ಬಿಸಿ ಬಿಸಿ ಸುದ್ದಿ

ಕಾರ್ಮಿಕ ಚಳುವಳಿಗಳಿಂದಲೆ ಕಲ್ಯಾಣದಲ್ಲಿ ನಾಯಕತ್ವ ಸೃಷ್ಟಿಯಾಗಿರುವುದು ಮರೆಯುವಂತಿಲ್ಲ

ಕಲಬುರಗಿ : ಕಲ್ಯಾಣ ಕರ್ನಾಟಕ ಪ್ರದೇಶದ ವಿಭಾಗಿಯ ಕೇಂದ್ರ ಜಿಲ್ಲೆಯಾದ ಕಲಬುರಗಿ ಜಿಲ್ಲೆಯ ಎಂ.ಎಸ್.ಕೆ.ಮಿಲ್ ಶಹಾಬಾದ, ವಾಡಿ ಕೈಗಾರಿಕೆಗಳ ಕಾರ್ಮಿಕ ವಲಯದ ಚಳುವಳಿಗಳಿಂದ ಕಲ್ಯಾಣ ಕರ್ನಾಟಕದಲ್ಲಿ ಅನೇಕ ನಾಯಕರು ಹುಟ್ಟಿ ರಾಜ್ಯ ಮತ್ತು ರಾಷ್ಟ್ರ ಮಟ್ಟಕ್ಕೆ ತಲುಪಿರುವುದು ಕಾರ್ಮಿಕ ಸಂಘಟನೆಯ ಶಕ್ತಿಯ ಪ್ರತೀಕವಾಗಿದೆ ಎಂದು ಹಿರಿಯ ಹೋರಾಟಗಾರರಾದ ಲಕ್ಷ್ಮಣ ದಸ್ತಿಯವರು ಹೇಳಿದರು.

ನವಕಲ್ಯಾಣ ಕರ್ನಾಟಕ ಕಟ್ಟಡ ಕಾರ್ಮಿಕ ಸಂಘದ ವತಿಯಿಂದ ಮೇ-1 ರಂದು ಆಯೋಜಿಸಿರುವ ವಿಶ್ವ ಕಾರ್ಮಿಕ ದಿನಾಚರಣೆಯ ಅಂಗವಾಗಿ ವಿಶ್ವ ಕಾರ್ಮಿಕ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ದಸ್ತಿಯವರು ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಆರ್ಥಿಕ ಸಮಾನತೆಗಾಗಿ ಕಾರ್ಮಿಕ ಚಳುವಳಿಗಳು ನಡೆದರೆ ಭಾರತದಲ್ಲಿ ಅದರಲ್ಲೂ ಕಲ್ಯಾಣ ಕರ್ನಾಟಕದ ಬಸವ ಕಲ್ಯಾಣದಲ್ಲಿ ಬಸವಾದಿ ಶರಣರ ನೇತೃತ್ವದಲ್ಲಿ ಸಾಮಾಜಿಕ ಮತ್ತು ಆರ್ಥಿಕ ಸಮಾನತೆಗಾಗಿ ಅನುಭವ ಮಂಟಪದಲ್ಲಿ ವಚನಗಳ ಮೂಲಕ ಅರಿವು ಮೂಡಿಸಿರುವದಲ್ಲದೆ, ಸಾಮಾಜಿಕ ಕ್ರಾಂತಿ ನಡೆದಿರುವುದು ಜಗತ್ತಿಗೆ ಕೊಟ್ಟ ಮಾದರಿ ಕ್ರಾಂತಿಯಾಗಿದೆ ಎಂದರು.

ಸ್ವತಂತ್ರ ನಂತರ ಕಲ್ಯಾಣ ಕರ್ನಾಟಕ ಪ್ರದೇಶದ ವಿಭಾಗೀಯ ಕೇಂದ್ರ ಜಿಲ್ಲೆಯಾದ ಕಲಬುರಗಿಯ ಎಂ.ಎಸ್.ಕೆ.ಮಿಲ್ ಮತ್ತು ಶಹಾಬಾದ, ವಾಡಿ ಕೈಗಾರಿಕೆಗಳಲ್ಲಿ ಕಾರ್ಮಿಕ ಚಳುವಳಿಯಿಂದ ಅನೇಕ ಧುರಿಣರು ಹುಟ್ಟಿ ಕಾರ್ಮಿಕರ ನ್ಯಾಯಕ್ಕಾಗಿ ಹೋರಾಡಿದರು. ಅಂತಹವರಲ್ಲಿ ಶರಣಪ್ಪ ಭೈರಿ, ಕೆ.ಬಿ.ಶರಣಪ್ಪ, ಸಿ. ಗುರುನಾಥ, ಗಂಗಾಧರ ನಮೋಶಿ, ಎಸ್.ಕೆ. ಕಾಂತಾ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಅನೇಕರು ಈ ಪಂಕ್ತಿಗೆ ಸೇರಿರುತ್ತಾರೆ. ಶಾಸಕರಾಗಿ, ಮಂತ್ರಿಗಳಾಗಿ ಸೇವೆ ಸಲ್ಲಿಸಿದ ಇಂತಹ ನಾಯಕರಲ್ಲಿ ಪ್ರಸ್ತುತ ಎ.ಐ.ಸಿ.ಸಿ. ಅಧ್ಯಕ್ಷರಾದ, ಮಲ್ಲಿಕಾರ್ಜುನ ಖರ್ಗೆಯವರು ರಾಷ್ಟ್ರ ಮಟ್ಟದ ನಾಯಕರಾಗಿ ಬೆಳೆದಿರುವುದು ನಮ್ಮ ಜನಮಾನಸಕ್ಕೆ ಹೆಮ್ಮೆಯ ವಿಷಯವಾಗಿದೆ ಎಂದ ಅವರು ಇಂತಹ ಐತಿಹಾಸಿಕ ನಮ್ಮ ಪ್ರದೇಶದ ಕಾರ್ಮಿಕ ಚಳುವಳಿಗಳ ಐತಿಹಾಸಿಕ ಘಟನೆಗಳನ್ನು ಗಮನದಲ್ಲಿಟ್ಟುಕೊಂಡು ಎಲ್ಲಾ ಕ್ಷೇತ್ರದ ಕಾರ್ಮಿಕರು ತಮಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಸಂಘಟಿತ ಹೋರಾಟ ಮಾಡುವುದರ ಮೂಲಕ ಕಾರ್ಮಿಕ ಹಕ್ಕುಗಳಿಗಾಗಿ ನಿರಂತರ ಹೋರಟ ಮಾಡಬೇಕೆಂದು ಕರೆ ಕೊಟ್ಟರು.

ಮುಂದುವರೆದು ಆರು ನವಕಲ್ಯಾಣ ಕಟ್ಟಡ ಕಾರ್ಮಿಕ ಸಂಘ ಕಳೆದ ಐದಾರು ವರ್ಷಗಳಿಂದ ಕಲಬುರಗಿ ಜಿಲ್ಲೆಯ ಕಾರ್ಮಿಕ ವಲಯದ ಚಳುವಳಿಗಳ ಗತವೈಭವದ ಇತಿಹಾಸವನ್ನು ಮರುಕಳಿಸುವ ನಿಟ್ಟಿನಲ್ಲಿ ಭೀಮರಾವ ಕಂದಳ್ಳಿಯವರ ನೇತೃತ್ವದಲ್ಲಿ ಸಹಸ್ರಾರು ಕಾರ್ಮಿಕರು ಸಂಘಟಿತರಾಗಿ ಕಾರ್ಮಿಕರಿಗಾಗಿ ಹಿತಕ್ಕಾಗಿ ನಿರಂತರ ಹೋರಾಟ ನಡೆಸುತ್ತಿರುವುದು ಪ್ರಶಂಸನಾರ್ಹ ವಿಷಯವಾಗಿದೆ. ಈ ದಿಸೆಯಲ್ಲಿ ಎಲ್ಲಾ ಕಾರ್ಮಿಕರು, ಕಲಬುರಗಿ ಜಿಲ್ಲೆ ಸೇರಿದಂತೆ, ಕಲ್ಯಾಣ ಕರ್ನಾಟಕದಲ್ಲಿ ಎಲ್ಲಾ ಕ್ಷೇತ್ರದ ಕಾರ್ಮಿಕರು ಸಂಘಟಿತ ಹೋರಾಟ ಮಾಡಿದರೆ ಮಾತ್ರ ಕಾರ್ಮಿಕರಿಗೆ ಸಾಮಾಜಿಕ ಮತ್ತು ಆರ್ಥಿಕ ಸಮಾನತೆ ಸಿಗುವದು ಎಂದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಕಾರ್ಮಿಕ ಧುರಿಣರಾದ ಲಿಂಗರಾಜ ತಾರಫೈಲ್‍ರವರು ಮಾತನಾಡಿ ಕಾರ್ಮಿಕರ ಹೋರಾಟ ಎಲ್ಲಾ ಕ್ಷೇತ್ರದ ಹೋರಾಟಗಳಿಗೆ ಪ್ರೇರಣೆಯಾಗಿ ರುವುದು ಇತಿಹಾಸ ಸಾಕ್ಷಿಯಾಗಿದೆ. ಇದಕ್ಕೆ ಪೂರಕವಾಗಿ ಕಲಬುರಗಿಯಲ್ಲಿ ನಡೆದಿರುವ 371ನೇ ಕಲಂ ಬೇಡಿಕೆಯ ಹೋರಾಟ ಸರಕಾರದ ಕಣ್ಣು ತೆರೆಸುವ ಮಟ್ಟಕ್ಕೆ ಮುಟ್ಟಿ ರಾಜಕೀಯ ಇಚ್ಛಾಶಕ್ತಿ ದೊರಕಿರುವುದು ಐತಿಹಾಸಿಕವಾಗಿದೆ.

ಕಲಬುರಗಿ ಜಿಲ್ಲೆ ಕರ್ನಾಟಕದಲ್ಲಿ ಕಾರ್ಮಿಕ ಚಳುವಳಿ ಕ್ಷೇತ್ರದಲ್ಲಿ ತನ್ನದೇ ಆದ ವಿಶಿಷ್ಟ ಪಾತ್ರ ವಹಿಸಿದೆ. ಕಳೆದ ಒಂದುವರೆ ದಶಕದಿಂದ ಕಾರ್ಮಿಕ ಚಳುವಳಿಗಳಲ್ಲಿ ಏರುಪೇರು ಕಂಡುಬಂದರೂ ಇತ್ತೀಚೆಗೆ ನವಕಲ್ಯಾಣ ಕರ್ನಾಟಕ ಕಟ್ಟಡ ಕಾರ್ಮಿಕ ಸಂಘಟನೆಯಂತಹ ಸಂಘಟನೆಗಳಿಂದ ಕಾರ್ಮಿಕ ಚಳುವಳಿಗಳು ತನ್ನದೇಯಾದ ಸ್ವರೂಪ ಪಡೆಯುತ್ತಿರುವುದು ಸಂತಸ ತಂದಿದೆ ಎಂದು ವಿವರಿಸಿದರು.

ನಗರದ ಉದ್ಯಾನವನದಲ್ಲಿ ಬೃಹತ್ ಪ್ರಮಾಣದಲ್ಲಿ ಆಯೋಜಿಸಲಾದ ಕಾರ್ಮಿಕ ದಿನಾಚರಣೆ ಯಲ್ಲಿ ಸಹಸ್ರಾರು ಆಯಾ ಕ್ಷೇತ್ರದ ಕಾರ್ಮಿಕರು ಭಾಗವಹಿಸಿದರು. ಮೊದಲಿಗೆ ಸಂಘದ ಅಧ್ಯಕ್ಷರಾದ ಭೀಮರಾವ ಕಂದಳ್ಳಿಯವರು ಸರ್ವರನ್ನು ಸ್ವಾಗತಿಸಿ ತಮ್ಮ ಹೋರಾಟಕ್ಕೆ ಸಮಸ್ತ ನಾಗರಿಕರ ಬೆಂಬಲ ಕೋರಿದರು.

ಈ ಕಾರ್ಮಿಕ ದಿನಾಚರಣೆಯಲ್ಲಿ ನಾಗರಾಜ ಗುಂಡಗುರ್ತಿ, ರಮೇಶ ವಾಡೆಕರ, ಅಲ್ಲಾವುದ್ದೀನ್, ಲಕ್ಷ್ಮಿಕಾಂತ, ಪ್ರವೀಣ ದೊಡ್ಡಮನಿ, ಮರೆಪ್ಪ ರೊಟ್ನಡಗಿ, ಮಲ್ಲಿಕಾರ್ಜುನ ಸಾರವಾಡ, ರಾಜು ಜಮಾದಾರ, ಸಾಹೇಬಗೌಡ, ಶಿವಕುಮಾರ ಬಳಿಗೇರಿ, ಅಸ್ಲಂ ಚೌಂಗೆ, ಮಹಾಂತೇಶ ದೊಡ್ಡಮನಿ, ಚಂದ್ರಕಾಂತ, ಮಲ್ಲು ಬೊಳೆವಾಡ, ದೇವಿಂದ್ರ ಉಳ್ಳಾಗಡ್ಡಿ, ಶರಣು ಬಳಿಚಕ್ರ, ಬುದ್ದಪ್ಪ, ಮಾಲಾ ಕಣ್ಣಿ, ಶೃತಿ ಹೋಳಕರ, ಭಾಗ್ಯಶ್ರೀ ಮೊಚಿ ಸೇರಿದಂತೆ ಅನೇಕರು ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಕೊನೆಗೆ ಸಂಘದ ಕಾರ್ಯದರ್ಶಿಯಾದ ಮರೆಪ್ಪ ರೊಟ್ನಡಗಿ ಸರ್ವರನ್ನು ವಂದಿಸಿದರು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

11 mins ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

13 mins ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

15 mins ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

17 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

19 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago