ಮಾಣ ಮಾಡಿದ ಯುಗಪುರುಷನಿಗೆ ಮತ ಹಾಕಿ: ಚಂದು ಪಾಟೀಲ್

ಕಲಬುರಗಿ: ಕಳೆದ 500 ವರ್ಷಗಳಿಂದ ಸಂಕಲ್ಪ ಹೊಂದಿದ್ದ ರಾಮಜನ್ಮಭೂಮಿಯಲ್ಲಿರ ರಾಮಲಲ್ಲ ವಿಗ್ರಹ ಸ್ಥಾಪನೆಯ ಕನಸನ್ನು ಈಡೇರಿಸಿದ ಯುಗಪುರುಷ ಮೋದಿಯವರಿಗೆ ಮತ ಹಾಕುವುದರ ಮೂಲಕ ಎಲ್ಲ ಮತದಾರರು ರಾಮಭಕ್ತಿಯನ್ನು ತೋರಿಸಬೇಕಾಗಿದೆ ಎಂದು ಕಲ್ಬುರ್ಗಿ ಬಿಜೆಪಿ ನಗರಾಧ್ಯಕ್ಷರಾದ ಚಂದು ಪಾಟೀಲ್ ಹೇಳಿದರು.

ಕಲ್ಬುರ್ಗಿಯ ವಿಪ್ರ ಸಮಾಜ ಬಾಂಧವರ ಬಹಿರಂಗ ಸಭೆಯನ್ನುದೇಶಿಸಿ ಮಾತನಾಡಿ ಭಾರತೀಯರಿಗೆ ಜನ್ಮಭೂಮಿಯಲ್ಲಿ ರಾಮ ಪೂಜೆಯ ಅವಕಾಶವನ್ನು ಮಾಡಿಕೊಡುವುದರ ಮೂಲಕ ದೇಶದಲ್ಲಿ ಸನಾತನ ಹಿಂದೂ ಧರ್ಮವನ್ನು ಮತ್ತೆ ವಿಜುರಂಭಿಸುವಂತೆ ಮಾಡಿ ಹಿಂದುಗಳ ಮನ ಗೆದ್ದ ಮೋದಿ ಅವರ ಸಾಧನೆ ದೇಶಕ್ಕೆ ಮತ್ತು ವಿಶ್ವಕ್ಕೆ ಆದರ್ಶಪ್ರಾಯವಾಗಿದೆ. ಕಾಶ್ಮೀರದಲ್ಲಿ 370ನೇ ವಿಧಿಯನ್ನು ರತ್ತು ಮಾಡಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಬೊಬ್ಬೆ ಹೊಡೆಯುತ್ತಿದ್ದು ಕಾಶ್ಮೀರದ ಫರೂಕ್ ಅಬ್ದುಲ್ಲಾ ಇದನ್ನು ವಿರೋಧಿಸಿದ್ದರು ಆದರೆ ಮೋದಿಯವರು ಯಾವುದೇ ವಿರೋಧವನ್ನು ಲೆಕ್ಕಿಸದೆ 370ರ ವಿಧಿಯನ್ನು ರದ್ದು ಮಾಡಿ ಕಾಶ್ಮೀರಕ್ಕೆ ಸ್ವಾತಂತ್ರ್ಯದ ಹೊಸ ಕ್ರಾಂತಿಯನ್ನು ಮೊಳಗಿಸಿದರು.

