ಹೈದರಾಬಾದ್ ಕರ್ನಾಟಕ

ಕೃಷಿ ಮಾರಾಟ ಮಳಿಗೆಗಳ ಮೇಲೆ ಹಠಾತ್ ದಾಳಿ: ರೈತರಿಗೆ ಮಾರಾಟದ ರಸೀದಿ ನೀಡದಿದಕ್ಕೆ: ನೋಟಿಸ್ ಜಾರಿ

ಕಲಬುರಗಿ: ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ನೇತೃತ್ವದ ಕೃಷಿ ಅಧಿಕಾರಿಗಳ ತಂಡ ಮಂಗಳವಾರ ಸಂಜೆ ಜೇವರ್ಗಿ ತಾಲೂಕಿನ ವಿವಿಧ ಕೃಷಿ ಮಾರಾಟ ಮಳಿಗೆಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಬೀಜ ಖರೀದಿದಾರರಿಗೆ ನಿಗದಿತ ನಗದು ಅಥವಾ ಉದ್ರಿ ರಸೀದಿ ಬಿಲ್ಲು ನೀಡದಿದ್ದಕ್ಕೆ ಜೇವರ್ಗಿ ತಾಲೂಕಿನ 8 ಕೃಷಿ ಮಾರಾಟ ಮಳಿಗೆಗಳಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ.

ಮಂಗಳವಾರ ರಾತ್ರಿ 9ರ ವರೆಗೆ ಕೃಷಿ ಮಾರಾಟ ಮಳಿಗೆಗೆಳಿಗೆ ಸಹಾಯಕ ಕೃಷಿ ನಿರ್ದೇಶಕರು, ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳೊಂದಿಗೆ ಜೇವರ್ಗಿ, ಯಡ್ರಾಮಿ, ಇಜೇರಿ, ಜೇರಟಗಿ ಹೀಗೆ ಸುಮಾರು 10 ಕೃಷಿ ಮಾರಾಟ ಮಳಿಗೆಗಳಿಗೆ ಭೇಟಿ ನೀಡಿದ ತಂಡವು ಬಿತ್ತನೆ ಬೀಜ ಮತ್ತು ರಸಗೊಬ್ಬರಗಳ ದಾಸ್ತಾನು, ಮಾರಾಟ ವಿವರಗಳನ್ನು ಪರಿಶೀಲಿಸಿತ್ತು.

ಅಧಿಕಾರಿಗಳ ತಂಡ ಭೇಟಿ ಸಂದರ್ಭದಲ್ಲಿ ಜೇವರ್ಗಿಯ 5, ಇಜೇರಿಯ 1 ಹಾಗೂ ಜೇರಟಗಿಯ 2 ಮಾರಾಟ ಮಳಿಗೆಗಳ ಮಾಲೀಕರು ಮಾರಾಟ ಬಿಲ್ಲುಗಳ ಮೇಲೆ ಖರೀದಿದಾರ ರೈತರ ಸಹಿ ಪಡೆದಿರುವುದಿಲ್ಲ. ಬೀಜ ಖರೀದಿದಾರರಿಗೆ ನಿಗಧಿಪಡಿಸಿದ ನಗದು ಅಥವಾ ಉದ್ರಿ ಬಿಲ್ಲು ನೀಡಿರುವದಿಲ್ಲವೆಂದು ಗೊತ್ತಾದ ಹಿನ್ನೆಲೆಯಲ್ಲಿ ಸದರಿ ಮಳಿಗೆಗಳಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ.

ಇನ್ನು ಮಾರಾಟಕ್ಕೆ ಪರವಾನಿಗೆ (Principles certificates)ಪಡೆಯದೆ ಹತ್ತಿ ಬೀಜ ಮಾರುತ್ತಿದ್ದ ಜೇರಟಗಿಯ ಮೇ. ಗರಿದೇವರು ಟ್ರೇಡರ್ಸ್, ಮೇ. ಶಿವಾ ಟ್ರೇಡರ್ಸ್ ಹಾಗೂ ಮೇ. ಮಹಾಲಕ್ಷ್ಮಿ ವಿಘ್ನೇಶ್ವರ ಆಗ್ರೋ ಟ್ರೇಡರ್ಸ್ ಇವರುಗಳ 26.50 ಲಕ್ಷ ರೂ.ಗಳ ಮೌಲ್ಯದ 3,067 ಹತ್ತಿ ಬೀಜದ ಪ್ಯಾಕೆಟಗಳ ಮಾರಾಟಕ್ಕೂ ತಡೆ ಆದೇಶ ನೀಡಲಾಗಿದೆ.

ಕಲಬುರಗಿಯಲ್ಲೂ ತಪಾಸಣೆ: ಇತ್ತ ಕಲಬುರಗಿ ನಗರದಲ್ಲಿ ಇದೇ ದಿನದಂದು ಜಾಗೃತಿ ದಳದ ಸಹಾಯಕ ಕೃಷಿ ನಿರ್ದೇಶಕರ ನೇತೃತ್ವದ ತಂಡ ಹಲವು ಕೃಷಿ ಮಳಿಗೆಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಬಿತ್ತನೆ ಬೀಜ ಮತ್ತು ರಸಗೊಬ್ಬರಗಳ ದಾಸ್ತಾನು, ಮಾರಾಟ ವಿವರಗಳನ್ನು ಪರಿಶೀಲಿಸಿತು. ಅಲ್ಲದೆ ಮಾರಾಟ ಬಿಲ್ಲುಗಳ ಮೇಲೆ ರೈತರ ಸಹಿ ಪಡೆದಿಲ್ಲ ಹಾಗೂ ನೊಂದಣಿ ಧೃಢೀಕರಣ ಪತ್ರವಿಲ್ಲದೆ ಮಾರಾಟ ಮಾಡುತ್ತಿದ್ದ ನಗರದ ಬಸವ ಆಗ್ರೋ ಏಜೇನ್ಸಿ, ಮಾಹಾಲಕ್ಷ್ಮಿ ಆಗ್ರೋ ಏಜೇನ್ಸಿ, ಚಂದ್ರಿಕಾ ಆಗ್ರೋ ಸಿಂಡಿಕೇಟ್ ಹಾಗೂ ಮಲ್ಲಿಕಾರ್ಜುನ ಆಗ್ರೋ ಏಜೇನ್ಸಿ ಮಳಿಗೆಗಳ ಮಾಲಿಕರುಗಳಿಗೆ ನೋಟಿಸ್ ನೀಡಲಾಯಿತು.

ಮಾರಾಟಗಾರರಿಗೆ ಎಚ್ಚರಿಕೆ: ಇದೇ ಸಂದರ್ಭದಲ್ಲಿ ಅಧಿಕಾರಿಗಳ ತಂಡ ಯಾವುದೇ ಸಂಧರ್ಭದಲ್ಲಿ ಬೀಜ ಮತ್ತು ರಸಗೊಬ್ಬರಗಳನ್ನು ಎಂ.ಆರ್.ಪಿ (ಗರಿಷ್ಠ ಮಾರಾಟ ದರ) ಕ್ಕಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡಬಾರದು ಮತ್ತು ಬೀಜ ಮತ್ತು ರಸಗೊಬ್ಬರ ಮಾರಾಟ ಕಾಯ್ದೆಗಳನ್ನು ಉಲ್ಲಂಘಿಸಬಾರದೆಂದು ಕೃಷಿ ಮಾರಾಟಗಾರರಿಗೆ ಎಚ್ಚರಿಕೆ ನೀಡಲಾಯಿತು.

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

15 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

18 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

1 day ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

1 day ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

1 day ago