ಬಿಸಿ ಬಿಸಿ ಸುದ್ದಿ

ಅಖಿಲ ಕರ್ನಾಟಕ ದಲಿತ ಸೇನೆ ರಾಜ್ಯಾಧ್ಯಕ್ಷರಾಗಿ ದತ್ತಾತ್ರೇಯ ಕುಡಕಿ ಆಯ್ಕೆ

ಕಲಬುರಗಿ: ಅಖಿಲ ಕರ್ನಾಟಕ ದಲಿತ ಸೇನೆಯ ಕಾರ್ಯಕಾರಿಣಿ ಸಭೆಯು ಕಲಬುರಗಿ ನಗರದ ಕನ್ನಡ ಭವನದಲ್ಲಿ ಆನಂದರಾಯ ಗಾಯಕವಾಡ ಅವರ ಅಧ್ಯಕ್ಷತೆಯಲ್ಲಿ ಜರುಗಿತು. ಸಂಘಟನೆಯ ಬಲವರ್ಧನೆ ಮತ್ತು ತತ್ವ ಸಿದ್ಧಾಂತಗಳಿಗೆ ಬಧ್ಧರಾಗಿ ಸಂಘಟನೆ ಏಳಿಗೆಗಾಗಿ ಶ್ರಮಿಸುವಂತೆ ಸಭೆಯಲ್ಲಿ ನಿರ್ಣಯ ಮಂಡಿಸಿ ಕಾರ್ಯಕರ್ತರಿಗೆ ಕರೆ ನೀಡಲಾಯಿತು.

ಸಭೆಯಲ್ಲಿ ಉಪಸ್ಥಿತರಿದ್ದ ಕಾರ್ಯಕರ್ತರ ಸಲಹೆ ಸೂಚನೆಗಳನ್ನು ಪಡೆದು ಹಿಂದಿನ ರಾಜ್ಯಾಧ್ಯಕ್ಷರನ್ನು ಬದಲಾವಣೆ ಮಾಡಿ ನೂತನ ರಾಜ್ಯಾಧ್ಯಕ್ಷರನ್ನು ನೇಮಿಸಲು ಸರ್ವಾನುಮತದಿಂದ ನಿರ್ಣಯಿಸಿ ಆನಂದರಾವ ಗಾಯಕವಾಡ ಅವರಿಗೆ ರಾಜ್ಯಾಧ್ಯಕ್ಷರನ್ನಾಗಿ ನೇಮಿಸುವ ಅಧಿಕಾರವನ್ನು ನೀಡಲಾಯಿತು.

ಕಾರ್ಯಕರ್ತರಿಂದ ಚರ್ಚೆ ಮಾಡಿ ಒಮ್ಮತದ ಅಭಿಪ್ರಾಯಪಡೆದು ನೂತನ ರಾಜ್ಯಾಧ್ಯಕ್ಷರನ್ನಾಗಿ ನೇಮಿಸಲು ಚೆನ್ನವೀರ ಕಾಳಕಿಗೆಯವರು ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದರು. ಪ್ರಸ್ತಾಪಿಸಿದ ಈ ನಿರ್ಣಯಕ್ಕೆ ಸಭೆಯ ಅಧ್ಯಕ್ಷತೆವಹಿಸಿಕೊಂಡ ಆನಂದರಾವ ಗಾಯಕವಾಡ ಅವರು ಕಾರ್ಯಕರ್ತರ ಒಪ್ಪಿಗೆ ಮೇರೆಗೆ ಸಮ್ಮತ್ತಿಸಿ ದತ್ತಾತ್ರೇಯ ಕುಡಕಿಯವರನ್ನು ನೂತನ ರಾಜ್ಯಾಧ್ಯಕ್ಷರನ್ನಾಗಿ ಘೋಷಣೆ ಮಾಡಿ ಸಭೆಯ ಅಧ್ಯಕ್ಷರು ಅನುಮೋದಿಸಿದರು.

ಮುಂದುವರೆದು ಸಭೆಯಲ್ಲಿ ಗೌರವಾಧ್ಯಕ್ಷರಾಗಿ ಆನಂದರಾಯ ಗಾಯಕವಾಡ ಅವರನ್ನು ಆಯ್ಕೆ ಮಾಡಲಾಯಿತು. ಮತ್ತು ಉತ್ತರ ಕರ್ನಾಟಕದ ಅಧ್ಯಕ್ಷರನ್ನಾಗಿ ಭೀಮಾಶಂಕರ ಕದಮ್, ಕಲಬುರಗಿ ಜಿಲ್ಲಾಧ್ಯಕ್ಷರಾಗಿ ಚೆನ್ನವೀರ ಕಾಳಕಿಂಗೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ವಿಠ್ಠಲ ಕೋಣೆಕರ್, ಜಿಲ್ಲಾ ಉಪಾಧ್ಯಕ್ಷರಾಗಿ ಮಲ್ಲಿಕಾರ್ಜುನ ಎಸ್. ಖನ್ನಾ, ಸಾಮಾಜಿಕ ಜಾಲತಾಣದ ಅಧ್ಯಕ್ಷರಾಗಿ ಸಂಜೀವಕುಮಾರ ಕಾಂಬಳೆ, ಬಿಸಿಯೂಟ ನೌಕರರ ಮಹಿಳಾ ಅಧ್ಯಕ್ಷರಾಗಿ ಯಶೋಧಾ ರಾಠೋಡ ಕುಸನೂರ, ಕಲಬುರಗಿ ತಾಲೂಕ ಅಧ್ಯಕ್ಷರಾಗಿ ಶಿವಶರಣಪ್ಪ ಖನ್ನಾ,  ನಗರಾಧ್ಯಕ್ಷರಾಗಿ ಮಂಜುನಾಥ ಜಿ. ಕಂಠಿ, ಬೀದರ ಜಿಲ್ಲಾಧ್ಯಕ್ಷರಾಗಿ ಧನರಾಜ ಕೊಳ್ಳೂರ ಕೆ.ಯವರನ್ನು ಇಂದಿನ ಸಭೆಯಲ್ಲಿ ಆಯ್ಕೆ ಮಾಡಲಾಯಿತು.

ಇಂದಿನ ಸಭೆಯಲ್ಲಿ ಶಿವಕುಮಾರ ತೋಟ್ನಳ್ಳಿ, ಜಯಕುಮಾರ ದೇಗಾಂವಕರ್, ಅಂಬಾಜಿ ಪಿ. ಮೇಟಿ, ರಾಜೇಂದ್ರ ಗಾಯಕವಾಡ, ಶಿವಲಿಂಗಮ್ಮ ಸಾವಳಗಿ, ಶಿಲ್ಪಾ, ಸೌಭಾಗ್ಯ ಜೋಗೂರ, ವಿಲ್ಸನ್ ಡಿ.ಕೆ. ಬೀದರ, ಜೀವನ ಕೋಳಾರ (ಕೆ) ಬೀದರ, ಸಂಜು ಬೀದರ, ಇನ್ನಿತರರು ಉಪಸ್ಥಿತರಿದ್ದರು.

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

16 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

19 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

1 day ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

1 day ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

2 days ago