ಕಲಬುರಗಿ; ಮನುಷ್ಯರನ್ನು ಮಹಾ ಮಾನವನಾಗಿ ಮಾಡಿ ದೈವತ್ವದ ಸ್ವರೂಪ ನೀಡುವ ಶಕ್ತಿ ಗುರು ಎಂಬ ಶಬ್ದಕ್ಕಿದೆ ಎಂದು ಅರಳಗುಂಡಗಿ ಜಿಲ್ಲಾ ಪಂಚಾಯತ ಮಾಜಿ ಸದಸ್ಯರಾದ ರೇವಣಸಿದ್ದಪ್ಪ ಸಂಕಲಿ ಹೇಳಿದರು.
ತಾಲೂಕಿನ ತಾಜ ಸುಲ್ತಾನಪುರ ಗ್ರಾಮದ ಚಿನ್ನದಕಂತಿ ಚಿಕ್ಕ ವೀರೇಶ್ವರ ಸಂಸ್ಥಾನ ಹಿರೇಮಠದಲ್ಲಿ ಗುರು ಪೂರ್ಣಿಮಾ ನಿಮಿತ್ಯ ಗುರುವಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತ ಮನುಷ್ಯನು ಯಾವಾಗಲೂ ನಕರಾತ್ಮಕ ಯೋಚನೆ ಮಾಡದೆ, ಸಕರಾತ್ಮಕವಾಗಿ ಯೋಚಿಸಿ ಗುರುವಿನ ಮೇಲೆ ನಂಬಿಕೆ ಇಟ್ಟಾಗ ಪರಿಪೂರ್ಣತೆ ಜೀವನ ಆಗುತ್ತದೆ ಎಂದು ಮಾರ್ಮಿಕವಾಗಿ ನುಡಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ ಶ್ರೀ ಮಠದ ಪೀಠಾಧಿಪತಿಗಳಾದ ಪೂಜ್ಯ ಡಾ. ರೇವಣಸಿದ್ಧ ಶಿವಾಚಾರ್ಯರು ಆಶೀರ್ವಚನ ನೀಡುತ್ತಾ ಖಾಲಿ ಜೇಬು, ಹಸಿದ ಹೊಟ್ಟೆ, ಒಡೆದ ಮನಸ್ಸು ಈ ಮೂರನ್ನು ಅನುಭವಿಸಿದ ವ್ಯಕ್ತಿ ಗುರು ಎಂಬ ಶಕ್ತಿಯಿಂದ ಉತ್ತಮ ಸಮಾಜ ಕಟ್ಟುವ ವ್ಯಕ್ತಿಯಾಗುತ್ತಾನೆ. ಗುರು ಎಂದರೆ ಸನ್ಮಾರ್ಗದ ದಾರಿ ತೋರಿಸುವವರೆ ನಿಜವಾದ ಗುರು. ಸಮಾಜದಲ್ಲಿ ಗುರು ಎಂಬ ಸ್ಥಾನಕ್ಕೆ ತನ್ನದೇ ಆದ ಗೌರವವಿದೆ. ಆ ಪವಿತ್ರವಾದ ಸ್ಥಾನವನ್ನು ಉಳಿಸಿ ಸಮೃದ್ಧ ಸಮಾಜ ಕಟ್ಟುವುದು ಗುರುಗಳ ಪಾತ್ರ ಬಹುಮುಖ್ಯವಾಗಿದೆ ಎಂದು ನುಡಿದರು.
ನಿವೃತ್ತ ಶಿಕ್ಷಕರಾದ ಲೀಲಾವತಿ ಕುಲಕರ್ಣಿ ವಿಶೇಷ ಉಪನ್ಯಾಸ ನೀಡುತ್ತಾ ಅಂದಿನ ಹಾಗೂ ಇಂದಿನ ಗುರು ಶಿಷ್ಯರ ಸಂಬಂಧದ ಬಗ್ಗೆ ಮಾರ್ಮಿಕವಾಗಿ ಹೇಳಿದರು. ಮುಖ್ಯ ಅತಿಥಿಗಳಾಗಿ ಮಾಜಿ ಸೈನಿಕರಾದ ಆದಪ್ಪ ಸಿಕೇದ ಕೋಳಕೂರ, ಗಿರೀಶಗೌಡ ಇನಾಮದಾರ ಆಗಮಿಸಿದರು. ಶರಣಯ್ಯ ಹೊಸಮಠ ಪ್ರಾರ್ಥಿಸಿದರು. ನ್ಯಾಯವಾದಿ ಹಣಮಂತರಾಯ ಎಸ್. ಅಟ್ಟೂರ ಸ್ವಾಗತಿಸಿದರು. ವಿನೋದ ಮಾಳಾ ನಿರೂಪಿಸಿದರು.
