ಕಲಬುರಗಿ: ಜಾಗತಿಕ ಲಿಂಗಾಯತ ಮಹಾಸಭಾ, ರಾಷ್ಟ್ರೀಯ ಬಸವದಳ ಹಾಗೂ ಕಾಯಕ ಶರಣರ ಒಕ್ಕೂಟದ ಸಹಯೋಗದಲ್ಲಿ ಮೇ 10ರಿಂದ 18ರವರೆಗೆ 891ನೇ ಬಸವ ಜಯಂತಿ ಉತ್ಸವ ಜರುಗಲಿದೆ ಎಂದು ಉತ್ಸವ ಸಮಿತಿಯ ಅಧ್ಯಕ್ಷ ಜಗನ್ನಾಥ ರಾಚಟ್ಟೆ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಜಗತ್ ವೃತ್ತದ ಬಳಿ ಇರುವ ಬಸವ ಸಾಂಸ್ಕೃತಿಕ ವೇದಿಕೆಯಲ್ಲಿ ಪ್ರತಿದಿನ ಸಂಜೆ 6 ಗಂಟೆಗೆ ವಿಶೇಷ ಅನುಭಾವ ಹಾಗೂ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಮೇ 10ರಂದು ಬೆಳಗ್ಗೆ 8 ಗಂಟೆಗೆ ಷಟಸ್ಥಲ ದ್ವಜಾರೋಹಣ ಹಾಗೂ ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಗುವುದು. ಪ್ರತಿ ದಿನ ಸಂಜೆ 6 ರಿಂದ 9 ಗಂಟೆಯವರೆಗೆ ನಡೆಯುವ ವಚನ ವಿದ್ವಾಂಸರಿಂದ ವಿವಿಧ ವಿಷಯಗಳ ಕುರಿತ ಅನುಭಾವ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಭಾಗವಹಿಸುವಂತೆ ಅವರು ಮನವಿ ಮಾಡಿದರು.
11ರಂದು ನಡೆಯುವ ಕಾರ್ಯಕ್ರಮವನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಉದ್ಘಾಟಿಸುವರು. ಸಾನ್ನಿಧ್ಯವನ್ನು ಗುರುಮಠಕಲ್ ಶಾಂತವೀರ ಮುರುಘರಾಜೇಂದ್ರ ಸ್ವಾಮಿಗಳು ವಹಿಸಲಿದ್ದು, ವಿಜಯಪುರದ ಡಾ. ಜೆ.ಎಸ್. ಪಾಟೀಲ ‘ ಬಸವಣ್ಣ ಮತ್ತು ಚಾತುರ್ವರ್ಣ ಧರ್ಮ’ ವಿಷಯ ಕುರಿತು ಅನುಭಾವ ನೀಡಲಿದ್ದಾರೆ ಎಂದರು.
12ರಂದು ನಡೆಯುವ ಕಾರ್ಯಕ್ರಮದ ಸಾನ್ನಿಧ್ಯವನ್ನು ಚಿಗರಳ್ಳಿಯ ಕಬೀರಾನಂದ ಸ್ವಾಮಿಗಳು ವಹಿಸಲಿದ್ದು, ಖ್ಯಾತ ಚಲನಚಿತ್ರ ನಟ ಚಿತ್ರನಟ ಹಾಗೂ ಚಿಂತಕ ಅಹಿಂಸಾ ಚೇತನ ಅವರು ‘ ಪ್ರಸ್ತುತ ಸನ್ನಿವೇಶಕ್ಕೆ ಬಸವತತ್ವ’ ವಿಷಯ ಕುರಿತು ಅನುಭಾವ ನೀಡಲಿದ್ದಾರೆ ಎಂದು ಹೇಳಿದರು.
13ರಂದು ನಡೆಯುವ ಕಾರ್ಯಕ್ರಮದ ಸಾನ್ನಿಧ್ಯವನ್ನು
ಭಾಲ್ಕಿ ಹಿರೇಮಠದ ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರು ವಹಿಸಲಿದ್ದು, ಬೆಂಗಳೂರಿನ ಡಾ. ಬಸವರಾಜ ಸಾದರ ಅವರು ‘ ವರ್ತಮಾನಕ್ಕೆ ಬಸವಣ್ಣ’ ವಿಷಯ ಕುರಿತು ಅನುಭಾವ ನೀಡಲಿದ್ದಾರೆ ಎಂದರು.
14ರಂದು ನಡೆಯುವ ಕಾರ್ಯಕ್ರಮದ ಸಾನ್ನಿಧ್ಯವನ್ನು ಆಳಂದ ತೋಂಟದಾರ್ಯ ಮಠದ ವಿಶ್ವನಾಥ ಕೋರಣೇಶ್ವರ ಮಹಾಸ್ವಾಮಿಗಳು ಸಾನ್ನಿದ್ಯ ವಹಿಸಲಿದ್ದು, ನೆಲಮೂಲ ಚಿಂತಕ ಎಸ್.ಜಿ. ಸಿದ್ರಾಮಯ್ಯಾ ಅವರು ‘ ಸಾಂಸ್ಕೃತಿಕ ನಾಯಕ ಬಸವಣ್ಣ’ ವಿಷಯ ಕುರಿತು ಅನುಭಾವ ನೀಡಲಿದ್ದಾರೆ ಎಂದು ತಿಳಿಸಿದರು.
