ಕಲಬುರಗಿ: ಸಮಾದಲ್ಲಿ ವಿವಿಧ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವ ಮಹನೀಯರನ್ನು ಸನ್ಮಾನಿಸಿ ಪ್ರೋತ್ಸಾಹಿಸುವದು ಅಗತ್ಯವಾಗಿದೆ ಎಂದು ಇನ್ನರ್ ವೀಲ್ ಕ್ಲಬ್ ಜಿಲ್ಲಾಧ್ಯಕ್ಷೆ ಶ್ರೀಮತಿ ಜ್ಯೋತಿ ರಾಠೋಡ ಹೇಳಿದರು.
ಅವರು ನಗರದ ರೋಟರಿ ಕ್ಲಬ್ ಸಭಾಂಗಣದಲ್ಲಿ ಇನ್ನರ್ ವೀಲ್ ಕ್ಲಬ್ ಆಫ್ ಗುಲ್ಬರ್ಗಾ ಮಿಡ್‌ಟೌನ್ ನೂತನ ಪದಾಧಿಕಾರಿಗಳ ಸ್ವಾಗತ ಸಮಾರಂಭದಲ್ಲಿಮಾತನಾಡುತ್ತ, ನಮ್ಮ ಸಂಸ್ಥೆ ಬಡವರ ಏಳ್ಗೆಗಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮೊಂಡಿದೆ ಎಂದು ವಿವರಿಸಿದರು.
ಪತ್ರಕರ್ತ ದೇವೇಂದ್ರಪ್ಪ ಅವಂಟಿಯವರು ಸನ್ಮಾನ ಸ್ವೀಕರಿಸಿ ಮಾತನಾಡುತ್ತ, ಇನ್ನರ್ ವೀಲ್ ಕ್ಲಬ್ ಕಲಬುರಗಿ ಘಟಕವು ಹಲವಾರು ವರ್ಷಗಳಿಂದ ಉತ್ಕ್ರಷ್ಟವಾದ ವಿಚಾರಗಳೊಂದಿಗೆ ಆರೋಗ್ಯ ಸೇವೆಗಳನ್ನು ಜನರಿಗೆ ನೀಡುತ್ತಿರುವುದು ಶ್ಲಾಘನೀಯ ಎಂದರು.
ವೇದಿಕೆ ಮೇಲೆ ಇನ್ನರ್ ವೀಲ್ ಕ್ಲಬ್‌ನ ನಿಕಟಪೂರ್ವ ಅಧ್ಯಕ್ಷರಾದ ಶ್ರೀಮತಿ ರಾಜಶ್ರೀ, ಕಾರ್ಯದರ್ಶಿ ಶ್ರೀಮತಿ ಇಂದಿರಾ ರಾಠೋಡ. ಐಎಸ್ ಓ ಸ್ರೀಮತಿ ಶ್ರೀದೇವಿ ಕುಲಕರ್ಣಿ, ಖಜಾಂಚಿ ಶ್ರೀಮತಿ ಸದ್ರೀಮತಿ ಲತಾ ದೇಶಪಾಂಡೆ, ಇಸಿ ಸದಸ್ಯರುಗಳಾದ ರೋಹಿಣಿ ಯಲ್ಸಂಗಿಕರ್. ಮೋಹಿನಿ ಜಿಡ್ಗೇಕರ್ ಸೇರಿದಂತೆ ಇತರರು ಇದ್ದರು.
ಈ ಕಾರ್ಯಕ್ರಮದಲ್ಲಿ ದಂತ ವೈದ್ಯರಾದ ಡಾ. ಆರಾಧನಾ ಜಾಧವ್. ಚಾರ್ಟರ್ಡ್ ಅಕೌಂಟೆಂಟ್ ಸುವರ್ಣ ಚವ್ಹಾಣ್ , ಶವಣ್ಯ ಮಹಾಂತಗೋಳ, ಡಾ. ರಾಜೇಶ್ವರಿ ನಾಯಕ್. ಮತ್ತು ಜಿಲ್ಲಾ ಜಿಮ್ಸ್ ಆಸ್ಪತ್ರೆಯ ತಾಯಿ ಮತ್ತು ಮಕ್ಕಳ ವಿಶೇಷ ಆರೈಕೆ ಘಟಕದ ಸಮಾಲೋಚಕರಾದ ಮಂಜುನಾಥ ಕಂಬಾಳಿಮಠ ಅವರು ತಮ್ಮ ಮದುವೆ ವಾರ್ಷಿಕೋತ್ಸವ ಸಂಧರ್ಭದಲ್ಲಿ ಧರ್ಮಪತ್ನಿಯೊಂದಿಗೆ ದೇಹದಾನ ಮಾಡಿದ ಪ್ರಯುಕ್ತ ಸನ್ಮಾನಿಸಲಾಯಿತು.
ಕೊನೆಯಲ್ಲಿ ಶ್ರೀಮತಿ ಇಂದಿರಾ ರಾಠೋಡ ವಂದನಾರ್ಪಣೆ ಮಾಡಿದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…