ಕಲಬುರಗಿ: ಭಂಕೂರ ಗ್ರಂಥಪಾಲಕಿ ಸೇವೆಯಿಂದ ಅಮಾನತು

0
219

ಕಲಬುರಗಿ: ಕರ್ತವ್ಯದಲ್ಲಿ ಲೋಪ, ಬೇಜವಾಬ್ದಾರಿ ವರ್ತನೆ ಹಾಗೂ ಗ್ರಂಥಾಲಯದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕøತರ ಭಾವಚಿತ್ರಗಳ ಮುಂದೆ ಬೆರಣಗಳ(ಕುಳ್ಳು) ರಾಶಿ ಹಾಕಿ ಅವಮಾನಿಸಿರುವುದು ಸಾಬೀತಾಗಿರುವುದರಿಂದ ಗ್ರಾಪಂ ಗ್ರಂಥಾಲಯದ ಗ್ರಂಥಪಾಲಕಯನ್ನು ಸೇವೆಯಿಂದ ಅಮಾನತುಗೊಳ್ಳಿಸಿ ತಾಪಂ ಇಓ ಆದೇಶ ಹೊರಡಿಸಿದ್ದಾರೆ.

ಭಂಕೂರ ಗ್ರಾಪಂ ಗ್ರಂಥಾಲಯದ ಗ್ರಂಥಪಾಲಕಿ ಪಾರ್ವತಿ ಸಿದ್ದಯ್ಯಸ್ವಾಮಿ ಮಠಪತಿ ಅಮಾನತುಗೊಂಡ ಗ್ರಂಥಪಾಲಕಿ.ಈಗಾಗಲೇ ಗ್ರಂಥಾಲಯದಲ್ಲಿ ಕೆಲಸ ಮಾಡಲು ಆಗದೇ ನಾಗರಾಜ ಎಂಬ ವ್ಯಕ್ತಿಗೆ ನೇಮಕ ಮಾಡಿ ಆ ವ್ಯಕ್ತಿಗೆ ಕೀಲಿ ಕೈ ನೀಡಿರುವ ಆರೋಪ  ಮತ್ತು 26-01-2018ರಲ್ಲಿ ಚಿತ್ತಾಪೂರ ತಾಪಂ ಇಓ ಗ್ರಂಥಾಲಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಗ್ರಂಥಾಲಯ ಮುಚ್ಚಿರುವುದು ಹಾಗೂ ಅನಧಿಕೃತವಾಗಿ ಗೈರಾಗಿರುವುದು, 2019 ರಂದು ಗಣರಾಜ್ಯೋತ್ವಸ ದಿನದಂದು ಧ್ವಜಾರೋಹಣ ಮಾಡದಿರುವುದು, ಕೆಕೆಆರ್‍ಡಿಬಿ ಯಿಂದ ಬಂದ ಸಾಮಗ್ರಿಗಳಾದ ಯುಪಿಎಸ್, ಬ್ಯಾಟರಿ, ಝಿರಾಕ್ಸ್ ಮಷಿನ್ ಬಳಕೆ ಮಾಡದೇ ಕರ್ತವ್ಯ ಲೋಪಗಳು ಎಸಗಿರುವುದು ಕಂಡುಬಂದಿರುವ ಹಿನ್ನೆ

Contact Your\'s Advertisement; 9902492681

ಸಮಯ ಪಾಲನೆ ಮಾಡದಿರುವುದು, ಗ್ರಂಥಾಲಯದಲ್ಲಿ ಅಳವಡಿಸಿದ ಬಯೋಮೆಟ್ರಿಕ್ ವ್ಯವಸ್ಥೆಯನ್ನು ಎರಡು ಬಾರಿ  ಉದ್ದೇಶಪೂರ್ವಕವಾಗಿ ನಷ್ಟ ಮಾಡಿರುವ ಬಗ್ಗೆ ಭಂಕೂರ ಗ್ರಾಪಂ ಪಿಡಿಓ ಅವರು ತಾಪಂ ಇಓ ಅವರಿಗೆ ವರದಿ ಸಲ್ಲಿಸಿದ್ದರು. ಅಲ್ಲದೇ ಗ್ರಂಥಾಲಯಕ್ಕೆ ಗ್ರಾಪಂ ಪಿಡಿಓ ಹಾಗೂ ಗ್ರಾಪಂ ಸದಸ್ಯ ಭೇಟಿ ನೀಡಿದ ಸಂದರ್ಭದಲ್ಲಿ  ಜ್ಞಾನಪೀಠ ಪ್ರಶಸ್ತಿ ಪುರಸ್ಕøತರ ಭಾವಚಿತ್ರಗಳ ಮುಂದೆ ಬೆರಣಗಳ(ಕುಳ್ಳು) ರಾಶಿ ಹಾಕಿ ಅವಮಾನಿಸಿರುವ ವಿಡಿಯೋಗಳು ಹಾಗೂ ಪತ್ರಿಕೆಗಳಲ್ಲಿ ಬಂದ ಸುದ್ದಿಗಳನ್ನು ಆಧರಿಸಿ ವಿಚಾರಣೆ ನಡೆಸಿದಾಗಲೂ ಸ್ಪಷ್ಟವಾದ ಮತ್ತು ನಿಖರವಾದ ಮಾಹಿತಿ ನೀಡದೇ ಇರುವುದರಿಂದ ತಾಪಂ ಇಓ ಅವರು ಸರ್ಕಾರದ ಅಧಿಸೂಚನೆ ನಿಯಮ 20(||) ರಲ್ಲಿಪ್ರದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ ಗ್ರಂಥಪಾಲಕಿ ಪಾರ್ವತಿ ಸಿದ್ದಯ್ಯಸ್ವಾಮಿ ಮಠಪತಿ ಅವರನ್ನು ಗ್ರಂಥಪಾಲಕ ಸೇವೆಯಿಂದ ತೆಗೆದು ಹಾಕಿ ಆದೇಶ ಹೊರಡಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here