ದಲಿತ ಸಾಹಿತ್ಯ ಸಮ್ಮೇಳನ: ಡಾ. ಡಿ.ಜಿ. ಸಾಗರ ಸರ್ವಾಧ್ಯಕ್ಷರಾಗಿ ಆಯ್ಕೆ

ಕಲಬುರಗಿ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಬರುವ ಆಗಷ್ಟ್ ೧೮ ರಂದು ನಗರದಲ್ಲಿ ಹಮ್ಮಿಕೊಂಡಿರುವ ಜಿಲ್ಲಾ ಮಟ್ಟದ ಪ್ರಥಮ ದಲಿತ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ನಾಡಿನ ಹಿರಿಯ ಹೋರಾಟಗಾರರೂ ಆದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಡಾ. ಡಿ.ಜಿ. ಸಾಗರ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ತಿಳಿಸಿದ್ದಾರೆ.

ನಾಡಿನಾಧ್ಯಂತ ದಲಿತ ಚಳವಳಿ ಮೂಲಕ ಚಿರಪರಿಚತರು. ಇವರು ಆಳಂದ ತಾಲೂಕಿನ ನರೋಣಾ ಗ್ರಾಮದ ಕೃಷಿಕರ ಮನೆತನದಲ್ಲಿ ಜನಿಸಿದ ಡಾ. ಡಿ.ಜಿ. ಸಾಗರ ಅವರು, ದಲಿತ ಚಳವಳಿಯ ಮೂಲಕ ಹೊಸ ಸಂವೇದನಾಶೀಲ, ಜನಪರ ಕಾಳಜಿ ತೋರಿಸುವ ಹುಟ್ಟು ಹೋರಾಟಗಾರರಾಗಿದ್ದಾರೆ.

೮೦ರ ದಶಕದಲ್ಲಿ ಕನ್ನಡ ನೆಲದಲ್ಲಿ ಸಾಮಾಜಿಕ ಪ್ರಜ್ಞೆ ಮೂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯನ್ನು ಹುಟ್ಟು ಹಾಕುವಲ್ಲಿ ಮುಂಚೂಣಿಯಲ್ಲಿದ್ದವರು ಡಾ. ಡಿ.ಜಿ. ಸಾಗರ ಅವರು. ಶೋಷಣೆ, ಅಸಮಾನತೆ ಹಾಗೂ ದೌರ್ಜನ್ಯಗಳ ವಿರುದ್ಧ ಹಾಗೂ ಸ್ತಿçÃಪರ ಧ್ವನಿ ಎತ್ತಿದರು. ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು ಎಂಬAತೆ ಅನೇಕ ದಲಿತ ನಾಯಕರನ್ನು ಒಂದೆಡೆ ಸೇರಿಸಿ ಹೋರಾಟಕ್ಕೆ ದುಮುಕಿಸಿದರು. ಬುದ್ಧ, ಬಸವ, ಡಾ. ಅಂಬೇಡ್ಕರ್ ರವರ ತತ್ವಾದರ್ಶಗಳನ್ನು ಜೀವನದುದ್ದಕ್ಕೂ ಅನುಸರಿಸಿ ದಲಿತ ಚಳವಳಿ ನಾಡಿನಲ್ಲಿ ಗಟ್ಟಿಯಾಗಿ ಕಟ್ಟಿ ಬೆಳೆಸಿದರು.

ಡಾ. ಡಿ.ಜಿ. ಸಾಗರ ಅವರು ರಾಜ್ಯಶಾಸ್ತçದಲ್ಲಿ ಎಂ.ಎ. ಪದವಿಯನ್ನು ಪಡೆದು ಕಾನೂನು ಅಭ್ಯಾಸ ಮಾಡಿ ಎಲ್.ಎಲ್.ಬಿ. ಪದವಿಯನ್ನೂ ಪಡೆದವರಾಗಿದ್ದುಕೊಂಡು ಸರ್ಕಾರಿ ನೌಕರಿಗಾಗಲಿ, ವಕೀಲ ವೃತ್ತಿಗಾಗಲೀ ಹೋಗದೆ ತಮ್ಮ ಇಡೀ ಜೀವನವನ್ನು ಶೋಷಿತ ವರ್ಗಗಳ ಸೇವೆಗಾಗಿ ಮತ್ತು ಅವರ ಜಾಗೃತಿಗಾಗಿ ತಮ್ಮ ಜೀವನವನ್ನು ಮುಡಿಪಿಟ್ಟ ಅಪರೂಪದ ಹೋರಾಟಗಾರ ಡಾ. ಡಿ.ಜಿ. ಸಾಗರ ರವರು.

