ಜೀವನದ ಯಶಸ್ಸಿಗೆ ಕಾಮನ್ ಸೆನ್ಸ್ ಅಗತ್ಯ: ಡಾ. ಉಮೇಶ್ ಜಾಧವ್

ಕಲಬುರಗಿ: ವ್ಯಕ್ತಿಯ ಜೀವನದಲ್ಲಿ ಕಾಮನ್ ಸೆನ್ಸ್ ಅಥವಾ ಸಾಮಾನ್ಯ ಜ್ಞಾನವನ್ನು ಬಳಸಿದಾಗ ಮಾತ್ರ ಯಶಸ್ಸು ಹೊಂದಲು ಸಾಧ್ಯ ಎಂದು ಮಾಜಿ ಲೋಕಸಭಾ ಸದಸ್ಯರಾದ ಡಾ. ಉಮೇಶ್ ಜಾಧವ್ ಹೇಳಿದರು.

ಲೋಕಸಭಾ ಚುನಾವಣೆ ಮುಗಿದು ಜನರ ತೀರ್ಪು ಪ್ರಕಟವಾಗಿದ್ದು ಕೆಲವೇ ಮತಗಳ ಅಂತರದಿಂದ ಸೋತಿದ್ದರೂ 6 ಲಕ್ಷ 25ಸಾವಿರ ಮತಗಳನ್ನು ಹಾಕಿದ ಮತದಾರರಿಗೆ ನ್ಯಾಯ ಕೊಡಲು ದಿನದ 24 ಗಂಟೆಯೂ ಲಭ್ಯವಿರುತ್ತೇನೆ. ಕಾಮನ್ ಸೆನ್ಸ್ ಕೃತಿ ಲೋಕಾರ್ಪಣೆಯ ಮೂಲಕ ನನ್ನ ರಾಜಕೀಯ ಜೀವನದ ಮತ್ತೊಂದು ಅಧ್ಯಾಯವನ್ನು ಪ್ರಾರಂಭಿಸಿ ಜನರ ಜೊತೆ ಸದಾ ಸೇವೆಗೆ ಬದ್ಧನಾಗಿರುತ್ತೇನೆ. ನಿಮ್ಮ ಸೋಲು ನಿಜವಾಗಿ ಅದು ಸೋಲಲ್ಲ ಎಂದು ಮತದಾರರು ಅಭಿಮಾನಿಗಳು ಸಾಂತ್ವನ ಹೇಳುತ್ತಿದ್ದು ಜನ ಪ್ರೀತಿಗೆ ನಾನು ಶಿರಬಾಗುತ್ತೇನೆ. – ಡಾ. ಉಮೇಶ್ ಜಾಧವ್, ಮಾಜಿ ಸಂಸದರು.

ಹಿಂದಿ ಪ್ರಚಾರ ಸಭಾದಲ್ಲಿ ಜೂನ್ 23ರಂದು ಭಾನುವಾರ ಬನ್ನಪ್ಪ ಬಿ.ಕೆ ಅವರ ” ಕಾಮನ್ ಸೆನ್ಸ್ ” ಕೃತಿಯನ್ನು ಲೋಕಾರ್ಪಣೆ ಮಾಡಿ ಮಾತನಾಡಿ ಕಾಮನ್ ಸೆನ್ಸ್ ಎಂಬುದು ಕೇವಲ ಸುಶಿಕ್ಷಿತರಲ್ಲಿ ಮಾತ್ರ ಇರದೆ ಸಾಮಾನ್ಯ ಹಳ್ಳಿಗಾಡಿನ ಜನರಲ್ಲಿ ಹೆಚ್ಚಾಗಿ ಕಾಣಲು ಸಾಧ್ಯ. ಹಳ್ಳಿಗರು ಜನರೊಡನೆ ತೋರುವ ದಯೆ, ಕರುಣೆ ಎಲ್ಲವೂ ಶಿಕ್ಷಣದಿಂದ ಲಭ್ಯವಾಗುವುದಿಲ್ಲ. ಅದು ಬದುಕಿನಿಂದ ಕಲಿತ ವಿದ್ಯೆಯಾಗಿದೆ. ಇದರಿಂದಾಗಿ ಪಟ್ಟಣವಾಸಿಗಳಿಗಿಂತಲೂ ಹಳ್ಳಿಗಳಲ್ಲಿ ನೋವು ,ಧೈರ್ಯ ತುಂಬುವ ಕಾಮನ್ ಸೆನ್ಸ್ ಹೆಚ್ಚಿಗಿದೆ ಎಂದು ಹೇಳಿದರು.

ರಾಜಕೀಯದಲ್ಲಿ ಧರ್ಮಸಿಂಗ್ ಅವರಲ್ಲಿ ಕಾಮನ್ ಸೆನ್ಸ್ ಅತಿಯಾಗಿರುವುದನ್ನು ನಾನು ಕಂಡಿದ್ದೇನೆ. ಆ ಕಾರಣಕ್ಕಾಗಿ ಅವರು ಮುಖ್ಯಮಂತ್ರಿಯಾದರು. ಕಾಮನ್ ಸೆನ್ಸ್ ಅನ್ನು ಬಳಸಿ ಬದುಕನ್ನು ಉತ್ತಮಗೊಳಿಸಬೇಕು. ಅದಕ್ಕಾಗಿ ಬನ್ನಪ್ಪ ಅವರು ಬರೆದ ಈ ಕೃತಿ ಎಲ್ಲರಿಗೂ ಪ್ರೇರಣೆಯಾಗಲಿ ಎಂದು ಶುಭ ಕೋರಿದರು. ವಿಧಾನ ಪರಿಷತ್ ಸದಸ್ಯರಾದ ಶಶಿಲ್ ಜಿ ನಮೋಶಿಯವರು ಮಾತನಾಡಿ ಕೃತಕ ಬುದ್ಧಿಮತ್ತೆಯ ಈ ಕಾಲದಲ್ಲಿ ಸಾಮಾನ್ಯ ಜ್ಞಾನ ಎಲ್ಲರಿಗೂ ಅತ್ಯಂತ ಅನುಕೂಲವಾಗಿರಕ್ಕಂತದ್ದು ಮತ್ತು ಅದನ್ನು ಹೆಚ್ಚಾಗಿ ಬಳಸಿ ಜೀವನ ಸಾರ್ಥಕ ಮಾಡಿಕೊಳ್ಳಬೇಕಾಗಿದೆ ಎಂದರು.

ಕೃತಿಯ ಲೇಖಕರಾದ ಬನ್ನಪ್ಪ ಬಿ.ಕೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಕಾಮನ್ ಸೆನ್ಸ್ ಕುರಿತಾಗಿ ಇಂಗ್ಲಿಷ್ ಕೃತಿಗಳನ್ನು ಓದಿದ ನಂತರ ಕನ್ನಡದಲ್ಲಿ ಕೃತಿ ಬರೆಯಲು ಪ್ರೇರಣೆ ದೊರಕಿದೆಯಲ್ಲದೆ ಆಂಗ್ಲ ಭಾಷೆಯ ಪುಸ್ತಕಗಳಿಗಿಂತಲೂ ಹೆಚ್ಚು ಅರ್ಥಪೂರ್ಣವಾಗಿ ಕನ್ನಡದಲ್ಲಿ ಕಾಮನ್ ಸೆನ್ಸ್ ನ ಕುರಿತಾಗಿ ಬರೆಯಲು ಸಾಧ್ಯವಾಯಿತು. ಪ್ರತಿಯೊಬ್ಬರಲ್ಲೂ ಕಾಮನ್ ಸೆನ್ಸ್ ಇದ್ದರೂ ಕೂಡ ಅದನ್ನು ಸೂಕ್ತ ಕಾಲದಲ್ಲಿ ಬಳಸದೆ ಇರುವುದರಿಂದ ದೊಡ್ಡ ಹಡಗು ಸಣ್ಣ ರಂಧ್ರವೊಂದರಿಂದಾಗಿ ನೀರು ನುಗ್ಗಿ ಮುಳುಗುವಂತೆ ಜೀವನ ಹಾಳಾಗುತ್ತಿದೆ. ಜೀವನದಲ್ಲಿ ಕೈಗೊಳ್ಳುವ ಪ್ರತಿ ನಿರ್ಧಾರ ಬಹಳ ಮುಖ್ಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶಾಸಕರಾದ ಡಾ. ಅವಿನಾಶ್ ಜಾಧವ್, ಹಿಂದುಳಿದ ವರ್ಗಗಳ ಮೋರ್ಚಾದ ಕಾರ್ಯದರ್ಶಿ ಅಯ್ಯಣ್ಣ ಮ್ಯಾಕೇರಿ, ಕಾಡಾ ಮಾಜಿ ಅಧ್ಯಕ್ಷರಾದ ಶರಣಪ್ಪ ತಳವಾರ್, ಸೋಮನಾಥ ಪಾಟೀಲ್ ಬೀದರ್, ನಿವೃತ್ತ ಪ್ರಾಂಶುಪಾಲರಾದ ಕಾಶೀನಾಥ ಪಾಟೀಲ್ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಓಂ ಪ್ರಕಾಶ್ ಪಾಟೀಲ್ ಸ್ವಾಗತಿಸಿ ಆನಂದ ಸಿದ್ದಾಮಣಿ ಧನ್ಯವಾದವಿತ್ತರು.
ಈ ಕಾರ್ಯಕ್ರಮದಲ್ಲಿ ಸೂರ್ಯಕಾಂತ ಸೊನ್ನದ,ಸಿದ್ದಪ್ಪ ತಳ್ಳಳ್ಳಿ ಪ್ರಭಾಕರ್ ಜೋಶಿ, ಡಾ. ಸದಾನಂದ ಪೆರ್ಲ ,ವೀರೇಂದ್ರ ರಾಯ್ ಕೋಡ್, ಡಾ. ಸುಧಾ ಹಾಲ ಕಾಯಿ, ಡಾ. ನಾಮದೇವ ರಾಥೋಡ್, ಡಾ. ಬಿ ಆರ್ ಅಣ್ಣಸಾಗರ್, ಡಾ. ಶ್ರೀಶೈಲ ಬಿರಾದರ್, ಡಾ. ವೀರಶೆಟ್ಟಿ ಗಾರಂಪಲ್ಲಿ ಮತ್ತಿತರರು ಉಪಸ್ಥಿತರಿದ್ದರು.

emedialine

Recent Posts

ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ರಾಜಶೇಖರ್ ತಲಾರಿಗೆ ಮಾಧ್ಯಮ ರತ್ನ ಪ್ರಶಸ್ತಿ

ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…

2 hours ago

24 ನೇ ವರ್ಷದ `ಅಮ್ಮ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ

ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…

3 hours ago

ಚಿಂಚೋಳಿ: ಪ್ರವಾದಿ ಅವಹೇಳನ ಖಂಡಿಸಿ ಪ್ರತಿಭಟನೆ

ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…

5 hours ago

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

16 hours ago

ಕಲಬುರಗಿ; ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…

18 hours ago

ಕೈಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಉದ್ಯಮಿಗಳ ಅಹವಾಲು ಆಲಿಸಿದ ಬಿ.ಫೌಜಿಯಾ ತರನ್ನುಮ್

ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…

18 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420