ಬಿಸಿ ಬಿಸಿ ಸುದ್ದಿ

ಮತದಾನ ಮಾಡುವುದುನಮ್ಮ ಹಕ್ಕು ಮತ್ತು ಕರ್ತವ್ಯ: ಬಿ.ಫೌಜಿಯಾ ತರನ್ನುಮ್

ಕಲಬುರಗಿ: ಡಾ. ಬಿ.ಆರ್. ಅಂಬೇಡ್ಕರ ಅವರು ನೀಡಿರುವ ಸಂವಿಧಾನದ ಮೂಲಕ ನಮಗೆ ಹಕ್ಕು ಮತ್ತ ಕರ್ತವ್ಯಗಳು ಪ್ರಾಪ್ತವಾಗಿವೆ. ಹಾಗಾಗಿ ಮತದಾನ ಮಾಡುವುದು ನಮ್ಮ ಹಕ್ಕು ಮತ್ತು ಕರ್ತವ್ಯವಾಗಿದೆ. ಪ್ರತಿಯೊಬ್ಬರೂ ತಪ್ಪದೇ ಮತದಾನ ಮಾಡಬೇಕೆಂದು ಜಿಲ್ಲಾ ಚುನಾವಣಾಧಿಕಾರಿಗಳಾದ ಬಿ. ಫೌಜಿಯಾ ತರನ್ನುಮ್ ಅವರು ಕರೆ ನೀಡಿದರು.

ಶನಿವಾರದಂದು ಭಾರತ ಚುನಾವಣೆ ಆಯೋಗ, ಜಿಲ್ಲಾಡಳಿತ ಮತ್ತು ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ನಗರದ ಆರ್ಚಿಡ್ ಮಾಲ್‌ನಲ್ಲಿ ಅಲ್ಲಿನ ನೌಕರರು/ಕಾರ್ಮಿಕರಿಗಾಗಿ ಆಯೋಜಿಸಿದ್ದ ಮತದಾರರ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮೇ. ೭ ರಂದು ಲೋಕಸಭಾ ಚುನಾವಣೆ ನಡೆಯಲಿದೆ. ಮತದಾನ ದಿಂದ ನಿಮಗೆಲ್ಲರೂ ವೇತನ ಸಹಿತ ರಜೆಯನ್ನು ನೀಡಲಾಗುತ್ತಿದೆ. ಅಂದು ಪ್ರತಿಯೊಬ್ಬರೂ ಮತ ಚಲಾಯಿಸಬೇಕೆಂದು ಅವರು ಮನವಿ ಮಾಡಿದರು.

ಕೆಲವೊಂದು ದೇಶಗಳಲ್ಲಿ ಮಹಿಳೆಯರಿಗೆ ಮತದಾನ ಮಾಡಲು ಹಕ್ಕು ಇರುವುದಿಲ್ಲ. ಆದರೆ ನಮ್ಮ ದೇಶದಲ್ಲಿ ಮಹಿಳೆಯರಿಗೆ ಮತದಾನ ಮಾಡುವ ಹಕ್ಕು ನೀಡಲಾಗಿದೆ ಎಂದು ಹೆಮ್ಮೆಯಿಂದ ನುಡಿದ ಅವರು, ಮತದಾನ ಬಗ್ಗೆ ನೀವು ನಿಮ್ಮ-ನಿಮ್ಮ ಅಕ್ಕ-ಪಕ್ಕದ ಮನೆಯವರಿಗೆ ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷರಾದ ಭಂವರ್ ಸಿಂಗ್ ಮೀನಾ ಅವರು ಮಾತನಾಡಿ, ಮೇ. ೭ ರಂದು ತಪ್ಪದೇ ಮತದಾನ ಮಾಡಬೇಕು. ಮತದಾನ ಹಕ್ಕು ನಾವು ಎಲ್ಲರೂ ಚಲಾಯಿಸಬೇಕು, ಯಾರೂ ಮತದಾನದಿಂದ ವಂಚಿತರಾಗಬಾರದು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಕಾರ್ಮಿಕ ಅಧಿಕಾರಿ ಎಸ್.ಆರ್. ಹಳ್ಳಿಮನಿ ಮತದಾನ ಕುರಿತ ಪ್ರತಿಜ್ಞೆ ವಿಧಿ ಬೋಧಿಸಿದರು.
ಇದೇ ಸಂದರ್ಭದಲ್ಲಿ ಹಸ್ತಾಕ್ಷರ ಅಭಿಯಾನ ನಡೆಸಲಾಯಿತು. ಜೊತೆಗೆ ಸೆಲ್ಪಿಸ್ಟಾö್ಯಂಡ್ ನಲ್ಲಿ ಹಲವರು ಖುಷಿಯಿಂದ ಫೋಟೋ ಕ್ಲಿಕ್ಕಿಸಿಕೊಳ್ಳುವ ಮೂಲಕ ಮತದಾನ ಅರಿವು ಪಡೆದುಕೊಂಡರು.

ಬಳಿಕ ಮಾಲ್‌ನಲ್ಲಿರುವ ಚಿತ್ರಮಂದಿರದಲ್ಲಿ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಯಿತು. ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಯಲಗಳ ಪದವಿ ವಿದ್ಯಾರ್ಥಿನಿಯರು ಮೂರು ನಾಟಕಗಳ ಪ್ರದರ್ಶಿಸಿ, ಚುನಾವಣೆಯ ಮತದಾನದ ಬಗ್ಗೆ ಜಾಗೃತಿ ಮೂಡಿಸಿದರು.

ಹೆಂಡ ಮತ್ತು ಹಣದ ಆಮಿಷಕ್ಕೊಳಗಾಗಬಾರದು, ಉತ್ತಮ ಅಭ್ಯರ್ಥಿ ಆಯ್ಕೆ ಮಾಡಬೇಕು. ಪೊಳ್ಳು ಭರವಸೆಗಳಿಂದ ಜನರು ಸಂಕಷ್ಟಕೊಳಗಾಗುವುದು, ೮೫ ವರ್ಷ ಮೇಲ್ಪಟ್ಟವರಿಗೆ ಮನೆಯಲ್ಲೇ ಮತದಾನ ಮಾಡಿಸುವುದು ಮುಂತಾದ ಜಾಗೃತಿ ಅಂಶಗಳನ್ನೊಂಡ ಹಾಸ್ಯಮಿಶ್ರಿತ ನಾಟಕಗಳು ನೋಡುಗರ ಮೆಚ್ಚುಗೆಗೆ ಪಾತ್ರವಾದವು.
ಇದೇ ಸಂದರ್ಭದಲ್ಲಿ ಚುನಾವಣೆ ಜಾಗೃತಿ ಮೂಡಿಸುವ “ನಾ ಭಾರತ” ಎಂಬ ದೃಶ್ಯ ಗೀತೆಯನ್ನು ಪ್ರದರ್ಶಿಸಲಾಯಿತು.

ಬಳಿಕ ಬಾಲಿವುಡ್ ನಟ ಅಜಯ್ ದೇವಗನ್ ನಟನೆಯ ಮೈದಾನ್ ಸಿನಿಮಾವನ್ನು ವಿದ್ಯಾರ್ಥಿನಿಯರಿಗಾಗಿ ಪ್ರದರ್ಶಿಸಲಾಯಿತು. ಫುಟ್‌ಬಾಲ್ ಕೋಚ್ ಸೈಯದ್ ಅಬ್ದುಲ್ ರಹೀಮ್ ಅವರ ನೈಜ ಕಥಾಹಂದರ ಹೊಂದಿದ್ದು, ಸ್ವೀಪ್ ಕಾರ್ಯಕ್ರಮಕ್ಕೆ ಭಾಗವಹಿಸಿದ್ದ ವಿದ್ಯಾರ್ಥಿನಿಯರಿಗೆ ಉಚಿತವಾಗಿ ಪ್ರದರ್ಶಿಸಲಾಯಿತು. ಆರ್ಚಿಡ್ ಮಾಲ್ ಮಾಲೀಕರಾದ ರಾಘವೇಂದ್ರ ಮೈಲಾಪೂರ ಪ್ರಾಯೋಜಕತ್ವದಲ್ಲಿ ಮಾಲ್‌ನ ಕಾರ್ಯಕ್ರಮಗಳು ನಡೆದವು.

ಜಿಲ್ಲಾಪಂಚಾಯತ್ ಉಪ ಕಾರ್ಯದರ್ಶಿ ಹಾಗೂ ಜಿಲ್ಲಾ ಸ್ವೀಪ್ ನೋಡಲ್ ಅಧಿಕಾರಿ ಅಬ್ದುಲ್ ಅಜೀಮ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪನಿರ್ದೇಶಕ ಸಿದ್ದೇಶ್ವರಪ್ಪ ಜಿ.ಬಿ. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಗಿರೀಶ್ ರಾಜೋಳಕರ್, ಆರ್ಚಿಡ್ ಮಾಲ್ ಮಾಲೀಕರಾದ ರಾಘವೇಂದ್ರ ಮೈಲಾಪೂರ ಮುಂತಾದವರು ಭಾಗವಹಿಸಿದ್ದರು.

emedialine

Recent Posts

ಸುಕ್ಷೇತ್ರ ನರೋಣಾದಲ್ಲಿ ಶ್ರೀ ಛಲ ಲಿಂಗ ಮಲ್ಲಿಕಾರ್ಜುನ ದೇವಸ್ಥಾನದ 9 ನೇ ಜಾತ್ರೆ, ರಥೊತ್ಸವ ನಾಳೆ

ಆಳಂದ: ತಾಲೂಕಿನ ಸುಕ್ಷೇತ್ರ ನರೋಣಾ ಗ್ರಾಮದ ಶ್ರೀ ಛಲ ಲಿಂಗ ಮಲ್ಲಿಕಾರ್ಜುನ ದೇವಸ್ಥಾನ 9 ನೇ ವರ್ಷದ ಜಾತ್ರಾ ಮಹೋತ್ಸವದ…

1 hour ago

ಕಾಂಗ್ರೆಸ್ ಮುಖಂಡರಿಂದ ಬಸವಣ್ಣನವರ ಜಯಂತೋತ್ಸವ

ಕಲಬುರಗಿ:ವಿಶ್ವ ಗುರು ಬಸವಣ್ಣನವರ ಜಯಂತೋತ್ಸವದ ಅಂಗವಾಗಿ ನಗರದ ಜಗತ್ತ ವೃತ್ತದಲ್ಲಿರುವ ಮಹಾಮಾನವತವಾದಿ ಸಮಾನತೆಯ ಹರಿಕಾರ ವಿಶ್ವ ಗುರು ಬಸವೇಶ್ವರ ಪುತ್ತಳಿಗೆ…

1 hour ago

ಸಾಮಾಜಿಕ ಕ್ರಾಂತಿಯ ಹರಿಕಾರ ಬಸವಣ್ಣನವರು

ಶಹಾಬಾದ: ಕಾಯಕವೇ ಕೈಲಾಸ ತತ್ವದಡಿ ಎಲ್ಲರೂ ಸಮಾನರು. ಯಾವುದೇ ಕೆಲಸದಲ್ಲಿ ಮೇಲು–ಕೀಳಿಲ್ಲ ಎಂದು ಸಾರಿದ ಬಸವಣ್ಣ ಅವರು ಸಾಮಾಜಿಕ ಕ್ರಾಂತಿಯ…

1 hour ago

ಜಗತ್ತಿನ ಸರ್ವರನ್ನೂ ಸಮಾನವಾಗಿ ಕಾಣುವ ತತ್ವ ಬೋಧಿಸಿದವರು ಬಸವಣ್ಣ

ಶಹಾಬಾದ: ಜಗತ್ತಿನ ಸರ್ವರನ್ನೂ ಸಮಾನವಾಗಿ ಕಾಣುವ ಮೂಲಕ ವಿಶ್ವ ಭಾತೃತ್ವವನ್ನು ಪ್ರತಿಪಾದಿಸಿದವರು ಬಸವಣ್ಣನವರು ಎಂದು ಶಹಾಬಾದ ಪತ್ತಿನ ಸಹಕಾರ ಸಂಘದ…

1 hour ago

ಜಗತ್ತಿನ ಸಂವಿಧಾನ ಬರೆದವರು ವಿಶ್ವಗುರು ಬಸವಣ್ಣನವರು

ಶಹಾಬಾದ: ಭಾರತದ ಸಂವಿಧಾನವನ್ನು ಬರೆದವರು ಡಾ.ಬಿ.ಆರ್.ಅಂಬೇಡ್ಕರ್ ಆದರೆ ಜಗತ್ತಿನ ಸಂವಿಧಾನ ಬರೆದವರು ವಿಶ್ವಗುರು ಬಸವಣ್ಣನವರು ಎಂದು ನಗರಸಭೆಯ ಪೌರಾಯುಕ್ತ ಡಾ.…

2 hours ago

ಲೋಕೋಪಯೋಗಿ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳಿಂದ ಅನ್ನದಾಸೋಹ ಮತ್ತು ನೇತ್ರ ತಪಾಸಣೆ

ಕಲಬುರಗಿ: ಕಲ್ಯಾಣ ಕರ್ನಾಟಕ ಲೋಕೋಪಯೋಗಿ ನೌಕರ ಸಂಘ ವತಿಯಿಂದ ವಿಶ್ವಗುರು ಬಸವಣ್ಣ ಜಯಂತಿ ಉತ್ಸವ ಅಂಗವಾಗಿ ಸರ್ದಾರ್ ವಲ್ಲಬಾಯ್ ಪಟೇಲ್…

2 hours ago