ಆಂದೋಲಾ ಸ್ವಾಮೀಜಿಗೆ ಘತ್ತರಗಾ ಗ್ರಾಮಸ್ಥರ ಸವಾಲು

0
99

ಭಾಗ್ಯ ವಂತಿ ದೇವಸ್ಥಾನ ಅಭಿವೃದ್ಧಿ ಘತ್ತರಗಾಕ್ಕೆ ಬಂದು ಕಣ್ತೆರೆದು ನೋಡಲಿ

ಕಲಬುರಗಿ: ಹಿರಿಯ ಕೆಎಎಸ್ ಅಧಿಕಾರಿ ಹಾಗೂ ಹಿಂದಿನ‌ ಕಲಬುರಗಿ ಅಪರ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ ಅವರು ಅಫಜಲಪುರ ತಾಲೂಕಿನ ಘತ್ತರಗಾ ಭಾಗ್ಯವಂತಿ ದೇವಸ್ಥಾನವನ್ನು ಮಾದರಿ ಎನ್ನುವಂತೆ ಅಭಿವೃದ್ಧಿ ಗೊಳಿಸಿದ್ದು, ಆಂದೋಲಾದ ಸಿದ್ಧಲಿಂಗ ಸ್ವಾಮೀಜಿ ಘತ್ತರಗಾ ಕ್ಕೆ ಬಂದು ಕಣ್ಣು ತೆರೆದು ನೋಡಲಿ ಎಂದು ಘತ್ತರಗಾ ಗ್ರಾಮಸ್ಥರು ಸವಾಲು ಹಾಕಿದರು.

2015-16 ರಲ್ಲಿ ಘತ್ತರಗಾ ಭಾಗ್ಯವಂತಿ ದೇವಸ್ಥಾನದ ಆಡಳಿತಾಧಿಕಾರಿಯಾಗಿ ದೇವಾಲಯ ಸುಕ್ಷೇತ್ರ ಸರ್ವ ನಿಟ್ಟಿನಲ್ಲಿ ಅಭಿವೃದ್ದಿಗೊಳಿಸಿದ್ದಾರೆ. ಆದರೆ ಶ್ರೀ ರಾಮ ಸೇನೆಯ ಆಂದೋಲಾದ ಸಿದ್ದಲಿಂಗ ಸ್ವಾಮೀಜಿ ತೆಗ್ಗೆಳ್ಳಿ ಅವರ ಮೇಲೆ ಇಲ್ಲ ಸಲ್ಲದ ಆರೋಪ ಮಾಡಿರುವುದು ಸಂಪೂರ್ಣ ಅಸತ್ಯದಿಂದ ಕೂಡಿದೆ ಎಂದು ಘತ್ತರಗಾ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರಾದ ರಾಚಪ್ಪ ನೇಲೋಗಿ, ಎಂ.ಬಿ ಬಿಲ್ಲಾಡ, ಗ್ರಾಮದ ಯುವ ಮುಖಂಡ ಲಕ್ಷ್ಮೀ ಕಾಂತ ಸಿಂಗೆ, ಕೋಲಿ ಸಮಾಜದ ಮುಖಂಡ ಲಚ್ಚಪ್ಪ ಜಮಾದಾರ, ಕಾರ್ಮಿಕ ಮುಖಂಡ ಸುನೀಲ‌ ಮಾನ್ಪಡೆ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಿದ್ದಾರ್ಥ ಬಸರಿಗಿಡ ಜಂಟಿ ಪತ್ರಿಕಾಗೋಷ್ಠಿ ಯಲ್ಲಿ ತಿಳಿಸಿದರು.

