ಬಸವತತ್ವ ಪ್ರಚಾರ ಪ್ರಸಾರಕ್ಕೆ ಜೀವನವನ್ನೇ ಮುಡುಪಾಗಿಟ್ಟಿದ್ದ ಮಾತೆ ಅಕ್ಕ ಅನ್ನಪೂರ್ಣ

ಶಹಾಬಾದ: ಬಸವತತ್ವ ಪ್ರಚಾರ ಪ್ರಸಾರಕ್ಕೆ ತಮ್ಮ ಜೀವನವನ್ನೇ ಮುಡುಪಾಗಿಟ್ಟಿರುವ ಮಾತೆ ಅಕ್ಕ ಅನ್ನಪೂರ್ಣತಾಯಿವರ ಅಗಲಿಕೆಯಿಂದ ಈ ಭಾಗದ ಬಸವ ಚೇತನವನ್ನು ಕಳೆದುಕೊಂಡಂತಾಗಿದೆ ಎಂದು ಶಿಕ್ಷಕ ಗಿರಿಮಲ್ಲಪ್ಪ ವಳಸಂಗ ಹೇಳಿದರು.

ಅವರು ಶುಕ್ರವಾರ ನಗರದ ಹಳೆಶಹಾಬಾದನ ವೀರಭದ್ರೇಶ್ವರ ದೇವಸ್ಥಾನದಲ್ಲಿ ಬಸವಾದಿ ಶರಣರ ಒಕ್ಕೂಟ ಸಮಿತಿ ವತಿಯಿಂದ ಆಯೋಜಿಸಲಾದ ಲಿಂಗೈಕ್ಯ ಅಕ್ಕ ಅನ್ನಪೂರ್ಣ ತಾಯಿಯವರ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು.

ನಾಡಿನಲ್ಲಿ ಹಾಗೂ ದೇಶ-ವಿದೇಶಗಳಲ್ಲಿ ಬಸವ ಪ್ರಜ್ಞೆ ಜಾಗೃತಗೊಳಿಸಿದ ಮಹಾನ್ ಚೇತನ ಅವರಾಗಿದ್ದರು. ಅವರ ಅಗಲಿಕೆಯಿಂದ ತುಂಬಲಾರದ ನಷ್ಟವಾಗಿದೆ.ಅಕ್ಕಾ ಅನ್ನಪೂರ್ಣ ತಾಯಿಯವರು ಬಸಣ್ಣನವರ ವಚನಗಳೇ ಉಸಿರಾಗಿಸಿಕೊಂಡು ಸಮಾಜ ಪರಿವರ್ತನೆಗಾಗಿ ಹಗಲಿರುಳು ಶ್ರಮಿಸಿದವರು, ಮಾತೆ ಮಹಾದೇವಿ ಅವರ ಪ್ರವಚನದಿಂದ ಪ್ರೇರಣೆಗೊಂಡು ಬಸವ ತತ್ವಕ್ಕೆ ತಮ್ಮನ್ನು ತಾವು ಸಮರ್ಪಿಸಿಕೊಂಡರು.

ಲಿಂಗಾಯತ ಮಹಾಮಠದ ಪೀಠಾಧ್ಯಕ್ಷರು ಆಗಿ, ಬಸವ ತತ್ವವನ್ನೇ ತಮ್ಮ ಜೀವನದ ಉಸಿರಾಗಿಸಿಕೊಂಡು ಬೀದರನಲ್ಲಿ ಬಸವ ಸೇವಾ ಪ್ರತಿμÁ್ಠಪನದ ಮೂಲಕ ಬಸವ ಜ್ಯೋತಿ ಪ್ರಜ್ವಲಿಸುವಂತೆ ಮಾಡಿದ ಪೂಜ್ಯ ಅಕ್ಕ ಅನ್ನಪೂರ್ಣ ತಾಯಿ ಅವರು ಲಿಂಗೈಕ್ಯರಾಗಿರುವುದು ಬಸವ ತತ್ವದ ಕೊಂಡಿ ಕಳಚಿಕೊಂಡಂತಾಗಿದೆ ಎಂದರು.

ಶರಣ ಶಾಂತಪ್ಪ ಹಡಪದ ಮಾತನಾಡಿ, ಬಸವತತ್ವ ಪ್ರಚಾರ ಮತ್ತು ಪ್ರಸಾರಕ್ಕೆ ಅಕ್ಕ ಅನ್ನಪೂರ್ಣ ತಾಯಿ ಬದುಕು ಮುಡಿಪಾಗಿಟ್ಟಿದ್ದರು. ಕನ್ನಡತ್ವ, ಬಸವ ತತ್ವದ ಏಳಿಗೆಗಾಗಿಯೇ ಸಾಹಿತ್ಯ, ಸಮಾಜೋಧಾರ್ಮಿಕ ಸೇವೆಗಳ ಮೂಲಕ ಜಾತಿ, ವರ್ಗ, ವರ್ಣ, ಲಿಂಗಭೇದಗಳಿಲ್ಲದ ಸಮಸಮಾಜ ಕಟ್ಟಲು ಅಹರ್ನಿಶಿ ದುಡಿಯುತ್ತಲೇ ಜನಾನುರಾಗಿಯಾದವರು ಎಂದರು.

