ಬಿಸಿ ಬಿಸಿ ಸುದ್ದಿ

371ನೇ ಜೇ ಕಲಂ ಸಂವಿಧಾನ ವಿರೋಧಿ ಪ್ರತಿಭಟನೆಗೆ ಕಲ್ಯಾಣದಲ್ಲಿ ಉಗ್ರ ಹೋರಾಟಕ್ಕೆ ನಿರ್ಧಾರ

ಕಲಬುರಗಿ: ಪ್ರಾದೇಶಿಕ ಅಸಮಾನತೆಯ ನಿವಾರಣೆಗೆ ಜಾರಿಗೆ ಬಂದ ಕಲ್ಯಾಣ ಕರ್ನಾಟಕದ ಸಂವಿಧಾನದ 371ನೇ ಜೇ ಕಲಂ ವಿರೋಧಿ ಮತ್ತು ಸಂವಿಧಾನ ವಿರೋಧಿ ಪ್ರತಿಭಟನೆಗೆ ತಕ್ಕ ಉತ್ತರ ನೀಡಲು ಎಳು ಜಿಲ್ಲೆಗಳಲ್ಲಿ ಉಗ್ರ ಹೋರಾಟ ನಡೆಸಲು ತಜ್ಘರ, ಪರಿಣಿತರ, ಬುದ್ಧಿಜೀವಿಗಳ, ಹೋರಾಟಗಾರರ,ಯುವ , ವಿದ್ಯಾರ್ಥಿಗಳ ಮತ್ತು ಆಯಾ ಕ್ಷೇತ್ರದ ಗಣ್ಯರುಗಳ ದುಂಡು ಮೇಜಿನ ಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯ ಕೈಗೊಳ್ಳಲಾಯಿತು.

ನಗರದ ಹಿಂದಿ ಪ್ರಚಾರ ಸಭಾದ ಸಭಾಂಗಣದಲ್ಲಿ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ವತಿಯಿಂದ ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಲಕ್ಷ್ಮಣ ದಸ್ತಿಯವರ ಅಧ್ಯಕ್ಷತೆಯಲ್ಲಿ ನಡೆದ ದುಂಡು ಮೇಜಿನ ಸಭೆಯಲ್ಲಿ ಬೆಂಗಳೂರಿನಲ್ಲಿ ಕೆಲವು ಸಂವಿಧಾನ ವಿರೋಧಿ ಶಕ್ತಿಗಳು ಬರುವ ಜೂನ್ 1ನೇ ತಾರೀಕಿನಂದು ಹಮ್ಮಿಕೊಂಡಿರುವ ಪ್ರತಿಭಟನೆ ತೀರ್ವವಾಗಿ ಖಂಡಿಸಿ ಖಂಡನಾ ನಿರ್ಣಯ ರಾಜ್ಯಪಾಲರಿಗೆ ಕಳುಹಿಸಲು ಮತ್ತು ಕಲ್ಯಾಣ ಕರ್ನಾಟಕದ ಸಚಿವರು,ಸಂಸದರ, ಶಾಸಕರುಗಳ ಸಭೆ ನಡೆಸಿ ಆದಷ್ಟು ಶೀಘ್ರ ಮುಖ್ಯಮಂತ್ರಿಗೆ ಭೇಟಿ ಮಾಡಿ ರಾಜ್ಯ ಒಡೆಯುವ ಮತ್ತು ಸಂವಿಧಾನ ವಿರೋಧಿ ಶಕ್ತಿಗಳ ಬೇಡಿಕೆಗೆ ತಿರಸ್ಕರಿಸಲು ಅದರಂತೆ ಇಂಥಾ ಸಂವಿಧಾನ ವಿರೋಧಿ ಹೋರಾಟಕ್ಕೆ ಭವಿಷ್ಯದಲ್ಲಿ ಅವಕಾಶ ನೀಡದಿರಲು ಒತ್ತಡ ತರಲು ಕಲ್ಯಾಣದ ಜನ ಪ್ರತಿನಿಧಿಗಳಿಗೆ ಆಗ್ರಹಿಸಲಾಯಿತು.ಆದಷ್ಟು ಶೀಘ್ರ ಕಲ್ಯಾಣ ಕರ್ನಾಟಕದ ಸಚಿವರು ಮತ್ತು ಜನಪ್ರತಿನಿಧಿಗಳಿಗೆ ಸಂಪರ್ಕಿಸಿ ರಾಜ್ಯಪಾಲರಿಗೆ, ಮುಖ್ಯಮಂತ್ರಿಗೆ ಭೇಟಿ ಮಾಡುವದು ಅದರಂತೆ ಎಳು ಜಿಲ್ಲೆಗಳಿಗೆ ಭೇಟಿ ನೀಡಿ ಉಗ್ರ ಹೋರಾಟ ಹಮ್ಮಿಕೊಳ್ಳಲು ಇಂದಿನ ದುಂಡು ಮೇಜಿನ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಸಭೆಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ 1956 ರಿಂದ ನಿರಂತರವಾಗಿ ಆಗುತ್ತಿರುವ ಅನ್ಯಾಯ ನಿರ್ಲಕ್ಷ್ಯ ಮತ್ತು ಮಲತಾಯಿ ಧೋರಣೆ ಆಗಿರುವ ಬಗ್ಗೆ ಅಂಕಿ ಅಂಶಗಳ ಸಹಿತ ವಿವರಿಸಿ , ನಿರಂತರ ಹೋರಾಟ ಮತ್ತು ರಾಜಕೀಯ ಇಚ್ಛಾಶಕ್ತಿಯಿಂದ ಪಡೆದ ಸಂವಿಧಾನದ 371ನೇ ಜೇ ಕಲಂ ಬಗ್ಗೆ ಪ್ರೊ.ಬಸವರಾಜ ಕುಮ್ಮನೂರ್,ಡಾ.ಸಂಗೀತಾ ಕಟ್ಟಿ,ದೀಪಕ ಘಾಲಾ, ಡಾ.ಶರಣಪ್ಪ ಸೈದಾಪುರ ,ಡಾ ಗಾಂಧೀಜಿ ಮೋಳಕೇರಿ,ಪ್ರೊ.ಗುಲಶೆಟ್ಟಿ,ಡಾ.ಮಾಜಿದ ದಾಗಿ,ಪೊ.ಶಿವರಾಜ ಪಾಟೀಲ ವಿವರಿಸಿದರೆ ಮುಂದಿನ ಹೋರಾಟದ ಬಗ್ಗೆ ಸೈಯದ್ ಸಜ್ಜಾದ ಅಲಿ,ಮನೀಷ್ ಜಾಜು,ಲಿಂಗರಾಜ ಸಿರಗಾಪೂರ, ಮಂಜುನಾಥ ನಾಲವರಕರ್, ಸುಭಾಷ್ ಶೀಲವಂತ, ಬಿ.ಬಿ.ನಾಯಕ, ಶಿವಲಿಂಗಪ್ಪ ಭಂಡಕ, ದತ್ತು ಭಾ‌ಸಗಿ, ಮುತ್ತಣ್ಣ ನಾಡಗೇರಿ, ಗೋಪಾಲ ನಾಟಿಕರ್, ಮನೋಹರ್ ಬೀರನೋರ, ಭೀಮರಾಯ ಕಂದಳ್ಳಿ,ರಾಜಶೇಖರ ಹೀರೆಮಠ,ವಿನೋದ, ಮಹೆಬೂಬ್, ಅಸ್ಲಂ ಚೌಂಗೆ, ಅಬ್ದುಲ್ ರಹೀಂ, ಆನಂದ ದೇಶಪಾಂಡೆ, ಸೇರಿದಂತೆ ಅನೇಕರು ಮಾತನ್ನಾಡಿದರು.

ದುಂಡು ಮೇಜಿನ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಲಕ್ಷ್ಮಣ ದಸ್ತಿಯವರು ಕಲ್ಯಾಣ ವಿರೋಧಿ ಮತ್ತು ಕಲ್ಯಾಣ ಕರ್ನಾಟಕದ 371ನೇ ಜೇ ಕಲಂ ಸಂವಿಧಾನ ವಿರೋಧಿ ಶಕ್ತಿಗಳ ಹೋರಾಟಕ್ಕೆ ನಾವು ಸವಾಲಾಗಿ ಸ್ವೀಕರಿಸಿ ಇದಕ್ಕೆ ಪ್ರತಿಯಾಗಿ ಉಗ್ರ ಹೋರಾಟ ನಡೆಸಲು ಎಳು ಜಿಲ್ಲೆಗಳಿಗೆ ಭೇಟಿ ನೀಡಿ ಶಿಕ್ಷಣ ಸಂಸ್ಥೆಗಳ ಮೂಲಕ, ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಎಲ್ಲಾ ಕ್ಷೇತ್ರದ ಜನರಲ್ಲಿ ಜಾಗೃತಿ ಮೂಡಿಸಿ ಉಗ್ರ ಹೋರಾಟ ನಡೆಸಲು ಸಿದ್ಧರಾಗಬೇಕು,

ಕಲ್ಯಾಣ ಕರ್ನಾಟಕದ ಜನಪರ, ಕನ್ನಡ ಪರ, ದಲಿತ ಹಿಂದುಳಿದ ಅಲ್ಪಸಂಖ್ಯಾತರ ಯುವ ವಿದ್ಯಾರ್ಥಿ ಪರ ಕಾರ್ಮಿಕ,ರೈತಪರ ವಾಣಿಜ್ಯ ಕೈಗಾರಿಕಾ ಸಂಸ್ಥೆಗಳು ಬೆಂಗಳೂರಿನಲ್ಲಿ ನಡೆಸುತ್ತಿರುವ ಕಲ್ಯಾಣ ಕರ್ನಾಟಕ ವಿರೋಧಿ ಮತ್ತು ಸಂವಿಧಾನ ವಿರೋಧಿ ಶಕ್ತಿಗಳ ಹೋರಾಟಕ್ಕೆ ಬಲವಾಗಿ ಖಂಡಿಸಲು ವಿನಂತಿ ಮಾಡಿಕೊಂಡರು.

ದುಂಡು ಮೇಜಿನ ಸಭೆಯ ಅಧ್ಯಕ್ಷತೆ ವಹಿಸಿದ ಸಮಿತಿಯ ಅಧ್ಯಕ್ಷರಿಗೆ ಸಮರೋಪಾದಿಯಲ್ಲಿ ಮುಂದಿನ ಹೋರಾಟದ ರೂಪುರೇಷೆಗಳನ್ನು ಹಮ್ಮಿಕೊಳ್ಳಲು ಸಭ ಸರ್ವಾನುಮತದಿಂದ ಅಧಿಕಾರ ನೀಡಲಾಯಿತು.

ಈ ದುಂಡು ಮೇಜಿನ ಸಭೆಯಲ್ಲಿ ಅಶೋಕ ಗುರೂಜಿ,ಮಲ್ಲಿನಾಥ ಸಂಗಶೆಟ್ಟಿ,ಬಾಬಾ ಫಕ್ರುದ್ದೀನ್, ಶರಣಬಸಪ್ಪ ಕುರಿಕೋಟಾ,ಗಿರೀಶ ಗೌಡ,ರಾಜು ಜೈನ,ಆನಂದ ಕಪನೂರ,ಬಸವರಾಜ ಕೋಣಿನ, ಶರಣಪ್ಪ ಕಿರಣಗಿ, ಶಿವಕುಮಾರ್ ಪಾಟೀಲ, ವೀರಶೆಟ್ಟಿ ಹುಡುಗಿ,ಪೊ.ಮಂಜೂರ್ ಅಹ್ಮದ್,ಸಾಬಿರ ಅಲಿ, ಬಸವರಾಜ ಕಲ್ಯಾಣಿ, ತುಕಾರಾಂ ರಾಠೋಡ್, ಅಮಿತ್ ಪರಮೇಶ್ವರ ಸೇರಿದಂತೆ ನೂರಾರು ಆಯಾ ಕ್ಷೇತ್ರದ ಗಣ್ಯರು, ನಾಗರಿಕರು, ಯುವಕರು ವಿಧ್ಯಾರ್ಥಿಗಳು ಭಾಗವಹಿಸಿದರು.

emedialine

Recent Posts

ಕೃಷ್ಣ ಮಂದಿರದಲ್ಲಿ ಪಲಿಮಾರು ಮಠದ ಸಂಸ್ಥಾನ ಪೂಜೆ

ಕಲಬುರಗಿ; ಅಖಿಲ ಭಾರತ ಮಾಧ್ವ ಮಹಾಮಂಡಲ,ಶ್ರೀ ಜಯತೀರ್ಥ ವಿದ್ಯಾರ್ಥಿ ನಿಲಯ, ಶ್ರೀ ಕೃಷ್ಣ ಮಂದಿರ ಹಾಗು ಹನುಮ ಭೀಮ ಮಧ್ವರ…

57 mins ago

ಚಿಂಚೋಳಿ: ವೈದ್ಯಕೀಯ ದ್ರವ ಆಮ್ಲಜನಕ ಸೋರಿಕೆ ಬಗ್ಗೆ ಡಿ.ಎಚ್.ಓ ಸ್ಪಷ್ಟನೆ

ಕಲಬುರಗಿ: ಚಿಂಚೋಳಿ ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ದ್ರವ ಆಮ್ಲಜನಕ ಟ್ಯಾಂಕ್ ಸ್ಪೋಟವಾಗಿದೆ ಎಂದು ಸುಳ್ಳು ಸುದ್ದಿ ಬಿತ್ತರವಾಗುತ್ತಿದ್ದು, ಇದಕ್ಕೆ…

4 hours ago

ಶರಣ ಮಾರ್ಗಕ್ಕೆ ನಿಮ್ಮೆಲ್ಲರ ಸಹಾಯ ಸಹಕಾರ ಅಗತ್ಯ: 10ನೇ ವರ್ಷದ ಹೊಸ್ತಿಲಲ್ಲಿ ನಿಂತು ನಿಮ್ಮೊಂದಿಗಿಷ್ಟು

ಈ ಜೂನ್ - ಜುಲೈ ತಿಂಗಳು ಬಂದಿತೆಂದರೆ ಸಾಕು ನಮ್ಮ ಇಡೀ ಕುಟುಂಬದ ಬಂಧು ಬಾಂಧವರಿಗೆ ಒಂದೆಡೆ ದುಃಖ, ತಳವಳ,…

5 hours ago

ಜಾನಪದ ಜೀವನ ಮೌಲ್ಯಗಳ ಪ್ರತೀಕ

ಸುರಪುರ; ಜೀವನದ ಮೌಲ್ಯಗಳನ್ನು ಎತ್ತಿ ಹಿಡಿಯುವ ಶಕ್ತಿ ಜಾನಪದ ಸಾಹಿತ್ಯ, ಕಲೆಗೆ ಇದ್ದು, ಜಾನಪದ ಸಾರ್ವಕಾಲಿಕ ಸತ್ಯವಾಗಿದೆ ಎಂದು ಲಕ್ಷ್ಮೀಪುರ…

18 hours ago

ಸುರಪುರ:ನೂತನ ಮರಗಮ್ಮ ದೇವಿ ರಜತ ಮೂರ್ತಿ ಪ್ರತಿಷ್ಠಾಪನೆ

ಸುರಪುರ: ತಿಮ್ಮಾಪುರದ ಮುಖ್ಯ ರಸ್ತೆಯಲ್ಲಿ ನಿರ್ಮಾಣವಾದ ನೂತನ ಮರಗಮ್ಮ ದೇವಿಯ ದೇವಸ್ಥಾನ ಲೋಕಾರ್ಪಣೆ , ಮರಗಮ್ಮ ದೇವಿಯ ರಜತ ಮೂರ್ತಿಯ…

19 hours ago

ಜುಲೈ 8 ರಂದು ಕಾಳಗಿಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ

ಕಲಬುರಗಿ: ನಗರದ ಪ್ರತಿಷ್ಠಿತ ಸುಬೇದಾರ ಕೇರ್ ಹಾಸ್ಪಿಟಲ್ ವತಿಯಿಂದ ಕಾಳಗಿ ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಜುಲೈ 8 ರಂದು…

20 hours ago