ಮೇ 15ರಂದು ನಡೆಯುವ ಕಾರ್ಯಕ್ರಮದ ಸಾನ್ನಿಧ್ಯವನ್ನು ಸಾಣೆಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯರು ವಹಿಸಲಿದ್ದು, ರಾಯಚೂರಿನ ಶರಣ ಪಿ. ರುದ್ರಪ್ಪ ಅವರು, ‘ಶರಣರ ದೃಷ್ಟಿಯಲ್ಲಿ ಪೂರ್ವ ಜನ್ಮ- ಕರ್ಮ ಸಿದ್ಧಾಂತ’ ವಿಷಯ ಕುರಿತು ಅನುಭಾವ ನೀಡಲಿದ್ದಾರೆ. 16ರಂದು ನಡೆಯಲಿರುವ ಕಾರ್ಯಕ್ರಮದ ಸಾನ್ನಿಧ್ಯವನ್ನು ಅತ್ತಿವೇರಿಯ ಬಸವೇಶ್ವರಿ ಮಾತೆ ವಹಿಸಲಿದ್ದು, ಬೆಳಗಾವಿಯ ಡಾ. ಮೈತ್ರೇಯಣಿ ಗದಿಗೆಪ್ಪಗೌಡರ ಅವರು, ‘ ಶರಣರ ದೃಷ್ಟಿಯಲ್ಲಿ ಮಹಿಳೆ’ ವಿಷಯ ಕುರಿತು ಅನುಭಾವ ನೀಡಲಿದ್ದಾರೆ ಎಂದರು.
17ರಂದು ನಡೆಯುವ ಕಾರ್ಯಕ್ರಮದ ಸಾನ್ನಿಧ್ಯವನ್ನು ಬೀದರ್ ನ ಡಾ. ಗಂಗಾಂಬಿಕಾ ಅಕ್ಕ ವಹಿಸಲಿದ್ದು, ಹುಬ್ಬಳ್ಳಿಯ ಶಶಿಧರ ಕರವೀರ ಶೆಟ್ಟರ್ ಅವರು, ‘ ರಾಷ್ಟ್ರ ನಿರ್ಮಾಣದಲ್ಲಿ ಬಸವತತ್ವದ ಪಾತ್ರ ವಿಷಯ ಕುರಿತು ಅನುಭಾವ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.
ಪ್ರಭುಲಿಂಗ ಮಹಾಗಾಂವಕರ, ಎಸ್.ವಿ. ನಿಂಗಪ್ಪ, ಶರಣ ಐಟಿ, ಸಂಗಮೇಶ ಗುಬ್ಬೇವಾಡ, ಡಾ.ಕೋಣಿನ್ ಸೇರಿದಂತೆ ಇತರರಿದ್ದರು.
18ರಂದು ಸಮಾರೋಪ: 18ರಂದು ಸಂಜೆ 6 ಗಂಟೆಯಿಂದ ಕಲಬುರಗಿಯ ನಗರಶ್ವರ ಶಾಲೆ, ಗಂಜದಿಂದ ಮುಖ್ಯರಸ್ತೆ, ಕಿರಣಾ ಬಚಾರ್, ಸುಪರ್ ಮಾರ್ಕೆಟ್ ಮೂಲಕ ಜಗತ್ ವೃತ್ತದಲ್ಲಿಯಬಸವೇಶ್ವರ ಮತ್ಥಳಿಯವರೆಗೆ ಬಸದೇಶ್ವರ ಹಾಗೂ ಇತರ ಶರಣರ ಭಾವಚಿತ್ರಗಳೊಂದಿಗೆ, ಭವ್ಯಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ. ಈ ಮೆರವಣಿಗೆಯಲ್ಲಿ ಡೊಳ್ಳು, ನಂದಿಕೋಲು ಕುಣಿತ, ಕೋಲಾಟ, ಕೌಂಸಾಳೆ ಹಾಗೂ ವಿವಿಧ ಕಲಾತಂಡಗಳು ಭಾವಹಿಸಲಿದ್ದಾರೆ.
ಸದರಿ ಕಾರ್ಯಕ್ರಮದ ಎಲ್ಲಾ ದಿನಗಳಂದು ಪ್ರಸಾದ ವ್ಯವಸ್ಥೆ ಮಾಡಲಾಗಿದೆ. ಹಾಗೂ ಬಸವ ಆನುಯಾಯಿಗಳಿಗೆ ತಮ್ಮ ಬಡಾವಣೆಗಳಿಗೆ ಮರಳಿ ಹೋಗಲು ಬಸ್ಸಿನ ಸೌಕರ್ಯ ಮಾಡಲಾಗಿದೆ ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಆರ್.ಜಿ. ಶೆಟಗಾರ ಹಾಗೂ ಮಹಾಸಭಾದ ರಾಜ್ಯ ಸಂಚಾಲಕ ರವೀಂದ್ರ ಶಾಬಾದಿ ತಿಳಿಸಿದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…