ಬಿಸಿ ಬಿಸಿ ಸುದ್ದಿ

ಕ್ರಾಂತಿಕಾರಿ ಚೆಗೆವಾರ ಹುಟ್ಟು ಹಬ್ಬ ಆಚರಣೆ

ಜಗತ್ತಿನಲ್ಲಿ ಸಮಸಮಾಜ ನಿರ್ಮಿಸಬೇಕು: ರಮೇಶ ವೀರಾಪೂರು

ಹಟ್ಟಿ: ಅರ್ಜೆಂಟೈನಾದಲ್ಲಿ 1928 ರ ಜೂನ್ 14 ರಂದು ಜನಿಸಿದ ಆರ್ನೆಸ್ಟೊ ಚೆಗೆವಾರ ಹುಟ್ಟಿನಿಂದಲೇ ಆಸ್ತಮರೋಗಿಯಾಗಿದ್ದರು. ಆದಾಗ್ಯೂ ಚೆಗೆವಾರನೊಳಗೊಬ್ಬ ಡಾಕ್ಟರ್, ಬರಹಗಾರ, ಬುದ್ದಿಜೀವಿ, ಸಹಾಸಗಾರ, ರಾಜತಾಂತ್ರಿಕನ, ಸಮಾನತೆಗಾಗಿ ಹಾತೊರೆಯುವ ಕ್ರಾಂತಿಕಾರಿ ಯೋಧ, ಗೆರಿಲ್ಲಾ ಕಮಾಂಡರ್ ಹೀಗೆ ಎಲ್ಲವೂ ಅಡಗಿದ್ದವು ಎಂದು ಎಸ್ಎಫ್ಐ ಜಿಲ್ಲಾಧ್ಯಕ್ಷ ರಮೇಶ ವೀರಾಪೂರು ಹೇಳಿದರು.

ಹಟ್ಟಿ ಪಟ್ಟಣದಲ್ಲಿ ಸಿಐಟಿಯು ಮತ್ತು ಎಸ್ಎಫ್ಐ ಸಂಘಟನೆಗಳು ಆಯೋಜಿಸಿದ್ದ ಜನ್ಮ ದಿನಾಚರಣೆ ಉದ್ದೇಶಿಸಿ ಅವರು ಮಾತನಾಡಿದರು.

ನಾನು ಯಾವತ್ತೂ ಸೋತು ಮನೆಗೆ ವಾಪಸ್ ಆಗೋದಿಲ್ಲ. ಸೋಲಿಗಿಂತ ಸಾವೇ ನನಗೆ ಇಷ್ಟ. ನಡುಬಗ್ಗಿಸಿ ಬದುಕುವುದಕ್ಕಿಂತ ನೇರ ನಿಂತು ಸಾಯುವುದು ಮೇಲು ಎಂದು ಪ್ರತಿಪಾದಿಸಿದ್ದರು. ಅವರು ವಿದ್ಯಾರ್ಥಿ ಆಗಿದ್ದಾಗಲೇ ಬಡವರ ಮತ್ತು ಶ್ರಮಿಕ ವರ್ಗದ ಬಗ್ಗೆ ಪ್ರೀತಿ, ಕಾಳಜಿಯನ್ನು ಬೆಳೆಸಿಕೊಂಡಿದ್ದರು.

ಚೇ ಅವ್ರು ಪಡೆಯುತ್ತಿದ್ದ ವೈದ್ಯಕೀಯ ಶಿಕ್ಷಣ ಅರ್ಧಕ್ಕೆ ನಿಲ್ಲಿಸಿ ಸಾಮ್ರಾಜ್ಯಶಾಹಿ ಮತ್ತು ಅಲ್ಲಿನ ಜಮೀನ್ದಾರಿ ದಬ್ಬಾಳಿಕೆ ವಿರುದ್ದ ಯುದ್ಧ ಸಾರಿ ಯುದ್ಧದಲ್ಲಿ ಗೆದ್ದು ಕ್ಯೂಬಾ ಸ್ವಾತಂತ್ರ್ಯ ಕೊಡಿಸಿದರು. ಅರ್ಜೆಂಟೈನದಲ್ಲಿ ಹುಟ್ಟಿ ಕ್ಯೂಬಾದ ದ್ವೀಪ ವಾದ ಚೇ ಅವರಿಗೆ ದೇಶ ಗಡಿಗಳ ಹಂಗಿರಲಿಲ್ಲ. ವಿಶ್ವ ಮಾನವರಾಗಿದ್ದರು. ಶೋಷಿತರಿಗೆ ಅವರು ನಿಜವಾದ ಕಾಮ್ರೇಡ್ ಆಗಿದ್ದರು ಎಂದರು.

ಕ್ಯೂಬಾದ ಬಟಿಸ್ಟಾ ಸರ್ಕಾರದ ಸರ್ವಾಧಿಕಾರ ವಿರುದ್ಧ ನಿರಂತರ ಗೆರಿಲ್ಲಾ ಯುದ್ಧ ಸಾರಿ 1959 ರಲ್ಲಿ ಕ್ಯೂಬಾ ಸ್ವಾತಂತ್ಯ ದಂದು ಕೊಟ್ಟ ಚೇ ಅವರಂತಹ ಸಮರ ವೀರರ ಸಮಾಜವಾದಿ ಆಶಯಗಳು ಇಂದಿನ ಸಾಮ್ರಾಜ್ಯಶಾಹಿಗಳ ಪ್ರಾಬಲ್ಯ ಮುರಿಯಲು ಅವಶ್ಯ ಎಂದರು.

