ಕಲಬುರಗಿ: ರಂಗ ಮಾಧ್ಯಮ ಹವ್ಯಾಸಿ ನಾಟಕ ಸಂಸ್ಥೆಯು ರಂಗಭೂಮಿಯ ಬೆಳವಣಿಗೆಗೆ ಕಳೆದ 50 ವರ್ಷಗಳಲ್ಲಿ ಅನುಪಮ ಕೊಡುಗೆ ನೀಡಿದ್ದು ಆದರೆ ಕಲ್ಬುರ್ಗಿಯಲ್ಲಿ ರಂಗಭೂಮಿ ಕಲಾವಿದರಿಗೆ ನಾಟಕ ಪ್ರದರ್ಶನಕ್ಕೆ ಪ್ರತ್ಯೇಕ ನಾಟಕ ಥಿಯೇಟರ್ ನ ಕೊರತೆಯಿದ್ದು ಸರಕಾರ ಈ ಸಮಸ್ಯೆ ನಿವಾರಣೆಗೆ ಕೂಡಲೇ ಸ್ಪಂದಿಸಬೇಕಾಗಿದೆ ಎಂದು ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಕಾರ್ಯದರ್ಶಿ, ಮಂಜುನಾಥ ಜೇವರ್ಗಿ ಹೇಳಿದರು.
ರಂಗಮಾಧ್ಯಮ ಹವ್ಯಾಸೀ ನಾಟಕ ಸಂಸ್ಥೆ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಂಯುಕ್ತ ಆಶಯದಲ್ಲಿಬುಧವಾರ( ಜುಲೈ 24ರಂದು) ಕಲ್ಬುರ್ಗಿಯ ಕನ್ನಡ ಭವನದಲ್ಲಿ ನಡೆದ ರಂಗಮಾಧ್ಯಮ ಸುವರ್ಣ ಮಹೋತ್ಸವ ಆಚರಣೆ ಹಾಗೂ ರಂಗ ಸುವರ್ಣ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಗಿರಡ್ಡಿ ಗೋವಿಂದರಾಜ್, ಚಂದ್ರಕಾಂತ ಕುಸುನೂರು, ಶ್ರೀಧರರಾವ್, ಪ್ರೊ . ಹೇಮಂತ ಕೊಲ್ಲಾಪುರೆ ಮುಂತಾದ ಮಹಾನ್ ವ್ಯಕ್ತಿಗಳು ಕಟ್ಟಿದ ರಂಗ ಮಾಧ್ಯಮ ಸಂಸ್ಥೆಯು ರಂಗಭೂಮಿ ಕ್ಷೇತ್ರವನ್ನು ಬೆಳೆಸಲು ಸಾಕಷ್ಟು ಕೊಡುಗೆ ನೀಡಿದೆ. ಅನೇಕ ಕಲಾವಿದರನ್ನು ಹುಟ್ಟು ಹಾಕಿ ಸದಭಿರುಚಿಯ ನಾಟಕಗಳನ್ನು ಪ್ರದರ್ಶಿಸಿ ಜನಾನು ರಾಗಿಯಾಗಿದೆ. ಆದರೆ ಕಲಬುರ್ಗಿಯಲ್ಲಿ ರಂಗಭೂಮಿ ಕಲಾವಿದರಿಗೆ ನಾಟಕ ಪ್ರದರ್ಶನಕ್ಕೆ ಥಿಯೇಟರ್ ನ ಕೊರತೆಯಿದ್ದು ಸರಕಾರವು ಸಮಸ್ಯೆ ನಿವಾರಣೆಗೆ ಶ್ರಮಿಸಬೇಕು ಇದಕ್ಕಾಗಿ ಚೇಂಬರ್ ಆಫ್ ಕಾಮರ್ಸ್ ಮತ್ತು ರಂಗಮಾಧ್ಯಮ ಸಂಸ್ಥೆಯು ಸರಕಾರಕ್ಕೆ ಒತ್ತಡ ಹಾಕಿ ಜಂಟಿಯಾಗಿ ಪ್ರಯತ್ನ ಮಾಡಲಿದೆ ಎಂದರು.
ರಂಗಮಾಧ್ಯಮ ಸಂಸ್ಥೆಯ ಮುಖ್ಯಸ್ಥರಾದ ಪ್ರಭಾಕರ ಸಾತಖೇಡ್ ಮಾತನಾಡಿ ಕಳೆದ 50 ವರ್ಷಗಳಲ್ಲಿ ರಂಗಭೂಮಿಯಲ್ಲಿ ಸಂಸ್ಥೆ ವಿಶೇಷ ಸಾಧನೆ ಮಾಡಿದ್ದು ಪ್ರೇಕ್ಷಕರಿಂದ ಹತ್ತು ರೂಪಾಯಿ ಸಂಗ್ರಹಿಸಿ ವರ್ಷಕ್ಕೆ ಮೂರು ನಾಟಕಗಳನ್ನು ಪ್ರದರ್ಶನ ಮಾಡಿದ ಹೆಗ್ಗಳಿಕೆಯ ಸಂಸ್ಥೆಯಾಗಿದೆ. ಶ್ರೀರಂಗ , ಗಿರೀಶ್ ಕಾರ್ನಾಡ್ ,ಲಂಕೇಶ್ , ಕಂಬಾರ ಮುಂತಾದವರ ನಾಟಕಗಳನ್ನು ಪ್ರದರ್ಶನ ಮಾಡಿ ರಾಜ್ಯ ಮತ್ತು ಹೊರ ರಾಜ್ಯಗಳಲ್ಲಿ ಹೆಸರು ಮಾಡಿದೆ.