ಡಾ. ಡಿ.ಜಿ. ಸಾಗರ ಅವರ ಅಪರೂಪದ ಧೀಮಂತಿಕೆ ಸಮಾಜದ ಎಲ್ಲಾ ವರ್ಗಗಳ ಜನ ಸಮುದಾಯದ ಗೌರವಕ್ಕೆ ಕಾರಣವಾಗಿದೆ. ಇದನ್ನು ಗಮನಿಸಿಯೇ ಗುಲಬರ್ಗ ವಿಶ್ವವಿದ್ಯಾಲಯ ಇವರಿಗೆ ಗೌರವ ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಿದೆ. ದಲಿತ ಚಳವಳಿಯ ಸಂಘಟನೆಗಾಗಿ ಹೋರಾಟಗಾರರೊಬ್ಬರಿಗೆ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ನೀಡಿ ಗೌರವಿಸಿರುವುದು ಕರ್ನಾಟಕ ಚರಿತ್ರೆಯಲ್ಲಿ ಪ್ರಪ್ರಥಮವೆಂದು ಅಂದು ಅನೇಕ ಗಣ್ಯರು ಅನಿಸಿಕೆ ವ್ಯಕ್ತಪಡಿಸಿದರು. ಅಂದು ಕಲಬುರಗಿ ಕಲ್ಲು ಬಂಡೆಯ ನಾಡಿನಲ್ಲಿ ನಡೆದ ದಲಿತ ಚಳವಳಿಯ ಕೂಗು ರಾಜಭವನಕ್ಕೆ ಕೇಳಿಸಿತು. ಸರಕಾರ ಎಚ್ಚೇತ್ತುವಂತೆ ಮಾಡಿದರು. ಹಾಗೂ ಸಾಮಾಜಿಕ ತಲ್ಲಣಗಳಿಗೆ ಹೋರಾಟದ ಮೂಲಕ ದನಿಯಾದರು. ಹೊರಾಟದ ಕಿಚ್ಚು ನಾಡಿನಾದ್ಯಂತ ವಿಸ್ತರಿಸುವಲ್ಲಿ ಡಾ. ಡಿ.ಜಿ. ಸಾಗರ ಅವರ ಪಾತ್ರ ಹಿರಿದಾಗಿದೆ.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇತ್ತೀಚೆಗೆ ನಡೆಸಿದ ಪದಾಧಿಕಾರಿಗಳ ಸಭೆಯಲ್ಲಿ ಇವರನ್ನು ಸಮ್ಮೇಳನ್ನದ ಸರ್ವಾಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆಮಾಡಲಾಯಿತು. ಸಭೆಯಲ್ಲಿ ಜಿಲ್ಲಾ ಕಸಾಪ ದ ಗೌರವ ಕಾರ್ಯದರ್ಶಿಗಳಾದ ಶಿವರಾಜ ಅಂಡಗಿ, ಧರ್ಮಣ್ಣ ಎಚ್ ಧನ್ನಿ, ಕೋಶಾಧ್ಯಕ್ಷ ಶರಣರಾಜ ಛಪ್ಪರಬಂದಿ, ಪ್ರಮುಖರಾದ ರವೀಂದ್ರಕುಮಾರ ಭಂಟನಳ್ಳಿ, ಸಿದ್ಧಲಿಂಗ ಬಾಳಿ, ಕಲ್ಯಾಣಕುಮಾರ ಶೀಲವಂತ, ವಿನೋದಕುಮಾರ ಜೇನವೇರಿ, ಪ್ರಭುಲಿಂಗ ಮೂಲಗೆ, ರಾಜೇಂದ್ರ ಮಾಡಬೂಳ, ಬಾಬುರಾವ ಪಾಟೀಲ, ಗಣೇಶ ಚಿನ್ನಾಕಾರ, ಸೈಯದ್ ನಜೀರುದ್ದೀನ್ ಮುತ್ತವಲಿ, ಡಾ. ರೆಹಮಾನ್ ಪಟೇಲ್, ಶಿವಾನಂದ ಪೂಜಾರಿ, ಶಿವಶರಣ ಹಡಪದ, ಧರ್ಮರಾಜ ಜವಳಿ, ಹಣಮಂತಪ್ರಭು, ಶಕುಂತಲಾ ಪಾಟೀಲ, ಶಿಲ್ಪಾ ಜೋಶಿ, ಎಂ. ಎನ್ ಸುಗಂಧಿ, ರೇಸೋಮಶೇಖರಯ್ಯ ಹೊಸಮಠ, ರೇವಣಸಿದ್ದಪ್ಪ ಜೀವಣಗಿ, ಶಾಮಸುಂದರ ಕುಲಕರ್ಣಿ, ರಮೇಶ ಡಿ. ಬಡಿಗೇರ, ಸಂದೀಪ ಭರಣಿ, ಸೋಮಶೇಖರ ನಂದಿಧ್ವಜ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

emedialine

Recent Posts

ಬಂದಾ ನವಾಜ್ ದರ್ಗಾಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಸಚಿವ ಜಮೀರ್ ಅಹ್ಮದ್ ಖಾನ್

