ಹೈದರಾಬಾದ್ ಕರ್ನಾಟಕ

ಅಪ್ರಪ್ತ ಗರ್ಭಿಣಿ ತಾಯಿ ಮತ್ತು ಶಿಶು ಮರಣ ತಡೆಗಟ್ಟುವುದು ಅಗತ್ಯ: ಡಾ. ಅಬ್ದುಲ್ ರಹೀಮ್

ಶಹಾಬಾದ್: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಸಮುದಾಯ ಆರೋಗ್ಯ ಕೇಂದ್ರ ಶಹಬಾದ್ ಸಂಯುಕ್ತ ಆಶ್ರಯದಲ್ಲಿ ಸ್ನೇಹ ಕ್ಲಿನಿಕ್ ರಾಷ್ಟ್ರೀಯ ಕಿಶೋರ ಸ್ವಾಸ್ಥ್ಯ ಕಾರ್ಯಕ್ರಮದಡಿಯಲ್ಲಿ ಹದಿ ಹರೆಯದವರ ಆರೋಗ್ಯ ಮತ್ತು ಕ್ಷೇಮ ದಿನಾಚರಣೆ ನಗರ ಪೌಷ್ಟಿಕ ಆಹಾರ ಶಿಬಿರ ಜರುಗಿತು.

ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಆಗಮಿಸಿದ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿಗಳಾದಂತಹ ಮಹಮ್ಮದ್ ಅಬ್ದುಲ್ ರಹೀಮ್ ರವರು ಮಾತನಾಡುತ್ತಾ ಜನಿಸಿದ ಪ್ರತಿಯೊಬ್ಬ ಕೂಡ ವ್ಯಕ್ತಿಯು ಕೂಡ ಪ್ರೌಢ ವ್ಯವಸ್ಥೆಗೆ ಬಂದೇ ಬರುತ್ತಾನೆ ಆ ಸಮಯದಲ್ಲಿ ನಮಗೆ ಸಾಮಾಜಿಕ ದೈಹಿಕ ಮಾನಸಿಕ ಶೈಕ್ಷಣಿಕ ಬದಲಾವಣೆಗಳು ಉಂಟಾಗುತ್ತವೆ ವಿಶೇಷವಾಗಿ ಹೆಣ್ಣು ಮಕ್ಕಳು ದೇಹ ಹಂತ ಹಂತವಾಗಿ ಬೆಳೆದು ಸಮಯಕ್ಕೆ ಸರಿಯಾಗಿ ಅಂದರೆ 13 ವಯಸ್ಸಿನಿಂದ 16 ವಯಸ್ಸಿನವರೆಗೆ ಋತುಮತಿಯಾಗುತ್ತಾರೆ ಆ ಸಮಯದಲ್ಲಿ ಅವನಿಕ್ಷಿತವಾಗಿ ಸಮಸ್ಯೆಗಳು ಬಂದಾಗ ಅದಕ್ಕೆ ಹೊಂದಿಕೊಳ್ಳಲು ನಮ್ಮ ದೇಹ ಸಮಯ ತೆಗೆದುಕೊಳ್ಳುತ್ತದೆ ಮತ್ತು 18 ವರ್ಷದ ನಂತರವೇ ಮದುವೆ ಮಾಡಬೇಕು ಮದುವೆಯಾದ ಪ್ರತಿಯೊಬ್ಬ ಮಹಿಳೆಯು ಗರ್ಭಿಣಿಯಾಗುವುದರ ಬಗ್ಗೆ ತನ್ನದೇ ಆದ ಕನಸನ್ನು ಹೊಂದಿರುವುದು ಸಹಜ ಮಗುವನ್ನು ಹೊತ್ತು ಹೆರುವುದು ತಾಯಿ ಹೃದಯಕ್ಕೆ ಸಂತೋಷ ಆದರೆ ಹದಿಹರೆಯದಲ್ಲಿ ಗರ್ಭಧಾರಣೆ ಹೊಂದುವುದು ಕೂಡ ಪ್ರಕೃತಿ ವಿರುದ್ಧವಾದ ಕ್ರಿಯೆಗಳಲ್ಲಿ ಒಂದಾಗಿದೆ ಎಂದು ಹೇಳಿದರು.

