ಶಹಾಬಾದ : ನಗರದಲ್ಲಿ ರವಿವಾರÀದಂದು ಸುರಿದ ಜಿಟಿಜಿಟಿ ಮಳೆಯಿಂದ ರಸ್ತೆಯಲ್ಲಿರುವ ಹೊಂಡಗಳಲ್ಲಿ ನೀರು ತುಂಬಿ ಕೆರೆಯಂತಾಗಿದೆ. ಇದರಿಂದ ವಾಹನ ಸಂಚಾರಕ್ಕೆ ಅಪಾಯಕಾರಿಯಾಗಿ ಪರಣಮಿಸಿದೆ.
ಶಹಾಬಾದ ರಸ್ತೆ ಪ್ರಯಾಣ ಎಂದರೆ ಎದೆ ಜಲ್ಲ್ ಎನ್ನುವ ಮಟ್ಟಿಗೆ ರಸ್ತೆ ತಗ್ಗು-ದಿನ್ನೆಗಳಿಂದ, ಧೂಳಿನಿಂದ ಹಾಗೂ ಮಳೆ ಬಂದರೆ ಕೆಸರು ಗದ್ದೆಯಾಗಿ ಆವರಿಸಿಕೊಳ್ಳುತ್ತದೆ. ಇಲ್ಲಿ ಸಂಚರಿಸುವ ಜನರು ನಿತ್ಯ ಗಟ್ಟಿ ಧೈರ್ಯ ಮಾಡಿ ಹೊರಡುತ್ತಾರೆ. ರಸ್ತೆಯ ಮದ್ದೆ ಆಳುದ್ದ ತೆಗ್ಗುಗಳು ನಿರ್ಮಾಣವಾದರೂ ಇಲ್ಲಿಯವರೆಗೆ ಯಾವ ಅಧಿಕಾರಿಗಳು ಗಮನಿಸುತ್ತಿಲ್ಲ ಎಂಬುದು ಸಾರ್ವಜನಿಕರ ಆರೋಪವಾಗಿದೆ.
ಅದರಲ್ಲೂ ನಗರದ ವಾಡಿ ವೃತ್ತದ ಬಳಿಯಿಂದ ಬಸವೇಶ್ವರ ವೃತ್ತದವರೆಗಿನ ಮಧ್ಯೆ ಹೊಂಡ ನಿರ್ಮಾಣವಾಗಿರುವುದರಿಂದ ಈ ರಸ್ತೆಯಲ್ಲಿ ಸಂಚರಿಸುವ ವಾಹನಗಳು ಹಾಗೂ ಸಾರ್ವಜನಿಕರಿಗೆ ಸಂಕಷ್ಟ ಅನುಭವಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.ರಸ್ತೆಯ ತುಂಬೆಲ್ಲಾ ನೀರು ತುಂಬಿಕೊಂಡಿದ್ದರಿಂದ ತೆಗ್ಗು ಕಾಣದೇ ಬಿದ್ದ ಘಟನೆಗಳು ನಡೆದಿವೆ. ರವಿವಾರ ಸುರಿದ ಮಳೆಯಿಂದ ನಿತ್ಯ ಸಂಚಾರ ಮಾಡುವ ಲಘು ವಾಹನ ಹಾಗೂ ಭಾರಿ ವಾಹನಗಳಿಂದ ಚಿಕ್ಕ ಪುಟ್ಟ ಹೊಂಡಗಳು ಭಾರಿ ಗಾತ್ರದ ಹೊಂಡಗಳಾಗಿ ಪರಿವರ್ತನೆಯಾಗಿವೆ. ರಸ್ತೆ ಸಂಪೂರ್ಣ ಕೆಸರು ಗದ್ದೆಯಂತಾಗಿದೆ. ಈ ಭಾಗದ ಜನ ಮಳೆ ಬಂದರೂ ಮಳೆ ಬಾರದಿದ್ದರೂ ಹೊಂಡಗಳಿಂದ ಧೂಳಿನಿಂದ ಸಮಸ್ಯೆಯನ್ನು ಎದುರಿಸುತ್ತಾ ಬಂದಿದ್ದಾರೆ.