ಈ ಸಂದರ್ಭದಲ್ಲಿ ಸಿಐಟಿಯು ಗೌರವಾಧ್ಯಕ್ಷ ಅಮರೇಶ ಗುರಿಕಾರ, ತಾಲೂಕು ಮುಖಂಡರಾದ ಮಹ್ಮದ್ ಹನೀಫ್, ಫಕ್ರುದ್ದೀನ್, ಅಲ್ಲಾಭಕ್ಷ ಗಿರಿಣಿ, ವೆಂಕಟೇಶ್ ಗೋರಕಲ್ ನಿಂಗಪ್ಪ ಎಂ, ದಾವೂದ್, ರಾಜರತ್ನಂ, ಅರುಣ್, ರಿಯಾಜ್ ಖುರೇಷಿ, ನಜೀರ್ ಮಾಚನೂರು, ನಾಗರಾಜ್, ಎಸ್ಎಫ್ಐ ಮುಖಂಡ ವಿನಯ್, ಯಶವಂತ್ ಸೇರಿದಂತೆ ಅನೇಕರಿದ್ದರು.

emedialine

Recent Posts

ಕಬಾಬ್ ತಯಾರಿಕೆಯಲ್ಲಿ ಕೃತಕ ಬಣ್ಣಗಳ ನಿಷೇಧ

ಬೆಂಗಳೂರು; ಕಬಾಬ್‍ನ ತಯಾರಿಕೆಯಲ್ಲಿ ಯಾವುದೇ ಕೃತಕ ಬಣ್ಣಗಳನ್ನು ಬಳಸುವುದಕ್ಕೆ The Food Safety and Standards Act, 2006  ರ…

19 mins ago

17 ನೂತನ ಶಾಸಕರಿಂದ ವಿಧಾನ ಪರಿಷತ್ ಸದಸ್ಯರಾಗಿ ಪ್ರಮಾಣ ವಚನ ಸ್ವೀಕಾರ

ಬೆಂಗಳೂರು; ಕರ್ನಾಟಕ ವಿಧಾನಸಭೆಯ ಸದಸ್ಯರಿಂದ ವಿಧಾನಪರಿಷತ್ತಿಗೆ ಆಯ್ಕೆಯಾದ 17 ವಿಧಾನ ಪರಿಷತ್ ಸದಸ್ಯರಾಗಿ  ಪ್ರಮಾಣ ವಚನ ಸ್ವೀಕರಿಸಿದರು. ಭಾರತೀಯ ರಾಷ್ಟ್ರೀಯ…

23 mins ago

ವಿದ್ಯಾರ್ಥಿಗಳಿಗೆ ಕೌಶಲ್ಯದ ಜೊತೆಗೆ ನೈತಿಕ ಮೌಲ್ಯಗಳು ನೀಡುವುದೆ ಜಿಟಿಟಿಸಿ; ಡಾ: ಸುಧಾರಾಣಿ

ಕಲಬುರಗಿ: ವಿದ್ಯಾರ್ಥಿಗಳ ಕಲಿಕೆಯ ಜೊತೆಗೆ ಕೌಶಲ್ಯ ಮತ್ತು ಬದುಕಿಗೆ ನೈತಿಕ ಶಿಕ್ಷಣ ಹಾಗೂ ಮೌಲ್ಯಗಳನ್ನು ನೀಡುವುದೆ ನಮ್ಮ ಸಂಸ್ಥೆಯ ಮುಖ್ಯ…

35 mins ago

ಗ್ಯಾಸ ಸಿಲಿಂಡರ ಸ್ಫೋಟದಲ್ಲಿ ಗಾಯಗೊಂಡ ಕಾರ್ಮಿಕರಿಗೆ ಸೂಕ್ತ ಪರಿಹಾರಕ್ಕೆ ಒತ್ತಾಯ

ಕಲಬುರಗಿ:  ನಗರದ ಸಪ್ತಗಿರಿ ಹೊಟೆಲ್‍ನಲ್ಲಿ ಗ್ಯಾಸ್ ಸಿಲಿಂಡರ್ ಸ್ಪೋಟದಿಂದ ಒಬ್ಬ ಕಾರ್ಮಿಕ ಮೃತಪಟ್ಟಿದ್ದು, ಗಾಯಗೊಂಡಿರುವ ಕಾರ್ಮಿಕರಿಗೆ ಜಿಲ್ಲಾಡಳಿತ, ರಾಜ್ಯ ಸರ್ಕಾರ…

41 mins ago

ಬಡತನದ ನಿವಾರಣೆಗೆ ಪುಸ್ತಕ ಓದಿ

ಕಲಬುರಗಿ: ನಗರದ ಶ್ರೀ ಮತಿ ಕಸ್ತೂರಿಬಾಯಿ ಪಿ ಬುಳ್ಳಾ ಸ್ಮಾರಕ ಭವನದಲ್ಲಿ ಏರ್ಪಡಿಸಿದ್ದ ಅಖಿಲ ಕರ್ನಾಟಕ ಸ್ನೇಹ ಗಂಗಾ ವಾಹಿನಿ…

45 mins ago