ಬಿಜೆಪಿಯನ್ನು ಬೆಳೆಸಿದ ಕೀರ್ತಿ ಬ್ರಾಹ್ಮಣ ಸಮಾಜಕ್ಕೆ ಸಲ್ಲುತ್ತದೆ. ಆ ಸಮಾಜದ ಸಲಹೆ ಮಾರ್ಗದರ್ಶನದಿಂದ ಪಕ್ಷವು ಬಲಿಷ್ಠವಾಗಿ ಬೆಳೆಯುತ್ತಿದ್ದು ಸಮಾಜದ ಮುಖಂಡರು ಕಲ್ಬುರ್ಗಿ ನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು , ಕಾರ್ಪೊರೇಟರ್ ಮತ್ತು ಮಂಡಲದ ಸ್ಥಾನಮಾನಗಳನ್ನು ಹೊಂದಿ ಪಕ್ಷಕ್ಕೆ ಕೀರ್ತಿ ತಂದಿದ್ದಾರೆ. ಬಿಜೆಪಿಯನ್ನು ಈ ಬಾರಿ ಬಹುಮತದಿಂದ ಆಯ್ಕೆ ಮಾಡಿದರೆ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗುವುದಲ್ಲದೆ ಸಮಾನ ನಾಗರಿಕ ಕಾನೂನು ದೇಶದಲ್ಲಿ ಜಾರಿಗೆ ಬರಲಿದೆ ಇಂದು ಹೇಳಿದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಜನಪ್ರಿಯತೆ ಹಾಗೂ ಬಿಜೆಪಿಗೆ ವಿವಿಧ ಸಮಾಜದ ಮತದಾರರು ತೋರುತ್ತಿರುವ ಅಪೂರ್ವ ಬೆಂಬಲ ಕಂಡು ಕಂಗೆಟ್ಟ ಕಾಂಗ್ರೆಸ್ ಪಕ್ಷವು ವಾಮ ಮಾರ್ಗದಲ್ಲಿ ಮತದಾರರಿಗೆ ಹಂಚಲು ತಂದಿದ್ದ ಎರಡು ಕೋಟಿ ರೂಪಾಯಿಯನ್ನು ಕಲ್ಬುರ್ಗಿಯಲ್ಲಿ ವಶಪಡಿಸಿಕೊಂಡಿರುವುದರೊಂದಿಗೆ ಕಾಂಗ್ರೆಸ್ಸಿನ ನಿಜ ಬಣ್ಣ ಬಯಲಾಗಿದೆ. ಮತದಾರರಿಗೆ ಹಣದ ಆಮಿಷ ನೀಡಿ ಈ ಬಾರಿ ಚುನಾವಣೆ ಗೆಲ್ಲಲು ಕಾಂಗ್ರೆಸ್ ಮುಂದಾಗಿದೆ ಎಂದು ಆರೋಪಿಸಿದರು.

ಕಲ್ಬುರ್ಗಿಯಲ್ಲಿ ಬಿಜೆಪಿಯನ್ನು ಬೆಳೆಸಲು ಬ್ರಾಹ್ಮಣ ಸಮುದಾಯದ ಅನೇಕ ಹಿರಿಯರು ತ್ಯಾಗ ಮನೋಭಾವದಿಂದ ಕೆಲಸ ಮಾಡಿದ್ದಾರೆ ಇದರಿಂದಾಗಿ ಇಂದು ವಿಶ್ವದಲ್ಲೇ 20 ಕೋಟಿ ಅಧಿಕ ಸದಸ್ಯರಿರುವ ಅತಿ ದೊಡ್ಡ ಪಕ್ಷ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ 110 ಕೋಟಿ ಹಿಂದುಗಳ ಭಾವನೆಗೆ ಸ್ಪಂದಿಸಿದ ಮೋದಿ ಅವರು ಜನ್ಮ ಭೂಮಿಯಲ್ಲಿ ರಾಮಮಂದಿರದ ನಿರ್ಮಾಣ ಮಾಡಿದ ಧೀಮಂತ ಪುರುಷ ಎಂದು ಹೇಳಿದರು.

ಈ ಬಾರಿಯ ಚುನಾವಣೆ ರಾಮಾಯಣದಲ್ಲಿ ರಾಮನು ನ್ಯಾಯದ ರಕ್ಷಣೆ ಮತ್ತು ಧರ್ಮದ ರಕ್ಷಣೆಗಾಗಿ ಹೋರಾಡಿದಂತೆ ಮೋದಿಯವರು ಈ ದೇಶದಲ್ಲಿ ಸನಾತನ ಧರ್ಮದ ರಕ್ಷಣೆ, ಮಾಂಗಲ್ಯದ ರಕ್ಷಣೆಗಾಗಿ ಶ್ರಮಿಸುತ್ತಿದ್ದಾರೆ. ಇದಕ್ಕೆಲ್ಲಾ ಬ್ರಾಹ್ಮಣ ಸಮಾಜವು ಪೂರ್ಣ ಬೆಂಬಲ ನೀಡುತ್ತಿದ್ದು ಬ್ರಾಹ್ಮಣರು ಮನಸು ಮಾಡಿದರೆ ಮತ್ತೆ ಕರ್ನಾಟಕದಲ್ಲಿ ಬಿಜೆಪಿ ಸರಕಾರ ರಚನೆಯಾಗುವುದು ಶತಸಿದ್ಧ ಎಂದು ಹೇಳಿದರು.

