ಕಲಬುರಗಿ: ವ್ಯಕ್ತಿಯೊಬ್ಬರು ಸತ್ತು ಬದುಕುವುದು ಹೇಗೆ ಎಂಬುದನ್ನು ಬರಹಗಾರ ಲಕ್ಕೂರ ಆನಂದ ಸಾಬೀತುಪಡಿಸಿದ್ದಾರೆ ಎಂದು ಗುಲ್ಬರ್ಗ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ದಯಾನಂದ ಅಗಸರ ಅಭಿಪ್ರಾಯಪಟ್ಟರು.
ಕನ್ನಡ ಅಧ್ಯಯನ ಸಂಸ್ಥೆ, ಗುಲ್ಬರ್ಗ ವಿಶ್ವವಿದ್ಯಾಲಯ, ಎಸ್.ಎಸ್ಟಿ ನೌಕರರ ಕ್ಷೇಮಾಭಿವೃದ್ಧಿ ( ಎಸ್ಇಡಬ್ಲೂಎ-ಸಿಯುಕೆ) ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ, ಸಮುದಾಯ ಇವರ ಸಹಯೋಗದಲ್ಲಿ ಹರಿಹರ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಕವಿ ಲಕ್ಕೂರ ಆನಂದ ನೆನಪು ಹಾಗೂ ಸಮಕಾಲೀನ ಸಾಮಾಜಿಕ ಹೊಣೆಗಾರಿಕೆ-ಚಿಂತನೆ ಲಕ್ಕೂರ ಆನಂದರ ಪುಸ್ತಕ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ತಾನು ಹುಟ್ಟಿ ಬೆಳೆದ ಪರಿಸರವನ್ನೇ ಕಾವ್ಯವಾಗಿಸಿದ ಲಕ್ಕೂರ, ಮಾನವ ಪ್ರೀತಿಯ ಯುವ ಬರಹಗಾರ ಎಂದು ತಿಳಿಸಿದರು.
ಇವರ ನೆನಪಿನಲ್ಲಿ ಸಮಕಾಲೀನ ಸಾಮಾಜಿಕ ಹೊಣೆಗಾರಿಕೆಯ ಬಗ್ಗೆ ಚಿಂತನ- ಮಂಥನದ ಈ ಕಾರ್ಯಕ್ರಮ ಇಂದಿನ ಸಾಮಾಜಿಕ ಬದುಕಿಗೆ ಅಗತ್ಯವಾಗಿದೆ ಎಂದು ಹೇಳಿದರು.
ಆಶಯ ನುಡಿಗಳನ್ನಾಡಿದ ಚಾಮರಾಜ ನಗರದ ಕವಿ ಮಹಾದೇವ ಶಂಕನಪುರ ಮಾತನಾಡಿ, ನಾಡಿನ ಅನೇಕ ಕವಿ ಸಾಹಿತಿಗಳ ಒಡನಾಟ ಹೊಂದಿದ್ದ ಆನಂದ ಒಬ್ಬ ಪ್ರತಿಭಾವಂತ ಯುವ ಕವಿ. ಕನ್ನಡ ತೆಲುಗು ಭಾಷೆಯ ಸೇತುವೆಯಾಗಿ ಕೆಲಸ ಮಾಡಿದರು. ತನ್ನ ಸಮಕಾಲೀನ ಅಸ್ಮಿತೆಯ ಬಗ್ಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ ಎಂದರು.
33ನೇ ವಯಸ್ಸಿನಲ್ಲೇ ಐದು ಕಾವ್ಯ ಸಂಕಲನ ಹೊರ ತಂದಿದ್ದ ಲಕ್ಕೂರು ಅವರ ಬದುಕು ತುಂಬಾ ನಿಗೂಢ ಹಾಗೂ ದುರಂತಮಯವಾಗಿತ್ತು ಎಂಬುದನ್ನು ಗಮನಿಸಬೇಕು ಎಂದು ಹೇಳಿದರು.
ನಮ್ಮ ತುಟಿಯ ನಗುವಿನಲ್ಲಿ ನಮ್ಮವರ ಋಣವಿದೆ ಎಂದು ಬರೆದ ಲಕ್ಕೂರು ಉರಿವ ಏಕಾಂತ ದೀಪವಾಗಿದ್ದರು. ಕಾವ್ಯಕ್ಕಾಗಿ ಬದುಕಿದ ಆನಂದ ವಿಕ್ಷಿಪ್ತನಾಗಿದ್ದ. ಹಸಿವು, ಅಭದ್ರತೆ, ಅರಾಜಕತೆ, ಅಪಮಾನಗಳೇ ಅವರ ಕಾವ್ಯದ ಶಕ್ತಿಯಾಗಿತ್ತು ಎಂದರು.
ಮುಖ್ಯ ಅತಿಥಿಗಳಾಗಿದ್ದ ದಸಂಸ ರಾಜ್ಯ ಸಂಚಾಲಕ ಡಾ.ಡಿ.ಜಿ. ಸಾಗರ ಮಾತನಾಡಿ, ಲಕ್ಕೂರು ಆನಂದ ಅವರ ಸಾಮಾಜಿಕ ಬದಲಾವಣೆ, ಸಮಾನತೆಯ ಬರಹಗಳು ಬಹು ದೊಡ್ಡ ಕೊಡುಗೆಗಳಾಗಿವೆ. ಕವಿ, ಬರಹಗಾರರು ತಮ್ಮ ವ್ಯಸನದಿಂದಾಗಿ ಸಾಮಾಜಿಕ ಮೌಲ್ಯಕ್ಕೆ ಪೆಟ್ಟು ಬೀಳುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಪ್ರಗತಿಪರ ಚಿಂತಕ ಪ್ರೊ. ಆರ್.ಕೆ.ಹುಡಗಿ ಮಾತನಾಡಿ, ವ್ಯಸನ ಲೋಲುಪರು ಸಾಮಾನ್ಯವಾಗಿ ಸಾಮಾಜಿಕ ಮಹತ್ವ ಕಡೆಗಣಿಸುತ್ತಾರೆ. ಸಾಮಾಜಿಕ ಸ್ವಾಸ್ಥ್ಯ ಕಾಪಾಡಲು ನಾವೆಲ್ಲರೂ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಅದರಂತೆ ಆನಂದ ಅವರ ಬದುಕು ಹಾಗೂ ಬರಹದ ಮೂಲಕ ಪಾಸಿಟಿವ್ ಮತ್ತು ನೆಗೆಟಿವ್ ಸಂದೇಶವನ್ನು ಕೊಡಬೇಕು ಎಂದು ಎಚ್ಚರಿಸಿದರು.
ದಲಿತ ಮುಖಂಡರಾದ ಮರಿಯಪ್ಪ ಹಳ್ಳಿ, ಅರ್ಜುನ ಭದ್ರೆ, ಸಮುದಾಯ ಸಂಘಟನೆಯ ಡಾ. ದತ್ತಾತ್ರೇಯ ಇಕ್ಕಳಕಿ ಮಾತನಾಡಿದರು.
ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಡಾ. ಎಚ್.ಟಿ. ಪೋತೆ ಅಧ್ಯಕ್ಷತೆ ವಹಿಸಿದ್ದರು.
ಲಕ್ಕೂರು ಮುನಿಯಮ್ಮ, ಲಕ್ಕೂರ ನಾಗರಾಜ ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದರು. ಅಪ್ಪಗೆರೆ ಸೋಮಶೇಖರ ಪ್ರಾಸ್ತಾವಿಕ ಮಾತನಾಡಿದರು.
ನಂತರ ನಡೆದ ಗೋಷ್ಠಿಯಲ್ಲಿ ‘ಸಮಕಾಲೀನ ಸಾಮಾಜಿಕ ಹೊಣೆಗಾರಿಕೆಯ ಬಿಕ್ಕಟ್ಟುಗಳು’ ಕುರಿತು ಕುಪ್ಪಳ್ಳಿ ಕುವೆಂಪು ಅಧ್ಯಯನ ಸಂಸ್ಥೆಯ ಮುಖ್ಯಸ್ಥ ಪ್ರೊ. ಬಿ.ಎಂ. ಪುಟ್ಟಯ್ಯ, ‘ಲಕ್ಕೂರು ಆನಂದ ಅನುವಾದ ಸಾಹಿತ್ಯ’ ಕುರಿತು ಸಾಹಿತಿ ಅರುಣ ಜೋಳದ ಕೂಡ್ಲಗಿ, ‘ಲಕ್ಕೂರು ಆನಂದ ಸಂಶೋಧನಾ ಬರಹ’ ಕುರಿತು ಡಾ. ರವಿಕುಮಾರ ನೀಹಾ ಪ್ರಬಂಧ ಮಂಡಿಸಿದರು.
ಬದುಕು- ಬರಹ ಒಂದೇ ಆಗಿರಬೇಕೆ?: ಬದುಕು ಬರಹ ಒಂದೇ ಆಗಿರಬೇಕೆ? ಈ ಬಗ್ಗೆ ಚರ್ಚೆ ನಡೆಯುತ್ತಿದ್ದು, ನೀತಿಯುತ, ಆದರ್ಶವಾದ ಸಾಹಿತ್ಯ ಬರೆಯಲು ಎಲ್ಲರಿಗೂ ಸಾಧ್ಯವಾಗುತ್ತದೆ. ಆದರೆ ಲಕ್ಕೂರು ಆನಂದನಂತೆ ಸ್ವೇಚ್ಛೆಯಾಗಿ ಬದುಕಿದ ರೀತಿ ತಪ್ಪೇ ಎಂದು ಚಿಂತಿಸಬೇಕಾಗಿರುವುದು ಇಂದಿನ ತುರ್ತಾಗಿದೆ ಎಂದರು. -ಮಹಾದೇವ ಶಂಕನಪುರ, ಚಾಮರಾಜ ನಗರ
ಮಾನವೀಯ ಸಮಾಜ ನಿರ್ಮಾಣ ಅಗತ್ಯ: ದಲಿತ ಸಮುದಾಯದ ಪ್ರತಿಭಾವಂತರು ಒಂದು ಕಡೆ ಇನ್ನೊಬ್ಬರ ಗುಲಾಮರಾಗಿ ಕೆಲಸ ಮಾಡುತ್ತಿದ್ದಾರೆ. ಮತ್ತೊಂದು ಕಡೆ ಇಲ್ಲದ ವ್ಯಸನಕ್ಕೆ ಕಟ್ಟು ಬಿದ್ದು ಜೀವನ ಹಾಳು ಮಾಡಿಕೊಳ್ಳುತ್ತಿರುವುದು ದುರಂತದ ಸಂಗತಿ. ವಿದ್ಯಾರ್ಥಿಗಳು ಸಂವಿಧಾನದ ಹಕ್ಕನ್ನು ಉಪಯೋಗಿಸಿ ತಮ್ಮ ಬದುಕಿನ ಏಳಿಗೆ ಕಾಣಬೇಕು. ಇನ್ನೊಬ್ಬರ ನೋವಿಗೆ ಮಿಡಿಯುವ ಮಾನವೀಯ ಸಾಮಾಜಿಕ ಜವಾಬ್ದಾರಿ ಮೆರೆಯಬೇಕು. -ಪ್ರೊ.ಎಚ್.ಟಿ. ಪೋತೆ, ಲೇಖಕ
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…