ಅದೇ ರೀತಿಯಾಗಿ ಮುಖ್ಯ ಅತಿಥಿಗಳಾಗಿ ಆಗಮಿಸಿದಂತಹ ರವಿ ಠಾಕೂರ್ ಡಿಸಿಪಿ ವಿಭಾಗ ರವರು ಮಾತನಾಡುತ್ತಾ ಹದಿ ಹರೆಯದವರಲ್ಲಿ  ಕ್ಷೀಪ್ರ ದೈಹಿಕ ಬೆಳವಣಿಗೆಯಿಂದಾಗಿ ಕಬ್ಬಿಣ ಮತ್ತು ಕ್ಯಾಲ್ಸಿಯಂ ಅವಶ್ಯಕತೆ ವಿಶೇಷವಾಗಿ ಅತಿ ಹರೆದವರ ಹೆಣ್ಣು ಮಕ್ಕಳಲ್ಲಿ ಹೆಚ್ಚಾಗುತ್ತಿದೆ ಬೆಳಗಿನ ದೇಹದ ದ್ರವ್ಯ ರಾಶಿ ಮತ್ತು ಅಸ್ಥಿರ ಪಂಜರದ ಬೆಳವಣಿಗೆಯ ತುರಿತ ಹೆಚ್ಚಳದಿಂದಾಗಿ ಕ್ಯಾಲ್ಸಿಯಂ ಅಗತ್ಯವು ಬಾಲ್ಯ ಅಥವಾ ಪ್ರೌಢ ವ್ಯವಸ್ಥೆಯಲ್ಲಿ ಇರುವುದಕ್ಕಿಂತ ಹೆಚ್ಚಾಗಿದೆ ಅತಿ ಅರೆಯದ ವಯಸ್ಸು 10-19 ವರೆಗಿನ ಬಾಲ್ಯ ಮತ್ತು ಪ್ರೌಢ ವ್ಯವಸ್ಥೆಯ ನಡುವಿನ ಜೀವನದ ಹಂತವಾಗಿದೆ ಎಂದು ಹೇಳಿದರು

ಅದೇ ರೀತಿಯಾಗಿ ಪ್ರಾಸ್ತವಿಕವಾಗಿ ಮಾತನಾಡಿದ ಅಮರೇಶ ಇಟಗಿಕರ್ ಅವರು ರಾಷ್ಟ್ರೀಯ ಕಿಶೋರ ಸ್ವಾಸ್ಥ್ಯ ಕಾರ್ಯಕ್ರಮ ಹಾಗೂ ಸ್ನೇಹ ಕ್ಲಿನಿಕ್ ಗಳ ಸೇವೆಗಳ ಬಗ್ಗೆ ವಿವರವಾಗಿ ತಿಳಿಸಿಕೊಟ್ಟರು ಅದೇ ಹರದ ವಯಸ್ಸು ಹತ್ತರಿಂದ 19 ವರೆಗಿನ ಬಾಲ್ಯ ಮತ್ತು ಪ್ರೌಢಾವಸ್ಥೆ ನಡುವಿನ ಜೀವನದ ಹಂತವಾಗಿದೆ ಇದು ಮಾನವ ಬೆಳವಣಿಗೆ ಒಂದು ವಿಶಿಷ್ಟಾಂತವಾಗಿದೆ ಅದೇ ರವರು ತುಳಿತ ದೈಹಿಕ ಹರಿವಿನ ಮತ್ತು ಮಾನಸಿಕ ಬೆಳವಣಿಗೆಯನ್ನು ಇದುವರೆಗೆ ಹೇಗೆ ಭಾವಿಸುತ್ತಾರೆ ಯೋಚಿಸುತ್ತಾರೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಮುತ್ತು ಅವರ ಸುತ್ತಲಿರುವ ಪ್ರಪಂಚದಲ್ಲಿ ಸನ್ಮಾನ ನಡೆಸುತ್ತಾರೆ ಆಹಾರ ದೈಹಿಕ ಚಟುವಟಿಕೆ ಲೈಂಗಿಕ ಚಟುವಟಿಕೆಗಳಿಗೆ ಇಂದಿನ ಯುವಕರು ಒಳಗಾಗುತ್ತಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೋಯಿಸಿದಂತಹ ಡಾ. ಶಂಕರ್ ರಾಥೋಡ್ ಪ್ರಾಥಮಿಕ ಆರೋಗ್ಯ ಕೇಂದ್ರ ಶಹಾಬಾದ್ ರವರು ಮಾತನಾಡುತ್ತಾ ಉತ್ತಮ ಆರೋಗ್ಯದಲ್ಲಿ ಬೆಳೆಯಲು ಮತ್ತು ಅಭಿವೃದ್ಧಿಪಡಿಸಲು ಹದಿಹರೆಯದವರಿಗೆ ವಯಸ್ಸಿಗೆ ಸೂಕ್ತವಾದ ಸಮಗ್ರ ಲೈಂಗಿಕ ಶಿಕ್ಷಣ ಸೇರಿದಂತೆ ಮಾಹಿತಿಯ ಅಗತ್ಯವಿದೆ ಜೀವನದ ಕೋಶಗಳನ್ನು ಅಭಿವೃದ್ಧಿಪಡಿಸುವ ಅವಕಾಶಗಳು ಸಮಾನ ಮನಸ್ಕರು ಪರಿಣಾಮಕಾರಿ ಆರೋಗ್ಯ ಸೇವೆಗಳು ಮತ್ತು ಸುರಕ್ಷಿತ ಮತ್ತು ಬೆಂಬಲ ಪರಿಸರ ಅವರ ಆರೋಗ್ಯವನ್ನು ಸುಧಾರಿಸಲು ಮತ್ತು ಕಾಪಾಡಿಕೊಳ್ಳಲು ವೈದ್ಯಾಧಿಕಾರಿಗಳು ಮಧ್ಯಸ್ಥಿಕೆ ವಹಿಸಬೇಕು ಆಪ್ತಸಲ್ಮಲೋಚನೆ ಮಾಡಬೇಕು ಅದೇ ಅವರ ವಯಸ್ಸಿನಲ್ಲಿ ಸಮಾಚಾರ ಬಗ್ಗೆ ಚರ್ಚೆ ಮಾಡಬೇಕು ಎಂದು ಹೇಳಿದರು.

ಅದೇ ರೀತಿಯಾಗಿ ಅತಿಥಿಗಳಾಗಿ ಆಗಮಿಸಿದಂತಹ ಶಬ್ಬೀರ್ ನದಾಫ್ ಕಾರ್ಯಕ್ರಮ ಅಧಿಕಾರಿಗಳು ಜಪಾಯಿಗೋ ಮತ್ತು ಅಶ್ವಥ್ ರೆಡ್ಡಿ ಕಾರ್ಯಕ್ರಮ ಸಂಯೋಜಕರು ಜಪಾಯಿಗೊ ಕಾರ್ಯಕ್ರಮದಲ್ಲಿ ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ಯೂಸಫ ನಾಕೇದಾರ. ನಿರಿಕ್ಷಣಾಧಿಕಾರಿ ಮತ್ತು ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿಗಳಾದಂತಹ ವಾಣಿಶ್ರೀ, ಜಯಶ್ರೀ, ಪದ್ಮಾವತಿ, ನಂದಿನಿ ನರ್ಸಿಂಗ್ ಅಧಿಕಾರಿ, ಶರಣಮ್ಮ ಪ್ರಾಥಮಿಕ ನಿರೀಕ್ಷಣಾಧಿಕಾರಿ, ಆಪ್ತ ಸಮಾಲೋಚಕರಾದ ಅಮರೇಶ್ ಇಟಗಿಕರ್ ಹಾಗೂ ಶಂಕರ್ ವಾಲಿಕರ್ ಎಲ್ ಡಿ ಸಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

emedialine

Recent Posts

ಭಕ್ತರು ಹೆಚ್ಚಿನ ಸಹಾಯ ಸಹಕಾರ ಮನೋಭಾವನೆ ಹೊಂದಲು ಕರೆ

ಕಲಬುರಗಿ; ಮೈಂದರಗಿಯ ಪೂಜ್ಯ ಶ್ರೀ. ಮೃತುಂಜ್ಯಯ ಸ್ವಾಮಿಗಳು (ವಿರಕ್ತ ಮಠ), (ಆಕಾಶ ಮುತ್ಯಾವರು) ಸದ್ಗುರು ಶ್ರೀ ದಾಸಿಮಯ್ಯ ಕಾನೂನು ಸೇವಾ…