ಈ ಬಾರಿ ನರೇಂದ್ರ ಮೋದಿ ಅವರು ಮೂರನೇ ಬಾರಿಗೂ ಪ್ರಧಾನ ಮಂತ್ರಿ ಸ್ಥಾನ ಯಲಂಕರಿಸುವುದು ನೂರಕ್ಕೆ ನೂರರಷ್ಟು ಸತ್ಯವಾಗಿದ್ದು ಬಿಜೆಪಿ ಆಡಳಿತ ಕೇಂದ್ರದಲ್ಲಿ ಬರಲಿದೆ ಆದರೆ ಅಧಿಕಾರಕ್ಕೆ ಬಾರದ ಕಾಂಗ್ರೆಸ್ಸಿಗೆ ಮತ ನೀಡಿ ಏನು ಪ್ರಯೋಜನವಿಲ್ಲ ಮತ್ತು ಮತ ದಂಡವಾಗಲಿದೆ ಎಂದು ವಿಧಾನ ಪರಿಷತ್ ಸದಸ್ಯರಾದ ಶಶಿಲ್ ಜಿ ನಮೋಶಿ ಹೇಳಿದರು.

ಮೋದಿ ಅವರು ಪ್ರಧಾನಿಯಾಗಬೇಕು ಮತ್ತು ಉಮೇಶ್ ಜಾಧವ್ ಎರಡನೇ ಬಾರಿಗೆ ಲೋಕಸಭಾ ಸದಸ್ಯರಾಗಿ ದಿಲ್ಲಿಗೆ ಹೋಗಿ ಕೇಂದ್ರ ಕ ಸಂಪುಟದ ಸಚಿವರಾಗಲು ನಾವೆಲ್ಲರೂ ಶೇಕಡ ನೂರರಷ್ಟು ಮತ ಚಲಾವಣೆ ಮಾಡಬೇಕು. ಕರ್ನಾಟಕದ ಮೊದಲ ಹಂತದ ಚುನಾವಣೆಯಲ್ಲಿ ಕೆಲವು ನಗರ ಪ್ರದೇಶಗಳ ಕ್ಷೇತ್ರಗಳಲ್ಲಿ ಶೇಕಡ 52ರಷ್ಟು ಮತದಾನವಾಗಿ ನಾಗರಿಕರು ನಿರಾಸಕ್ತಿ ತೋರಿರುವುದು ಪ್ರಜಾಪ್ರಭುತ್ವಕ್ಕೆ ದೊಡ್ಡ ಅಪಾಯವಾಗಿದೆ. ಕಲ್ಬುರ್ಗಿಯಲ್ಲಿ ಕನಿಷ್ಠ ಶೇಕಡ 90ರಷ್ಟಾದರೂ ಮತ ಚಲಾವಣೆಗೊಂಡು ಮತ್ತೆ ಬಿಜೆಪಿ ಗೆಲುವಿನ ನಗೆ ಬೀರಬೇಕು ಎಂದು ಹೇಳಿದರು.

18ನೆಯಲೋಕಸಭಾ ಚುನಾವಣೆ ಬಹಳ ಮಹತ್ವಪೂರ್ಣವಾಗಿದ್ದು ಇದು ಎಂಎಲ್ಎ, ಎಂಎಲ್ಸಿ ಚುನಾವಣೆಗಳಂತೆ ಅಲ್ಲ ದೇಶದ ಭವಿಷ್ಯವನ್ನು ರೂಪಿಸುವ ಚುನಾವಣೆಯಾಗಿರುವುದರಿಂದ ಪ್ರಜ್ಞಾವಂತ ನಾಗರಿಕರು ಈ ಬಾರಿಯ ಚುನಾವಣೆಯನ್ನು ಬಹಳ ಗಂಭೀರವಾಗಿ ತೆಗೆದುಕೊಂಡು ಬಿಜೆಪಿಗೆ ಮತ ಹಾಕುವುದರ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಹ್ಯಾಟ್ರಿಕ್ ಪ್ರಧಾನಿಯನ್ನಾಗಿಸಲು ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಭಾರತದಲ್ಲಿ ಸನಾತನ ಧರ್ಮದ ಉಳಿವಿಗಾಗಿ ಮತ್ತು ದೇಶದ ಉಜ್ವಲ ಭವಿಷ್ಯಕ್ಕಾಗಿ ಎಲ್ಲರೂ ಮತದಾನ ಮಾಡುವುದರ ಮೂಲಕ ಹಿಂದೂ ವಿರೋಧಿಗಳಿಗೆ ತಕ್ಕ ಉತ್ತರ ನೀಡಬೇಕು ಎಂದು ಬ್ರಾಹ್ಮಣ ಸಮಾಜದ ಹಿರಿಯ ಮುಖಂಡರಾದ ಕೃಷ್ಣಾ ಜಿ ಕುಲಕರ್ಣಿ ಹೇಳಿದರು.

ಮೋದಿಯವರು ಗೆಲ್ಲುತ್ತಾರೆ ಉಮೇಶ್ ಜಾದವ್ರ್ ಗೆಲ್ಲುತ್ತಾರೆ ಎಂದು ಮತಗಟ್ಟೆಗೆ ಹೋಗದೆ ಬರಿ ಬಾಯಿ ಮಾತಿನಿಂದ ಮಾತನಾಡುವುದರಿಂದ ಪ್ರಯೋಜನವಿಲ್ಲ ದೇಶದ ಭವಿಷ್ಯ ನಿರ್ಣಯಿಸುವ ಮತ್ತು ಭದ್ರತೆಯನ್ನು ಕಾಪಾಡುವ ಈ ಚುನಾವಣೆ ನಮ್ಮ ಮತದ ಮೇಲೆ ನಿಂತಿದೆ ಏಳನೇ ತಾರೀಕಿಗೆ ಅತ್ಯಧಿಕ ಮತದಾನ ಮಾಡಿ ಮತದಾರರು ತಮ್ಮ ಶಕ್ತಿ ಪ್ರದರ್ಶನ ಮಾಡುವುದರ ಮೂಲಕ ಬಲಿಷ್ಠ ಭಾರತ ನಿರ್ಮಾಣಕ್ಕೆ ಕಾರಣರಾಗಬೇಕು ಎಂದರು.

ಕೇಂದ್ರ ಸರಕಾರವು ಜಾರಿ ಮಾಡಿದ ಆರ್ಥಿಕ ಹಿಂದುಳಿದರವರಿಗೆ ಇರುವ ಮೀಸಲಾತಿಯಲ್ಲಿ ಬ್ರಾಹ್ಮಣರು ಸೇರಿಕೊಂಡಿದ್ದು ಕರ್ನಾಟಕದಲ್ಲಿ ಇದುವರೆಗೆ ಮೀಸಲಾತಿ ಜಾರಿಯಾಗಿಲ್ಲ ತಕ್ಷಣದಲ್ಲಿ ಜಾರಿಯಾಗಲಿ ಎಂದು ಪತ್ರಕರ್ತ ವಾದಿರಾಜ ವ್ಯಾಸಮುದ್ರ ಒತ್ತಾಯಿಸಿದರು.

ಬ್ರಾಹ್ಮಣರು ಕಾಂಗ್ರೆಸ್ಸಿಗೆ ಓಟು ಹಾಕಲ್ಲ ಬಿಜೆಪಿಗೆ ವೋಟು ಹಾಕುವವರು ಎಂಬ ಹಣ ಪಟ್ಟಿಯನ್ನು ಕಟ್ಟಿ ಇತ್ತ ಕಡೆ ಕಾಂಗ್ರೆಸ್ಸಿನಿಂದಲೂ ಅರ್ಥ ಕಡೆ ಬಿಜೆಪಿಯಿಂದಲೂ ಯಾವುದೇ ಸೌಲಭ್ಯಗಳಿಲ್ಲದೆ ಡೋಲಾಯಮಾನ ಸ್ಥಿತಿಯಲ್ಲಿದ್ದಾರೆ. ಬ್ರಾಹ್ಮಣ ಸಮುದಾಯದ ಯುವಕರಿಗೆ ಸೂಕ್ತ ಪ್ರಾತಿನಿಧ್ಯ ಹಾಗೂ ಕನಿಷ್ಠ ನಾಲ್ಕೈದು ಕಾರ್ಪೊರೇಟ್ ಸ್ಥಾನಗಳನ್ನು ನೀಡಿ ಜಿಲ್ಲೆಯಲ್ಲಿರುವ70ರಿಂದ 80 ಸಾವಿರದಷ್ಟಿರುವ ಬ್ರಾಹ್ಮಣರಿಗೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.

