ಬಿಸಿ ಬಿಸಿ ಸುದ್ದಿ

ಜಿಲ್ಲಾ ಕಸಾಪದ ಕನ್ನಡ ಸಾರಥಿ ಕೃತಿ ಅವಲೋಕನ: ನಾಡು ನುಡಿ ಕಟ್ಟಲು ಸಂವೇದನಾಶೀಲ ಸಾರಥಿಗಳು ಅವಶ್ಯ

ಕಲಬುರಗಿ: ಮಾತೃ ಭಾಷೆ, ನಾಡು-ನುಡಿಯ ಸಂಸ್ಕøತಿ ಕಟ್ಟಿ ಬೆಳೆಸಬೇಕಾದರೆ, ಕನ್ನಡದ ಸಂವೇದನಾಶೀಲ ಮನಸ್ಸಿನ ಸಾರಥಿಗಳು ಮುಖ್ಯ ಎಂದು ನಾಡೋಜ ಡಾ. ಪಿ ಎಸ್ ಶಂಕರ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಗರದ ಕನ್ನಡ ಭವನದ ಆವರಣದಲ್ಲಿ ಶನಿವಾರ ಏರ್ಪಡಿಸಿದ ವಿಜಯಕುಮಾರ ತೇಗಲತಿಪ್ಪಿ ಹಾಗೂ ಧರ್ಮಣ್ಣ ಎಚ್ ಧನ್ನಿ ಸಾರಥ್ಯದಲ್ಲಿ ಹೊರಬಂದಿರುವ ಕನ್ನಡ ಸಾರಥಿ ಎಂಬ ಕಸಾಪ ಜಿಲ್ಲಾಧ್ಯಕ್ಷರ ಪರಿಚಯಾತ್ಮಕ ಕೃತಿಯ ಒಂದು ಅವಲೋಕನ ಕಾರ್ಯಕ್ರಮವನ್ನು  ಉದ್ಘಾಟಿಸಿ ಮಾತನಾಡಿದರು.

ಭಾಷೆ ಮತ್ತು ಸಂಸ್ಕøತಿಯ ಆಚರಣೆಗಳು ನಮ್ಮ ಅಸ್ಮಿತೆಯನ್ನು ಹೆಚ್ಚಿಸುತ್ತದೆ. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ ಜೀವನ ಸಾಧನೆಯ ಕುರಿತಾದ ಕನ್ನಡ ಸಾರಥಿ ಕೃತಿ ನಾಡಿನ ಜನರಿಗೆ ಉಪಯುಕ್ತ ಕೃತಿಯಾಗಲಿದೆ. ಇದರಿಂದ ಈ ನೆಲದ ಸೊಗಡನ್ನು ಮತ್ತಷ್ಟು ಶ್ರೀಮಂತಿಕೆ ಹೆಚ್ಚುತ್ತದೆ ಎಂದು ನುಡಿದ ಅವರು, ಕಲಬುರಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಟ್ಟಿ ಬೆಳೆಸುವಲ್ಲಿ ಲಕ್ಷ್ಮಣರಾವ ಗೋಗಿ ಅವರ ಕಾರ್ಯ ಸದಾ ಸ್ಮರಿಸುವಂಥಹದು. ಬರುವ ದಿನಗಳಲ್ಲಿ ಅವರ ಹೆಸರು ಶಾಶ್ವತವಾಗಿ ಉಳಿಸಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಅತಿಥಿಯಾಗಿ ಆಗಮಿಸಿದ ನಗರ ಪೊಲೀಸ್ ಆಯುಕ್ತ ಚೇತನ್ ಆರ್. ಮಾತನಾಡಿ, ಸಾಹಿತ್ಯದ ಮನಸ್ಸುಗಳನ್ನು ಬೆಸೆದು ಗಟ್ಟಿಗೊಳಿಸುತ್ತದೆ. ಮತ್ತು ಇಂಥ ಕಾರ್ಯಗಳು ನಿರಂತರವಾಗಿ ಕನ್ನಡ ಭವನದಲ್ಲಿ ನಡೆಯುತ್ತಿರುವುದು ಸಂತಸದ ಸಂಗತಿ. ಎಲ್ಲಾ ಸಮ್ಮೇಳನಗಳಂತೆ ಪೊಲೀಸ್ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲು ಸಹಕರಿಸುವುದಾಗಿ ಹೇಳಿದರು.

