ಹೈದರಾಬಾದ್ ಕರ್ನಾಟಕ

ಜಾಗತಿಕ ತಲ್ಲಣಗಳ ಪರಿಹಾರಕ್ಕೆ ಬುದ್ಧನ ತತ್ವ ಅಗತ್ಯ

ಕಲಬುರಗಿ: ಹಿಂಸೆ, ಅನ್ಯಾಯ, ಅಶಾಂತಿ, ಶೋಷಣೆ, ಭಯೋತ್ಪಾದನೆಯಂತಹ ಜಾಗತಿಕ ತಲ್ಲಣಗಳಿಂದ ಬಳಲುತ್ತಿರುವ ಪ್ರಸ್ತುತ ಸಮಾಜಕ್ಕೆ ಮಹಾತ್ಮ ಗೌತಮ ಬುದ್ಧ ಅವರು ಸಾವಿರಾರು ವರ್ಷಗಳ ಹಿಂದೆಯೇ ನೀಡಿರುವ ಹಾಗೂ ಅವುಗಳನ್ನು ಆಚರಿಸಿ ತೋರಿಸಿರುವ ತತ್ವಗಳು ಔಷಧಿಯಂತೆ ಕಾರ್ಯಮಾಡುತ್ತವೆ ಎಂದು ಸಮಾಜ ಸೇವಕ, ನ್ಯಾಯವಾದಿ ಡಾ.ಸುನೀಲಕುಮಾರ ಎಚ್.ವಂಟಿ ಹೇಳಿದರು.

ನಗರದ ಜಗತ್ ವೃತ್ತದ ಭೀಮನಗರದಲ್ಲಿರುವ ಮಹಾತ್ಮ ಗೌತಮ ಬುದ್ಧ ಪ್ರತಿಮೆಯ ಆವರಣದಲ್ಲಿ ‘ಜೈ ಭೀಮ ಸೇನಾ ಸೇವಾ ಸಂಘ’, ‘ಬಸವೇಶ್ವರ ಸಮಾಜ ಸೇವಾ ಬಳಗ’, ‘ಡಾ.ಬಿ.ಆರ್.ಅಂಬೇಡ್ಕರ್ ಇಂಟಿಗ್ರೇಟೆಡ್ ಸಂಸ್ಥೆ’, ‘ಹೈ.ಕ. ಸಿದ್ದಾರ್ಥ ಸೇವಾ ಸಂಘ’ ಮತ್ತು ‘ಕನ್ನಡ ಜಾನಪದ ಪರಿಷತ್’ನ ಜಿಲ್ಲಾ ಘಟಕ ಇವುಗಳ ವತಿಯಿಂದ ಗುರುವಾರ ಜರುಗಿದ 2568ನೇ ಬುದ್ಧ ಪೂರ್ಣಿಮೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಮುಖಂಡ ಅಶ್ವಿನ ಸಂಕಾ, ಬಸವೇಶ್ವರ ಸಮಾಜ ಸೇವಾ ಬಳಗದ ಅಧ್ಯಕ್ಷ ಎಚ್.ಬಿ.ಪಾಟೀಲ ಮಾತನಾಡಿ, ಪ್ರಸ್ತುತ ಸಮಾಜದಲ್ಲಿಯೂ ಜನರು ಮೌಢ್ಯತೆ, ಕಂದಾಚಾರ, ಅಂಧಶೃದ್ಧೆಗಳಂತಹ ಆಚರಣೆಯಲ್ಲಿರುವುದು ಬೇಸರದ ಸಂಗತಿಯಾಗಿದ್ದು, ಇಂತಹ ಅನಿಷ್ಠತೆಗಳಿಂದ ಹೊರಬರಬೇಕು. ವೈಚಾರಿಕತೆ ಮೈಗೂಡಿಸಿಕೊಳ್ಳಬೇಕು. ಬುದ್ಧ-ಬಸವ-ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ತತ್ವಗಳು ಅಳವಡಿಸಿಕೊಳ್ಳಬೇಕು. ‘ಬುದ್ಧ’ ಎಂದರೆ ‘ಶಾಂತಿ’, ‘ಜ್ಞಾನ’ದ ಸಂಕೇತವಾಗಿದ್ದಾರೆ. ಅವರ ತತ್ವದ ಮಹಾ ಬೆಳಕಿನಲ್ಲಿ ಸಾಗಿದರೆ ಬದುಕು ಸುಂದರವಾಗುತ್ತದೆ. ಬುದ್ಧನ ಸಂದೇಶ ಪಾಲಿಸುವುದು ತುಂಬಾ ಅಗತ್ಯವಾಗಿದೆ ಎಂದು ನುಡಿದರು.

ಕಜಾಪ ಜಿಲ್ಲಾಧ್ಯಕ್ಷ ಎಂ.ಬಿ.ನಿಂಗಪ್ಪ ಅವರು ಬುದ್ಧ ವಂದನೆ ನಡೆಸಿಕೊಟ್ಟು, ಬುದ್ಧನ ಕುರಿತು ಸ್ವರಚಿತ ಗೀತೆಯನ್ನು ಹಾಡಿದರು. ಈಶ್ವರ ಫರತಾಬಾದ, ಭಜರಂಗ ಗಾಯಕವಾಡ, ನಂದಕುಮಾರ ತಳಕೇರಿ, ಶ್ರೀಕಾಂತ ವಂಟಿ, ಕುನಾಲ್ ಧನ್ನಾಕರ್, ನಾಗರಾಜ ಪುಟಗಿ, ಜಗದೀಶ ಪುಟಗಿ, ಸಿದ್ದಾರ್ಥ ಸಂಕಾ, ಮಂಜುನಾಥ ಸಂಕಾ, ಮಹಿಪಾಲ ಹುಬಳಿ, ಅಕ್ಷಯ ದರ್ಗಿ, ಸಂಜು ಗೋಳಾ, ಗಣೇಶ ಪ್ರಸಾದ, ಸತೀಶ್ ಕಡೂಣ, ಮಹಾಂತೇಶ ಕೂಡಿ, ಸುಜಯ್ ಎಸ್.ವಂಟಿ, ಕಾಂತು ಪಟ್ಟಣಕರ್ ಸೇರಿದಂತೆ ಇನ್ನಿತರರು ಹಾಜರಿದ್ದರು. ನಂತರ ಪ್ರಸಾದ ವಿತರಣೆ ಜರುಗಿತು.

emedialine

Recent Posts

ಪ್ರೊ.ಗಾದಗೆ ಮುಡಿಗೇರಿದ ಐಎಸ್ ಟಿಇ ಫೆಲೋಶಿಪ್

ಕಲಬುರಗಿ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಕಲಬುರಗಿ ಪ್ರಾದೇಶಿಕ ಕೇಂದ್ರದ ನಿರ್ದೇಶಕ ಪ್ರೊ.ಬಸವರಾಜ ಗಾದಗೆ ಅವರು ಭಾರತೀಯ ತಾಂತ್ರಿಕ ಶಿಕ್ಷಣ…

5 hours ago

ದಲಿತ ಸೇನೆಯ ಜೇವರ್ಗಿ ತಾಲೂಕು ಪದಾಧಿಕಾರಿಗಳ ಆಯ್ಕೆ

ಜೇವರ್ಗಿ: ದಲಿತ ಸೇನೆ ರಾಜ್ಯಾಧ್ಯಾಕ್ಷರಾದ ಶ್ರೀ ಹಣಮಂತ ಯಳಸಂಗಿ ಅವರ ಆದೇಶದ ಮೇರೆಗೆ ಇಂದು ಜೇವರ್ಗಿಯ ಐಬಿ ಯಲ್ಲಿ ಕರೆದ…

5 hours ago

ಜೂನ್ 30 ರಂದು ರಾಜ್ಯ ಮಟ್ಟದ ಮಡಿವಾಳರ ವಧು-ವರರ ಅನ್ವೇಷಣೆ

ಕಲಬುರಗಿ: ರಾಜ್ಯ ಮಟ್ಟದ ಮಡಿವಾಳರ ವಧು-ವರರ ಅನ್ವೇಷಣೆಯನ್ನು ಕರ್ನಾಟಕ ರಾಜ್ಯ ಮಡಿವಾಳರ ಸಂಘ ಹಾಗೂ ಜಿಲ್ಲಾ ಮಡಿವಾಳರ ಸಂಘದ ಸಹಯೋಗದೊಂದಿಗೆ…

6 hours ago

ಶುಕ್ಲಾ ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗದ ನಿಮಿತ್ತ ವಿದ್ಯಾರ್ಥಿಗಳ ಯೊಗಾಸನ

ಕಲಬುರಗಿ: ನಗರದ ಶಾಹಬಜಾರ್‍ನಲ್ಲಿರುವ ಶುಕ್ಲಾ ಪೂರ್ವ ಪ್ರಾಥಮಿಕ ಮತ್ತು ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ನಿಮಿತ್ತ ಶಾಲೆಯ…

6 hours ago

ಚಿಗರಿಹಾಳ:ದಿ.ರಾಜಾ ವೆಂಕಟಪ್ಪ ನಾಯಕ ವೃತ್ತ ಉದ್ಘಾಟನೆ

ಸುರಪುರ: ತಾಲೂಕಿನ ಚಿಗರಿಹಾಳ ಗ್ರಾಮದಲ್ಲಿ ಶಾಸಕ ದಿ.ರಾಜಾ ವೆಂಕಟಪ್ಪ ನಾಯಕ ಅವರ ವೃತ್ತ ಉದ್ಘಾಟನೆ ಕಾರ್ಯಕ್ರಮ ನಡೆಸಲಾಗಿದೆ. ಗ್ರಾಮದಲ್ಲಿ ನೂತನವಾಗಿ…

6 hours ago

ಹುಣಸಿಹೊಳೆ:ಕಣ್ವ ಮಠದಲ್ಲಿ ವಿದ್ಯಾ ತಪೋನಿಧಿ ತೀರ್ಥರ ಆರಾಧನೆ

ಸುರಪುರ: ತಾಲ್ಲೂಕಿನ ಹುಣಸಿಹೊಳೆ ಗ್ರಾಮದ ಕಣ್ವಮಠದಲ್ಲಿ ಶ್ರೀಮಠದ ಪೀಠಾಧಿಪತಿಗಳಾಗಿದ್ದ ವಿದ್ಯಾತಪೋನಿಧಿ ತೀರ್ಥರ ಆರಾಧನೆ ಕಾರ್ಯಕ್ರಮ ನಡೆಸಲಾಯಿತು. ಈ ಸಂದರ್ಭದಲ್ಲಿ ಕಣ್ವಮಠದ…

6 hours ago