ಬಸವತತ್ವ ಪ್ರಚಾರ ಪ್ರಸಾರಕ್ಕೆ ಜೀವನವನ್ನೇ ಮುಡುಪಾಗಿಟ್ಟಿದ್ದ ಮಾತೆ ಅಕ್ಕ ಅನ್ನಪೂರ್ಣ

0
71

ಶಹಾಬಾದ: ಬಸವತತ್ವ ಪ್ರಚಾರ ಪ್ರಸಾರಕ್ಕೆ ತಮ್ಮ ಜೀವನವನ್ನೇ ಮುಡುಪಾಗಿಟ್ಟಿರುವ ಮಾತೆ ಅಕ್ಕ ಅನ್ನಪೂರ್ಣತಾಯಿವರ ಅಗಲಿಕೆಯಿಂದ ಈ ಭಾಗದ ಬಸವ ಚೇತನವನ್ನು ಕಳೆದುಕೊಂಡಂತಾಗಿದೆ ಎಂದು ಶಿಕ್ಷಕ ಗಿರಿಮಲ್ಲಪ್ಪ ವಳಸಂಗ ಹೇಳಿದರು.

ಅವರು ಶುಕ್ರವಾರ ನಗರದ ಹಳೆಶಹಾಬಾದನ ವೀರಭದ್ರೇಶ್ವರ ದೇವಸ್ಥಾನದಲ್ಲಿ ಬಸವಾದಿ ಶರಣರ ಒಕ್ಕೂಟ ಸಮಿತಿ ವತಿಯಿಂದ ಆಯೋಜಿಸಲಾದ ಲಿಂಗೈಕ್ಯ ಅಕ್ಕ ಅನ್ನಪೂರ್ಣ ತಾಯಿಯವರ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು.

Contact Your\'s Advertisement; 9902492681

ನಾಡಿನಲ್ಲಿ ಹಾಗೂ ದೇಶ-ವಿದೇಶಗಳಲ್ಲಿ ಬಸವ ಪ್ರಜ್ಞೆ ಜಾಗೃತಗೊಳಿಸಿದ ಮಹಾನ್ ಚೇತನ ಅವರಾಗಿದ್ದರು. ಅವರ ಅಗಲಿಕೆಯಿಂದ ತುಂಬಲಾರದ ನಷ್ಟವಾಗಿದೆ.ಅಕ್ಕಾ ಅನ್ನಪೂರ್ಣ ತಾಯಿಯವರು ಬಸಣ್ಣನವರ ವಚನಗಳೇ ಉಸಿರಾಗಿಸಿಕೊಂಡು ಸಮಾಜ ಪರಿವರ್ತನೆಗಾಗಿ ಹಗಲಿರುಳು ಶ್ರಮಿಸಿದವರು, ಮಾತೆ ಮಹಾದೇವಿ ಅವರ ಪ್ರವಚನದಿಂದ ಪ್ರೇರಣೆಗೊಂಡು ಬಸವ ತತ್ವಕ್ಕೆ ತಮ್ಮನ್ನು ತಾವು ಸಮರ್ಪಿಸಿಕೊಂಡರು.

ಲಿಂಗಾಯತ ಮಹಾಮಠದ ಪೀಠಾಧ್ಯಕ್ಷರು ಆಗಿ, ಬಸವ ತತ್ವವನ್ನೇ ತಮ್ಮ ಜೀವನದ ಉಸಿರಾಗಿಸಿಕೊಂಡು ಬೀದರನಲ್ಲಿ ಬಸವ ಸೇವಾ ಪ್ರತಿμÁ್ಠಪನದ ಮೂಲಕ ಬಸವ ಜ್ಯೋತಿ ಪ್ರಜ್ವಲಿಸುವಂತೆ ಮಾಡಿದ ಪೂಜ್ಯ ಅಕ್ಕ ಅನ್ನಪೂರ್ಣ ತಾಯಿ ಅವರು ಲಿಂಗೈಕ್ಯರಾಗಿರುವುದು ಬಸವ ತತ್ವದ ಕೊಂಡಿ ಕಳಚಿಕೊಂಡಂತಾಗಿದೆ ಎಂದರು.

ಶರಣ ಶಾಂತಪ್ಪ ಹಡಪದ ಮಾತನಾಡಿ, ಬಸವತತ್ವ ಪ್ರಚಾರ ಮತ್ತು ಪ್ರಸಾರಕ್ಕೆ ಅಕ್ಕ ಅನ್ನಪೂರ್ಣ ತಾಯಿ ಬದುಕು ಮುಡಿಪಾಗಿಟ್ಟಿದ್ದರು. ಕನ್ನಡತ್ವ, ಬಸವ ತತ್ವದ ಏಳಿಗೆಗಾಗಿಯೇ ಸಾಹಿತ್ಯ, ಸಮಾಜೋಧಾರ್ಮಿಕ ಸೇವೆಗಳ ಮೂಲಕ ಜಾತಿ, ವರ್ಗ, ವರ್ಣ, ಲಿಂಗಭೇದಗಳಿಲ್ಲದ ಸಮಸಮಾಜ ಕಟ್ಟಲು ಅಹರ್ನಿಶಿ ದುಡಿಯುತ್ತಲೇ ಜನಾನುರಾಗಿಯಾದವರು ಎಂದರು.

ಶರಣ ಶರಣಗೌಡ ಪಾಟೀಲ ಮಾತನಾಡಿ,ಅಕ್ಕ ಅನ್ನಪೂರ್ಣ ತಾಯಿ ಅವರು ಉತ್ತಮ ಪ್ರವಚನಕಾರರು ಬಸವತತ್ವ ನಿಷ್ಠರಾಗಿದ್ದರು. ಅವರ ಅಕಾಲಿಕ ಅಗಲಿಕೆ ಅಸಂಖ್ಯಾತ ಬಸವ ಭಕ್ತರಿಗೆ ನೋವು ತರಿಸಿದೆ. ಅಕ್ಕ ಅನ್ನಪೂರ್ಣ ತಾಯಿ ಅಗಲಿಕೆ ದುಃಖವನ್ನು ತಡೆದು ಕೊಳ್ಳುವ ಶಕ್ತಿ ವಿಶ್ವಗುರು ಬಸವಣ್ಣನವರು ಕರುಣಿಸಲಿ ಎಂದು ಪ್ರಾರ್ಥಿಸಿದರು.

ಈ ಸಂದರ್ಭದಲ್ಲಿ ಬಸವರಾಜ ಪಾಟೀಲ,ಚನ್ನಮಲ್ಲಪ್ಪ ಸಿನ್ನೂರ್,ಕುಪೇಂದ್ರ ತುಪ್ಪದ್,ಅರುಣ ಜಾಯಿ,ಸಂತೋಷ ಪಾಟೀಲ ಸೇರಿದಂತೆ ಅನೇಕರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here