ಶರಣ ಶರಣಗೌಡ ಪಾಟೀಲ ಮಾತನಾಡಿ,ಅಕ್ಕ ಅನ್ನಪೂರ್ಣ ತಾಯಿ ಅವರು ಉತ್ತಮ ಪ್ರವಚನಕಾರರು ಬಸವತತ್ವ ನಿಷ್ಠರಾಗಿದ್ದರು. ಅವರ ಅಕಾಲಿಕ ಅಗಲಿಕೆ ಅಸಂಖ್ಯಾತ ಬಸವ ಭಕ್ತರಿಗೆ ನೋವು ತರಿಸಿದೆ. ಅಕ್ಕ ಅನ್ನಪೂರ್ಣ ತಾಯಿ ಅಗಲಿಕೆ ದುಃಖವನ್ನು ತಡೆದು ಕೊಳ್ಳುವ ಶಕ್ತಿ ವಿಶ್ವಗುರು ಬಸವಣ್ಣನವರು ಕರುಣಿಸಲಿ ಎಂದು ಪ್ರಾರ್ಥಿಸಿದರು.

ಈ ಸಂದರ್ಭದಲ್ಲಿ ಬಸವರಾಜ ಪಾಟೀಲ,ಚನ್ನಮಲ್ಲಪ್ಪ ಸಿನ್ನೂರ್,ಕುಪೇಂದ್ರ ತುಪ್ಪದ್,ಅರುಣ ಜಾಯಿ,ಸಂತೋಷ ಪಾಟೀಲ ಸೇರಿದಂತೆ ಅನೇಕರು ಇದ್ದರು.

emedialine

Recent Posts

ಸುಗ್ರೀವಾಜ್ಞೆ ಮೂಲಕ ಒಳಮೀಸಲಾತಿ ಜಾರಿಗೊಳಿಸಲು ಆಗ್ರಹ

ಶಹಾಬಾದ: ಸುಗ್ರೀವಾಜ್ಞೆ ಮೂಲಕ ಕೂಡಲೇ ಒಳಮೀಸಲಾತಿ ಜಾರಿಗೊಳಿಸುವಂತೆ ಅಗ್ರಹಿಸಿ ದಲಿತ ಮಾದಿಗ ಸಮನ್ವಯ ಸಮಿತಿ(ಡಿಎಂಎಸ್‍ಎಸ್)ಯಿಂದ ಗ್ರೇಡ್-2 ತಹಶೀಲ್ದಾರ್ ಗುರುರಾಜ ಸಂಗಾವಿ…

36 mins ago

ಕಟ್ಟಡ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿವೇತನ ಬಿಡುಗಡೆಗೆ ಕಾರ್ಮಿಕರ ಆಗ್ರಹ

ಶಹಾಬಾದ: ಕಟ್ಟಡ ನಿರ್ಮಾಣ ಕಾರ್ಮಿಕರ ಮಕ್ಕಳಿಗೆ ನೀಡುವ ವಿದ್ಯಾರ್ಥಿವೇತನವನ್ನು ಶೀಘ್ರವೇ ಬಿಡುಗಡೆ ಮಾಡಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು…

38 mins ago

ದಿಗ್ಗಾಂವ ಶ್ರೀ ಭಕ್ತರ ಕ್ಷಮೆಯಾಚಿಸಲಿ

ವಾಡಿ: ಶಿಲೆಗೆ ಪ್ರಾಣಪ್ರತಿಷ್ಠೆ ನೀಡಿ ಪೂಜೆಗೆ ಅರ್ಹವಾಗಿಸುವ ಭರದಲ್ಲಿ ಶಿವಲಿಂಗದ ಮೇಲೆ ಪಾದವಿಟ್ಟು ಅಸಂಖ್ಯಾತ ಭಕ್ತರ ಮನಸ್ಸಿಗೆ ನೋವುಂಟು ಮಾಡಿದ…

39 mins ago

ಶರಣಬಸವ ವಿಶ್ವವಿದ್ಯಾಲಯದಲ್ಲಿ 14ರಂದು ರಾಷ್ಟ್ರೀಯ ವಿಚಾರ ಸಂಕಿರಣ

ಕಲಬುರಗಿ; ಶರಣಬಸವ ವಿಶ್ವವಿದ್ಯಾಲಯ ಮತ್ತು ಶರಣಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯ ಜಂಟಿಯಾಗಿ, ನಗರದ ಶರಣಬಸವ ವಿಶ್ವವಿದ್ಯಾಲಯದ ಮುಖ್ಯ ಆವರಣದಲ್ಲಿರುವ ದೊಡ್ಡಪ್ಪ ಅಪ್ಪ…

2 hours ago

ಕಾ.ಸೀತಾರಾಮ ಯೇಚೂರಿಗೆ ಸಿಪಿಐಎಂ ಕಚೇರಿಯಲ್ಲಿ ಶೃದ್ಧಾಂಜಲಿ

ಕಲಬುರಗಿ: ಸಿಪಿಐಎಂ ಪಕ್ಷದ ಅಖಿಲ ಭಾರತ ಪ್ರದಾನ ಕಾರ್ಯದರ್ಶಿಗಳಾಗಿದ್ದ 72 ವಯಸ್ಸಿನ ಕಾ.ಸೀತಾರಾಮ ಯೇಚೂರಿಯವರು ಇಂದು ಸಂಜೆ ನಿಧನ ಹೊಂದಿದ್ದು,…

2 hours ago

ಕ್ರೀಡೆಗಳು ವಿದ್ಯಾರ್ಥಿಗಳನ್ನು ಸಧೃಡ ಆರೋಗ್ಯವಾಗಿ ಇಡುತ್ತವೆ

ಕಲಬುರಗಿ: ಕ್ರೀಡೆಗಳು ವಿದ್ಯಾರ್ಥಿಗಳು ಸದೃಢವಾಗಿ ಮತ್ತು ಆರೋಗ್ಯವಾಗಿರಲು ಸಹಾಯ ಮಾಡುತ್ತದೆ. ಅವರು ದೈನಂದಿನ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ಅನಿರೀಕ್ಷಿತ ರೋಗಗಳು…

2 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420