ಕಲಬುರಗಿ: ಅಲ್ಪಸಂಖ್ಯಾತ ಕಲ್ಯಾಣ ಹಾಗೂ ವಕ್ಫ್ ಮತ್ತು ವಸತಿ ಸಚಿವರಾದ ಬಿ.ಝಡ್ ಜಮೀರ್ ಅಹ್ಮದ್ ಖಾನ್ ಅವರು ಗುರುವಾರ ಇಲ್ಲಿನ…

13 hours ago

ಕಣ್ಣುಗಳನ್ನು ದಾನ ಮಾಡಿ ಅಂಧರ ಬಾಳಿಗೆ ಬೆಳಕಾಗಲು ಜಿ. ಪಂ. ಮಾಜಿ ಸದಸ್ಯೆ ಅನಿತಾ ವಳಕೇರಿ ಕರೆ

ಕಲಬುರಗಿ: ನೇತ್ರದಾನ ಮಹಾದಾನ, ಪ್ರತಿಯೊಬ್ಬರೂ ತಮ್ಮ ನೇತ್ರದಾನ ಮಾಡುವುದರೊಂದಿಗೆ ಅಂಧರ ಬಾಳಿಗೆ ಬೆಳಕಾಗಲು ಮುಂದೆ ಬರಬೇಕು ಎಂದು ಜಿಲ್ಲಾ ಪಂಚಾಯತ್…

14 hours ago

ಲಿಂಗರಾಜ ಶಾಸ್ತ್ರಿ ಪುಣ್ಯಸ್ಮರಣೋತ್ಸವ: ಬಹುಮುಖ ವ್ಯಕ್ತಿತ್ವದ ಶಾಸ್ತ್ರಿ

ಕಲಬುರಗಿ: ದಿ.ಲಿಂಗರಾಜ ಶಾಸ್ತ್ರಿ ಅವರದು ಬಹುಮುಖ ವ್ಯಕ್ತಿತ್ವ ಎಂದು ಜೆಡಿಎಸ್ ಮುಖಂಡ ನಾಸೀರ್ ಹುಸೇನ್‌ ಅಭಿಮತ ವ್ಯಕ್ತಪಡಿಸಿದರು. ನಗರದ ಕನ್ನಡ…

14 hours ago

ಕಲಬುರಗಿ: ನಕಲಿ ವೈದ್ಯರ ಹಾವಳಿ ತಡೆಯಲು ಆರೋಗ್ಯಧಿಕಾರಿಗೆ‌ ಮನವಿ

ಕಲಬುರಗಿ: ಕಲಬುರಗಿ ಜಿಲ್ಲೆಯಲ್ಲಿ ನಕಲಿ ವೈದ್ಯರ ವಹಾವಳಿ ತಡೆಯಬೇಕೆಂದು ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಯುವ ಕರ್ನಾಟಕ ವೇದಿಕೆ ಚಿಂಚೋಳಿ ಮತ್ತು…

14 hours ago

ವೀ.ಲಿಂ.ಸಂಘಟನಾ ವೇದಿಕೆ ವಿದ್ಯಾರ್ಥಿ ಘಟಕದ ಅಧ್ಯಕ್ಷ ಬಸವರಾಜ ಶೆಳ್ಳಗಿ

ಸುರಪುರ: ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಸುರಪುರ ತಾಲೂಕ ವಿದ್ಯಾರ್ಥಿ ಘಟಕದ ಅಧ್ಯಕ್ಷರನ್ನಾಗಿ ಬಸವರಾಜ ಎಸ್.ಶೆಳ್ಳಗಿ ಅವರನ್ನು ನೇಮಕಗೊಳಿಸಲಾಗಿದೆ. ಈ…

14 hours ago

ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯ ವಿಶ್ವ ಓಜೋನ್ ದಿನ

ಸುರಪುರು: ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಯಾದಗಿರಿಯವರ ಸಂಯೋಗದಲ್ಲಿ “ವಿಶ್ವ ಓಜೋನ್ ದಿನ”…

15 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420