ಕೃತಿ ಅವಲೋಕಿಸಿದ ಹಿರಿಯ ಸಾಹಿತಿ ಡಾ. ಶ್ರೀಶೈಲ್ ನಾಗರಾಳ ಅವರು, ಕನ್ನಡ ಭಾಷೆ ಅನ್ನದ ಭಾಷೆಯಾಗಿದ್ದು, ಅವರ ಋಣ ತೀರಿಸಲು ನಾವೆಲ್ಲ ಒಂದಾಗಿ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. ಅಂಥ ಮಹನೀಯರ ಜನ್ಮ ನೀಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ ಬದುಕು-ಬರಹ ಹಾಗೂ ಸಾಧನೆಗಳೇ ಶ್ರೀರಕ್ಷೆ. ಈ ಕುರಿತು ಕನ್ನಡ ಸಾರಥಿ ಎಂಬ ಕೃತಿ ಪ್ರಕಟಿಸಿರುವುದು ಮುಂದಿನ ಪೀಳಿಗೆಗೆ ಅವಶ್ಯಕವಾಗುತ್ತದೆ ಮತ್ತು ಸಂಶೋಧನಾ ವಿದ್ಯಾರ್ಥಿಗಳಿಗೆ ಉಪಯುಕ್ತ ಕೃತಿ ಇದಾಗಿದೆ ಎಂದು ವಿಮರ್ಶಿಸಿದರು. ಕನ್ನಡ ಭವನದ ನಿವೇಶನಕ್ಕಾಗಿ ಲಕ್ಷ್ಮಣರಾವ ಗೋಗಿ ಅವರು ಪಟ್ಟ ಶ್ರಮ ಸ್ಮರಿಸಿ ಕೊಳ್ಳಬೇಕು ಹಾಗೂ ಹಿಂದಿನ ಎಲ್ಲಾ ಅಧ್ಯಕ್ಷರ ಕಾರ್ಯ ಚಟುವಟಿಕೆಗಳು ಅನುಕರಣೀಯವಾಗಿವೆ ಎಂದರು.

ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ನಮ್ಮ ಕನ್ನಡ ಭಾಷೆ ಬರೀ ನುಡಿಯಲ್ಲ. ಅದು ಜೀವನಾಡಿಯಾಗಿದೆ. ಆದ್ದರಿಂದ ಭಾಷೆ, ಪರಂಪರೆ, ಕಲೆ, ಸಾಹಿತ್ಯ, ಸಂಸ್ಕøತಿ ಉಳಿಸಿ-ಬೆಳೆಸುವ ನಿಟ್ಟಿನಲ್ಲಿ ಪರಿಷತ್ತು ರಚನಾತ್ಮಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಸಾವಿರಾರು ವರ್ಷಗಳ ಇತಿಹಾಸವುಳ್ಳ ಕನ್ನಡ ಭಾಷೆಯ ಬ್ಗೆಗ ಅಭಿಮಾನ ಬೆಳೆಸಿಕೊಂಡು ಅದರ ಏಳ್ಗೆಗಾಗಿ ಶ್ರಮಿಸಬೇಕಾಗಿದೆ ಎಂದ ಅವರು, ಪರಿಷತ್ತಿನ ಜಿಲ್ಲಾಧ್ಯಕ್ಷರಾಗಿ ನುಡಿಗನ್ನಡವನ್ನು ಕಟ್ಟಿದ ಮಹನೀಯರ ಪರಿಚಯ-ಸಾಧನೆಗಳ ಹೆಜ್ಜೆ ಇಡುವ ನಿಟ್ಟಿನಲ್ಲಿ ದಾಖಲೀಕರಣದ ಹಾದಿಯಲ್ಲಿ ಈ ಕೃತಿ ಒಂದು ಮಹತ್ವ ಪಡೆದುಕೊಂಡಂತಾಗಿದೆ ಎಂದರು.

ಹಿರಿಯ ವೈದ್ಯ ಸಾಹಿತಿ ನಾಡೋಜ  ಡಾ. ಪಿ ಎಸ್  ಶಂಕರ ಕಾರ್ಯಕ್ರಮ ಉದ್ಘಾಟಿಸಿದರು. ಯಾದಗಿರಿಯ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ  ಉತ್ತರಾದೇವಿ ಎಸ್ ಮಠಪತಿ, ಜಿಲ್ಲಾ ಕಸಾಪ ದ ಗೌರವ ಕಾರ್ಯದರ್ಶಿ ಧರ್ಮಣ್ಣ ಎಚ್ ಧನ್ನಿ, ರವೀಂದ್ರಕುಮಾರ ಭಂಟನಳಿ, ಸಿದ್ಧಲಿಂಗ ಜಿ ಬಾಳಿ, ಕಲ್ಯಾಣಕುಮಾರ ಶೀಲವಂತ, ಡಾ. ಸ್ವಾಮಿರಾವ ಕುಲಕರ್ಣಿ ಮಾತನಾಡಿದರು.

