ಹಟ್ಟಿ: ಪಟ್ಟಣದ 7ನೇ ವಾರ್ಡ್ ಗೆ ಶೌಚಾಲಯ, ಕುಡಿಯುವ ನೀರು, ಚರಂಡಿ, ರಸ್ತೆ ಸೇರಿದಂತೆ ವಿವಿಧ ಜ್ವಲಂತ ಸಮಸ್ಯೆಗಳಿಂದ ನರಳುತ್ತಿದೆ. ಜನರಿಗೆ ಮೂಲಭೂತ ಸೌಕರ್ಯ ನೀಡದೇ ಹಟ್ಟಿಯನ್ನು ಚಿನ್ನದ ನಾಡು ಬದಲಾಗಿ ಸ್ಲಂ ನಾಡಾಗಿ ಪರಿವರ್ತಿಸುತ್ತಿದೆ. ಕೂಡಲೇ ವಾರ್ಡ್ ಗೆ ಮೂಲಭೂತ ಸೌಕರ್ಯಗಳನ್ನು ನೀಡಬೇಕು ಎಂದು ಆಗ್ರಹಿಸಿ ಭಾರತ ಜನವಾದಿ ಮಹಿಳಾ ಸಂಘಟನೆ (ಜೆಎಂಎಸ್), ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್(ಡಿವೈಎಫ್ಐ), ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್ಎಫ್ಐ) ಹಟ್ಟಿ ಜಂಟಿ ಸಂಘಟನೆಗಳು ಹಟ್ಟಿ ಪಟ್ಟಣ ಪಂಚಾಯಿತಿ ಮುಂದೆ ಪ್ರತಿಭಟನೆ ನಡೆಸಿ ಮುಖ್ಯಾಧಿಕಾರಿ ಜಗನಾಥ ದೇಸಾಯಿ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಕೂಡಲೇ ಈ ವಾರ್ಡಗೆ ಅಗತ್ಯ ಈ ಕೆಳಗಿನ ಬೇಡಿಕೆಗಳನ್ನು ಈಡೇರಿಸದೇ ಇದ್ದಲ್ಲಿ ಪಟ್ಟಣ ಪಂಚಾಯ್ತಿ ಮುಂದೆ ಅನಿರ್ಧಿಷ್ಟಾವಧಿ ಅಹೋರಾತ್ರಿ ಪ್ರತಿಭಟನಾ ಧರಣಿ ನಡೆಸಲಾಗುವುದು ಎಂದು ಜಂಟಿ ಸಂಘಟನೆಗಳು ಎಚ್ಚರಿಸಿವೆ.
ಕೂಡಲೇ 7ನೇ ವಾರ್ಡಿನಲ್ಲಿ ಮಹಿಳೆಯರಿಗೆ ಐಟೆಕ್ ಶೌಚಾಲಯ ನಿರ್ಮಿಸಬೇಕು. ವಾರ್ಡನಲ್ಲಿ ಬೋರ್ ವೆಲ್ ಕೊರೆದು ನಿತ್ಯದ ನೀರಿನ ಸಮಸ್ಯೆ ಇತ್ಯರ್ಥ ಮಾಡಬೇಕು. ಪ್ರತೀ 3 ದಿನಗಳಿಗೊಮ್ಮೇಯಾದರೂ ಕುಡಿಯು ವ ನೀರು ಬಿಡಬೇಕು. ವಾರ್ಡನಲ್ಲಿ ಎಲ್ಲಿಯಂದರಲ್ಲಿ ಕಸ ಹಾಕುತಿದ್ದು, ಸಮರ್ಪಕ ಕಸವಿಲೇವಾರಿ ಮಾಡಬೇಕು. ಹಟ್ಟಿ ಪಟ್ಟಣದ ಸುತ್ತಮುತ್ತಲಿನ ವಿವಿಧ ಹಳ್ಳಗಳಲ್ಲಿ ಪಟ್ಟಣ ಪಂಚಾಯ್ತಿಯೇ ಕಸ ಹಾಕಿ ಗಲೀಜು ಮಾಡುತ್ತಿದ್ದು, ಕೂಡಲೇ ಅದನ್ನು ನಿಲ್ಲಿಸಿ ಹಳ್ಳದಲ್ಲಿ ಉತ್ತಮ ವಾತಾವರಣ ಕಾಪಾಡಬೇಕು.
ಶಾಂತಿನಗರದ ಹತ್ತಿರ ದೋಬಿಘಾಟ್ ನಿರ್ಮಿಸಿ ಅಲ್ಲಿ ಪ್ರತ್ಯೇಕ ನೀರಿನ ವ್ಯವಸ್ಥೆ ಮಾಡಬೇಕು. ಹಳ್ಳದ ಪಕ್ಕದಲ್ಲಿ ಬೆಳೆದ ಜಾಲಿ ಕಟ್ ಮಾಡಬೇಕು. ವಿದ್ಯುತ್ ಕಂಬಗಳಿಗೆ ಸರಿಯಾಗಿ ಬಲ್ಪ್ ಗಳನ್ನು ಹಾಕಬೇಕು. ಮತ್ತು ಪಟ್ಟಣದ ಮುಖ್ಯ ರಸ್ತೆಯ ವಿದ್ಯುತ್ ಲೈಟ್ ಗಳ ನಿರ್ವಹಣೆ ಮಾಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಎಸ್ಎಫ್ಐ ಜಿಲ್ಲಾಧ್ಯಕ್ಷ ರಮೇಶ ವೀರಾಪೂರು, ವಿನಯಕುಮಾರ್, ಜೆಎಂಎಸ್ ತಾಲೂಕು ಮುಖಂಡರಾದ ದ್ಯಾವಮ್ಮ, ಹಟ್ಟಿ ಘಟಕದ ಅಧ್ಯಕ್ಷೆ ಅಂಬಮ್ಮ ದೀನಸಮುದ್ರ, ಬಾಬಾಂಬಿ, ಕಾರ್ಯದರ್ಶಿ ಶರಣಮ್ಮ, ಖಜಾಂಚಿ ಶರಣಮ್ಮ ಜಾಡಲದಿನ್ನಿ, ಡಿವೈಎಫ್ಐ 7ನೇ ವಾರ್ಡ್ ಸಹ ಕಾರ್ಯದರ್ಶಿ ವೀರೇಶ್, ರಸೂಲ್, ಅಮರೇಗೌಡ ವೀರಾಪೂರು, ಸಿಐಟಿಯು ಗೌರವಾಧ್ಯಕ್ಷ ಅಮರೇಶ್ ಗುರಿಕಾರ, ಫಕ್ರುದ್ದೀನ್, ವೆಂಕಟೇಶ್ ಗೋರಕಲ್, ನಿಂಗಪ್ಪ ಎಂ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…