ರವಿಕೂಮಾರ ಶಹಾಪೂರಕರ ವಂದಿಸಿದರು. ಕಾರ್ಯಕ್ರಮದಲ್ಲಿ ಚನ್ನವೀರಪ್ಪ ಸಲಗರ, ಅಣವೀರಪ್ಪ ಗೌಡಪಗೋಳ, ಚನ್ನವೀರ ಚಕ್ಕಿ, ರಾಜು ಜೈನ, ನೂರಂದಯ್ಯ ಸ್ವಾಮಿ, ಶಿವಶರಣಪ್ಪ ಹಿರೇಮನಿ, ಶಿವಲಿಂಗಪ್ಪ ಮಾಳಾ, ನಾಗಣ್ಣ ಚೌಡಾಪುರ, ಶರಣಬಸಪ್ಪ ಮಚೆಟ್ಟಿ, ಮಹೇಶ ಬೀರನಳ್ಳಿ, ನಾಗೇಂದ್ರ ದೇಗಲಮಡ್ಡಿ, ಶಿವಯ್ಯ ಸ್ವಾಮಿ, ವೀರಯ್ಯ ಬಾಳಿ, ರಾಚಣ್ಣ ಸಂಗೊಳಗಿ, ಶರಣು ಮಾಮಾನಿ, ಚಿನ್ನಪ್ಪ ಮಾಮಾನಿ, ಶ್ರೀಶೈಲ ಕಲಕೋರಿ,ಸುರೇಶ ಪಡಶೆಟ್ಟಿ, ಚನ್ನವೀರ ಹಾಂವಾ, ಚನ್ನಪ್ಪ ಬೆಡಜುರಗಿ, ರೇವಣಸಿದ್ದಯ್ಯ ಬೇಲೂರ, ಸತೀಶ ಚಿಮದಿ, ಮಲ್ಲಿಕಾರ್ಜುನ ಮುದ್ದಾಳ ಸೇರಿದಂತೆ ಗ್ರಾಮದ ಅನೇಕ ಜನ ಭಾಗವಹಿಸಿದರು. ಇದೇ ಸಂದರ್ಭದಲ್ಲಿ ಶ್ರೀನಿವಾಸ ಸರಡಗಿ, ತಾಜ ಸುಲ್ತಾನಪೂರ, ಕುರಕೋಟಿ ಶ್ರೀ ಮಠದ ಪೀಠಾಧಿಪತಿಗಳಾದ ಪೂಜ್ಯ ಡಾ.ರೇವಣಸಿದ್ಧ ಶಿವಾಚಾರ್ಯರಿಗೆ ಗೌರವಿಸಲಾಯಿತು.
ರಂಗದಂಗಳದಲ್ಲಿ ಮಾತುಕತೆಯಲ್ಲಿ ರಂಗಕರ್ಮಿ ಸಾಂಬಶಿವ ದಳವಾಯಿ ಹೇಳಿಕೆ ಕಲಬುರಗಿ: ಕೋವಿಡ್‌ನಿಂದ ರಂಗ ಚಟುವಟಿಕೆಗಳು ಮಂಕಾಗಿದ್ದವು. ಇದೀಗ ನಿಧಾನಗತಿಯಲ್ಲಿ ಅವು ಚೇತರಿಕೆ…
ಕಲಬುರಗಿ: ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗದ ಸಾಧಕ-ಬಾಧಕಗಳನ್ನು ನಾಗರಿಕರಿಗೆ ಮುಟ್ಟಿಸುವ ಕಾರ್ಯ ಮಾಡುವ ಪತ್ರಿಕಾ ರಂಗವು ನಾಲ್ಕನೇ ರಂಗವಾಗಿ ಕಾರ್ಯನಿರ್ವಹಿಸುತ್ತಿದ್ದೆ.…
ಕಲಬುರಗಿ : ಭಾರತ ದೇಶ ಪ್ರಗತಿಯಲ್ಲಿ ಯುವಶಕ್ತಿ ಸಹಭಾಗಿತ್ವ ಬಹಳ ಮುಖ್ಯ ಎಂಬುದು ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಕನಸಾಗಿತ್ತು.…
ಕಲಬುರಗಿ: ನಗರದ ಪತ್ರಿಕಾ ಭವನದಲ್ಲಿ ಜ್ಞಾನದೀಪ ನೃತ್ಯ ಕಲಾ ಸಂಸ್ಥೆ ವತಿಯಿಂದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಸಾಂಸ್ಕøತಿಕ ಸಂಜೆ ಕಾರ್ಯಕ್ರಮದಲ್ಲಿ…
ಕಲಬುರಗಿ: ನಗರದ ಮಾತಾ ಮಾಣಿಕೇಶ್ವರಿ ಕಾಲೋನಿಯಲ್ಲಿರುವ ಶ್ರೀ ಕೋಕಿಲ ಪರಮೇಶ್ವರಿ ದೇವಸ್ಥಾನ ಆವರಣದಲ್ಲಿ ನವಚೇತನ ಸಾಂಸ್ಕøತಿಕ ಕಲಾ ಸಂಸ್ಥೆ ವತಿಯಿಂದ …
ಕಲಬುರಗಿ: ನಮ್ಮ ತಾಲೂಕಿನ ಹೆಮ್ಮೆಯ ಹೋರಾಟಗಾರ,ಕವಿ,ಸಾಹಿತಿಯಾದ ಡಾ.ಹನುಮಂತರಾವ ಅವರಿಗೆ ಪ್ರಶಸ್ತಿ ಲಭಿಸಿದ್ದು ಸಂತೋಷ ತಂದಿದೆ ಅವರಿಗೆ ಪ್ರಶಸ್ತಿ ದೊರಕಿದ್ದು ಸರ…