3 ವರ್ಷದಿಂದ ಕೊನೆಗೂಳ್ಳದ ಹದಗೆಟ್ಟ ರಸ್ತೆ; ನಡು ರಸ್ತೆಯಲ್ಲಿ ಭತ್ತ ನೆಟ್ಟು ಪ್ರತಿಭಟನೆ

ಚಿತ್ತಾಪುರ; ತಾಲ್ಲೂಕಿನ ಲಾಡ್ಲಾಪುರ-ಆಲಹಳ್ಳಿ ಹದಗೆಟ್ಟ ರಸ್ತೆ ಅವ್ಯವಸ್ಥೆ ಖಂಡಿಸಿ ಗ್ರಾಮಸ್ಥರು ರಸ್ತೆ ಮಧ್ಯದಲ್ಲಿ ಕೊಳಚೆ ನೀರಿನ ತಗ್ಗುಗಳಲ್ಲಿ ಭತ್ತ ನಾಟಿ ಮಾಡಿ ವಿನೂತನವಾಗಿ ಪ್ರತಿಭಟನೆ ಮಾಡಲಾಯಿತು.

ಏಐಡಿಎಸ್ಓ ವಿದ್ಯಾರ್ಥಿ ಸಂಘಟನೆ ಹಾಗೂ ಏಐಕೆಕೆಎಂಎಸ್ ರೈತ ಸಂಘಟನೆ ನೇತೃತ್ವದಲ್ಲಿ ಜರುಗಿದ ಪ್ರತಿಭಟನೆಯಲ್ಲಿ ಗ್ರಾಮದ ನೂರಾರು ಜನರು ಭಾಗವಹಿಸಿ ರಸ್ತೆಯುದ್ಧಕ್ಕೂ ಭತ್ತದ ಸಸಿ ನೆಟ್ಟು ಆಕ್ರೋಶ ಹೊರಹಾಕಿದರು.

ಬಸ್ ಸ್ಟಾಂಡ್ ವೃತ್ತದಿಂದ ಗ್ರಾಪಂ ಕಚೇರಿವರೆಗೆ ಪ್ರತಿಭಟನೆ ಮೆರವಣಿಗೆ ನಡೆಸಿ, ರಸ್ತೆ ನಿರ್ಮಿಸುವಲ್ಲಿ ನಿರ್ಲಕ್ಷ ವಹಿಸಿದ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು.

3 ವರ್ಷಗಳಿಂದ ರಸ್ತೆ ಹಾಳಾಗಿದ್ದು ಮಳೆಯ ಕೊಳಚೆ ನೀರಿನ ಮೇಲೆಯೇ ನಡೆದಾಡುತ್ತಿದ್ದೇವೆ. ಕೆಸರಲ್ಲಿ ಬಿದ್ದು ಹೊರಳಾಡುತ್ತಿದ್ದೇವೆ ಬಿದ್ದು ಸಾಯುತ್ತಿದ್ದರೂ ಯಾರೂ ಸಮಸ್ಯೆ ಕೇಳುತ್ತಿಲ್ಲ ಎಂದು ಆಕ್ರೋಶ ಹೊರಹಾಕಿದರು.
ಕೂಡಲೇ ಎರಡು ಬದಿ ರಸ್ತೆ ನಿರ್ಮಿಸಿ ಸುಗಮ ಸಂಚಾರ ಸೌಲಭ್ಯ ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಏಐಕೆಕೆಎಂಎಸ್ ರೈತ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಮಹೇಶ್ ಎಸ್ ಬಿ, ಕಳೆದ 3 ವರ್ಷಗಳಿಂದ ರಸ್ತೆ ಹದಗೆಟ್ಟು ನಿಂತಿದ್ದು ಸಾರ್ವಜನಿಕರು ನಡೆದಾಡಲು ಹೈರಾಣಾಗುತ್ತಿದ್ದಾರೆ. ಶಾಲಾ ಕಾಲೇಜುಗಳಿಗೆ ತೆರಳಲು ಈ ರಸ್ತೆ ಆಸರೆಯಾಗಿದ್ದು ನಿತ್ಯ ಸಂಕಷ್ಟ ಅನುಭವಿಸುತ್ತಿದ್ದಾರೆ. ಸುಮಾರು ಒಂದು ಕಿಮೀ ರಸ್ತೆ ಸಂಪೂರ್ಣ ನಡೆದಾಡಲು ಅಯೋಗ್ಯವಾಗಿದ್ದು ಕಾಲು ಇಡಲು ಸ್ಥಳ ಇಲ್ಲವಾಗಿದೆ. ಹೆಜ್ಜೆಹೆಜ್ಜೆಗೂ ತಗ್ಗುಗುಂಡಿಗಳು ಇದ್ದು ಕೆಸರಿನ ಮಜ್ಜನ ಆಗುತ್ತಿದೆ.