ಈ ರಸ್ತೆ ನಗರದಿಂದ ಹೊರಡುವ ಮುಖ್ಯ ಮಾರ್ಗವಾಗಿರುವುದರಿಂದ ಸಾವಿರಾರು ಜನರು ಪ್ರಯಾಣಿಸುತ್ತಾರೆ. ಹೀಗಾಗಿ ರಸ್ತೆಯ ಮೇಲೆ ಸಂಚರಿಸುವ ಪ್ರಯಾಣಿಕರು ಜೀವ ಕೈಯಲ್ಲಿ ಹಿಡಿದುಕೊಂಡು ಸಾಗಬೇಕಿದೆ. ಈ ಬಗ್ಗೆ ಎಲ್ಲಾ ಮಾಹಿತಿ ಇದ್ದರೂ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಸದ್ಯ ರಸ್ತೆ ನಿರ್ಮಾಣಕ್ಕೆ 8 ಕೋಟಿ ರೂ. ಅನುದಾನ ಬಂದಿದ್ದು, ಟೆಂಡರ್ ಪ್ರಕ್ರಿಯೆ ಆದ ತಕ್ಷಣ ಕಾಮಗಾರಿ ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದರು.
ಅದರಂತೆ ಪ್ರಗತಿಪರ ಹೋರಾಟ ಸಮಿತಿ ನಿರಂತರ ಹೋರಾಟದ ಫಲವಾಗಿ ರಸ್ತೆಯ ಪಕ್ಕದಲ್ಲಿ ಕಂಕರ್‍ಗಳನ್ನು ಸಂಗ್ರಹ ಕಾರ್ಯ ನಡೆದಿದೆ. ಅಲ್ಲದೇ ಹದಗೆಟ್ಟ ರಸ್ತೆಯಿಂದ ಈ ಭಾಗದ ಜನರು ಬಹು ದಿನಗಳಿಂದ ತೊಂದರೆ ಅನುಭವಿಸುತ್ತಿರುವುದನ್ನು ಕಂಡು ಶಾಸಕ ಬಸವರಾಜ ಮತ್ತಿಮಡು ಅವರು ರಸ್ತೆ ನಿರ್ಮಾಣಕ್ಕಾಗಿ ಶ್ರಮವಹಿಸಿದ್ದಾರೆ.
ಜೇವರ್ಗಿ ವೃತ್ತದಿಂದ ತೊನಸನಹಳ್ಳಿ(ಎಸ್) ಹೋಗುವ ರಸ್ತೆಯೂ ಕೆಸರು ಗದ್ದೆಯಾಗಿ ವಾಹನಗಳು ಚಲಿದಂತಾಗಿ ಸಾರ್ವಜನಿಕರಿಗೆ ಎಲ್ಲಿಲ್ಲದ ತೊಂದರೆಯಾಗುತ್ತಿದೆ. ಇತ್ತಿಚ್ಚಿಗಷ್ಟೇ ನಿರ್ಮಾಣವಾದ ರಸ್ತೆಯೂ ಹಳ್ಳ ಹಿಡಿದಿದೆ.ಇದರಿಂದ ಈ ರಸ್ತೆಯಲ್ಲಿ ಯಾವುದೇ ಸಮಯದಲ್ಲಿ ವಾಹನಗಳು ಬಿದ್ದು ಅಪಾಯವಾಗುವ ಮುನ್ಸೂಚನೆ ನೀಡುತ್ತಿದೆ. ಕೂಡಲೇ ಈ ರಸ್ತೆಯನ್ನು ದುರಸ್ತಿಗೊಳಿಸಬೇಕು. ಇಲ್ಲವಾದರೆ ಕನಿಷ್ಠ ಪಕ್ಷ ಹೊಂಡಗಳನ್ನು ತಾತ್ಕಾಲಿಕವಾಗಿ ಮುಚ್ಚಿಸಬೇಕೆಂದು ಒತ್ತಾಯಿಸಿದ್ದಾರೆ.
ಸುಮಾರು ಮೂರು-ನಾಲ್ಕು ವರ್ಷಗಳಿಂದ ಈ ರಸ್ತೆಗೆ ಗ್ರಹಣ ಬಡಿದಿದೆ.ಈ ಹಿಂದೆ ರಸ್ತೆಗೆ ಲಕ್ಷಗಟ್ಟಲೇ ಹಣ ಬಿಡುಗಡೆಯಾದರೂ ಇನ್ನೂ ಕಾಮಗಾರಿ ಮುಗಿಯುವ ಮುನ್ನವೇ ರಸ್ತೆ ಹಾಳಾಗಿ ಹೋಗಿದ್ದರೂ ಬಿಲ್ ಮಾತ್ರ ಎತ್ತಿ ಹಾಕಲಾಗಿದೆ. ನಾಗರಿಕರ ಸಮಸ್ಯೆಯನ್ನು ಅರಿತು ಪ್ರಗತಿಪರ ಸಂಘಟನೆ ವತಿಯಿಂದ ನಿರಂತರ ಹೋರಾಟ ನಡೆಸಿದ ಫಲವಾಗಿ ರಸ್ತೆ ನಿರ್ಮಾಣ ಕಾರ್ಯ ಕೆಲವೇ ದಿನಗಳಲ್ಲಿ ನಡೆಯಲಿದೆ. ಸದ್ಯ ಮಳೆಗಾಲದಲ್ಲಿ ಸಾಕಷ್ಟು ತೊಂದರೆಯಾಗುತ್ತಿದೆ. ಆದ್ದರಿಂದ ಶಾಸಕರು ಇಲ್ಲಿನ ಜನರ ಸಮಸ್ಯೆಯನ್ನು ಅರಿತು ರಸ್ತೆಯನ್ನು ದುರಸ್ತಿಗೊಳಿಸಬೇಕು.ಒಂದು ವೇಳೆ ಕ್ರಮ ಕೈಗೊಳ್ಳದಿದ್ದಲ್ಲಿ ಹೋರಾಟ ಅನಿವಾರ್ಯವಾಗುತ್ತದೆ. -ಮರಿಯಪ್ಪ ಹಳ್ಳಿ ಮುಖ್ಯಸ್ಥರು ಪ್ರಗತಿಪರ ಸಂಘಟನೆ ಹಾಗೂ ದಸಂಸ ರಾಜ್ಯ ಸಂಘಟನಾ ಸಂಚಾಲಕರು.
ನಗರದಿಂದ ಯಾವ ಊರಿಗೆ ಹೋದರೂ ಜನರು ರಸ್ತೆ ಸಮಸ್ಯೆಯಿಂದ ತೊಂದರೆ ಪಡಬೇಕಾಗಿದೆ. ರಸ್ತೆಯಲ್ಲಿ ಹೊಂಡವಿದೆಯೋ ಅಥವಾ ಹೊಂಡದಲ್ಲಿ ರಸ್ತೆವಿದೆಯೋ ಎಂಬಂತೆ ಕಾಣುತ್ತಿದೆ.ಇದರಿಂದ ವಾಹನ ಚಾಲಕರಿಗೆ, ಸಾರ್ವಜನಿಕರಿಗೆ ಎಲ್ಲಿಲ್ಲದ ಸಂಕಷ್ಟ ಎದುರಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಜನಪ್ರತಿನಿಧಿಗಳು ಒಮ್ಮೆ ಇಲ್ಲಿ ಸಂಚರಿಸಿ ಸಾರ್ವಜನಿಕರ ತೊಂದರೆಯನ್ನು ಬಗೆಹರಿಸಬೇಕೆಂದು ಮನವಿ. – ಯಲ್ಲಾಲಿಂಗ ಹೈಯ್ಯಾಳಕರ್ ತಾಲೂಕಾಧ್ಯಕ್ಷ ಕರವೇ ಶಹಾಬಾದ.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…