ಕೇಂದ್ರದಲ್ಲಿ ಮತ್ತೊಮ್ಮೆ ಮೋದಿ ಯವರು ಮೂರನೇ ಬಾರಿಗೆ ಪ್ರಧಾನಮಂತ್ರಿ ಆಗುವುದು ಖಚಿತವಾಗಿದ್ದು ಈ ಹಿಂದಿನ 10 ವರ್ಷಗಳ ಸುವರ್ಣ ಯುಗ ಮತ್ತೆ ಮುಂದುವರೆಯಲಿದೆ ಮುಂದಿನ 50 ವರ್ಷಗಳ ಅಜೆಂಡಾವನ್ನು ಸಿದ್ಧಪಡಿಸಿದ್ದ ಮೋದಿಯವರನ್ನು ಗೆಲ್ಲಿಸಿ, ಜಗತ್ತಿಗೆ ಭಾರತದ ಶಕ್ತಿಯನ್ನು ತೋರಿಸುವ ಅಪೂರ್ವ ಅವಕಾಶ ನಮ್ಮ ಕೈಯಲ್ಲಿದೆ ಎಂದು ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಮಾಜಿ ಸದಸ್ಯರಾದ ಜಗದೀಶ್ ಹುನಗುಂದ್ ಹೇಳಿದರು.

ಹಿಂದುತ್ವದ ಶಕ್ತಿ ಪ್ರಬಲಗೊಳ್ಳಲು ಭಾರತದಲ್ಲಿ ಬಿಜೆಪಿಯನ್ನು ಬೆಂಬಲಿಸಿ, ಮೋದಿ ಅವರಿಗೆ ಶಕ್ತಿ ತುಂಬಬೇಕಾಗಿದೆ ಎಂದು ಹೇಳಿದರು.

ಬಿಜೆಪಿ ಪಕ್ಷಕ್ಕೆ ಜನ ಸಂಘ ಕಾಲದಿಂದಲೂ ಬ್ರಾಹ್ಮಣರು ಬೆನ್ನಲು ಬಾಗಿ ನಿಂತು ಬಿಜೆಪಿಯನ್ನು ಉನ್ನತ ಸ್ಥಾನಕ್ಕೆ ತಂದು ನಿಲ್ಲಿಸುವಲ್ಲಿ ಪ್ರಮುಖ ಸ್ಥಾನ ವಹಿಸಿದ್ದಾರೆ ಎಂದು ಬಿಜೆಪಿ ಹಿರಿಯ ಮುಖಂಡರಾದ ವಿದ್ಯಾಸಾಗರ ಕುಲಕರ್ಣಿ ಹೇಳಿದರು.

ಬಿಜೆಪಿಗೆ ಚುನಾವಣೆ ನಿಲ್ಲಲು ಅಭ್ಯರ್ಥಿಗಳಿಲ್ಲದ ಕಾಲದಿಂದಲೂ ಪಕ್ಷಕ್ಕೆ ತನು ಮನ ಧನದಿಂದ ನೆರವು ನೀಡಿದ ಮಹನೀಯರ ಕೊಡುಗೆಯ ಫಲವಾಗಿ ಇಂದು ಪಕ್ಷ ಹೆಮ್ಮರವಾಗಿ ಬೆಳೆದಿದೆ. ಅರ್ಪಣಾ ಮನೋಭಾವದ ಬ್ರಾಹ್ಮಣ ಸಮುದಾಯದ ಕೊಡುಗೆ ಗಣನೀಯವಾಗಿದ್ದು ಯಾವುದೇ ಬೇಡಿಕೆಗಳನ್ನು ಸರಕಾರದ ಮುಂದೆ ಮಂಡಿಸದೆ ದೇಶದ ಐಕ್ಯತೆ ಭದ್ರತೆ ಮತ್ತು ಸನಾತನ ಧರ್ಮದ ಉಳಿವಿಗಾಗಿ ಬ್ರಾಹ್ಮಣ ಸಮಾಜ ಬಿಜೆಪಿಯೊಟ್ಟಿಗೆ ಕೈಜೋಡಿಸಿದೆ ಎಂದು ಹೇಳಿದರು.

ಸರ್ವೇ ಜನ ಸುಖಿನೋ ಭವಂತು ಎಂಬ ತತ್ವದ ಅಡಿಯಲ್ಲಿ ಬ್ರಾಹ್ಮಣ ಸಮಾಜವು ಎಲ್ಲರ ಪ್ರೀತಿ ವಿಶ್ವಾಸಕ್ಕೆ ಪಾತ್ರವಾಗಿ ಬಿಜೆಪಿ ಪಕ್ಷವನ್ನು ಕಟ್ಟಿ ಬೆಳೆಸಿದೆ ಎಂದು ಬಿಜೆಪಿಯ ಮುಖಂಡರಾದ ಶ್ರೀನಿವಾಸ್ ದೇಸಾಯಿ ಹೇಳಿದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

21 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

1 day ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

1 day ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

1 day ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago