ಬಿಸಿ ಬಿಸಿ ಸುದ್ದಿ

ವಿಶ್ವೇಶ್ವರಯ್ಯ ಸಹಕಾರ ಬ್ಯಾಂಕ್-ಪ್ರತಿಭಾ ಪುರಸ್ಕಾರ ಪ್ರಥಮ ಪುರಸ್ಕಾರ ಪಡೆದ ಅಚಲರಾಜ ಅಂಡಗಿ

ಕಲಬುರಗಿ: ಇತ್ತೀಚೆಗೆ ಇನ್ಸೂಟ್ಯೂಟ್ ಆಫ್ ಇಂಜಿನೀಯರ ಸಭಾಂಗಣದಲ್ಲಿ ಸರ್.ಎಂ.ವಿಶ್ವೇಶ್ವರಯ್ಯ ಬ್ಯಾಂಕ್ ತನ್ನ ೨೩ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಬ್ಯಾಂಕಿನ ಸದಸ್ಯರ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹಿಸುವ ಉದ್ದೇಶದಿಂದ ಪಿ.ಯು.ಸಿ. (೩) ಹಾಗೂ ಎಸ್.ಎಸ್.ಎಲ್.ಸಿ.(೩) ಪರೀಕ್ಷೆಯಲ್ಲಿ ಹೆಚ್ಚು ಅಂಕಪಡೆದ ೦೬ ಮಕ್ಕಳಿಗೆ ಬ್ಯಾಂಕಿನ ಅಧ್ಯಕ್ಷರಾದ ಶರಣಬಸಪ್ಪಾ ದರ್ಶನಾಪೂರ ಅವರು ಪ್ರಶಸ್ತಿ ಪತ್ರ ಹಾಗೂ ಬಹುಮಾನ ವಿತರಿಸಿದರು.

೨೦೧೮-೧೯ನೇ ಸಾಲಿನ ಪಿ.ಯು.ಸಿ. ಪರೀಕ್ಷೆಯಲ್ಲಿ ಅಚಲರಾಜ ತಂದೆ ಶಿವರಾಜ ಅಂಡಗಿ (೫೬೩/೬೦೦) ಪ್ರತಿಶತ ೯೩.೮% ಅಂಕ ಪಡೆದು ಬ್ಯಾಂಕಿನ ಸದಸ್ಯರ ಮಕ್ಕಳ ಈ ಪ್ರತಿಭಾ ಪುರಸ್ಕಾರದಲ್ಲಿ ಪ್ರಥಮ ಸ್ಥಾನ ಪಡೆದು ೫೦೦೦/- ಸಾವಿರ ರೂಪಾಯಿಯೊಂದಿಗೆ ಪ್ರಶಸ್ತಿ ಪತ್ರ ಸ್ವೀಕರಿಸಿದ್ದಾನೆ. ದ್ವಿತೀಯ ಸ್ಥಾನದಲ್ಲಿ ಮಯೂರ ಬಂದರವಾಡ (೫೫೦/೬೦೦) ಪ್ರತಿಶತ ೯೧.೬% ಅಂಕ ಪಡೆದು ೩೦೦೦/- ಸಾವಿರ ರೂಪಾಯಿಯೊಂದಿಗೆ ಪ್ರಶಸ್ತಿ ಪತ್ರ ಪಡೆದಿದ್ದಾನೆ. ತೃತೀಯ ಸ್ಥಾನದಲ್ಲಿ ಸೌಮ್ಯ ಪಾಟೀಲ (೫೨೮/೬೦೦) ಪ್ರತಿಶತ ೮೮% ಅಂಕ ಪಡೆದು ೨೦೦೦/- ಸಾವಿರ ರೂಪಾಯಿಯೊಂದಿಗೆ ಪ್ರಶಸ್ತಿ ಪತ್ರ ಪಡೆದಿದ್ದಾಳೆ.

೨೦೧೮-೧೯ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅಂಬಿಕಾ ಹೊನ್ನಶೆಟ್ಟಿ (೫೭೧/೬೨೫) ಪ್ರತಿಶತ ೯೧.೩% ಅಂಕ ಪಡೆದು ಬ್ಯಾಂಕಿನ ಸದಸ್ಯರ ಮಕ್ಕಳ ಈ ಪ್ರತಿಭಾ ಪುರಸ್ಕಾರದಲ್ಲಿ ಪ್ರಥಮ ಸ್ಥಾನ ಪಡೆದು ೫೦೦೦/- ಸಾವಿರ ರೂಪಾಯಿಯೊಂದಿಗೆ ಪ್ರಶಸ್ತಿ ಪತ್ರ ಸ್ವೀಕರಿಸಿದ್ದಾಳೆ. ದ್ವಿತೀಯ ಸ್ಥಾನದಲ್ಲಿ ವಿವೇಕ ಪಾಟೀಲ (೫೪೫/೬೨೫) ಪ್ರತಿಶತ ೮೭.೨% ಅಂಕ ಪಡೆದು ೩೦೦೦/- ಸಾವಿರ ರೂಪಾಯಿಯೊಂದಿಗೆ ಪ್ರಶಸ್ತಿ ಪತ್ರ ಪಡೆದಿದ್ದಾನೆ. ತೃತೀಯ ಸ್ಥಾನದಲ್ಲಿ ಶಿವಕುಮಾರ ಸುತ್ತಾರ (೫೩೦/೬೨೫) ಪ್ರತಿಶತ ೮೪.೮% ಅಂಕ ಪಡೆದು ೨೦೦೦/- ಸಾವಿರ ರೂಪಾಯಿಯೊಂದಿಗೆ ಪ್ರಶಸ್ತಿ ಪತ್ರ ಮಕ್ಕಳು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಬೇರೆ-ಬೇರೆ ಊರಿಗೆ ಹೋಗಿರುವ ಕಾರಣ ಪಾಲಕರೇ ಪ್ರಶಸ್ತಿ ಪತ್ರ ಮತ್ತು ಬಹುಮಾನ ಪಡೆದಿದ್ದಾರೆ ಎಂದು ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಶಿವರುದ್ರ ಬಿ.ಪುಣ್ಯಶೆಟ್ಟಿ ತಿಳಿಸಿದ್ದಾರೆ.

ಮುಂದಿನ ವರ್ಷ ೨೦೨೦ನೇ ವರ್ಷದ ಸಾಲಿನಲ್ಲಿ ಪ್ರತಿಭಾ ಪುರಸ್ಕಾರ ಪಿ.ಯು.ಸಿ.ಯಲ್ಲಿ ೦೫ ಮತ್ತು ಎಸ್.ಎಸ್.ಎಲ್.ಸಿ.ಯಲ್ಲಿ ೦೫ ಒಟ್ಟು ೧೦ ಮಕ್ಕಳಿಗೆ ಪ್ರಥಮ ಸ್ಥಾನ ೨೫೦೦೦/-, ದ್ವಿತೀಯ ಸ್ಥಾನ ೨೦೦೦೦/-, ತೃತೀಯ ಸ್ಥಾನ ೧೫೦೦೦/-, ೪ನೇ ಸ್ಥಾನ ೧೦,೦೦೦/-, ೫ನೇ ಸ್ಥಾನ ೫,೦೦೦/- ಈ ರೀತಿಯಾಗಿ ಪ್ರತಿಭಾ ಪುರಸ್ಕಾರ ನೀಡಬೇಕೆಂದು ಬ್ಯಾಂಕಿನ ಅಧ್ಯಕ್ಷರಾದ ಶರಣಬಸಪ್ಪಾ ದರ್ಶನಾಪೂರ ರವರ ಆದೇಶದ ಮೇರೆಗೆ ಬ್ಯಾಂಕಿನ ಉಪಾಧ್ಯಕ್ಷರಾದ ಜಯರಾಜ ಪಾಟೀಲ ಓಕಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಬ್ಯಾಂಕಿನ ಅಧ್ಯಕ್ಷರಾದ ಶರಣಬಸಪ್ಪಾ ದರ್ಶನಾಪೂರ ರವರು ಅಧ್ಯಕ್ಷತೆ ವಹಿಸಿದರು. ಆಡಳಿತ ಮಂಡಳಿಯ ಸದಸ್ಯರಾದ ಜಯರಾಜ ಪಾಟೀಲ ಓಕಳಿ, ಜಿ.ಆರ್. ಮುತ್ತಗಿ, ವೀರಣ್ಣ ಕೌಲಗಿ, ಸೋಮಶೇಖರ ಗೋನಾಯಕ, ಅಲ್ಲಬಕ್ಷ ಪಟೇಲ, ವಿಜಯಕುಮಾರ ಮೂಲ್ಗೆ ಸರಸ್ವತಿ ಪಾಟೀಲ ವೇದಿಕೆ ಮೇಲೆ ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಬ್ಯಾಂಕಿನ ಶಿವರುದ್ರ ಬಿ. ಪುಣ್ಯಶೆಟ್ಟಿ, ಅಕೌಂಟ್ಸ್ ಮ್ಯಾನೇಜರ ಅವರಯ್ಯ ಜಿ.ಮಠ, ಮ್ಯಾನೇಜರ ಬಸವರಾಜ ಪಾಟೀಲ, ಹಣಮಂತ ಕವಂಟೆ, ಮಲ್ಲಿಕಾರ್ಜುನ ಪಿ.ಬಿರಾದಾರ ಹಾಗೂ ಬ್ಯಾಂಕಿನ ಸಿಬ್ಬಂದಿ ಉಪಸ್ಥಿತರಿದ್ದರು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

1 hour ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

1 hour ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

1 hour ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

18 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

20 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago