ಅಫಜಲಪುರ: ಪಟ್ಟಣದ ಅಂಗನವಾಡಿ ಕೇಂದ್ರದಲ್ಲಿ ಅಂತರಾಷ್ಟ್ರೀಯ ಮುಟ್ಟಿನ ನೈರ್ಮಲ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಋತುಚಕ್ರ ಎನ್ನುವುದು ಮಹಿಳೆಯರಿಗೆ ಸಹಜ ಕ್ರಿಯೆ ಇದನ್ನು ಮೌಲ್ಯಕ್ಕೆ ಹೋಲಿಸಿ ಅನಾರೋಗ್ಯಕ್ಕೆ ತುತ್ತಾಗುವುದು ಸರಿಯಲ್ಲ ಎಂದು ಮೊದಲಿಗೆ ದೀಪ ಬೆಳಗಿಸಿ ಮಾತಾನಾಡಿದ ಸಮಾಜ ಸೇವಕಿ ಪ್ರಭಾವತಿ ಮೇತ್ರಿ ಅವರು ತಿಳಿಸಿದರು.
ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಲಬುರಗಿ. ಜಿಲ್ಲಾ ಅರ್ ಸಿ ಹಚ್ ಕಾರ್ಯಾಲಯ ಕಲಬುರಗಿ ಮತ್ತು ರಾಷ್ಟ್ರೀಯ ಕಿಶೋರ ಸ್ವಾಸ್ಥ್ಯ ಕಾರ್ಯಕ್ರಮ ಅಫಜಲಪುರ. ಅಡಿಯಲ್ಲಿ ವಿಶ್ವ ಋತುಚಕ್ರ ನೈರ್ಮಲ್ಯ ದಿನ ಅಂಗವಾಗಿ ಹದಿಹರೆಯದವರಿಗೆ ಋತುಚಕ್ರದ ಮತ್ತು ವೈಯುಕ್ತಿಕ ಮಹತ್ವದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಹೆಣ್ಣು ಮಕ್ಕಳು ಋತುಚಕ್ರ ವಿಚಾರದಲ್ಲಿ ಮುಜುಗರ ಪಟ್ಟಿಕೊಳ್ಳದೆ ನ್ಯಾಪ್ ಕಿನ್ ಬಳಸುವುದರಿಂದ ಸೋಂಕಿಗೆ ಒಳಗಾಗದಂತೆ ಜಾಗ್ರತೆ ಹೊಂದಬಹುದು ಸೂಕ್ತ ಸಮಯಕ್ಕೆ ಉತ್ತಮ ಆಹಾರ ಸೇವನೆ ಮಾಡಿಕೊಂಡು ದೇಹಕ್ಕೆ ಬೇಕಾಗುವ ಪೌಷ್ಟಿಕಾಂಶಗಳನ್ನು ಪಡೆಯುವ ನಿಟ್ಟಿನಲ್ಲಿ ನಾವು ಈ ಪ್ರಕ್ರಿಯೆಯಿಂದ ಆರೋಗ್ಯವಾಗಿ ಇರಬಹುದು ಎಂದು ಹೇಳಿದರು.
ನಂತರ ಅರ್ ಬಿ ಎಸ್ ಕೆ ಅಪ್ತ ಸಮಾಲೋಚಕಿ ಸುಜಾತಾ ಹಿರೇಮಠ ಮಾತನಾಡುತ್ತಾ ಹೆಣ್ಣು ಮಕ್ಕಳು ಋತುಚಕ್ರ ಸಮಯದಲ್ಲಿ ಮಾನಸಿಕವಾಗಿ ಕುಗ್ಗುವಿಕೆ ಕಂಡುಬರುತ್ತದೆ , ಹೆಣ್ಣು ಮಕ್ಕಳಲ್ಲಿ ಕೆಲವು ಬಾರಿ ರಕ್ತಹೀನತೆ , ಗರ್ಭಕೋಶದಲ್ಲಿ ತೊಂದರೆಯಿಂದಾಗಿ ಅನಿಮಿತ ಋತುಚಕ್ರ ಸಮಸ್ಯೆ ಕಾಣಿಕೊಳ್ಳಬಹುದು. ಕಿಶೋರಿಯರು ಮುಟ್ಟಿನ ಸಮಯದಲ್ಲಿ ಅತಿ ಕೊಬ್ಬಿನಾಂಶವಿರುವ ಮತ್ತು ಪೋಷಕಾಂಶಗಳು ಹೆಚ್ಚಿರುವ ಆಹಾರವನ್ನು ತಪ್ಪದೇ ಸೇವನೆ ಮಾಡಬೇಕು, ಯಾರು ಭಯ ಪಡದೆ ಸರ್ಕಾರಿ ಆಸ್ಪತ್ರೆ ಯಲ್ಲಿ ಸಿಗುವಂತ ಸ್ಯಾನಿಟರಿ ಪ್ಯಾಡ್ , ಹಾಗೂ ಸ್ಯಾನಿಟರಿ ಕಪ್ಪನ್ನು ಉಪಯೋಗಿಸುವುದರಿಂದ ಹೆಚ್ಚಾಗಿ ಮಹಿಳೆಯರು ಮತ್ತು ಹುಡುಗಿಯರಲ್ಲಿ ಮುಟ್ಟಿನ ಸಮಯದಲ್ಲಿ ಕಾಣಿಸಿಕೊಳ್ಳುವ ಹೊಟ್ಟೆ ನೋವು , ಬೆನ್ನು ನೋವು, ವಿಪರೀತ ರಕ್ತಸ್ರಾವ ಮುಂತಾದ ತೊಂದರೆಗಳು ಕಂಡುಬಂದಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿನ ಸ್ತ್ರೀ ರೋಗ ತಜ್ಞರಿಂದ ಚಿಕಿತ್ಸೆ ಪಡೆಯುವ ಮೂಲಕ ಸೋಂಕಿನ ಸಮಸ್ಯೆಗಳು ಬರದಂತೆ ತಡೆಯಬಹುದಾಗಿದು ಎಂದು ತಿಳಿದರು.
ವೇದಿಕೆ ಮೇಲೆ ಸಮುದಾಯ ಆರೋಗ್ಯ ಅಧಿಕಾರಿ ಮೀನಾಕ್ಷಿ , ಸಮುದಾಯ ಆರೋಗ್ಯ ಸುರಕ್ಷಣಾಧಿಕಾರಿ ಕವಿತಾ, ಅಂಗನವಾಡಿ ಶಿಕ್ಷಕಿ ವಿದ್ಯಾ ಇದ್ದರು. ಸಮುದಾಯದ ಹೆಣ್ಣುಮಕ್ಕಳು ಮತ್ತು ಮಹಿಳೆಯರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…