ಬಿಸಿ ಬಿಸಿ ಸುದ್ದಿ

`ಸರ್ಫಾ ಕೋಟ್ಸ್’ನಿಂದ ಇಂಜಿನಿಯರ್ಸ್ ಮೀಟ್

ಕಲಬುರಗಿ: ರಾಷ್ಟ್ರದ ಪ್ರತಿಷ್ಠಿತ ಪೇಂಟ್ ಕಂಪನಿಗಳಲ್ಲೊಂದಾದ ‘ಸರ್ಫಾ ಕೋಟ್ಸ್’ ಕಂಪನಿ ವತಿಯಿಂದ ನಗರದ ಸೆಂಚುರಿಯನ್ ಪಾರ್ಕ್ ಹೋಟೆಲ್‍ನ ಸಭಾಂಗಣದಲ್ಲಿ ಎರಡು ದಿನಗಳ ಕಾಲ ಇಂಜಿನಿಯರ್ಸ್ ಮೀಟ್’ ನಡೆಯಿತು. ಇದೇ ವೇಳೆ ಹೊಸ ಪೇಂಟ್ ಬಿಡುಗಡೆ ಮಾಡಲಾಯಿತು.

ಸರ್ಫಾ ಕೋಟ್ ಕಂಪನಿಯ ಉತ್ತರ ಕರ್ನಾಟಕದ ಮುಖ್ಯಸ್ಥರಾದ (ಎಎಸ್‍ಎಂ) ಶ್ರೀಧರ್ ಸಫಾರೆ, ಸುಪರ್‍ವೈಸರ್ ಚಂದ್ರಶೇಖರ್, ವಿಭಾಗದ ಸಿ ಆ್ಯಂಡ್ ಎಫ್ ಮನಿಷ ಟ್ರೇಡರ್ಸ್‍ನ ಮಾಲೀಕರಾದ ಅನಿಲಕುಮಾರ ಗಂಗಾಣೆ, ವಿತರಕರಾದ ಗುರುರಾಜ ಪೇಂಟ್ಸ್‍ನ ಮಲ್ಲಿಕಾರ್ಜುನ ಕುಲಕರ್ಣಿ ಉಪಸ್ಥಿತರಿದ್ದರು.

ಶ್ರೀಧರ ಅವರು ಮಾತನಾಡಿ, `ಸರ್ಫಾ ಕೋಟ್ಸ್’ ಕಂಪನಿ ಸುಮಾರು 45 ವರ್ಷಗಳಿಂದ ಜನರ ಬೇಡಿಕೆಗೆ ಅನುಗುಣವಾಗಿ ಪೇಂಟ್ ತಯಾರಿಸುತ್ತಿದ್ದು, ದೇಶದಲ್ಲೇ ಮುಂಚೂಣಿಯಲ್ಲಿದೆ ಎಂದು ತಿಳಿಸಿ, ವಿವಿಧ ಬಗೆಯ ಪೇಂಟ್ಸ್ ಬಗ್ಗೆ  ಸವಿಸ್ತಾರವಾಗಿ ಇಂಜಿನಿಯರ್‍ಗಳಿಗೆ ಮಾಹಿತಿಗಳನ್ನು ನೀಡಿದರು.

ಇದೇ ಸಂದರ್ಭದಲ್ಲಿ ಕಂಪನಿಯ ಹೊಸ ಬಗೆಯ ಸರ್ಫಾ ಕೋಟ್ಸ್ `ಎಕ್ಸ್‍ಟ್ರೀಮಾ’ ಆಲ್ ವೆದರ್ ಬಣ್ಣಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದರು.

ಜನರ ಅಪೇಕ್ಷೆ ಮತ್ತು ಬೇಡಿಕೆಗೆ ಅನುಗುಣವಾಗಿ ಬಣ್ಣ ತಯಾರಿಸಿ ಕೊಡುವುದರಿಂದ ಸುಮಾರು 40 ಬಗೆಯ ಬಣ್ಣ ತಯಾರಿಸುತ್ತಿದೆ, ಅಲ್ಲದೇ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕಡಿಮೆ ದರ ಹಾಗೂ ಹೆಚ್ಚು ಬಾಳಿಕೆ ಕವರೇಜ್ ಬರುವುದರಿಂದ ಸರ್ಫಾ ಕೋಟ್ಸ್ ಪೇಂಟ್ಸ್‍ನ್ನೇ ಜನರು ಇಷ್ಟಪಡುತ್ತಾರೆ. ಕಂಪನಿ ಅಧಿಕಾರಿಗಳು ಕಾಲಕಾಲಕ್ಕೆ ಪ್ರಾಜೆಕ್ಟ್‍ಗಳಿಗೆ ಸಂಪರ್ಕ ಮಾಡಿ ಇಂಜಿನಿಯರರು ಹಾಗೂ ಕಟ್ಟಡ  ಮಾಲೀಕರಿಗೆ ಕಂಪನಿ ಉತ್ಪನ್ನ ಬಗ್ಗೆ ಮಾಹಿತಿಗಳನ್ನು ಕೊಟ್ಟಿದ್ದರಿಂದ ಸರ್ಫಾ ಕೋಟ್ಸ್ ಕಂಪನಿ ಜನಸ್ನೇಹಿಯಾಗಿದೆ. ಉನ್ನತ ಮಟ್ಟಕ್ಕೆ ಬೆಳೆದು ನಿಂತಿದೆ ಎಂದು ನುಡಿದರು.

ನಗರದ ಹಲವಾರು ಸಿವಿಲ್ ಇಂಜಿನಿಯರುಗಳು ಪಾಲ್ಗೊಂಡಿದ್ದರು.

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

14 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

16 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

23 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

23 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

23 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

1 day ago