ರಂಗಭೂಮಿಯು ಅವಲಂಬನೆಯ ರಂಗವಾಗಿರುವುದರಿಂದ ಎಲ್ಲರ ಸಹಕಾರವಿದ್ದರೆ ಮಾತ್ರ ನಾಟಕಗಳನ್ನು ಪ್ರದರ್ಶನ ಮಾಡಲು ಸಾಧ್ಯ ರಂಗಮಾಧ್ಯಮವು 50 ವರ್ಷ ಸಂದ ಶುಭ ಸಂದರ್ಭದಲ್ಲಿ ಉತ್ತಮ ನಾಟಕ ನೀಡಲು ಪ್ರಯತ್ನಿಸುತ್ತದೆ ಎಂದು ಹೇಳಿದರು.
ರಂಗ ಮಾಧ್ಯಮದ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಖ್ಯಾತ ಚಿತ್ರ ಕಲಾವಿದರಾದ ಪ್ರೊ. ವಿ.ಜಿ ಅಂದಾನಿ, ಹಿರಿಯ ರಂಗ ಕಲಾವಿದರಾದ ಐ. ಎಸ್ ನವಲಿ, ಆಕಾಶವಾಣಿಯ ನಿವೃತ್ತ ಹಿರಿಯ ಕಾರ್ಯಕ್ರಮ ನಿರ್ವಹಣಾಧಿಕಾರಿ ಡಾ. ಸದಾನಂದ ಪೆರ್ಲ, ಪತ್ರಕರ್ತ ಹಾಗೂ ಸಾಹಿತಿ ಸಂಗಮನಾಥ ರೇವತಗಾಂವ ಹಾಗೂ ಹೈದರಾಬಾದಿನ ರಂಗ ಕಲಾವಿದೆ ಶ್ರೀಮತಿ ಸಂಗೀತ ಮಾನ್ವಿಕರ್ ಅವರಿಗೆ ರಂಗ ಸುವರ್ಣ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪ್ರಶಸ್ತಿ ಪುರಸ್ಕೃತರ ಪರವಾಗಿ ಡಾಕ್ಟರ್ ಸದಾನಂದ ಪೆರ್ಲ ಮಾತನಾಡಿ ಕಲ್ಯಾಣ ಕರ್ನಾಟಕದಲ್ಲಿ ರಂಗಭೂಮಿಯನ್ನು ಬೆಳೆಸಿದ ರಂಗ ಮಾಧ್ಯಮ ಸಂಸ್ಥೆಯು ಸಾಂಸ್ಕೃತಿಕ ರಂಗದ ಬೆಳವಣಿಗೆಗೆ ವಿಶೇಷ ಕೊಡುಗೆ ನೀಡಿದೆ ಈ ಭಾಗ ಪ್ರತಿಭಾವಂತ ಕಲಾವಿದರನ್ನು ಹೊಂದಿದರು ಅವಕಾಶಗಳ ಕೊರತೆಯಿಂದ ಸೂಕ್ತ ಪ್ರಾತಿನಿಧ್ಯ ಸಿಗುತ್ತಾ ಇಲ್ಲ ರಂಗಮಾಧ್ಯಮದ ಕಲಾವಿದರು ಆಕಾಶವಾಣಿ ದೂರದರ್ಶನ ಸಿನಿಮಾದಲ್ಲಿ ಹೆಸರು ಮಾಡಿರುವುದು ಹೆಮ್ಮೆಯ ಸಂಗತಿ ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಡಾ. ಸ್ವಾಮಿರಾವ್ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ಸಂಚಾಲಕರಾದ ನಾರಾಯಣ ಕುಲಕರ್ಣಿ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾ ಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ವಿಜಯಕುಮಾರ್ ತೇಗಲತಿಪ್ಪಿ, ಸಂಘಟಕರಾದ ಕೆ.ಪಿ ಗಿರಿಧರ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸಂಗೀತ ಕಲಾವಿದರಾದ ಮಹೇಶ್ ಬಡಿಗೇರ್, ರಮೇಶ್ ಜೋಶಿ ಡಾ. ಲಕ್ಷ್ಮೀಶಂಕರ್ ಜೋಶಿ, ಶ್ರೀಮತಿ ಶ್ರುತಿ ಸಗರ್, ಶ್ರೀಮತಿ ರಂಜೀಷಾ ಕುಲಕರ್ಣಿ, ಪ್ರಮೋದಿನಿ ಶೀಲವಂತ್ ರಂಗಗೀತೆಗಳನ್ನು ಹಾಡಿದರು. ಬದಿರಿನಾಥ ಮುಡಬಿ ಹಾರ್ಮೋನಿಯಂ, ವಿಜಯೇಂದ್ರ ಸಗರ ತಬಲಾ ಸಾಥ್ ನೀಡಿದರು. ಶ್ರೀಮತಿ ಶಾಂತಾ ಭೀಮಸೇನ ರಾವ್ ಕಾರ್ಯಕ್ರಮ ನಿರೂಪಿಸಿ ಧನ್ಯವಾದವಿತ್ತರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…