ಡಾ.ಡಿ.ಬಿ.ನಾಯಕರ ಬದುಕು ಬರಹ ಕುರಿತು ಸರಣಿ ಉಪನ್ಯಾಸ ಮಾಲಿಕೆ

ಕಲಬುರಗಿ: ಒಂದು ಸಾಮಾನ್ಯ ಕುಟುಂಬದ ಬಂಜಾರ ಸಮಾಜದಲ್ಲಿ ಹುಟ್ಟಿ ಬೆಳೆದು ಬದುಕಿನೂದ್ದ ಕ್ಕೂಕಷ್ಟನಷ್ಟಗಳನ್ನು ಎದುರಿಸಿ ಬದುಕು ಸುಂದರವಾಗಿ ಕಟ್ಟಿಕೊಂಡು ವಿಶ್ವವ್ಯಾಪಿಯಾಗಿ ಹೆಸರು ಮಾಡಿದ ಸಾಧಕರೆಂದರೆ ನಿವೃತ್ತ ಕುಲಪತಿಗಳಾದ ಡಾ.ಡಿ.ಬಿ.ನಾಯಕರು ಎಂದು ಅವರ ಕುರಿತು ಕರ್ನಾಟಕ ಜಾನಪದ ಪರಿಷತ್ತು ಹಾಗೂ ಶ್ರೀ ಶರಣಬಸ ವೇಶ್ವರ ಶಿಕ್ಷಣ ಮಹಾವಿದ್ಯಾಲಯದ ಸಹಯೋಗದಲ್ಲಿ ಹಮ್ಮಿಕೊಂಡ ನಾಡಿನ ಹಿರಿಯ ಜಾನಪದ ವಿದ್ವಾಂಸರಾದ ಡಾ.ಡಿ.ಬಿ.ನಾಯಕರ ಬದುಕು ಬರಹ ಕುರಿತು ಸರಣಿ ಉಪನ್ಯಾಸ ಮಾಲಿಕೆಯಲ್ಲಿ ಪ್ರಾಚಾರ್ಯರಾದ ಡಾ.ಅಮೃತಾ ಆರ್.ಕಟಕೆಯವರು ಹೇಳಿದರು.

ಸರಳ ಸಜ್ಜನಿಕೆಯ ಸಂಸ್ಕಾರ ವಂತರಾಗಿ ಸರ್ವರೊಂದಿಗೆ ಇಂದಿಗೂ ಕೂಡ ಪ್ರೀತಿ ವಿಶ್ವಾಸಗಳಿಸಿಕೊಂಡು ಬಂದ ವ್ಯಕ್ತಿಗಳು ನನಗೆ ಕಲಿಸಿದ ಗುರುಗಳು ಎನ್ನುತ್ತಾ ಅನೇಕ ಜಾನಪದದ ಬಗ್ಗೆ ಕೃತಿಗಳನ್ನು ಹೊರತಂದಿದ್ದು,ಬಂಜಾರ ಸಮಾಜದ ಕುರಿತು ಸಂಶೋಧ ನಾತ್ಮಕವಾಗಿಯು ಕೂಡ ಅದ್ಭುತವಾದ ಕೆಲಸ ಮಾಡಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮ ಸಸಿಗೆ ನೀರು ಣಿಸಿ ಉದ್ಘಾಟನೆ ಮಾಡಿ ಮಾತಾಡಿದ ಸಾರ್ವಜನಿಕ ಶಿಕ್ಷಣ ಇಲಾಖೆಯ ರಾಜ್ಯ ನಿವೃ ತ್ತ ನಿರ್ದೇಶಕರಾದ ಎನ್ ಬಿ.ಪಾಟೀಲರು ಮಾತನಾಡುತ್ತ ಜಾನಪದವು ಅಳಿವಿನ ಅಂಚಿನಲ್ಲಿದ್ದು ಅದನ್ನು ಉಳಿಸಿ ಬೆಳೆಸಬೇಕಾದವರು ಎನ್ನುತ ಜಾನಪದ ಪರಿಷತ್ತಿನ ಸಿ.ಎ ಸ್.ಮಾಲಿ ಪಾಟೀಲರು ನಿಮಗೆಲ್ಲಾ ಪರಿಚಯಿಸುತ್ತಾ ಉತ್ತಮವಾದ ಕೆಲಸವನ್ನು ಮಾ ಡುತ್ತಿದ್ದಾರೆ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷರಾದ ಸಿ.ಎಸ್.ಮಾಲಿ ಪಾಟೀಲ ಮಾತನಾಡಿದರು. ಸನ್ಮಾನಿತರಲ್ಲಿ ಹಿರಿಯ ಸಾಹಿತಿ,ನಿವೃತ್ತ ಪ್ರಾಧ್ಯಾಪಕ ಡಾ.ವಿಶಾಲಾಕ್ಷಿ ಕರಡ್ಡಿಯವರು ಮಾತನಾಡುತ್ತಾ,ಜಾನ ಪದವನ್ನು ಹುಟ್ಟು ಹಾಕಿ ಸಂಪ್ರದಾಯವಾಗಿ ಬೆಳೆಸಿಕೊಂಡು ಬಂದವರೆಂದರೆ ಹೆಣ್ಣು ಮಕ್ಕಳು,ಕುಟ್ಟುವ ಬೀಸುವ ತೊಟ್ಟಿಲು ಹಾಡುಗಳನ್ನು ಹಾಡುತ್ತಾ ಸಂಭ್ರಮದಲ್ಲಿ ಮಿಂದೇಳುತ್ತಿದ್ದರು ಎಂದರು.