Contact Your\'s Advertisement; 9902492681

ಯಾವುದಾದ ಒಂದು ಶುಕ್ರವಾರ ಘತ್ತರಗಾ ಕ್ಕೆ ಬಂದು ಭಾಗ್ಯವಂತಿ ಗರ್ಭಗುಡಿಯೊಳಗೆ ನಿಂತು ದೇವಸ್ಥಾನ ಅಭಿವೃದ್ಧಿ ಯಾಗಿಲ್ಲ. ತೆಗ್ಗೆಳ್ಳಿ ಅವರು ಭೃಷ್ಟಾಚಾರ ಎಸಗಿದ್ದಾರೆ ಎಂದು ಹೇಳಲಿ. ಸುಮ್ಮನೆ ಪ್ರಚಾರ ಕ್ಕಾಗಿ ಸಾರ್ವಜನಿಕವಾಗಿ ಭೃಷ್ಟ ಅಧಿಕಾರಿ ಎಂದು ಹೇಳಿರುವುದು ಗ್ರಾಮಸ್ತರಾದ ತಮಗೆ ನೋವುಂಟಾಗಿದೆ. ಹೀಗಾಗಿ ಮುಂದಿನ 10 ದಿನದೊಳಗಾಗಿ ತೆಗ್ಗೆಳ್ಳಿ ಅವರ ಕುರಿತು ಮಾಡಿರುವ ಭೃಷ್ಟಾಚಾರ ಆರೋಪ ಸಾಬೀತು ಪಡಿಸುವ ದಾಖಲೆಗಳನ್ನು ಬಹಿರಂಗಪಡಿಸದೇ ಹೋದರೆ ಅವರ ವಿರುದ್ಧ ಘತ್ತರಗಾ ಗ್ರಾಮಸ್ಥರ ರೆಲ್ಲರೂ ಒಂದಾಗಿ ತೆಗ್ಗೆಳ್ಳಿ ಪರವಾಗಿ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.‌

ಆಂದೋಲಾ ಸಿದ್ಧಲಿಂಗ ಸ್ವಾಮೀಜಿ ಇನ್ಮುಂದೆಯಾದರೂ ಘತ್ತರಗಾ ದೇವಾಲಯದಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯಗಳ ಕುರಿತಾಗಿ ಅಪಪ್ರಚಾರ ಮಾಡುವುದನ್ನು ನಿಲ್ಲಿಸದಿದ್ದರೆ ಅವರ ವಿರುದ್ದ ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

1.84 ಕೋ.ರೂ ವೆಚ್ಚದಲ್ಲಿ ತೆಗ್ಗೆಳ್ಳಿ ಅವರು ಆಡಳಿತಾಧಿಕಾರಿಯಾಗಿ ಘತ್ತರಗಾ ಭಾಗ್ಯವಂತಿ ಮೂರ್ತಿಯ ಸುತ್ತ ಕಂಪೌಂಡ ಗೋಡೆ, ಉದ್ಯಾನವನ ನಿರ್ಮಾಣ, ದೇವಾಲಯ ಎದುರು ರಸ್ತೆ, ವಿಭಜಕ ನಿರ್ಮಾಣ, ಬೀದಿ ದೀಪಗಳ ಅಳವಡಿಕೆ, ಶಿವಾನುಭವ ಮಂಟಪ, ದಾಸೋಹ ಮಂದಿರದಿಂದ ಯಾತ್ರಿಕ ನಿವಾಸವರೆಗೂ ರಸ್ತೆ ನಿರ್ಮಾಣ, ಪಾರ್ಕಿಂಗ್, ಪುಟಪಾತ್, ಶೌಚಾಲಯ ನಿರ್ಮಾಣ ಸೇರಿದಂತೆ ನೂರಾರು ಕಾಮಗಾರಿಳನ್ನು ಮುತುವರ್ಜಿ ವಹಿಸಿ ನಿರ್ಮಿಸಿದ್ದಾರೆ ಎಂದು ಕಾಮಗಾರಿ ಗಳ ವಿವರಣೆ ನೀಡಿದರು.

ಪ್ರಮುಖವಾಗಿ ದೇವಾಲಯದ ಸುರಕ್ಷತೆ ಗಾಗಿ ಸಿಸಿ ಕ್ಯಾಮರಾಗಳ ಕಣ್ಗಾವಲು, ಗಣಕೀಕೃತ ರಸೀದಿ ವ್ಯವಸ್ಥೆ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ದಾಸೋಹ ವ್ಯವಸ್ಥೆ, ಭಕ್ತರ ನೂಕು ನುಗ್ಗಲು ತಡೆಯಲು ಅತ್ಯುತ್ತಮ ಕ್ಯೂ ವ್ಯವಸ್ಥೆ ಕಲ್ಪಿಸುವುದು ಸೇರಿದಂತೆ ಘತ್ತರಗಾ ಭಾಗ್ಯವಂತಿ ದೇವಿ ಸೌಂದರೀಕರಣ ಹೆಚ್ಚಿಸಿದ್ದಕ್ಕೆ ಘತ್ತರಗಾ ಗ್ರಾಮದ ಘನತೆ ಭೀಮಾಶಂಕರ ತೆಗ್ಗೆಳ್ಳಿ ಅವರಿಂದ ಹೆಚ್ಚಾಗಿದೆ ಎಂದು ಹೆಮ್ಮೆಯಿಂದ ಹೇಳುತ್ತೇವೆ ಎಂದರು. ಗ್ರಾಮದ ಇತರ ಹಲವಾರು ಮುಖಂಡರು ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here