1 hour ago

ಡೆಂಗ್ಯೂಜ್ವರ ಹಾಗೂ ಚಿಕನ್ ಗುನ್ಯ್ ಜ್ವರ ನಿಯಂತ್ರಣಕ್ಕೆ ಸಹಕರಿಸಲು ಶಾಸಕ ಅಲ್ಲಪ್ರಭು ಪಾಟೀಲ ಸಲಹೆ

ಕಲಬುರಗಿ: ಇತ್ತಿಚಿನ ದಿನಗಲ್ಲಿ ಡೆಂಗ್ಯೂಜ್ವರ ಹಾಗೂ ಚಿಕನ್ ಗುನ್ಯ್ ಜ್ವರ ನಿಯಂತ್ರಣಕ್ಕೆ ಸಾರ್ವಜನಿಕರು ಸಹಕರಿಸಲು ಹಾಗೂ ಅಧಿಕಾರಿಗಳಿಗೆ ದಕ್ಷಿಣ ಮತಕ್ಷೇತ್ರದ…

2 hours ago

ಕಲಬುರಗಿ; ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಕಲಬುರಗಿ; ಕಲಬುರಗಿ ಜಿಲ್ಲೆಯ ಒಂಭತ್ತು ಶಿಶು ಅಭಿವೃದ್ಧಿ ಯೋಜನೆಗಳ ಕಚೇರಿಯಲ್ಲಿ ಖಾಲಿಯಿರುವ 61 ಅಂಗನವಾಡಿ ಕಾರ್ಯಕರ್ತೆಯರ ಹಾಗೂ 238 ಅಂಗನವಾಡಿ…

2 hours ago

ನೀರಾವರಿ ಸಲಹಾ ಸಮಿತಿಗೆ ರೈತ ಹೋರಾಟಗಾರರ ತೆಗೆದುಕೊಳ್ಳಿ; ಮಲ್ಲಿಕಾರ್ಜುನ ಸತ್ಯಂಪೇಟೆ

ಸುರಪುರ: ಕೃಷ್ಣಾ ಕಾಲುವೆಗಳಿಗೆಗೆ ನೀರು ಹರಿಸಲು ನಿರ್ಣಯ ಕೈಗೊಳ್ಳಲು ನಡೆಸುವ ನೀರಾವರಿ ಸಲಹಾ ಸಮಿತಿಗೆ ರೈತ ಹೋರಾಟಗಾರರನ್ನು ಸೇರಿಸಿಕೊಳ್ಳಬೇಕು ಎಂದು…

3 hours ago

ಅಖಿಲ ಭಾರತ ವೀ.ಲಿಂ ಮಹಾಸಭಾ ನೂತನ ಅಧ್ಯಕ್ಷ ನಿದೇರ್ಶಕರ ನೇಮಕ

ಸುರಪುರ: ತಾಲೂಕ ವೀರಶೈವ ಲಿಂಗಾಯಕ ಸಮಿತಿಯಂತೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಕೂಡ ಎರಡು ತಾಲೂಕಿನ ವೀರಶೈವ ಲಿಂಗಾಯತ…

3 hours ago

ಡೆಂಘೀ ವಿರೋಧಿ ಮಾಸಾಚರಣೆ | ಮನೆಯ ಹೊರಗೂ ಸ್ವಚ್ಛತೆಗೆ ಆದ್ಯತೆ ನೀಡಿದರೆ ಯಾವ ಕಾಯಿಲೆ ಬರದು

ಸುರಪುರ: ಎಲ್ಲರು ತಮ್ಮ ಮನೆಯೊಳಗೆ ಸ್ವಚ್ಛತೆಗೆ ಆದ್ಯತೆ ನೀಡುತ್ತಾರೆ,ಅದರಂತೆ ಮನೆಯ ಹೊರಗೂ ಸ್ವಚ್ಛತೆಗೆ ಆದ್ಯತೆ ನೀಡಿದಲ್ಲಿ ಡೆಂಘೀ ಸೇರಿದಂತೆ ಯಾವುದೇ…

3 hours ago