ಬಿಸಿ ಬಿಸಿ ಸುದ್ದಿ

ಅನುಗ್ರಹ ಆಯುರ್ವೇದಾಲಯ ಶುಭಾರಂಭ

ಕಲಬುರಗಿ: ನಗರದ ಸೂಪರ್ ಮಾರ್ಕೆಟ್ ನ ಚಂದ್ರಪ್ಪ ಕಾಮರ್ಸ್ ಬಿಲ್ಡಿಂಗ್ ನಲ್ಲಿ ನೂತನವಾಗಿ ಪ್ರಾರಂಭಿಸಿದ ಅನುಗ್ರಹ ಆಯುರ್ವೇದಾಲಯ ಆಸ್ಪತ್ರೆ ವಿಶ್ವ ಯೋಗ ದಿನವಾದ ಜೂನ್ 21ರಂದು ಶುಭಾರಂಭಗೊಂಡಿತು.

ವಿಶ್ವ ಯೋಗ ದಿನದಂದು ಆಯುರ್ವೇದ ಆಲಯ ಆರಂಭಿಸಿ ನೂತನ ಕೊಡುಗೆ ನೀಡಲಾಗಿದ್ದು ನಿರೋಗಿಯಾಗಿ ಬದುಕಲು ಮತ್ತು ಒತ್ತಡದ ಈ ಯುಗದಲ್ಲಿ ಮಾನಸಿಕ ವ್ಯಾಧಿಗಳಿಂದ ಮುಕ್ತಿ ಹೊಂದಲು ಯೋಗ ಮತ್ತು ಆಯುರ್ವೇದ ಪದ್ಧತಿಯ ಜೀವನ ಶೈಲಿ ಅತ್ಯಂತ ಉಪಯುಕ್ತವಾಗಿದ್ದು ಸಾರ್ವಜನಿಕರು ಇದರ ಲಾಭವನ್ನು ಪಡೆಯಲು ಉತ್ತಮ ಅವಕಾಶ ನೀದಿರುವುದಕ್ಕೆ ಡಾ. ರಾಜಶ್ರೀ ಪ್ರಸನ್ನ ಕಟ್ಟಿ ಅವರಿಗೆ ಡಾ. ಸದಾನಂದ ಪೆರ್ಲ ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದರು.

ಆಯುರ್ವೇದಾಲಯದಲ್ಲಿ ಪಂಚಕರ್ಮ ಚಿಕಿತ್ಸೆ ಮಹಿಳೆಯರ ವಿವಿಧ ಆರೋಗ್ಯ ಸಮಸ್ಯೆಗಳು ಹಾಗೂ ಕೀಲು ನೋವು ಮೊಣಕಾಲು ನೋವು, ಸಂಧಿ ವಾತ ,ಬೆನ್ನು ನೋವು, ಸಿಯಾಟಿಕಾ, ವೆರಿಕೋಸ್ ವೇನ್ಸ್, ಚರ್ಮರೋಗ ಮುಂತಾದ ತೊಂದರೆಗಳಿಗೆ ಉಪಚಾರ ನೀಡುವ ಸೌಲಭ್ಯವನ್ನು ಆಯುರ್ವೇದಾಲಯದಲ್ಲಿ ಹೊಂದಲಾಗಿದೆ ಎಂದು ಡಾ. ರಾಜೇಶ್ರೀ ಪ್ರಸನ್ನ ಕಟ್ಟಿ ಈ ಸಂದರ್ಭದಲ್ಲಿ ತಿಳಿಸಿದರು.

ಪತಂಜಲಿ ಚಿಕಿತ್ಸಾಲಯದ ಆಯುರ್ವೇದ ವೈದ್ಯರಾದ ಡಾ. ರಾಜಶ್ರೀ ಪ್ರಸನ್ನ ಕಟ್ಟಿ ಅವರು ಆರಂಭಿಸಿದ ಪಂಚಕರ್ಮ ಸೌಲಭ್ಯ ಸೇರಿದಂತೆ ವಿವಿಧ ರೋಗಗಳಿಗೂ ಉಪಶಮನ ನೀಡುವ ಆಯುರ್ವೇದಾಲಯವನ್ನು ಹಿರಿಯ ವೈದ್ಯರಾದ ಡಾ. ಸುರೇಂದ್ರ ಸಿದ್ದಾಪುರಕರ್, ಹಾಗೂ ಆಕಾಶವಾಣಿಯ ನಿವೃತ್ತ ಹಿರಿಯ ಕಾರ್ಯಕ್ರಮ ನಿರ್ವಹಣಾಧಿಕಾರಿಗಳಾದ ಡಾ. ಸದಾನಂದ ಪೆರ್ಲ ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು.

ಹಿರಿಯರಾದ ಲಕ್ಷ್ಮಿ ನಿವಾಸ್ ತಪಾಡಿಯ, ಸಂಪತ್ ತಪಾಡಿಯ ಹನುಮಂತ ರಾವ್ ಕುಲಕರ್ಣಿ ಡಾ. ಪ್ರಸನ್ನ ಕಟ್ಟಿ ಯೋಗ ಶಿಕ್ಷಕರಾದ ಶಿವಾನಂದ ಸಾಲಿಮಠ , ಪತಂಜಲಿ ಕೇಂದ್ರದ ಅಶೋಕ್ ಈ ಸಾಲಿಮಠ ಹಾಗು ಗೀತಾ ಕುಲಕರ್ಣಿ ಮತ್ತಿತರರು ಉಪಸ್ಥಿತರಿದ್ದರು.

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

16 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

19 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

1 day ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

1 day ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

2 days ago