ಗ್ರಾಮಸ್ಥರು ಅದರಲ್ಲೂ ಮಹಿಳೆಯರು, ಮಕ್ಕಳು ಶಾಲಾ ವಿದ್ಯಾರ್ಥಿಗಳು ಕೆಸರಲ್ಲಿ ಬಿದ್ದು ಮೈ ಕೊಳೆ ಮಾಡಿಕೊಳ್ಳುತ್ತಿದ್ದಾರೆ. ಕೊಳೆಯಿಂದ ರೋಗ ಹರಡಿ ಜನರು ಸಾಂಕ್ರಾಮಿಕ ರೋಗಕ್ಕೆ ತುತ್ತಾಗುತ್ತಿದ್ದಾರೆ. ಜನರದು ನಾಯಿ ಪಾಡಿನ ಜೀವನವಾಗಿದೆ. ರಸ್ತೆ ಇಷ್ಟು ಹದಗೆಟ್ಟರೂ ಅಧಿಕಾರಿಗಳು ಜನಪ್ರತಿನಿಧಿಗಳು ಗೋಳು ಕೇಳಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಈ ಕೂಡಲೇ ಡಿವೈಡರ್ ಸಿಸಿ ರಸ್ತೆ ಎರಡು ಕಡೆ ಚರಂಡಿ ನಿರ್ಮಿಸಬೇಕು ಎಂದು ಆಗ್ರಹಿಸಿದರು.

ಏಐಡಿಎಸ್ಓ ವಿದ್ಯಾರ್ಥಿ ಸಂಘಟನೆ ವಾಡಿ ಸಮಿತಿ ಅಧ್ಯಕ್ಷ ವೆಂಕಟೇಶ ದೇವದುರ್ಗ ಮಾತನಾಡಿ, ನಿತ್ಯ ಸುಮಾರು 500 ವಿದ್ಯಾರ್ಥಿಗಳು ಶಿಕ್ಷಕರು ಶಾಲೆಗೆ ತೆರಳಲು ಈ ರಸ್ತೆ ಬಳಸುತ್ತಿದ್ದು 1 ಕಿಮೀ ರಸ್ತೆ ತುಂಬಾ ಕೊಳೆ ತುಂಬಿ ನಿಂತಿದೆ. 3 ವರ್ಷಗಳಿಂದ ರಸ್ತೆ ಸುಧಾರಣೆ ಮಾಡಿ ಎಂದು ಹೇಳುತ್ತಿದ್ದರೂ ಆಡಳಿತ ಕ್ಯಾರೆ ಎನ್ನುತ್ತಿಲ್ಲ. ರಸ್ತೆ ಮಧ್ಯೆ ತಗ್ಗು ಗುಂಡಿಗಳು ಇದ್ದರೆ ಪಕ್ಕದಲ್ಲಿ ಮಲಮೂತ್ರಗಳಿಂದ ತುಂಬಿಕೊಳ್ಳುತ್ತಿದ್ದು ಮೂಗು ಮುಚ್ಚಿಕೊಂಡು ತಿರುಗಾಡುತ್ತಿದ್ದಾರೆ.

ಜನರು ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಇದ್ದಾರೆ. ಕೂಡಲೇ ರಸ್ತೆ ನಿರ್ಮಿಸಿ ಅಲ್ಲಿವರೆಗೂ ತಾತ್ಕಾಲಿಕ ದುರಸ್ತಿ ಮಾಡಿ ಎಂದು ಆಗ್ರಹಿಸಿದ ಅವರು ರಸ್ತೆ ದುರಸ್ತಿ ಮಾಡಿಸದಿದ್ದರೆ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುವುದು ಎಂದರು.

