ಕಲಬುರಗಿ: ವಿದ್ಯಾರ್ಥಿಗಳ ಕಲಿಕೆಯ ಜೊತೆಗೆ ಕೌಶಲ್ಯ ಮತ್ತು ಬದುಕಿಗೆ ನೈತಿಕ ಶಿಕ್ಷಣ ಹಾಗೂ ಮೌಲ್ಯಗಳನ್ನು ನೀಡುವುದೆ ನಮ್ಮ ಸಂಸ್ಥೆಯ ಮುಖ್ಯ ಉದ್ದೇಶ ಎಂದು ಜಿಟಿಟಿಸಿ ಕಾಲೇಜಿನ ಪ್ರಾಂಶುಪಾಲರಾದ ಡಾ: ಸುಧಾರಾಣಿ ಹೇಳಿದರು.
ನಗರದ ಸಂತ್ರಸವಾಡಿಯ ದರ್ಶನಾಪುರ ಲೇಔಟ್ ನಲ್ಲಿರುವ ಸರಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದಲ್ಲಿ 2024 ನೆಯ ಸಾಲಿನ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಆಯೋಜಿಸಿರುವ ಸ್ವಾಗತ ಸಮಾರಂಭ ಹಾಗೂ ಪಾಲಕರ ಸಭೆಯನ್ನು ಸರಸ್ವತಿಯ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಜ್ಯೋತಿ ಬೆಳಗಿಸುವುದರ ಮೂಲಕ ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು,ವಿದ್ಯಾರ್ಥಿ ಜೀವನದಲ್ಲಿ ಶಿಸ್ತು,ಸಮಯಪ್ರಜ್ಞೆ ಇದ್ದಾಗ ಮಾತ್ರ ಬದುಕಿನಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದು ನುಡಿದರು.
ಜಿಟಿಟಿಸಿ ಕೇಂದ್ರದ ಮುಖ್ಯಸ್ಥರಾದ ಟಿ,ಎನ್.ಜಯರಾಜ್ ಮಾತನಾಡಿ ವಿದ್ಯಾರ್ಥಿಗಳು ಕಷ್ಟಪಟ್ಟು ಓದುವುದಕ್ಕಿಂತ ಇಷ್ಟಪಟ್ಟು ಓದಿ ಗುರಿ ತಲುಪಬೇಕು,ಅಲ್ಲದೆ ಹಾರ್ಡ್ ವರ್ಕ್ ಮತ್ತು ಸ್ಮಾರ್ಟ್ ವರ್ಕ್ ಜೊತೆಗೆ ಪ್ರಾಮಾಣಿಕತೆ,ಆತ್ಮಸ್ಥೈರ್ಯ ಈ ನಾಲ್ಕು ಅಂಶಗಳನ್ನು ಜೀವನದಲ್ಲಿ ಬಹಳ ಮುಖ್ಯ ಎಂಬುದನ್ನು ಯಾವತ್ತು ಮರೆಯಕೂಡದು,ಜೊತೆಗೆ ತಂದೆ ತಾಯಿ ಹಾಗೂ ಗುರು ಹಿರಿಯರನ್ನ ಶಿಕ್ಷಕರನ್ನ ಗೌರವಿಸಬೇಕು,ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು,
ಇದೇ ಕಾಲೇಜಿನ ಇನ್ನೋರ್ವ ಅತಿಥಿಗಳಾದ ಗುರುರಾಜ್ ಮಾತನಾಡಿ ನಮ್ಮ ಕಾಲೇಜಿನಲ್ಲಿ ಪಡೆದುಕೊಂಡ ಶೈಕ್ಷಣಿಕ ಜ್ಞಾನವನ್ನು ಮಾತ್ರವಲ್ಲದೆ,ಮೃದು ಕೌಶಲ್ಯಗಳು ತಾಂತ್ರಿಕ ಪರಿಣಿತಿ ಮತ್ತು ಬದಲಾಗುತ್ತಿರುವ ಸಂದರ್ಭದಲ್ಲಿ ಹೊಂದಿಕೊಳ್ಳುವ ಸಾಮರ್ಥವನ್ನು ಒಳಗೊಂಡಿರುವ ವೈದ್ಯಮಯ ಕೌಶಲ್ಯ ಜೊತೆಗೆ ಅಭ್ಯರ್ಥಿಗಳನ್ನು ಹಲವಾರು ಕಂಪನಿಗಳು ಹುಡುಕುತ್ತವೆ ಎಂಬುದನ್ನು ಮತ್ತೆ ನೆನಪಿಸಿಕೊಟ್ಟರು.
ಸಮಾರಂಭದ ವೇದಿಕೆಯ ಮೇಲೆ, ಸಿಬ್ಬಂದಿಗಳಾದ ಸುನಿಲ್,ಮಾನಪ್ಪ, ಬಸವರಾಜ್ ತೇಗನೂರ,ಹಾಗೂ ಇತರರು ಉಪಸ್ಥಿತರಿದ್ದರು ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳ ಪಾಲಕರು ಹಾಜರಿದ್ದರು. ಉಪನ್ಯಾಸಕ ಅರುಣ್,ನಿರೂಪಿಸಿ ವಂದಿಸಿದರು.
ಕಲಬುರಗಿ: ಸ್ಲಂ ಜನರ ಸಂಘಟನೆ ಕರ್ನಾಟಕ ವತಿಯಿಂದ ಆಯೋಜಿಸಿದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತ ಹೈ -ಕೋರ್ಟ್ ರಸ್ತೆ…
ಕಲಬುರಗಿ: ಕರ್ನಾಟಕ ರಾಜ್ಯದ ಕಲಬುರಗಿ-ಜಿಲ್ಲೆಯಲ್ಲಿ ದಲಿತ (ಮಾದಿಗ) ಸಮುದಾಯದವರಿಗೆ ರಾಷ್ಟ್ರೀಕೃತ ಬ್ಯಾಂಕ್‍ಗಳು ಸಾಲ ಸೌಲಭ್ಯ ನೀಡದಿರುವ ಕುರಿತು ಶೋಷಿತ ಜನಜಾಗೃತಿ…
ಕಲಬುರಗಿ: ಪ್ರಶಸ್ತಿ ಪುರಸ್ಕೃತರು ಸನ್ಮಾನ ಸಮಾರಂಭಕ್ಕೆ ಗೈರಾಗಿರುವುದು ಬೇಸರದ ಸಂಗತಿ ಎಂದು ಜಿಲ್ಲಾ ವೈದ್ಯ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ…
ಕಲಬುರಗಿ: ಹಣೆಯ ಮೇಲೆ ಹಚ್ಚಿದ ವಿಭೂತಿ ಸಮಾನತೆ ಸಾರುವದರೊಂದಿಗೆ ಮನುಷ್ಯನ ಆತ್ಮವಿಶ್ವಾಸ ಹೆಚ್ಚಿಸುತ್ತದೆ ಎಂದು ಆರಾಧನಾ ಪದವಿ ಪೂರ್ವ ಕಾಲೇಜಿನ…
ಕಲಬುರಗಿ ಕೇಂದ್ರ ಕಾರಾಗೃಹದಲ್ಲಿರುವ ಸಂವಿಧಾನ ದಿನವನ್ನು ಸರ್ಕಾರದ ಸುತ್ತೋಲೆ ಆದೇಶದಂತೆ ಕಾರಾಗೃಹದ ಲಿಪಿಕ/ ಕಾನಿನಿರ್ವಹಕ ಅಧಿಕಾರಿ/ಸಿಬ್ಬಂದಿಯವರೊಂದಿಗೆ ಡಾ|| ಬಾಬಾ ಸಾಹೇಬ್…
ಕಲಬುರಗಿ; ಸಂವಿಧಾನವನ್ನು ರಕ್ಷಿಸಲು ಮತ್ತು ಜನರಲ್ಲಿ ಸಂವಿಧಾನದ ಮೇಲಿನ ನಂಬಿಕೆಯನ್ನು ಬಲಪಡಿಸಲು ಜಾಗೃತ ಶಕ್ತಿಯಾಗಿ ಕಾರ್ಯನಿರ್ವಹಿಸುವ ಗುರುತರವಾದ ಜವಾಬ್ದಾರಿಯನ್ನು ದೇಶದ…