ವೇದಿಕೆಯ ಮೇಲೆ ಸಮಾಜ ಸೇವಕ ದಯಾನಂದ ಪಾಟೀಲ ಹಾಗೂ ಮಕ್ಕಳ ಸಾಹಿತಿ ಎ.ಕೆ.ರಾಮೇಶ್ವರ ಇದ್ದರು. ಅಧ್ಯಕ್ಷತೆವಹಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯರಾದ ಡಾ.ಸಾವಿತ್ರಿ.ಬೀಳಗಿಯವರು. ಈ ಜಾನಪದ ಕಾರ್ಯಕ್ರಮ ತುಂಬಾ ಮಾಹಿತಿ ನೀಡಿತು,ಇದು ವಿದ್ಯಾರ್ಥಿಗಳಿಗೆ ಮಾರ್ಗದರ್ಶನವಾಯಿತು ಇದನ್ನು ಹಮ್ಮಿಕೊಂಡ ಸಿ.ಎಸ್. ಮಾಲಿಪಾಟೀಲರಿಗೆ ಕೃತಜ್ಞತೆ ಹೇಳಿದರು.

ಇದೇ ಸಂದರ್ಭದಲ್ಲಿ ಒಂದು ಲಕ್ಷ ಸಸಿಗಳನು ನೆಡವಲು ತಯಾರಿ ಮಾಡಿಕೊಂಡ ದಯಾನಂದ ಪಾಟೀಲ ಹಾಗೂ ಡಾ ವಿಶಾಲಾಕ್ಷಿಯವರಿಗೆ ವಿ ಶೇಷ ಸನ್ಮಾನ ಮಾಡಲಾಯಿತು. ಕಾರ್ಯಕ್ರದ ನಿರೂಪಣೆಯನ್ನು ಅಮೋಘಸಿದ್ಧ,ಸ್ವಾಗತ ವಿಜಯಾನಂದ ಪ್ರಾರ್ಥನೆ,ಅರ್ಚನಾ ನಡೆಸಿಕೊಟ್ಟರು ಸಿದ್ಧಲಿಂಗ ಇದ್ದರು.