ರೈತ ಚಿನ್ ಸಾಬಣ್ಣ ಮಾತನಾಡಿ, ರಸ್ತೆ ಮಾಡಿಸಿ ಎಂದು ಹೇಳುತ್ತಿದ್ದರೂ ಕೇಳುತ್ತಿಲ್ಲ ಅದಕ್ಕೆ ಹೆದ್ದಾರಿ ಮೇಲೆ ಭತ್ತದ ಸಸಿಗಳನ್ನು ನಾಟಿ ಮಾಡುತ್ತಿದ್ದೇವೆ. ಮತ್ತು ಮುಂದಿನ ದಿನಗಳಲ್ಲಿ ಜಾನುವಾರುಗಳನ್ನು ರಸ್ತೆ ಮೇಲೆ ಕಟ್ಟಿ ಹಾಕುತ್ತೇವೆ ಅದಕ್ಕೂ ಬಗ್ಗದಿದ್ದರೆ ಹೆದ್ದಾರಿ ಬಂದ್ ಮಾಡಿ ಪ್ರತಿಭಟಿಸುತ್ತೇವೆ ಎಂದು ಕಿಡಿ ಕಾರಿದರು.

ಅಧಿಕಾರಿಗಳ ವಿಳಂಬ ಭೇಟಿಗೆ ಆಕ್ರೋಶ: ಇದೆ ಸಂದರ್ಭದಲ್ಲಿ ಮನವಿ ಪತ್ರ ಸ್ವೀಕರಿಸಲು 2 ಗಂಟೆ ವಿಳಂಬವಾಗಿ ಆಗಮಿಸಿದ ಪಿಡಬ್ಲೂಡಿ ಇಲಾಖೆ ಎಇಇ ಮಹ್ಮದ್ ಸಲೀಂ ವಿರುದ್ಧ ಪ್ರತಿಭಟನೆಕಾರರು ಆಕ್ರೋಶ ಹೊರಹಾಕಿದರು. ತಕ್ಷಣ ದುರಸ್ತಿ ನಡೆಸಲಾಗುವುದು ಹಾಗೂ ಹೊಸ ರಸ್ತೆ ನಿರ್ಮಾಣಕ್ಕೆ ಅನುದಾನ ಒದಗಿಸುವಂತೆ ಮತ್ತೊಮ್ಮೆ ಮನವಿ ಸಲ್ಲಿಸಲಾಗುವುದು ಎಂದು ಭರವಸೆ ನೀಡಿದ ಮೇಲೆ ಪ್ರತಿಭಟನೆ ವಾಪಸ್ಸು ಪಡೆಯಲಾಯಿತು.

ಏಐಕೆಕೆಎಂಎಸ್ ರೈತ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ಗುಂಡಣ್ಣ ಎಂ ಕೆ, ತಾಲ್ಲೂಕು ಅಧ್ಯಕ್ಷ ಮಲ್ಲಣ್ಣ ದಂಡಬಾ, ಮುಖಂಡರಾದ ಶಾಂತಕುಮಾರ ಎಣ್ಣಿ, ಗ್ರಾಪಂ ಮಾಜಿ ಅಧ್ಯಕ್ಷ ಸಾಬಣ್ಣ ಆನೇಮಿ, ಶರಣು ಹೆರೂರು, ಗೌತಮ ಪರ್ತುರಕರ ಮಾತನಾಡಿದರು.

ಗ್ರಾಪಂ ಮಾಜಿ ಅಧ್ಯಕ್ಷ ಈರಣ್ಣ ಎಂ, ಸಾಬಣ್ಣ, ಗೌತಮ ಪರ್ತುರಕರ, ಶರಣಪ್ಪ ಗಂಜಿ, ಮೋನಪ್ಪ ಕಂಬಾರ, ಸಾಬಣ್ಣ ಕುಂಬಾರಹಳ್ಳಿ, ಶಿವು ಕುಂಬಾರ, ಬಸವರಾಜ ದಾಸರ, ವಿದ್ಯಾರ್ಥಿಗಳಾದ ಆಕಾಶ ಮುಸಲಾ, ಆನಂದ ಅನೇಮಿ, ಕಾರ್ತಿಕ್, ಬನದೇಶ ಎಣ್ಣಿ, ಸಾಬಣ್ಣ ಗಂಟೇಲಿ, ಅಂಬರೀಶ್ ಗೊಡಗ, ಆಕಾಶ್, ಅರುಣ ಹಾಗೂ ಇನ್ನಿತರರು ಇದ್ದರು.

emedialine

View Comments

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

6 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

16 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

16 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

16 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago