ವಾಡಿ: ಕಲಬುರಗಿಯಿಂದ- ಶಹಾಬಾದ್ ನಗರಕ್ಕೆ ಪ್ರಯಾಣಿಕರನ್ನು ಹೊತ್ತುಕೊಂಡು ಚಲಿಸುತ್ತಿದ್ದ ಸಾರಿಗೆ ಬಸವೊಂದು ರಸ್ತೆ ಮಧ್ಯೆದಲ್ಲಿಯೇ ಕೈಕೊಟ್ಟ ಪರಿಣಾಮ ಪ್ರಯಾಣಿಕರು ರಸ್ತೆ ಮಧ್ಯೆಯೇ ಪರದಾಡಿದ ಘಟನೆ ಸಂಭವಿಸಿದೆ.
ಇಂದು ಮಧ್ಯಾಹ್ನ 3-30 ಗಂಟೆಗೆ ಕಲಬುರಗಿ ಬಸ್ ನಿಲ್ದಾಣದಿಂದ ಹೊರಟಿದ್ದ ಸಾರಿಗೆ ಬಸ್ ನಗರದ ಹೊರವಲಯದ ರಾಜಾಪುರ ರಿಂಗ್ ರೋಡ್ ತಲುಪುತ್ತಿದ್ದಂತೆ, ಇಂಜಿನ್ ನಲ್ಲಿ ಬಾರಿ ಪ್ರಮಾಣದ ಹೊಗೆ ಕಾಣಿಸಿಕೊಂಡಿದೆ. ತಕ್ಷಣ ಸಮಯ ಪ್ರಜ್ಞೆ ಮೆರೆದ ಚಾಲಕ ಬಸ್ ಪಕ್ಕಕ್ಕೆ ತೆಗೆದುಕೊಂಡು ನಿಲ್ಲಿಸಿದ. ಪರಿಣಾಮ ಬಾರಿ ಅನಾಹುತ ತಪ್ಪಿದಂತಾಗಿದೆ. ದುರಸ್ತಿಗೆ ಮುಂದಾದರು ಬಸ್ ದುರಸ್ತಿ ಆಗಲಿಲ್ಲ. ಇದರಿಂದ ಪ್ರಯಾಣಿಕರು ಕೆಲಕಾಲ ಆತಂಕಕ್ಕೆ ಒಳಾಗದರು.
ಇನ್ನೂ ಬೇರೊಂದು ಬಸ್ ಗಾಗಿ ರಸ್ತೆಯಲ್ಲೇ ಶಾಲಾ ಮಕ್ಕಳು, ವೃದ್ಧರು, ಮಹಿಳೆಯರು ಜಟಿಜಟಿ ಮಳೆಯಲ್ಲೇ ನಿಂತರು. ಆದರೂ ಯಾವುದೇ ಬಸ್ ನಿಲ್ಲಿಸಲಿಲ್ಲ. ಕೆಲವರು ಅಂದುಕೊಂಡ ಸ್ಥಳಕ್ಕೆ ಹೋಗಲಾರದೆ ಸಾರಿಗೆ ಸಂಸ್ಥೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಕಂಡಕ್ಟರ್ ಬೇರೊಂದು ಬಸ್ ವ್ಯವಸ್ಥೆ ಮಾಡಿ ಪ್ರಯಾಣಿಕರನ್ನು ಬಸ್ ಗೆ ಹತ್ತಿಸಿ ಕಳುಹಿಸಿದರು.
ಸಾರಿಗೆ ಸಂಸ್ಥೆ ವಿರುದ್ಧ ಆಕ್ರೋಶ: ಶಹಾಬಾದ್ ನಗರಕ್ಕೆ ಹಳೆ ಬಸ್ ಗಳನ್ನೇ ಬಿಡಲಾಗುತ್ತಿದೆ. ಇದರಿಂದ ಸಾಕಷ್ಟು ಬಸ್ ಗಳು ರಸ್ತೆ ಮಧ್ಯೆದಲ್ಲಿಯೇ ಕೆಟ್ಟು ನಿಂತ ಉದಾಹರಣೆಗಳಿವೆ. ಶಹಾಬಾದ್ ನಗರಕ್ಕೆ ಹೊಸ ಬಸ್ ಗಳು ಬಿಡುವಂತೆ ಈಗಾಗಲೇ ಸಾರಿಗೆ ಸಂಸ್ಥೆ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಆದರೂ ಅಧಿಕಾರಿಗಳು ಕ್ರಮಕೈಗೊಳ್ಳದಿರುವುದೇ ಇಂತಹ ಘಟನೆಗೆ ಸಾಕ್ಷಿಯಾಗುತ್ತಿವೆ ಎಂದು ಡೆಮಾಕ್ರಟಿಕ್ ಯೂತ್ ಫೆಡರೇಷನ್ ಆಫ್ ಇಂಡಿಯಾ(ಡಿವೈಎಫ್.ಐ) ಸಂಘಟನೆ ಚಿತ್ತಾಪುರ ತಾಲ್ಲೂಕು ಸಂಚಾಲಕಿ ಗಿಡ್ಡಮ್ಮ ಪವಾರ್ ಸಾರಿಗೆ ಸಂಸ್ಥೆ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ.
ಕಲಬುರಗಿ: ಮಕ್ಕಳ ದಿನಾಚರಣೆ ನಿಮಿತ್ತ ಇಂದು ಸಂಜು ನಗರದಲ್ಲಿರುವ ಕಲಿಕಾ ಕೇಂದ್ರದಲ್ಲಿ ಮನ್ನೂರು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಮುಖ್ಯಸ್ಥರಾದ ಫಾರೂಕ್ ಮನ್ನೂರ್…
ಕಲಬುರಗಿ: ಜಾನಪದ ಸಾಹಿತ್ಯ ಸಂಸ್ಕೃತಿ ಹಾಗೂ ಜಾನಪದ ಕಲೆ ಪ್ರಕಾರಗಳಲ್ಲಿ ಮಾನವಿಯ ಮೌಲ್ಯ ಅಡಕವಾಗಿದೆ ಎಂದು ಮಹಾಪೌರರಾದ ಯಲ್ಲಪ್ಪ ನಾಯ್ಕೊಡಿ…
ಕಲಬುರಗಿ: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಲ್ಯಾಣ ಕರ್ನಾಟಕದ ಜನರ ಕಣ್ಣಿಗೆ ಸುಣ್ಣ ಹಚ್ಚುವ ಕೆಲಸ ಮಾಡುತ್ತಾ ಬಂದಿದ್ದಾರೆ, ಅದರ ಮುಂದುವರೆದ ಭಾಗವಾಗಿ…
ಕಲಬುರಗಿ: ಕೆ ಪಿ ಆರ್ ಸಕ್ಕರೆ ಕಾರ್ಖಾನೆಯಿಂದ ಹೊರಬಿಡುತ್ತಿರುವ ಕಲುಷಿತ ನೀರು ಮತ್ತು ಕಲುಷಿತ ಗಾಳಿಯಿಂದ ಸುತ್ತಮುತ್ತಲಿನ ಗ್ರಾಮಸ್ಥರ ಜಮೀನುಗಳಿಗೆ…
ಕಲಬುರಗಿ; ಜಿಲ್ಲೆಯ ಸೇಡಂ ತಾಲೂಕಿನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದಿಂದ ಕೊಡಮಾಡುವ ರಾಜ್ಯಮಟ್ಟದ ಪ್ರತಿಷ್ಠಿತ `ಅಮ್ಮ ಪ್ರಶಸ್ತಿ’ಗೆ ವಿದ್ಯಾರಶ್ಮಿ…
ವಾಡಿ: ಮಾಜಿ ಪ್ರಧಾನಿ ಪಂಡೀತ್ ಜವಾಹರಲಾಲ್ ನೆಹರು ಅವರ ಜನ್ಮದಿನ ಪ್ರಯುಕ್ತ ಪಟ್ಟಣದ ವಿವಿಧ ಶಾಲೆಗಳಲ್ಲಿ ಮಕ್ಕಳ ದಿನಾಚರಣೆ ಆಚರಿಸಲಾಯಿತು.…