ಕಲಬುರಗಿ: ಕರ್ತವ್ಯದಲ್ಲಿ ಲೋಪ, ಬೇಜವಾಬ್ದಾರಿ ವರ್ತನೆ ಹಾಗೂ ಗ್ರಂಥಾಲಯದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕøತರ ಭಾವಚಿತ್ರಗಳ ಮುಂದೆ ಬೆರಣಗಳ(ಕುಳ್ಳು) ರಾಶಿ ಹಾಕಿ ಅವಮಾನಿಸಿರುವುದು ಸಾಬೀತಾಗಿರುವುದರಿಂದ ಗ್ರಾಪಂ ಗ್ರಂಥಾಲಯದ ಗ್ರಂಥಪಾಲಕಯನ್ನು ಸೇವೆಯಿಂದ ಅಮಾನತುಗೊಳ್ಳಿಸಿ ತಾಪಂ ಇಓ ಆದೇಶ ಹೊರಡಿಸಿದ್ದಾರೆ.
ಭಂಕೂರ ಗ್ರಾಪಂ ಗ್ರಂಥಾಲಯದ ಗ್ರಂಥಪಾಲಕಿ ಪಾರ್ವತಿ ಸಿದ್ದಯ್ಯಸ್ವಾಮಿ ಮಠಪತಿ ಅಮಾನತುಗೊಂಡ ಗ್ರಂಥಪಾಲಕಿ.ಈಗಾಗಲೇ ಗ್ರಂಥಾಲಯದಲ್ಲಿ ಕೆಲಸ ಮಾಡಲು ಆಗದೇ ನಾಗರಾಜ ಎಂಬ ವ್ಯಕ್ತಿಗೆ ನೇಮಕ ಮಾಡಿ ಆ ವ್ಯಕ್ತಿಗೆ ಕೀಲಿ ಕೈ ನೀಡಿರುವ ಆರೋಪ ಮತ್ತು 26-01-2018ರಲ್ಲಿ ಚಿತ್ತಾಪೂರ ತಾಪಂ ಇಓ ಗ್ರಂಥಾಲಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಗ್ರಂಥಾಲಯ ಮುಚ್ಚಿರುವುದು ಹಾಗೂ ಅನಧಿಕೃತವಾಗಿ ಗೈರಾಗಿರುವುದು, 2019 ರಂದು ಗಣರಾಜ್ಯೋತ್ವಸ ದಿನದಂದು ಧ್ವಜಾರೋಹಣ ಮಾಡದಿರುವುದು, ಕೆಕೆಆರ್‍ಡಿಬಿ ಯಿಂದ ಬಂದ ಸಾಮಗ್ರಿಗಳಾದ ಯುಪಿಎಸ್, ಬ್ಯಾಟರಿ, ಝಿರಾಕ್ಸ್ ಮಷಿನ್ ಬಳಕೆ ಮಾಡದೇ ಕರ್ತವ್ಯ ಲೋಪಗಳು ಎಸಗಿರುವುದು ಕಂಡುಬಂದಿರುವ ಹಿನ್ನೆ
ಸಮಯ ಪಾಲನೆ ಮಾಡದಿರುವುದು, ಗ್ರಂಥಾಲಯದಲ್ಲಿ ಅಳವಡಿಸಿದ ಬಯೋಮೆಟ್ರಿಕ್ ವ್ಯವಸ್ಥೆಯನ್ನು ಎರಡು ಬಾರಿ ಉದ್ದೇಶಪೂರ್ವಕವಾಗಿ ನಷ್ಟ ಮಾಡಿರುವ ಬಗ್ಗೆ ಭಂಕೂರ ಗ್ರಾಪಂ ಪಿಡಿಓ ಅವರು ತಾಪಂ ಇಓ ಅವರಿಗೆ ವರದಿ ಸಲ್ಲಿಸಿದ್ದರು. ಅಲ್ಲದೇ ಗ್ರಂಥಾಲಯಕ್ಕೆ ಗ್ರಾಪಂ ಪಿಡಿಓ ಹಾಗೂ ಗ್ರಾಪಂ ಸದಸ್ಯ ಭೇಟಿ ನೀಡಿದ ಸಂದರ್ಭದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕøತರ ಭಾವಚಿತ್ರಗಳ ಮುಂದೆ ಬೆರಣಗಳ(ಕುಳ್ಳು) ರಾಶಿ ಹಾಕಿ ಅವಮಾನಿಸಿರುವ ವಿಡಿಯೋಗಳು ಹಾಗೂ ಪತ್ರಿಕೆಗಳಲ್ಲಿ ಬಂದ ಸುದ್ದಿಗಳನ್ನು ಆಧರಿಸಿ ವಿಚಾರಣೆ ನಡೆಸಿದಾಗಲೂ ಸ್ಪಷ್ಟವಾದ ಮತ್ತು ನಿಖರವಾದ ಮಾಹಿತಿ ನೀಡದೇ ಇರುವುದರಿಂದ ತಾಪಂ ಇಓ ಅವರು ಸರ್ಕಾರದ ಅಧಿಸೂಚನೆ ನಿಯಮ 20(||) ರಲ್ಲಿಪ್ರದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ ಗ್ರಂಥಪಾಲಕಿ ಪಾರ್ವತಿ ಸಿದ್ದಯ್ಯಸ್ವಾಮಿ ಮಠಪತಿ ಅವರನ್ನು ಗ್ರಂಥಪಾಲಕ ಸೇವೆಯಿಂದ ತೆಗೆದು ಹಾಕಿ ಆದೇಶ ಹೊರಡಿಸಿದ್ದಾರೆ.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…