ಲೇಖಕರಾದ ಪ್ರೊ. ನಾನಾಗೌಡ ಪಾಟೀಲ, ಪ್ರೊ. ಶಿವರಾಜ ಪಾಟೀಲ, ಶಕುಂತಲಾ ಪಾಟೀಲ, ಡಾ. ಶರಣಬಸಪ್ಪ ವಡ್ಡನಕೇರಿ, ಡಾ. ಸೂರ್ಯಕಾಂತ ಪಾಟೀಲ, ಸುಧೀರ ಬಿರಾದಾರ ಸೇಡಮ್, ಜಗನ್ನಾಥ ಎಲ್ ತರನಳ್ಳಿ,, ಪರಿಷತ್ತಿನ ಹಿಂದಿನ ಜಿಲ್ಲಾಧ್ಯಕ್ಷರ ಕುಟುಂಬದವರಾದ ಕಮಲಮ್ಮಾ ಲಕ್ಷ್ಮಣರಾವ ಗೋಗಿ, ರತ್ನಕಲಾ ಮಹಿಪಾಲರೆಡ್ಡಿ ಮುನ್ನೂರ, ಡಾ. ವೀರೇಶ ಪ್ರಭುಲಿಂಗಯ್ಯ ಮಲ್ಲಾಪೂರ ಅವರನ್ನು ಸತ್ಕರಿಸಲಾಯಿತು.

ಪ್ರಮುಖರಾದ ಬಾಬುರಾವ ಪಾಟೀಲ, ಡಾ. ರೆಹಮಾನ್ ಪಟೇಲ್, ಗುರುಬಸಪ್ಪ ಎಸ್ ಸಜ್ಜನಶೆಟ್ಟಿ, ಸಂತೋಷ ಕುಡಳ್ಳಿ, ನಾಗಪ್ಪ ಎಂ ಸಜ್ಜನ್, ಸುರೇಶ ದೇಶಪಾಂಡೆ, ಎಸ್ ಕೆ ಬಿರಾದಾರ, ಶಿಲ್ಪಾ ಜೋಶಿ, ವೆಂಕುಬಾಯಿ ರಜಪೂತ, ಅನುಪಮಾ ಅಪಗೊಂಡ, ಬಸಮ್ಮ ಸಜ್ಜನ್,  ಪ್ರಭವ ಪಟ್ಟಣಕರ್, ರೇವಣಸಿದ್ದಪ್ಪ ಜೀವಣಗಿ, ಎಸ್ ಎಲ್ ಪಾಟೀಲ, ಸೋಮಶೇಖರ ಮಾಲಿಪಾಟೀಲ ತೇಗಲತಿಪ್ಪಿ,  ಸೈಯದ್ ನಜೀರುದ್ದೀನ್ ಮುತ್ತವಲಿ, ಮಲ್ಲಿಕಾರ್ಜುನ ಇಬ್ರಾಹಿಂಪುರ, ನವಾಬ್ ಖಾನ್, ಡಾ. ಅಯಾಜುದ್ದೀನ್ ಪಟೇಲ್, ಡಾ. ಕೆ.ಎಸ್. ಬಂಧು  ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ನಾಡಿನ ಹಿರಿಯ ಸಾಹಿತಿ-ವಿಮರ್ಶಕಿ ನಾಡೋಜ ಪ್ರೊ. ಕಮಲಾ ಹಂಪನಾ ಅವರ ನಿಧನಕ್ಕೆ ಜಿಲ್ಲಾ ಕಸಾಪ ದಿಂದ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು. ನಂತರ ಮಾತನಾಡಿದ ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ, ತಮ್ಮ ಅಧ್ಯಯನ, ಲೇಖನ, ಭಾಷಣ ಮತ್ತು ಅನೇಕ ಸಂಶೋಧನೆಗಳಿಂದ ಸುಮಾರು ಅರವತ್ತು ವರ್ಷಗಳ ಕಾಲ ಸಾಹಿತ್ಯ ಕ್ಷೇತ್ರದಲ್ಲಿ ಅಮೋಘ ಕೃಷಿ ಮಾಡಿರುವ ಪ್ರೊ. ಕಮಲಾ ಹಂಪನಾ ಅವರ ಅಗಲಿಕೆ ಕನ್ನಡ ಸಾರಸ್ವತ ಲೋಕಕ್ಕೆ ನಷ್ಟವಾಗಿದೆ ಎಂದು ಸಂತಾಪ ಸಲ್ಲಿಸಿದರು.

