ಸಂಗೀತದ ರಾಗಗಳಿಂದ ರೋಗ ನಿವಾರಣೆ

0
7

ಕಲಬುರಗಿ : ಸಂಗೀತವು ಇಂದಿನ ದಿನ ಮಾನದಲ್ಲಿ ಮನುಷ್ಯನಿಗೆ ಶಾಂತಿ ಮತ್ತು ನೆಮ್ಮದಿ ನೀಡುತ್ತಿದೆ. ಸಂಗೀತದ ರಾಗಗಳಿಂದ ರೋಗ ನಿವಾರಣೆ ಮಾಡಲಾಗುತ್ತದೆ ಎಂದು ವಿ.ಜಿ.ಮಹಿಳಾ ಮಹಾವಿದ್ಯಾಲಯದ ಸಂಗೀತ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಮುಖಿಮ್ ಮೀಯಾ ಅಭಿಪ್ರಾಯಪಟ್ಟರು.

ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ,ವಾಣಿಜ್ಯ ಮತ್ತು ವಿಜ್ಞಾನ ಪದವಿ ಮಹಿಳಾ ಮಹಾವಿದ್ಯಾಲಯದಲ್ಲಿ ಗುರುವಾರ ಸಂಗೀತ ವಿಭಾಗದ ವತಿಯಿಂದ ವಿಶ್ವಸಂಗೀತ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಸಂಗೀತಕ್ಕೆ ಯಾವುದೇ ಜಾತಿ, ಧರ್ಮ ಸೀಮಿತವಾಗಿಲ್ಲ ಅದು ವಿಶ್ವವ್ಯಾಪಿಯಾಗಿದೆ. ಸಂಗೀತವು ನಮ್ಮ ಜೀವನದ ಪ್ರತಿಯೊಂದು ಭಾಗದಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತದೆ. ಸಂತೋಷ, ಸಕಾರಾತ್ಮಕತೆ ಮತ್ತು ಮನರಂಜನೆ ತರುತ್ತದೆ. ಇದು ಭಾವನೆಗಳನ್ನು ಹೊತ್ತುಕೊಂಡು ವಿವಿಧ ಸಮಸ್ಯೆಗಳನ್ನು ಪರಿಹರಿಸುತ್ತದೆ. ಖಿನ್ನತೆ, ಅಘಾತ ಮತ್ತು ಆತಂಕದಲ್ಲಿ ಸಂಗೀತವು ಸಹಾಯಕವಾಗುತ್ತದೆ ಎಂದು ಹೇಳಿದರು.

Contact Your\'s Advertisement; 9902492681

ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ಪುಟ್ಟಮಣಿ ದೇವಿದಾಸ ಮಾತನಾಡಿ, ಸಂಗೀತವು ಪುರಾತನವಾದದ್ದು, ಗ್ರಾಮೀಣ ಪ್ರದೇಶಗಳಲ್ಲಿ ಜನರಿಂದ ಜನರಿಗೆ ಅನೇಕ ಜನಪದಗೀತೆಗಳು ಬೆಳೆದುಕೊಂಡು ಬಂದಿವೆ. ಸಂಗೀತವು ಪ್ರತಿಯೊಂದು ಜೀವಿಗಳಿಗೂ ಇಂಪನ್ನು ನೀಡುತ್ತದೆ. ಇಂದಿನ ಆಧುನಿಕ ಯುಗದಲ್ಲಿ ವೈದ್ಯರು ರೋಗಿಗಳಿಗೆ ಸಂಗೀತ ಆಲಿಸುವಂತೆ ಸೂಚಿಸುತ್ತಿದ್ದಾರೆ ಎಂದು ತಿಳಿಸಿದರು.

ನಂತರ ಆಕಾಶವಾಣಿ ಹಿರಿಯ ಸಂಗೀತ ಕಲಾವಿದರಾದ ಶಿವರುದ್ರಯ್ಯ ಕಲಬುರ್ಗಿಮಠ ಗೌಡಗಾಂವ ಇವರಿಂದ ವಿಶೇಷ ಸಂಗೀತ ಕಾರ್ಯಕ್ರಮ ನಡೆಯಿತು. ಮಹಾವಿದ್ಯಾಲಯದ ಐಕ್ಯೂಎಸಿ ಸಂಯೋಜಕರಾದ ಡಾ.ಸಿದ್ಧಲಿಂಗರೆಡ್ಡಿ, ವಿಭಾಗದ ಮುಖ್ಯಸ್ಥರಾದ ಡಾ.ಸೀಮಾ ಪಾಟೀಲ ವೇದಿಕೆ ಮೇಲಿದ್ದರು.

ಸಂಗೀತ ಪ್ರಾಧ್ಯಾಪಕರಾದ ವೀರಭದ್ರಯ್ಯ ಸ್ಥಾವರಮಠ ಸ್ವಾಗತಿಸಿ, ನಿರೂಪಿಸಿದರು. ಕು. ಅಕ್ಷತಾ ಹಿರೇಮಠ ಮತ್ತು ಕು.ಸ್ಫೂರ್ತಿ ಪಂಚಾಳ ಪ್ರಾರ್ಥಿಸಿದರು. ಮಹಾವಿದ್ಯಾಲಯದ ಶಿಕ್ಷಕ, ಶಿಕ್ಷಕೇತರರು ಮತ್ತು ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here