emedialine

Recent Posts

ಸಮಾಜದ ಅಭಿವೃದ್ಧಿಯಲ್ಲಿ ಸಂಘ ಸಂಸ್ಥೆಗಳ ಕೊಡುಗೆ ಅಪಾರ

ಸುರಪುರ: ನಾಡಿನ ಅಭಿವೃದ್ಧಿಗಾಗಿ ಹಿಂದಿನ ಕಾಲದಿಂದಲೂ ಸಂಘ ಸಂಸ್ಥಗಳು ಸಮಾಜಮುಖಿ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾ ಬಂದಿವೆ ಸಮಾಜದ ಅಭಿವೃದ್ಧಿಗೆ ಸಂಘ…

3 hours ago

ದಲಿತ ಸಂಘರ್ಷ ಸಮಿತಿ ಮೂಲಕ ನೊಂದವರಿಗೆ ನ್ಯಾಯ ಕೊಡಿಸೋಣ

ಸುರಪುರ: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಗೆ ಈಗ 50 ವರ್ಷಗಳಾಗಿದ್ದು ನಮ್ಮ ನಾಯಕರಾದ ಮಾವಳ್ಳಿ ಶಂಕರ ಅವರಿಗೆ ನಾವೆಲ್ಲರು…

3 hours ago

ಬಿಜೆಪಿಗೆ ಕೆಕೆಆರ್‌ಡಿಬಿ ಅಧ್ಯಕ್ಷ ಡಾ. ಅಜಯ್‌ ಧರ್ಮಸಿಂಗ್‌ ಟಾಂಗ್‌

ಆರೋಪ ಇರೋರೆಲ್ಲಾ ರಾಜೀನಾಮೆ ಕೊಟ್ರೆ ಕೇಂದ್ರದ ಅರ್ಧ ಕ್ಯಾಬಿನೆಟ್‌ ಖಾಲಿ ಆಗ್ತದೆ ಎಂದು ಲೇವಡಿ ಹಿಂದೆ ಗೋದ್ರಾ ಪ್ರಕರಣದಲ್ಲಿ ಎಫ್‌ಐಆರ್‌…

3 hours ago

ಲಲಿತಾ ಜಮಾದಾರ್‌ಗೆ ಉತ್ತಮ ಶಿಕ್ಷಕಿ ಪ್ರಶಸ್ತಿ

ಕಲಬುರಗಿ: ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಕೊಡ ಮಾಡುವ ಅತ್ಯುತ್ತುಮ ಶಿಕ್ಷಕಿ ವಾರ್ಷಿಕ ಪ್ರಶಸ್ತಿಗೆ ದೇವಾಂಗ ಶಿಕ್ಷಣ…

3 hours ago

ಪೌರಕಾರ್ಮಿಕರ ವಿವಿಧ ಬೇಡಿಕೆಗೆ ಆಗ್ರಹಿಸಿ ಪ್ರತಿಭಟನೆ

ಕಲಬುರಗಿ: ಪೌರಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಪಾಲಿಕೆ ನೌಕರು ನಡೆಸುತ್ತಿರುವ ಪ್ರತಿಭಟನಾ ಧರಣಿಯಲ್ಲಿ ಪಾಲ್ಗೊಂಡ ಭಾರತ ಕಮ್ಯುನಿಷ್ಟ ಪಕ್ಷ…

3 hours ago

ನಿರ್ಗತಿಕರಿಗೆ ಬಟ್ಟೆ, ಆಟದ ಸಾಮಾನು ವಿತರಣೆ

ಕಲಬುರಗಿ: ಇನ್ನರ್‍ವ್ಹಿಲ್ ಕ್ಲಬ್ ಆಫ್ ಗುಲಬರ್ಗಾ ಸನ್‍ಸಿಟಿ ವತಿಯಿಂದ ನಗರದ ರಾಮತೀರ್ಥ ಮಂದಿರ ಹತ್ತಿರ ನಿರ್ಗತಿಕ ಹಾಗೂ ಕಡುಬಡುವ ಜನರಿಗೆ…

3 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420