emedialine

Recent Posts

ಅಧ್ಯಾತ್ಮದ ಜ್ಞಾನ ಬದುಕಿಗೆ ಬೆಳಕು ನೀಡುತ್ತದೆ

ಕಲಬುರಗಿ:ಮಾನವನ ಬದುಕಿಗೆ ಅಧ್ಯಾತ್ಮದ ಜ್ಞಾನವು ಅರಿವು ಮೂಡಿಸುವುದಲ್ಲದೆ,ಬೆಳಕು ನೀಡುತ್ತದೆ ಎಂದು ಪುರಾಣ ಪಂಡಿತ ಮಲ್ಲಿಕಾರ್ಜುನ ಶಾಸ್ತ್ರಿ ಅಭಿಪ್ರಾಯ ಪಟ್ಟಿದ್ದಾರೆ. ಜಯನಗರ…

1 hour ago

ಮೊಬೈಲ್ ಆಪ್ ಮೂಲಕ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಪತ್ತೆ ಸಮೀಕ್ಷೆ : ಡಾ. ಶಾಲಿನಿ ರಜನೀಶ್

ಬೆಂಗಳೂರು: ಮೊಬೈಲ್ ಆಪ್ ಮೂಲಕ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಪತ್ತೆಹಚ್ಚಲು ಜುಲೈ 15 ರಿಂದ 30 ರವರೆಗೆ ಸಮೀಕ್ಷೆ ನಡೆಸಲಾಗುವುದು…

3 hours ago

ಸಾಮಾಜಿಕ ಮಾಧ್ಯಮಗಳ ಮೂಲಕ ಹರಡುವ ಸುಳ್ಳು ಸುದ್ದಿಗಳು ಸಮಾಜಕ್ಕೆ ಅನಾಹುತಕಾರಿ: ಸಿಎಂ ಸಿದ್ದು

ಬೆಂಗಳೂರು: ಸಾಮಾಜಿಕ ಮಾಧ್ಯಮಗಳ ಮೂಲಕ ಹರಡುವ ಸುಳ್ಳು ಸುದ್ದಿಗಳು ಸಮಾಜಕ್ಕೆ ಅನಾಹುತಕಾರಿ. ಫೇಕ್ ನ್ಯೂಸ್ ಗಳ ಬಗ್ಗೆ ಇಡೀ ಸಮಾಜ…

4 hours ago

ಕನ್ನಡದ ನೆಲದಲ್ಲಿ ಕನ್ನಡಿಗರ ಮಕ್ಕಳೇ ಉದ್ಯೋಗ ಮಿಸಲಾತಿ ಕೇಳುವಂತಹ ಪರಸ್ಥಿತಿ ಆಘಾತಕಾರಿ

ಕಲಬುರಗಿ: ಡಾ.ಸರೋಜನಿ ಮಹಿಷಿ ವರದಿ ಅನುಷ್ಠಾನಕ್ಕೆ ನಡೆದ, ನಡೆಯುತ್ತಿರುವ ಹೋರಾಟಗಳಿಗೆ ಲೆಕ್ಕವೇ ಇಲ್ಲ. ಮಹಿಷಿ ವರದಿಯ ಹೆಸರು ಹೇಳಿ ಆಳಿದ…

4 hours ago

ವೀರಶೈವ ಮಹಾಸಭಾ ಜಿಲ್ಲಾ ಕಾರ್ಯಕಾರಿ ಸದಸ್ಯ ಸಮಿತಿಗೆ ಮಹೇಶ್ ರೆಡ್ಡಿ ನಾಮಪತ್ರ ಸಲ್ಲಿಕೆ

ಕಲಬುರಗಿ: ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಕಾರ್ಯಕಾರಿ ಸದಸ್ಯ ಸಮಿತಿಗೆ ಮಹಾಸಭಾದ ಅಧ್ಯಕ್ಷ ಶರಣಕುಮಾರ ಮೋದಿ ಹಾಗೂ ಸಮಾಜದ…

4 hours ago

ಕನ್ನಡಿಗರಿಗೆ ಉದ್ಯೋಗ ನೀಡುವಲ್ಲಿ ವಿಫಲ: ರಾಜ್ಯ ಸರಕಾರದ ವಿರುದ್ಧ ಸಾಂಕೇತಿಕ ಧರಣಿ ಸತ್ಯಾಗೃಹ

ಕಲಬುರಗಿ: ಕರ್ನಾಟಕ ನೆಲದಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡುವಲ್ಲಿ ವಿಫಲವಾದ ರಾಜ್ಯ ಸರ್ಕಾರ ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಪುನೀತರಾಜ…

4 hours ago