ಬಿಸಿ ಬಿಸಿ ಸುದ್ದಿ

ವಿಧವೆಯರರಿಗೆ ಸೌಲಭ್ಯಗಳು, ಗೌರವ ದೊರೆಯಲಿ

ಕಲಬುರಗಿ: ಎಲ್ಲಾ ವಿಧವೆಯರಿಗೆ ಸರ್ಕಾರ ಯೋಜನೆಯಾದ ವಿಧವಾ ವೇತನದ ಸಮರ್ಪಕ ಜಾರಿಯಾಗಬೇಕು. ವಿಶೇಷವಾಗಿ ವಿಧವಯೆರಿಗಾಗಿಯೇ ಮನೆಗಳನ್ನು ನಿರ್ಮಿಸಿ ಒದಗಿಸಬೇಕು.ಸ್ವಾವಲಂಬಿ ಜೀವನಕ್ಕೆ ಪೂರಕವಾದ ಸ್ವಯಂ ಉದ್ಯೋಗಾವಕಾಶಗಳನ್ನು ನೀಡಬೇಕು. ಅವರಿಗೆ ಗೌರವ ನೀಡಬೇಕು ಎಂದು ಸಾಮಾಜಿಕ ಹೋರಾಟಗಾರ, ನ್ಯಾಯವಾದಿ ಡಾ.ಸುನೀಲಕುಮಾರ ಎಚ್.ವಂಟಿ ಸರ್ಕಾರಕ್ಕೆ ಒತ್ತಾಸೆ ಮಾಡಿದರು.

ನಗರದ ಗುಲ್ಲಾಬಾವಡಿ ಬಡಾವಣೆಯ ಸಮುದಾಯ ಭವನದ ಆವರಣದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ ಮತ್ತು ‘ಸುಜಯ್ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆ’ಯ ವತಿಯಿಂದ ಭಾನುವಾರ ಏರ್ಪಡಿಸಲಾಗಿದ್ದ ‘ಅಂತಾರಾಷ್ಟ್ರೀಯ ವಿಧವೆಯರ ದಿನಾಚರಣೆ’ಯಲ್ಲಿ ಅವರು ಮಾತನಾಡಿದರು.

ಬಳಗದ ಅಧ್ಯಕ್ಷ ಹಾಗೂ ವೈಚಾರಿಕ ಚಿಂತಕ ಎಚ್.ಬಿ.ಪಾಟೀಲ ಮಾತನಾಡಿ, ವಿಧವೆಯರ ಬಗ್ಗೆ ಕೀಳರಿಮೆ ಸಲ್ಲದು. ಅವರಿಗೆ ನೋವು ನೀಡುವುದು ಅಮಾನವೀಯ ಮತ್ತು ಮಾನವ ಹಕ್ಕುಗಳ ಉಲ್ಲಂಘನೆ. ಮಹಾತ್ಮ ಗೌತಮ ಬುದ್ಧ, ವಿಶ್ವಗುರು ಬಸವಣ್ಣ, ಡಾ. ಬಾಬಾಸಾಹೇಬ್ ಅಂಬೇಡ್ಕರ್, ಮಹಾತ್ಮ ಜ್ಯೋತಿಬಾಫುಲೆ, ಸಾವಿತ್ರಿಬಾಯಿ ಫುಲೆ, ರಾಜಾರಾಮ ಮೋಹನರಾಯ್ ಅವರತಂತಹ ಮಹನೀಯರು ಮಹಿಳೆಯರ ಸಮಾನತೆಗಾಗಿ ಹೋರಾಡಿರುವುದು ಸ್ಮರಣೀಯ. ವಿಧವೆಯರ ಎಂದಿಗೂ ಕೂಡಾ ದೈತಿಗೆಡದೆ ಧೈರ್ಯದಿಂದ ಜೀವನ ಸಾಗಿಸಬೇಕು. ವಿಧವಾ ಮಹಿಳೆಯರು ಕನಿಷ್ಠವೆಂದು ಭಾವಿಸಿ ಆಕೆಯನ್ನು ಯಾವುದೇ ಆಚರಣೆ, ಕಾರ್ಯಕ್ರಮ, ಸಭೆ-ಸಮಾರಂಭ, ಶುಭ ಕಾರ್ಯದಿಂದ ದೂರವಿರಿಸುವುದು ತಪ್ಪು. ಸಾಮಾನ್ಯ ಮಹಿಳೆಯರಂತೆ ಆಕೆಗೂ ಬದುಕುವ ಹಕ್ಕಿದೆ. ವಿಧವೆಯರ ಮನಸ್ಸಿಗೆ ನೋವಾಗುವ ರೀತಿಯಲ್ಲಿ ಸಮಾಜ ವರ್ತಿಸುವುದು ನಿಲ್ಲಿಸಬೇಕು. ವಿಧವೆಯರು ಕನಿಷ್ಠವಲ್ಲ ಎಂದರು.

ಐವರು ವಿಧವಾ ತಾಯಂದಿರಾದ ಲಕ್ಷ್ಮೀ ಹೊಸಮನಿ, ಆಶಮ್ಮ ಗುಡ್ಡಪಾಪ, ಬನ್ನೆಮ್ಮ ಹೊಸಮನಿ, ಶರಣಮ್ಮ ಅಲಿಪುರಕರ್ ಹಾಗೂ ರತ್ನಮ್ಮ ಭೀಮನಳ್ಳಿ ಅವರು ಸಾಮೂಹಿಕವಾಗಿ ಉದ್ಘಾಟಿಸಿದ್ದು ವಿಶೇಷವಾಗಿತ್ತು. ನಂತರ ಇವರಿಗೆ ಗೌರವಿಸಿ, ಸಮ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಮಾದಿಗ ಸಮಾಜದ ಅಧ್ಯಕ್ಷ ಸಿದ್ದಲಿಂಗ ಕಟ್ಟಿಮನಿ, ಮಾಜಿ ಸೈನಿಕ ರಾಜು ನಾಗೂರಕರ್, ಪ್ರಮುಖರಾದ ರಾಜು ಕಾಂಬಳೆ, ಶರಣಪ್ಪ ಹೊಟ್ಟೆನವರ್, ಮಹಾದೇವಿ ಗುಲ್ಲಾಬಾವಡಿ, ರಾಣಮ್ಮ ಹೊಸಮನಿ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

4 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

4 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

4 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

21 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

23 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago