ಬಿಸಿ ಬಿಸಿ ಸುದ್ದಿ

ಆಂದೋಲಾ ಸ್ವಾಮೀಜಿಗೆ ಘತ್ತರಗಾ ಗ್ರಾಮಸ್ಥರ ಸವಾಲು

ಭಾಗ್ಯ ವಂತಿ ದೇವಸ್ಥಾನ ಅಭಿವೃದ್ಧಿ ಘತ್ತರಗಾಕ್ಕೆ ಬಂದು ಕಣ್ತೆರೆದು ನೋಡಲಿ

ಕಲಬುರಗಿ: ಹಿರಿಯ ಕೆಎಎಸ್ ಅಧಿಕಾರಿ ಹಾಗೂ ಹಿಂದಿನ‌ ಕಲಬುರಗಿ ಅಪರ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ ಅವರು ಅಫಜಲಪುರ ತಾಲೂಕಿನ ಘತ್ತರಗಾ ಭಾಗ್ಯವಂತಿ ದೇವಸ್ಥಾನವನ್ನು ಮಾದರಿ ಎನ್ನುವಂತೆ ಅಭಿವೃದ್ಧಿ ಗೊಳಿಸಿದ್ದು, ಆಂದೋಲಾದ ಸಿದ್ಧಲಿಂಗ ಸ್ವಾಮೀಜಿ ಘತ್ತರಗಾ ಕ್ಕೆ ಬಂದು ಕಣ್ಣು ತೆರೆದು ನೋಡಲಿ ಎಂದು ಘತ್ತರಗಾ ಗ್ರಾಮಸ್ಥರು ಸವಾಲು ಹಾಕಿದರು.

2015-16 ರಲ್ಲಿ ಘತ್ತರಗಾ ಭಾಗ್ಯವಂತಿ ದೇವಸ್ಥಾನದ ಆಡಳಿತಾಧಿಕಾರಿಯಾಗಿ ದೇವಾಲಯ ಸುಕ್ಷೇತ್ರ ಸರ್ವ ನಿಟ್ಟಿನಲ್ಲಿ ಅಭಿವೃದ್ದಿಗೊಳಿಸಿದ್ದಾರೆ. ಆದರೆ ಶ್ರೀ ರಾಮ ಸೇನೆಯ ಆಂದೋಲಾದ ಸಿದ್ದಲಿಂಗ ಸ್ವಾಮೀಜಿ ತೆಗ್ಗೆಳ್ಳಿ ಅವರ ಮೇಲೆ ಇಲ್ಲ ಸಲ್ಲದ ಆರೋಪ ಮಾಡಿರುವುದು ಸಂಪೂರ್ಣ ಅಸತ್ಯದಿಂದ ಕೂಡಿದೆ ಎಂದು ಘತ್ತರಗಾ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರಾದ ರಾಚಪ್ಪ ನೇಲೋಗಿ, ಎಂ.ಬಿ ಬಿಲ್ಲಾಡ, ಗ್ರಾಮದ ಯುವ ಮುಖಂಡ ಲಕ್ಷ್ಮೀ ಕಾಂತ ಸಿಂಗೆ, ಕೋಲಿ ಸಮಾಜದ ಮುಖಂಡ ಲಚ್ಚಪ್ಪ ಜಮಾದಾರ, ಕಾರ್ಮಿಕ ಮುಖಂಡ ಸುನೀಲ‌ ಮಾನ್ಪಡೆ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಿದ್ದಾರ್ಥ ಬಸರಿಗಿಡ ಜಂಟಿ ಪತ್ರಿಕಾಗೋಷ್ಠಿ ಯಲ್ಲಿ ತಿಳಿಸಿದರು.

ಯಾವುದಾದ ಒಂದು ಶುಕ್ರವಾರ ಘತ್ತರಗಾ ಕ್ಕೆ ಬಂದು ಭಾಗ್ಯವಂತಿ ಗರ್ಭಗುಡಿಯೊಳಗೆ ನಿಂತು ದೇವಸ್ಥಾನ ಅಭಿವೃದ್ಧಿ ಯಾಗಿಲ್ಲ. ತೆಗ್ಗೆಳ್ಳಿ ಅವರು ಭೃಷ್ಟಾಚಾರ ಎಸಗಿದ್ದಾರೆ ಎಂದು ಹೇಳಲಿ. ಸುಮ್ಮನೆ ಪ್ರಚಾರ ಕ್ಕಾಗಿ ಸಾರ್ವಜನಿಕವಾಗಿ ಭೃಷ್ಟ ಅಧಿಕಾರಿ ಎಂದು ಹೇಳಿರುವುದು ಗ್ರಾಮಸ್ತರಾದ ತಮಗೆ ನೋವುಂಟಾಗಿದೆ. ಹೀಗಾಗಿ ಮುಂದಿನ 10 ದಿನದೊಳಗಾಗಿ ತೆಗ್ಗೆಳ್ಳಿ ಅವರ ಕುರಿತು ಮಾಡಿರುವ ಭೃಷ್ಟಾಚಾರ ಆರೋಪ ಸಾಬೀತು ಪಡಿಸುವ ದಾಖಲೆಗಳನ್ನು ಬಹಿರಂಗಪಡಿಸದೇ ಹೋದರೆ ಅವರ ವಿರುದ್ಧ ಘತ್ತರಗಾ ಗ್ರಾಮಸ್ಥರ ರೆಲ್ಲರೂ ಒಂದಾಗಿ ತೆಗ್ಗೆಳ್ಳಿ ಪರವಾಗಿ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.‌

ಆಂದೋಲಾ ಸಿದ್ಧಲಿಂಗ ಸ್ವಾಮೀಜಿ ಇನ್ಮುಂದೆಯಾದರೂ ಘತ್ತರಗಾ ದೇವಾಲಯದಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯಗಳ ಕುರಿತಾಗಿ ಅಪಪ್ರಚಾರ ಮಾಡುವುದನ್ನು ನಿಲ್ಲಿಸದಿದ್ದರೆ ಅವರ ವಿರುದ್ದ ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

1.84 ಕೋ.ರೂ ವೆಚ್ಚದಲ್ಲಿ ತೆಗ್ಗೆಳ್ಳಿ ಅವರು ಆಡಳಿತಾಧಿಕಾರಿಯಾಗಿ ಘತ್ತರಗಾ ಭಾಗ್ಯವಂತಿ ಮೂರ್ತಿಯ ಸುತ್ತ ಕಂಪೌಂಡ ಗೋಡೆ, ಉದ್ಯಾನವನ ನಿರ್ಮಾಣ, ದೇವಾಲಯ ಎದುರು ರಸ್ತೆ, ವಿಭಜಕ ನಿರ್ಮಾಣ, ಬೀದಿ ದೀಪಗಳ ಅಳವಡಿಕೆ, ಶಿವಾನುಭವ ಮಂಟಪ, ದಾಸೋಹ ಮಂದಿರದಿಂದ ಯಾತ್ರಿಕ ನಿವಾಸವರೆಗೂ ರಸ್ತೆ ನಿರ್ಮಾಣ, ಪಾರ್ಕಿಂಗ್, ಪುಟಪಾತ್, ಶೌಚಾಲಯ ನಿರ್ಮಾಣ ಸೇರಿದಂತೆ ನೂರಾರು ಕಾಮಗಾರಿಳನ್ನು ಮುತುವರ್ಜಿ ವಹಿಸಿ ನಿರ್ಮಿಸಿದ್ದಾರೆ ಎಂದು ಕಾಮಗಾರಿ ಗಳ ವಿವರಣೆ ನೀಡಿದರು.

ಪ್ರಮುಖವಾಗಿ ದೇವಾಲಯದ ಸುರಕ್ಷತೆ ಗಾಗಿ ಸಿಸಿ ಕ್ಯಾಮರಾಗಳ ಕಣ್ಗಾವಲು, ಗಣಕೀಕೃತ ರಸೀದಿ ವ್ಯವಸ್ಥೆ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ದಾಸೋಹ ವ್ಯವಸ್ಥೆ, ಭಕ್ತರ ನೂಕು ನುಗ್ಗಲು ತಡೆಯಲು ಅತ್ಯುತ್ತಮ ಕ್ಯೂ ವ್ಯವಸ್ಥೆ ಕಲ್ಪಿಸುವುದು ಸೇರಿದಂತೆ ಘತ್ತರಗಾ ಭಾಗ್ಯವಂತಿ ದೇವಿ ಸೌಂದರೀಕರಣ ಹೆಚ್ಚಿಸಿದ್ದಕ್ಕೆ ಘತ್ತರಗಾ ಗ್ರಾಮದ ಘನತೆ ಭೀಮಾಶಂಕರ ತೆಗ್ಗೆಳ್ಳಿ ಅವರಿಂದ ಹೆಚ್ಚಾಗಿದೆ ಎಂದು ಹೆಮ್ಮೆಯಿಂದ ಹೇಳುತ್ತೇವೆ ಎಂದರು. ಗ್ರಾಮದ ಇತರ ಹಲವಾರು ಮುಖಂಡರು ಹಾಜರಿದ್ದರು.

emedialine

Recent Posts

ಪಠ್ಯಕ್ರಮ ರಚನೆ ಗುಣಾತ್ಮಕ ಅಂಶಗಳಿಂದ ಕೂಡಿರಲಿ

ವಿಜಯಪುರ: ಇಂದಿನ ಪ್ರಸ್ತುತ ಶಿಕ್ಷಣ ಪದ್ದತಿ ಕೌಶಲ್ಯಾಧಾರಿತ ಹಾಗೂ ಔದ್ಯೋಗಿಕ ಮತ್ತು ಉದ್ಯೋಗ ಪೂರಕನಂತೆ ಇರಬೇಕು ಎಂದು ಕರ್ನಾಟಕ ರಾಜ್ಯ…

44 seconds ago

ಪತ್ರಕರ್ತ ಸಿದ್ರಾಮ್ ನಾಡಗೇರಿ ಪುತ್ರಿ ಸ್ಪಂದನಾ ಎಸ್. ನಡಗೇರಿಗೆ ಪತ್ರಕರ್ತರ ಸಂಘದಿಂದ ಸನ್ಮಾನ

ಹಾವೇರಿ: SSLC,PUC ಯಲ್ಲಿ 90% ಕಿಂತ ಹೆಚ್ಚು ಅಂಕ ಪಡೆದ ಪತ್ರಕರ್ತರ ಮಕ್ಕಳಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಬೆಂಗಳೂರು,…

15 mins ago

ಸೇವಾ ಮನೋಭಾವದ ಮನಸ್ಸು ಹೆಚ್ಚಾಗಲಿ: ಜ್ಯೋತಿ ಪಾಟೀಲ್

ಕಲಬುರಗಿ: ನೌಕರಿ ಕಾಯಕವಾದರೆ ತೃಪ್ತಿ ಜೀವನ, ವೃತ್ತಿಯಲ್ಲಿ ಸೇವಾ ಮನೋಭಾವ ಹೊಂದಿದರೆ ಆತ್ಮಶುದ್ಧಿಯಾಗಿ ಸಂತೃಪ್ತ ಜೀವನ ನಮ್ಮದಾಗುತ್ತದೆ ಎಂದು ಉಪಳಾಂವ…

20 mins ago

ಕಲಬುರಗಿ: ಕಾರ್ಮಿಕ ಸಚಿವರ ಅಧ್ಯಕ್ಷತೆಯಲ್ಲಿ ಜುಲೈ 5 ರಿಂದ 6 ವರೆಗೆ ಪ್ರಗತಿ ಪರಿಶೀಲನಾ ಸಭೆ

ಕಲಬುರಗಿ: ಕಾರ್ಮಿಕ ಸಚಿವರ ಅಧ್ಯಕ್ಷತೆಯಲ್ಲಿ ಕಲಬುರಗಿ ಮತ್ತು ಬೀದರ್ ಕಂದಾಯ ವಿಭಾಗದ ಜಿಲ್ಲೆಗಳ ಕಾರ್ಮಿಕ ಆಯುಕ್ತಾಲಯ ಹಾಗೂ ಇಲಾಖೆಗೆ ಸಂಬಂಧಿಸಿದ…

1 hour ago

ಪ್ರತಿಭೆಗೆ ಸೂಕ್ತ ಪುರಸ್ಕಾರ ಸಿಕ್ಕಾಗ ಸಾಧನೆ ಸಾಧ್ಯ

ವಾಡಿ: ಪ್ರತಿಯೊಬ್ಬರಿಗೂ ಗುರಿ ಇರಬೇಕು. ಆ ಗುರಿ ಸಾಧನೆಗೆ ಸಮರ್ಥ ಗುರುಗಳು ಬೇಕು ಅಂದಾಗ ಮಾತ್ರ ನಮ್ಮ ಗುರಿ ಈಡೇರಲು…

2 hours ago

ಡಿಸಿಸಿ ಅಧ್ಯಕ್ಷರನ್ನಾಗಿ ಮುಕ್ತಾರ್ ಪಟೇಲ್ ನೇಮಕಕ್ಕೆ ವಸೀಂ ಖಾನ್ ಒತ್ತಾಯ

ಎಂ.ಡಿ ಮಶಾಖ ಚಿತ್ತಾಪುರ ಚಿತ್ತಾಪುರ: ಕಾಂಗ್ರೆಸ್‌ ಪಕ್ಷದ ತಾಲೂಕು ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಹಿರಿಯ ಕಾಂಗ್ರೆಸ್ ಪಕ್ಷದ…

2 hours ago